ಅಂಕಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿ ಬ್ಲೂಸ್ ಉಳಿಯಲು ಭೆಕೆ ಗಳಿಸಿದ ದ್ವಿತೀಯಾರ್ಧದ ಗೋಲ್ ಕಾರಣ.
ಮಂಗಳವಾರ ತಿಲಕ್ ಮೈದಾನದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿದ ಬೆಂಗಳೂರು ಎಫ್‌ಸಿ ತಮ್ಮ ನಾಲ್ಕು ಸೋಲುಗಳ ಓಟವನ್ನು ನಿಲ್ಲಿಸಿತು. ಬ್ಲೂಸ್ 27 ನೇ ನಿಮಿಷದಲ್ಲಿ ಲೂಯಿಸ್ ಮಚಾದೊ ಗಳಿಸಿದ ಗೋಲ್ ಇಂದ ಹಿನ್ನಡೆಯಲ್ಲಿದ್ದರು, ಆದರೆ 49 ನೇ ನಿಮಿಷದಲ್ಲಿ ರಾಹುಲ್ ಭೆಕೆ ಗೋಲು ಗಳಿಸಿದಾಗ ಸಮಾನ ಗೆಲುವಿನ ಸಾಧ್ಯತೆಯ ಹಂತಕ್ಕೆ ಬಂದರು.
ಎರಡು ದಿನಗಳ ಹಿಂದೆ ಎಸ್‌ಸಿ ಬೆಂಗಾಲ್ ವಿರುದ್ಧ ಉದಾಂತ ಸಿಂಗ್, ಸುರೇಶ್ ವಾಂಗ್ಜಮ್ ಮತ್ತು ಅಜಿತ್ ಕುಮಾರ್ ಅವರೊಂದಿಗೆ ಪ್ರತೀಕ್ ಚೌಧರಿ, ಕ್ರಿಸ್ಟಿಯನ್ ಒಪ್ಸೇತ್ ಮತ್ತು ಒಂದು ಪಂದ್ಯದ ಅಮಾನತ್ತಿನ ನಂತರ ಹಿಂದಿರುಗಿದ್ದ ಹರ್ಮನ್‌ಜೋತ್ ಖಬ್ರಾ ಅವರೊಂದಿಗೆ ನೌಶಾದ್ ಮೂಸಾ ಮೂರು ಬದಲಾವಣೆಗಳನ್ನು ಮಾಡಿದರು. ಜೆರಾರ್ಡ್ ನು ಅವರು ಹೈದರಾಬಾದ್ ಎಫ್‌ಸಿ ವಿರುದ್ಧ ಸೋತ ಹೈಲ್ಯಾಂಡರ್ಸ್ ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿದರು. ಗುರ್ಮೀತ್, ಡೈಲನ್ ಫಾಕ್ಸ್, ರೋಚಾರ್ಜೆಲಾ ಮತ್ತು ಲಾಲೆಂಗ್ಮಾವಿಯಾ ಬದಲಿಗೆ ಸುಭಾಶಿಶ್ ರಾಯ್, ಮಶೂರ್ ಶೆರೀಫ್, ಇದ್ರಿಸ್ಸಾ ಸಿಲ್ಲಾ ಮತ್ತು ಲಾಲ್‌ರೆಂಪುಯಾ ಫಾನೈ ತಂಡದಲ್ಲಿ ಸ್ಥಾನ ಪಡೆದಿದ್ದರು.
