ನೌಶಾದ್ ಮೂಸಾ ಬೆಂಗಳೂರು ಎಫ್‌ಸಿಯೊಂದಿಗೆ ಮೂರು ವರ್ಷಗಳ ಮರುಒಪ್ಪಂದಕ್ಕೆ ಸಹಿ

ಭಾರತೀಯ ಮಾಜಿ ಅಂತರರಾಷ್ಟ್ರೀಯ ಆಟಗಾರ 2023-24 ರವರೆಗೆ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಮಾರ್ಕೊ ಪೆಜೈಯುಲಿ ಅವರ ಸಹಾಯಕ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ.

ನೌಶಾದ್ ಮೂಸಾ ಅವರು 2023-24ರ ಅಂತ್ಯದವರೆಗೆ ಕ್ಲಬ್‌ನಲ್ಲಿ ಸೇವೆಸಲ್ಲಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಬೆಂಗಳೂರು ಎಫ್‌ಸಿ ಶನಿವಾರ ಪ್ರಕಟಿಸಿದೆ. ಹಿರಿಯ ತಂಡದೊಂದಿಗೆ ಕೋಚಿಂಗ್ ಸಿಬ್ಬಂದಿಯ ಭಾಗವಾಗಿರುವುದರ ಜೊತೆಗೆ ಬ್ಲೂಸ್‌ನ ಯುವ ಅಭಿವೃದ್ಧಿ ಕಾರ್ಯಕ್ರಮದ ಚುಕ್ಕಾಣಿ ಹಿಡಿದಿರುವ ಎಎಫ್‌ಸಿ ಪ್ರೊ-ಲೈಸೆನ್ಸ್ಡ್ ತರಬೇತುದಾರ ಮೂಸಾ ಈಗ ಪ್ರತ್ಯೇಕವಾಗಿ ಮಾರ್ಕೊ ಪೆಜೈಯುಲಿ ಅವರ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

“ನಾನು ಇನ್ನೂ ಮೂರು ವರ್ಷಗಳ ಕಾಲ ಬೆಂಗಳೂರು ಎಫ್‌ಸಿಯೊಂದಿಗೆ ಕಾರ್ಯನಿರ್ವಹಿಸುವುದು ತುಂಬಾ ಖುಷಿಯಾಗಿದೆ. ನಾನು ಇಲ್ಲಿ ಕಳೆದ ಸಮಯದಲ್ಲಿ, ಅನೇಕ ಯುವ ಆಟಗಾರರು ಶ್ರೇಯಾಂಕಗಳನ್ನು ಪಡೆಯುತ್ತಾ ಮುಂದೆಸಾಗಿರುವುದನ್ನು ನೋಡಿದ್ದೇವೆ. ವಿಶೇಷವಾಗಿ ಕಳೆದ ವರ್ಷದಲ್ಲಿ ಅನೇಕರು ಹಿರಿಯ ತಂಡದ ಕದ ತಟ್ಟಿರುವುದು ಗಮನಾರ್ಹ ಸಂಗತಿ. ಅವರು ಈಗ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ಪ್ರದರ್ಶಿಸುವುದರೊಂದಿಗೆ ರಾಷ್ಟ್ರೀಯ ತಂಡ ಸೇರಿಕೊಳ್ಳುವುದನ್ನು ಆಶಾದಾಯಕವಾಗಿ ಎದುರುನೋಡುತ್ತಿದ್ದೇನೆ. ”ಎಂದು 2017 ರಲ್ಲಿ ಬೆಂಗಳೂರು ಎಫ್‌ಸಿಗೆ ಸೇರ್ಪಡೆಯಾಗಿದ್ದ ಮೂಸಾ ತಿಳಿಸಿದರು.

