ಅಂಕಪಟ್ಟಿಯಲ್ಲಿಬ್ಲೂಸ್‌ಗೆ ನಿಜಾಮ್ಸ್ ಹಿಂದಿಕ್ಕುವ ಧ್ಯೇಯ ; ಫಿಟ್ನೆಸ್ ವರದಿಗಾಗಿ ಎದುರು ನೋಡುತ್ತಿರುವ ಇಬಾರಾ, ಬಸಾಫಾ, ಉದಾಂತ ಮತ್ತು ಕಿಂಗ್
ಕೋಚ್ ಮಾರ್ಕೊ ಪೆಜ್ಜೈಯಲಿ ನೇತೃತ್ವದ ಬೆಂಗಳೂರು ಎಫ್‌ಸಿ ಬಂಬೋಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿಬುಧವಾರ ಹೈದರಾಬಾದ್ ಎಫ್‌ಸಿ ತಂಡದ ಸವಾಲು ಎದುರಿಸಲಿದ್ದು, ಋುತುವಿನಲ್ಲಿಎರಡನೇ ಜಯದ ಇರಾದೆ ಹೊಂದಿದೆ.
2021-22ರ ಇಂಡಿಯನ್ ಸೂಪರ್ ಲೀಗ್ ಅಭಿಯಾನದಲ್ಲಿಐದನೇ ಪಂದ್ಯಕ್ಕೆ ಸಜ್ಜಾಗಿರುವ ಬ್ಲೂಸ್ ಮ್ಯಾನುಯೆಲ್ ಮಾರ್ಕೆ್ವಜ್ ಅವರ ಗರಡಿಯಲ್ಲಿಪಳಗಿರುವ ಹೈದರಾಬಾದ್ ತಂಡದೊಂದಿಗೆ ಸಮನಾದ ಅಂಕ ಹೊಂದಿದೆ. ಆದರೆ ಬೆಂಗಳೂರು ತಂಡ ಹೈದರಾಬಾದ್ ತಂಡಕ್ಕಿಂತ ಒಂದು ಪಂದ್ಯ ಹೆಚ್ಚಾಗಿ ಆಡಿದೆ.
‘‘ ಹೈದರಾಬಾದ್ ಎಫ್‌ಸಿ ವಿದೇಶಿಯರ ಜತೆಗೆ ಉತ್ತಮ ಯುವಕರು ಮತ್ತು ಉತ್ತಮ ಅನುಭವಿ ಆಟಗಾರರನ್ನೊಳಗೊಂಡ ಸಮ್ಮಿಳಿತ ತಂಡವಾಗಿದೆ. ಅವರು ಫುಟ್ಬಾಲ್ ಆಡಲು ಬಯಸುತ್ತಾರೆ. ಗಾಳಿಯಲ್ಲಿಯೇ ಚೆಂಡು ಹೊಡೆಯಬಲ್ಲಒಗ್ಬೆಚೆ ಅಂತಹ ತ್ವರಿತವಾಗಿ ಪ್ರತಿಕ್ರಿಯಿಸುವ ಆಟಗಾರರನ್ನು ಒಳಗೊಂಡಿದ್ದಾರೆ. ನನ್ನ ಪ್ರಕಾರ ಲೀಗ್‌ನಲ್ಲೇ ಇದು ಅತ್ಯುತ್ತಮ ತಂಡಗಳಲ್ಲಿಒಂದು. ಇದು ಕಠಿಣ ಪಂದ್ಯವಾಗಲಿದೆ, ಆದರೆ ನಾವು ಸೂಕ್ತ ದಾರಿಯಲ್ಲಿಮುನ್ನಡೆಯಲು ಬಯಸಿರುವುದರಿಂದ ಹೈದರಾಬಾದ್ ಎಫ್‌ಸಿಗೆ ಕಷ್ಟವಾಗಬಹುದು, ’’ ಎಂದು ಪಂದ್ಯ ಪೂರ್ವಪತ್ರಿಕಾಗೋಷ್ಠಿಯಲ್ಲಿಬಿಎಫ್‌ಸಿ ಕೋಚ್ ಪೆಜ್ಜೈಯಲಿ ಹೇಳಿದ್ದಾರೆ.
ಬೆಂಗಳೂರು ತಂಡವು ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಗೆಲುವಿನ ಅಭಿಯಾನ ಆರಂಭಿಸಿತು. ಆದರೆ ನಂತರದ ಮೂರು ಪಂದ್ಯಗಳಲ್ಲಿಜಯ ಗಳಿಸಲು ಸಾಧ್ಯವಾಗಿಲ್ಲ. ಕೇರಳ ಬ್ಲಾಸ್ಟರ್ಸ್ ವಿರುದ್ಧ ಡ್ರಾ ಮಾಡಿಕೊಂಡ ಬ್ಲೂಸ್, ಒಡಿಶಾ ಎಫ್‌ಸಿ ಮತ್ತು ಮುಂಬಯಿ ಸಿಟಿ ಎಫ್‌ಸಿ ವಿರುದ್ಧ ಸೋತಿದೆ. ಈ ಮಧ್ಯೆ ಹೈದರಾಬಾದ್ ತಂಡ ಕೂಡ ಇದೇ ರೀತಿಯ ದಾಖಲೆ ಹೊಂದಿದ್ದು, ಲೀಗ್ ಲೀಡರ್ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಮಾತ್ರ ಜಯ ಗಳಿಸಿದೆ.
