ಫತೋರ್ದಾದಲ್ಲಿ ಎ ಟಿ ಕೆ ಮೋಹನ್ ಬಗಾನ್ ಗೆಲುವಿನ ಸಾಧನೆ – ಬೆಂಗಳೂರು ತಂಡ ಶೂನ್ಯ ಸಾಧನೆ

ಮೊದಲಾರ್ಧದಲ್ಲಿ ಕೃಷ್ಣ ಅವರ ಸೆಟ್-ಪೀಸ್ ಮತ್ತು ಮಾರ್ಸೆಲೊ ಅವರ ಗೋಲ್, ನೌಶಾದ್ ಮೂಸಾ ನೇತೃತ್ವದ ಬ್ಲೂಸ್ಗೆ 2-0 ಅಂತರದ ಸೋಲುಣಿಸಿದೆ.

2020-21ರ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಪ್ಲೇಆಫ್ ಸ್ಥಾನ ಗಳಿಸುವ ಭರವಸೆಯಲ್ಲಿ ಬೆಂಗಳೂರು ಎಫ್‌ಸಿಗೆ ಆಘಾತ ಎದುರಾಗಿದೆ. ನೌಶಾದ್ ಮೂಸಾ ತಂಡವು ಮಂಗಳವಾರ ಫತೋರ್ದಾ ಕ್ರೀಡಾಂಗಣದಲ್ಲಿ ಎಟಿಕೆ ಮೋಹನ್ ಬಗಾನ್ ವಿರುದ್ಧ 2-0 ಅಂತರದ ಗೋಲುಗಳಿಂದ ಸೋಲೊಪ್ಪಿದೆ. ರಾಯ್ ಕೃಷ್ಣ ಮತ್ತು ಮಾರ್ಸೆಲೊ ಪಿರೇರಾ ಅವರ ಮೊದಲಾರ್ಧದ ಗೋಲುಗಳು ಕೋಲ್ಕತ್ತಾ ಮೂಲದ ತಂಡಕ್ಕೆ ಸಂಪೂರ್ಣ ಮೂರು ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟಿದೆ. ಬ್ಲೂಸ್ ಅಂತಿಮ ಪ್ಲೇಆಫ್ ಸ್ಥಾನದ ಅವಕಾಶದಿಂದ ನಾಲ್ಕು ಅಂಕಗಳ ಅಂತರದಲ್ಲಿ ದೂರದಲ್ಲಿದ್ದಾರೆ.

ನೌಶಾದ್ ಮೂಸಾ ಅವರು ಚೆನ್ನೈಯಿನ್ ಎಫ್‌ಸಿಯೊಂದಿಗೆ ಡ್ರಾ ಮಾಡಿಕೊಂಡ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿದರು, ರಾಹುಲ್ ಭೆಕೆ ಮತ್ತು ಕ್ರಿಸ್ಟಿಯನ್ ಒಪ್ಸೆತ್ ಅವರು ಪರಾಗ್ ಶ್ರೀವಾಸ್ ಮತ್ತು ಕ್ಲೀಟನ್ ಸಿಲ್ವಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಆಂಟೋನಿಯೊ ಹಬಾಸ್ ತನ್ನದೇ ಆದ ಮೂರು ಬದಲಾವಣೆಗಳನ್ನು ಮಾಡಿದರು. ಪ್ರೀತಮ್ ಕೋಟಾಲ್, ಪ್ರಣಯ್ ಹಾಲ್ಡರ್ ಮತ್ತು ಜೇವಿಯರ್ ಹೆರ್ನಾಂಡೆಜ್ ಅವರ ಸ್ಥಾನದಲ್ಲಿ ಪ್ರಬೀರ್ ದಾಸ್, ಕಾರ್ಲ್ ಮೆಕ್‌ಹಗ್ ಮತ್ತು ಡೇವಿಡ್ ವಿಲಿಯಮ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರು.

ಆಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ನೋಡುತ್ತಿದ್ದ ಬೆಂಗಳೂರು ಆರಂಭಿಕ ಹಂತಗಳಲ್ಲಿ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿತು. ಆದರೆ ಅಂತಿಮವಾಗಿ ಪರಿಸ್ಥಿತಿಗಳ ಸಹಾಯ ಪಡೆದದ್ದು ಎಟಿಕೆ ಮೋಹನ್ ಬಗಾನ್. ಎದುರಾಳಿ ತಂಡದ ಪರ ಮಾರ್ಸೆಲೊ ಪಿರೇರಾ ಗುರಿಯತ್ತ ಮೊದಲ ಹೊಡೆತವನ್ನು ಹೊಡೆದರು, ಮಿಡ್‌ಫೀಲ್ಡ್ನಿಂದ ಆದ ಗೋಲ್ ಪ್ರಯತ್ನವನ್ನು ಗುರ್‌ಪ್ರೀತ್ ತಡೆಯಲು ಸಫಲರಾದರು.

ಅರ್ಧ ಘಂಟೆಯ ಆಟದ ನಂತರ, ಕಾರ್ಲ್ ಮೆಕ್‌ಹಗ್ ಚೆಂಡಿನಿಂದ ಸುರೇಶ್ ವಾಂಗ್‌ಜ್ಯಾಮ್ ಅವರನ್ನು ದೂರ ಸರಿಸಿದರು ಮತ್ತು ದೂರದಿಂದ ಗೋಲ್ಗಾಗಿ ಯತ್ನಿಸಿದರು, ಗುರ್‌ಪ್ರೀತ್ ಸಿಂಗ್ ಸಂಧು ಯತ್ನವನ್ನು ದೂರತಳ್ಳಿ ಉತ್ತಮ ಪ್ರದರ್ಶನ ತೋರಿದರು. ಸ್ವಲ್ಪ ಸಮಯದ ನಂತರ, ಪ್ರವಾಸಿ ತಂಡ ಪ್ರಗತಿ ಸಾಧಿಸಿದರು, ಪ್ರತೀಕ್ ಚೌಧರಿ ಬಾಕ್ಸ್ ಅಲ್ಲಿ ರಾಯ್ ಕೃಷ್ಣ ಅವರನ್ನು ತಡೆದಾಗ, ರೋವನ್ ಅರುಮುಘನ್ ಅವರನ್ನು ಸ್ಥಳ ಸೂಚಿಸಿ ಆಟ ಮುಂದುವರೆಸಿದರು. ಎಟಿಕೆ ಮೋಹನ್ ಬಗಾನ್ ಪರ ಅಲ್ಲಿ ಶಾಟ್ ತೆಗೆದುಕೊಂಡ ಫಿಜಿಯನ್, ಗುರ್‌ಪ್ರೀತ್‌ ಪೋಸ್ಟ್ ಬಳಿ ತಪ್ಪು ಮಾರ್ಗ ಹಿಡಿಯುವಂತೆ ನೋಡಿಕೊಂಡು ತಂಡಕ್ಕೆ ಅಂಕ ಗಳಿಸಿದರು.

ಮೊದಲಾರ್ಧದ ಮುಕ್ತಾಯದ ಹಂತದಲ್ಲಿ ಎದುರಾಳಿ ತಂಡ ತಮ್ಮ ಮುನ್ನಡೆಯನ್ನು ದ್ವಿಗುಣಗೊಳಿಸಿಕೊಂಡರು. ಬಾಕ್ಸ್ ಅಂಚಿನಿಂದ ಮಾರ್ಸೆಲಿನ್ಹೋ ಫ್ರೀ ಕಿಕ್ ಪಡೆದು ನೇರವಾಗಿ ಗೋಲ್ ಅತ್ತ ಸಿಡಿಸಿದರು. ಹತ್ತಿರದ ಪೋಸ್ಟ್‌ನಲ್ಲಿ ಗುರ್‌ಪ್ರೀತ್‌ ಚೆಂಡನ್ನು ಕಂಡುಕೊಳ್ಳಲಾಗದೆ ಎದುರಾಳಿಗೆ ಅಂಕ ಬಿಟ್ಟುಕೊಟ್ಟರು.