“ಕಳೆದ ಆವೃತ್ತಿಯಲ್ಲಿ ನಾನು ಹಿರಿಯ ತಂಡವನ್ನು ಮಧ್ಯಂತರ ಮುಖ್ಯ ತರಬೇತುದಾರನಾಗಿ ಮುನ್ನಡೆಸುವ ಅವಕಾಶವನ್ನು ಹೊಂದಿದ್ದೆ ಮತ್ತು ಆ ಐದು ತಿಂಗಳ ಅನುಭವವು ನಾನು ಹೊಂದಿದ್ದ ಐದು ವರ್ಷಗಳ ಅನುಭವಕ್ಕಿಂತ ಹೆಚ್ಚಿನದ್ದು, ನಾನು ಅಲ್ಲಿ ಬಹಳಷ್ಟು ಕಲಿತಿದ್ದೇನೆ ಎಂದು ಭಾವಿಸುತ್ತೇನೆ. ನಾನು ಕಳೆದ ಕೆಲವು ತಿಂಗಳುಗಳನ್ನು ಮಾರ್ಕೊ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತ ಕಳೆದಿದ್ದೇನೆ ಮತ್ತು ಇದು ಒಂದು ಶಿಕ್ಷಣವಾಗಿದ್ದು, ನನ್ನ ಪಾತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಬಯಸುತ್ತೇನೆ ”ಎಂದು ಅವರು ಹೇಳಿದರು.

ಮಾಜಿ ಫುಟ್ಬಾಲ್ ಆಟಗಾರ ಮೂಸಾ ಅವರು ಏರ್ ಇಂಡಿಯಾ, ಚರ್ಚಿಲ್ ಬ್ರದರ್ಸ್, ಈಸ್ಟ್ ಬೆಂಗಾಲ್ ಎಫ್‌ಸಿ, ಮಹೀಂದ್ರಾ ಯುನೈಟೆಡ್ ಮತ್ತು ಮೊಹಮ್ಮದ್ ಸ್ಪೋರ್ಟಿಂಗ್‌ ತಂಡಗಳೊಂದಿಗೆ 12 ವರ್ಷಗಳ ಕಾಲದ ವೃತ್ತಿಜೀವನದ ಅನುಭವ ಹೊಂದಿದ್ದಾರೆ. ಬೆಂಗಳೂರು ಎಫ್‌ಸಿ ರಿಸರ್ವ್ ತಂಡದ ಮುಖ್ಯ ತರಬೇತುದಾರರಾಗಿ, ಅವರು 2019 ಮತ್ತು 2020 ರಲ್ಲಿ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್ ಪ್ರಶಸ್ತಿಯನ್ನು ಗೆಲ್ಲಲು ಬ್ಲೂ ಕೋಲ್ಟ್ಸ್‌ಗೆ ಮಾರ್ಗದರ್ಶನ ನೀಡಿದರು.

49 ರ ಹರೆಯದ ಅವರು, ಕ್ಲಬ್‌ನ ಯೂತ್ ಡೆವಲಪ್ಮೆಂಟ್ ಪ್ರೋಗ್ರಾಮ್ ಮೂಲಕ ಉತ್ತಮ ಕೆಲಸವನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆಂದು ಹೇಳಿಕೊಂಡರು. “ಬೆಂಗಳೂರು ಎಫ್‌ಸಿಯಲ್ಲಿ, ವ್ಯವಸ್ಥಿತವಾದ ಆಟಗಾರರ ಹಾದಿ ಮತ್ತು ಗೆಲ್ಲುವ ಮನಸ್ಥಿತಿಯನ್ನು ಎಲ್ಲ ತಂಡಗಳಲ್ಲೂ ಕಾಪಾಡಿಕೊಳ್ಳಲಾಗಿದೆ. ನಾನು ಸೇರಿದಾಗ ಇದು ನನ್ನನ್ನು ಕ್ಲಬ್‌ಗೆ ಸೆಳೆಯಿತು, ಮತ್ತು ನನ್ನ ಈ ವಿಸ್ತರಣೆಯ ನಿರ್ಧಾರದಲ್ಲಿ ಇದು ಒಂದು ದೊಡ್ಡ ಅಂಶವಾಗಿದೆ. ನಮ್ಮ ಯುವ ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ನಾನು ನೋಡಬಯಸುತ್ತೇನೆ, ಮತ್ತು ಸಾಧ್ಯವಾದಷ್ಟು ಆಟಗಾರರು ಉತ್ತಮ ದರ್ಜೆಗೆ ಏರಿ ಹಿರಿಯ ತಂಡದ ಗುರಿಗಳನ್ನು ಸಾಧಿಸಲು ಸಹಕರಿಸುವಂತಹ ಪ್ರದರ್ಶನಗಳನ್ನು ನೀಡಬೇಕಿದೆ ”ಎಂದು ಮೂಸಾ ವಿವರಿಸಿದರು.