‘‘ ನಮ್ಮ ಈ ಋುತುವಿನ ಅತ್ಯುತ್ತಮ ಆಟ ಮುಂಬೈ ವಿರುದ್ಧ ಹೊರಬಂದಿದೆ ಎಂದು ನಾನು ಭಾವಿಸುತ್ತೇನೆ. ನಾವು ನಮ್ಮ ಆಟದ ಶೈಲಿಯನ್ನು ಅಭಿವೃದ್ಧಿಪಡಿಸಿದ್ದೇವೆ. ನಾವು ಎತ್ತರಕ್ಕೆ ಒತ್ತುವ ಜತೆಗೆ ತ್ವರಿತವಾಗಿ ಚೆಂಡನ್ನು ಹಿಂಪಡೆಯುತ್ತೇವೆ. ನಮ್ಮ ಪ್ರತಿರೋಧ ಸಹ ಉತ್ತಮವಾಗಿದೆ. ನಾವು ಈಗ ರಕ್ಷ ಣಾ ವಿಭಾಗದಲ್ಲಿಸುಧಾರಣೆ ಕಂಡುಕೊಳ್ಳಬೇಕಿದೆ. ನಾವು ಕೆಲವು ನಿರ್ದೇಶನಗಳಲ್ಲಿಉತ್ತಮವಾಗಿ ಸಮರ್ಥಿಸಿಕೊಳ್ಳಬಹುದಿತ್ತು. ಆದರೀಗ ಅದರ ಮೇಲೆಯೆ ಕಾರ್ಯಪ್ರವೃತ್ತರಾಗಿದ್ದೇವೆ, ’’ ಎಂದು ಪೆಜ್ಜೈಯಲಿ ಹೇಳಿದ್ದಾರೆ.
ಪಾದದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಲಿಯೋನ್ ಆಗಸ್ಟೀನ್ ಸೇವೆಯ ಅನುಪಸ್ಥಿತಿಯಲ್ಲಿಬ್ಲೂಸ್ ಕಣಕ್ಕಿಳಿಯುತ್ತಿದೆ. ಈ ಮಧ್ಯೆ, ಪ್ರೀನ್ಸ್ ಇಬಾರಾ, ಇಮಾನ್ ಬಸಾಫಾ, ಉದಾಂತ ಸಿಂಗ್ ಮತ್ತು ರೊಂಡು ಮುಸಾವು ಕಿಂಗ್ ಅವರನ್ನು ತಡವಾಗಿ ಸೇರ್ಪಡೆಗೊಳಿಸುವ ಕುರಿತು ಪೆಜ್ಜೈಯಲಿ ಖಚಿತಪಡಿಸಿದ್ದಾರೆ. ಇದೇ ವೇಳೆ ಕೌಟುಂಬಿಕದ ತುರ್ತು ಕಾರಣಗಳಿಂದ ತಂಡದ ಬಯೋಬಬಲ್ ತೊರೆದಿರುವ ಸರ್ಥಕ್ ಗುಲುಯಿ ಅವರು ತಂಡದ ಅನಿರ್ದಿಷ್ಟ ಪಂದ್ಯಗಳಿಗೆ ಗೈರುಹಾಜರಾಗಲಿದ್ದಾರೆ ಎಂದು ಬಿಎಫ್‌ಸಿ ಕೋಚ್ ತಿಳಿಸಿದ್ದಾರೆ.
‘‘ ಪ್ರಿನ್ಸ್ ಇಬಾರಾ ತನ್ನ ಅಡಕ್ಟರ್‌ನಲ್ಲಿಪರೀಕ್ಷೆಗೆ ಒಳಗಾಗಿದ್ದಾರೆ. ಆದರೆ ಅವರು ಪಂದ್ಯಕ್ಕೆ ಫಿಟ್ ಆಗಿದ್ದಾರೆ ಎಂದು ನಾವು ಈಗಲೇ ಯಾವುದನ್ನು ಖಚಿತಪಡಿಸಲಾಗದು. ಬುಧವಾರದವರೆಗೂ ಅವರ ಮೇಲೆ ನಿಗಾ ಇಟ್ಟಿರುತ್ತೇವೆ. ಜತೆಗೆ ನಾವು ನಿರ್ಧಾರ ಕೈಗೊಳ್ಳುವ ಮೊದಲು ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲಿದ್ದೇವೆ. ಇಮಾನ್ , ಉದಾಂತ ಮತ್ತು ಕಿಂಗ್ ಅವರಿಗೂ ಇದೇ ಅನ್ವಯಿಸುತ್ತದೆ. ಇದೇ ವೇಳೆ ಕೌಟುಂಬಿಕ ತುರ್ತು ಕಾರಣದಿಂದ ಸರ್ಥಕ್ ತಂಡದ ಬಯೊಬಬಲ್ ತೊರೆದಿದ್ದಾರೆ ಎಂದು ತಿಳಿಸಲು ನಾನು ಬಯಸುತ್ತೇನೆ, ’’ ಎಂದು ಪೆಜ್ಜೈಯಲಿ ಹೇಳಿದ್ದಾರೆ.
ಬ್ಲೂಸ್ ಮತ್ತು ಹೈದರಾಬಾದ್ ಎಫ್‌ಸಿ ನಡುವಿನ ಪಂದ್ಯ ಬುಧವಾರ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ + ಹಾಸ್ಟರ್ ಮತ್ತು ಜಿಯೋ ಟಿವಿಯಲ್ಲಿಪಂದ್ಯ ನೇರ ಪ್ರಸಾರ ಇರಲಿದೆ.