ಮೊದಲ ಹಂತದಲ್ಲಿ ಬ್ಲೂಸ್ ಪ್ರಾಬಲ್ಯ ಸಾಧಿಸಿತು, ಯುವಕ ಪರಾಗ್ ಶ್ರೀವಾಸ್, ಲೆಫ್ಟ್ ಬ್ಯಾಕ್ ಅಲ್ಲಿ ಆಡುತ್ತಿದ್ದರು, ವಿಂಗ್ ನಿರಂತರವಾಗಿ ಪ್ರಾಬಲ್ಯ ಮೆರೆದಿತ್ತು. ಪಂದ್ಯದಲ್ಲಿನ ಮೊದಲ ಅವಕಾಶಕ್ಕೆ ಅವರು ಕಾರಣವೂ ಆಗಿದ್ದರು. ಖಬ್ರಾ ಅವರೊಂದಿಗೆ ಗಿವ್-ಅಂಡ್-ಗೋ ಪಾಲಿಸಿದ್ದ ಅವರು ಫಾಕ್ಸ್‌ನಿಂದ ನಿರ್ಬಂಧಿಸಲ್ಪಟ್ಟ ಒಪ್ಸೆತ್‌ಗಾಗಿ ಕ್ರಾಸ್ ಅನ್ನು ನೀಡಿದರು. ಸ್ವಲ್ಪ ಸಮಯದ ನಂತರ, ಬೆಂಗಳೂರು ಆಟದ ಮೊದಲ ಹೊಡೆತವನ್ನು ಗುರಿಯತ್ತ ತೆಗೆದುಕೊಂಡಿತು. 24 ನೇ ನಿಮಿಷದಲ್ಲಿ ರಾಹುಲ್ ಭೆಕೆ ಅವರ ಕ್ರಾಸ್ ಅನ್ನು ಒಪ್ಸೆತ್ ಪಡೆದರು ಆದರೆ ನಾರ್ವೇಯನ್ ಹೆಡರ್ ನೇರವಾಗಿ ಗುರ್ಮೀತ್ ಅವರನ್ನು ತಲುಪಿತು.
ಆದಾಗ್ಯೂ, ತಿಲಕ್ ಮೈದಾನದಲ್ಲಿ ಹೈಲ್ಯಾಂಡರ್ಸ್ ಮುನ್ನಡೆ ಸಾಧಿಸಿದರು. ಡಿಮಾಸ್ ಡೆಲ್ಗಾಡೊ ಮಿಡ್‌ಫೀಲ್ಡ್‌ನಲ್ಲಿ ಹಿಡಿತ ಕಳೆದುಕೊಂಡು, ಫೆಡೆರಿಕೊ ಗ್ಯಾಲೆಗೊಗೆ ಬ್ಲೂಸ್‌ನ ಪೆಟ್ಟಿಗೆಯ ಕಡೆಗೆ ಓಡಲು ಅವಕಾಶ ನೀಡಿದರು. ಅವರ ಸ್ಕಫ್ಡ್ ಶಾಟ್ – ಪ್ರತೀಕ್ ಚೌಧರಿ ತಲುಪುವ ಮುನ್ನವೇ ಮಚಾದೊ ಚೆಂಡನ್ನು ಕದ್ದರು ಮತ್ತು ಪೋರ್ಚುಗೀಸ್ ಆಟಗಾರ ಗೋಲ್ ಗಳಿಸುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ. ಇದರೊಂದಿಗೆ ನಾರ್ತ್ ಈಸ್ಟ್ 1-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿತು.
ಭೆಕೆ ಅವರ ಥ್ರೋ-ಇನ್ ಅನ್ನು ಎರಿಕ್ ಪಾರ್ತಲು ಅವರು ಕ್ಲೀಟನ್ ಸಿಲ್ವಾ ಕಡೆಗೆ ಮುಟ್ಟಿಸಿ ಮೊದಲಾರ್ಧಕ್ಕೆ ಒಂದು ನಿಮಿಷದ ಮೊದಲು ಬೆಂಗಳೂರು ಈಕ್ವಲೈಜರ್ ಅನ್ನು ಕಂಡುಕೊಳ್ಳುವ ಭರವಸೆಯಲ್ಲಿದ್ದರು ಆದರೆ ಬ್ರೆಜಿಲ್ ಆಟಗಾರನ ಹೊಡೆತವನ್ನು ಗುರ್ಮೀತ್ ಗೋಲ್ ಸಾಲಿನಲ್ಲಿ ಉಳಿಸಿ, ಬೆಂಗಳೂರು ತಂಡಕ್ಕೆ ಅಂಕ ಪಡೆಯುವ ಅವಕಾಶ ತಪ್ಪಿಸಿದರು.