2020-21ರ ಇಂಡಿಯನ್ ಸೂಪರ್ ಲೀಗ್ ಅಭಿಯಾನದಲ್ಲಿ ಮಧ್ಯಂತರವಾಗಿ ಬ್ಲೂಸ್‌ನ ಉಸ್ತುವಾರಿ ವಹಿಸಿಕೊಂಡ ಮೂಸಾ, ಕ್ಲಬ್‌ನ ಇತ್ತೀಚಿನ ಎಎಫ್‌ಸಿ ಕಪ್ ಅರ್ಹತಾ ಅಭಿಯಾನದಲ್ಲಿ ಹೆಡ್ ಕೋಚ್ ಮಾರ್ಕೊ ಪೆಜೈಯುಲಿಯೊಂದಿಗೆ ಕೆಲಸ ನಿರ್ವಹಿಸಿದ್ದರು.

“ಮೂಸಾ ಅವರು ಇಲ್ಲಿಗೆ ಬಂದ ನಾಲ್ಕು ವರ್ಷಗಳಲ್ಲಿ ತರಬೇತುದಾರರಾಗಿ ಅವರ ಬೆಳವಣಿಗೆಯನ್ನು ನಾವೆಲ್ಲರೂ ನೋಡಲು ಸಾಧ್ಯವಾಗಿದೆ. ಆಟಗಾರರ ಅಭಿವೃದ್ಧಿ ಮತ್ತು ಪ್ರಗತಿಯ ದೃಷ್ಟಿಯಿಂದ ನಾವು ಆರಂಭದಲ್ಲಿ ನಿಗದಿಪಡಿಸಿದ ಬಹಳಷ್ಟನ್ನು ಸಾಧಿಸಿದ್ದೇವೆ. ನಮ್ಮ ಹಲವು ಆಟಗಾರರು ಮೊದಲ ತಂಡಕ್ಕೆ ಆಯ್ಕೆ ಆಗಿದ್ದಾರೆ ಮತ್ತು ಅವರೊಂದಿಗೆ ಈ ಒಪ್ಪಂದದ ವಿಸ್ತರಣೆಯ ನಿರ್ಧಾರ ನಮಗೆ ಸುಲಭವಾದದ್ದಾಗಿತ್ತು. ”ಎಂದು ಕ್ಲಬ್ ಸಿಇಒ ಮಂದರ್ ತಮ್ಹಾನೆ ಹೇಳಿದರು.

“ನಾವು ಮೂಸಾ ಅವರ ಸಾಮರ್ಥ್ಯಗಳನ್ನು ನಂಬುತ್ತೇವೆ, ಮತ್ತು ಆಟಗಾರರ ಅಭಿವೃದ್ಧಿ ನಮಗೆ ಅತ್ಯವಶ್ಯ ವಿಷಯವಾದ್ರೂ, ನಮ್ಮ ತರಬೇತುದಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ಅವರು ಭಾರತದ ಅತ್ಯುತ್ತಮ ತರಬೇತುದಾರರಲ್ಲಿ ಒಬ್ಬರಾಗಿ ಅಭಿವೃದ್ಧಿ ಹೊಂದುವ ಎಲ್ಲಾ ಸಾಧ್ಯತೆಗಳೂ ಇವೆ ಮತ್ತು ಅವರು ಮಾರ್ಕೊ ಅವರೊಂದಿಗೆ ಕೆಲಸ ಮಾಡಿದ ಸಂಕ್ಷಿಪ್ತ ಕಾಲದಲ್ಲೇ, ಅವರೊಂದಿಗಿನ ಸಂಬಂಧ ಮತ್ತು ಆಟಗಾರರ ನಿರ್ವಹಣೆಯ ಬಗ್ಗೆ ನಾವು ನಿಜವಾಗಿಯೂ ಪ್ರಭಾವಿತರಾಗಿದ್ದೇವೆ ”ಎಂದು ಅವರು ಹೇಳಿದರು.

Malcare WordPress Security