ಎರಡನೇ ಅವಧಿಯಲ್ಲಿ ಪ್ರವಾಸಿಗರು ತಮ್ಮ ಮುನ್ನಡೆ ವಿಸ್ತರಿಸುವುದನ್ನು ತಡೆಯಲು ಗುರ್‌ಪ್ರೀತ್ ಎರಡು ಉತ್ತಮ ಗೋಲ್ ಉಳಿತಾಯಗಳನ್ನು ಮಾಡಿದರು. ಪಂದ್ಯದ ಮರುಪ್ರಾರಂಭದ ಕೆಲವೇ ನಿಮಿಷಗಳಲ್ಲಿ, ಕಾರ್ನರ್ ಇಂದ ಬಂದ ಸಂದೇಶ್ ಜಿಂಗನ್ ಅವರ ಪ್ರಯತ್ನವನ್ನು ತಡೆಯಲು ಬ್ಲೂಸ್‌ನ ನಂಬರ್ ಒನ್‌ ತಮ್ಮ ಬಲವಾದ ಕೈ ಇತ್ತು ಗೋಲ್ ನಿರಾಕರಿಸಿದರು. ನಂತರ, 1ಗಂಟೆಯ ಆಟದ ನಂತರ ಮತ್ತೊಮ್ಮೆ ಕಾರ್ಯರೂಪಕ್ಕೆ ಅವರನ್ನು ಕರೆತರಲಾಯಿತು, ಅವರು ಹತ್ತಿರದ ಪೋಸ್ಟ್ನಲ್ಲಿ ಮನ್ವೀರ್ ಸಿಂಗ್ ಅವರನ್ನು ಗೋಲ್ ಗಳಿಸದಂತೆ ತಡೆದು ನಿರಾಕರಿಸಿದರು.

ಭೆಕೆಗೆ ಮಂಡಿರಜ್ಜು ಗಾಯ ಕಾಣಿಸುತ್ತಿದ್ದಂತೆ ಬ್ಲೂಸ್‌ ಮತ್ತೊಂದು ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಎದುರಾಯ್ತು.

ನಂತರದಲ್ಲಿ ಮೂಸಾ ಸ್ಪ್ಯಾನಿಷ್ ಮಿಡ್‌ಫೀಲ್ಡರ್ ಕ್ಸಿಸ್ಕೊ ಹೆರ್ನಾಂಡೆಜ್ ಅವರನ್ನು ಮೂವತ್ತು ನಿಮಿಷಗಳ ಆಟ ಇನ್ನು ಬಾಕಿ ಇರುವಾಗಲೇ ಬದಲಾವಣೆಯೊಂದಿಗೆ ಹಿಡಿತ ಸಾಧಿಸುವ ಯೋಜನೆ ರೂಪಿಸಿದರು. ಬ್ಲೂಸ್ ಆಟದಲ್ಲಿ ಮತ್ತೆ ಮುನ್ನುಗ್ಗಲು ಪ್ರಯತ್ನಿಸಿತು. ಆದರೆ, ಫತೋರ್ದಾ ಅಂಗಳದಲ್ಲಿ ಎಟಿಕೆ ಮೋಹನ್ ಬಗಾನ್ ಅವರನ್ನು ಮಣಿಸಲು ಬೆಂಗಳೂರಿಗೆ ಸಾಧ್ಯವಾಗಲಿಲ್ಲ. ಬಾಕ್ಸ್ ಹೊರಗೆ ಛೇತ್ರಿ ಅವಕಾಶ ಕಲ್ಪಿಸಿಕೊಂಡು ಗೋಲ್ ಗಳಿಸಿ ಅಂತರ ಕಡಿಮೆ ಮಾಡುವ ಯೋಚನೆಯೊಂದಿಗೆ ಮುನ್ನುಗ್ಗಿದಾಗ, ಎಟಿಕೆ ಮೋಹನ್ ಬಗಾನ್ ತಂಡದ ಅರಿಂದಮ್ ಹೊಡೆತವನ್ನು ಚೆನ್ನಾಗಿ ನಿಭಾಯಿಸಿ ಗೋಲ್ ಆಗದಂತೆ ಉಳಿಸಿದರು.

ಫೆಬ್ರವರಿ 15 ರಂದು ಬಂಬೋಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ಬೆಂಗಳೂರು ಎಫ್‌ಸಿ ತಮ್ಮ ಮುಂದಿನ ಮುಖಾಮುಖಿಯಲ್ಲಿ ಮುಂಬೈ ಸಿಟಿ ಎಫ್‌ಸಿಯನ್ನು ಎದುರಿಸಲಿದೆ.

Malcare WordPress Security