ಸಮಾನ ಅಂಕಪಡೆಯುವ ಅವಕಾಶ ಗಿಟ್ಟಲು ಮೂಸಾ ಪಡೆಗೆ ದ್ವಿತೀಯಾರ್ಧದ ಪುನರಾರಂಭದ ನಂತರ ಹೆಚ್ಚು ಸಮಯ ಬೇಕಾಗಲಿಲ್ಲ. ಫ್ರೀ ಕಿಕ್‌ನಿಂದ, ಡಿಮಾಸ್ ಭೆಕೆ ಅವರನ್ನು ಬಲಕ್ಕೆ ಬಿಟ್ಟು ಪೆಟ್ಟಿಗೆಯ ಹೊರಗಿನಿಂದ ಶೂಟ್ ಮಾಡುವ ಮೂಲಕ ಮೊದಲ ಇಬ್ಬರು ರಕ್ಷಕರನ್ನು ಮೀರಿ ಗುರ್ಮೀತ್ ಅವರನ್ನು ತಪ್ಪಿಸಿಕೊಂಡು ಗೋಲ್ ಅತ್ತ ಚೆಂಡು ಸಾಗುವಂತೆ ಮಾಡುವಲ್ಲಿ ಯಶಸ್ಸು ಕಂಡರು. ಅದು 49 ನೇ ನಿಮಿಷದಲ್ಲಿ ತಂಡಕ್ಕೆ ಅಂಕ ತಂದಿತ್ತು ಸಮಾನ ಹೋರಾಟಕ್ಕೆ 1-1 ಅಂತರ ತಂದಿಟ್ಟಿತು.
ಅಂತಿಮ ಹಂತದಲ್ಲಿ ಯುವ ಆಟಗಾರರಾದ ಅಮಯ್ ಮೊರಾಜ್ಕರ್ ಮತ್ತು ಲಿಯಾನ್ ಅಗಸ್ಟೀನ್ ಅವರನ್ನು ತಂಡದಲ್ಲಿ ಪರಿಚಯಿಸಲಾಯಿತು, ಬ್ಲೂಸ್ ಮುನ್ನಡೆ ಸಾಧಿಸಿ ಪಂದ್ಯದಲ್ಲಿ ಗೆಲುವು ಸಾಧಿಸುವತ್ತ ದಿಟ್ಟ ಹೆಜ್ಜೆಗಳನ್ನು ಇಡುತ್ತಿತ್ತು. ಪಂದ್ಯದ ಅಂತ್ಯಕ್ಕೆ ಮೂರು ನಿಮಿಷಗಳ ಮೊದಲು, ಬೆಂಗಳೂರಿಗೆ ಪುನರಾಗಮನವನ್ನು ಗಳಿಸಿ ಮುನ್ನಡೆಯತ್ತ ಸಾಗುವ ಉತ್ತಮ ಅವಕಾಶವಿತ್ತು. ಕ್ಲೀಟನ್ ಚೆಂಡಿನ ಮೇಲೆ ಹಿಡಿತ ಪಡೆದರಾದರೂ ಅವರ ಹೊಡೆತವು ಸ್ವಲ್ಪ ಹೆಚ್ಚು ಶಕ್ತಿಯನ್ನು ಹೊಂದಿತ್ತು ಮತ್ತು ಚೆಂಡು ಬಾರ್ ಮೇಲೆ ಸಾಗಿತು. ಬೆಂಗಳೂರು ವಿಜೇತರಾಗುವತ್ತ ಸಾಗಿದ್ದರಾದರೂ ಸಾಧ್ಯವಾಗಲಿಲ್ಲ. ಇದರೊಂದಿಗೆ ಪಂದ್ಯ ಡ್ರಾ ಆಗಿ ಮುಕ್ತಾಯ ಕಂಡಿತು.
ಜನವರಿ 20 ರಂದು ಬಂಬೋಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿಯನ್ನು ಬೆಂಗಳೂರು ಎದುರಿಸಲಿದ್ದಾರೆ.