ತ್ರಿಭುವನ್ ಆರ್ಮಿ ಎಫ್‌ಸಿ ವಿರುದ್ಧ ಮೊದಲ ಹಂತದ ಪಂದ್ಯದಲ್ಲಿ ಬ್ಲೂಸ್ ತಂಡ ಏಷ್ಯ ಪಂದ್ಯಾವಳಿಯನ್ನು ಪ್ರಾರಂಭಿಸಲಿದೆ

ಗೋವಾದ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮನೆಯಂಗಳದ ಪಂದ್ಯಗಳಲ್ಲಿ ಬಿಎಫ್‌ಸಿ ಕೋಚ್ ಆಗಿ ಮಾರ್ಕೊ ಪೆಜೈಯುಲಿ ಮೊದಲ ಸ್ಪರ್ಧಾತ್ಮಕ ಪಂದ್ಯದ ನೇತೃತ್ವ ವಹಿಸಲಿದ್ದಾರೆ.

ಬೆಂಗಳೂರಿನ ಎಫ್‌ಸಿ ಬುಧವಾರ ಬಂಬೋಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ 2021 ಎಎಫ್‌ಸಿ ಕಪ್‌ನ ಪ್ರಾಥಮಿಕ ಹಂತದ ಎರಡು ಪಂದ್ಯಗಳಲ್ಲಿ ನೇಪಾಳಿ ಮೂಲದ ತ್ರಿಭುವನ್ ಆರ್ಮಿ ಎಫ್‌ಸಿಯನ್ನು ಎದುರಿಸಲಿದ್ದು ತಮ್ಮ ಹೊಸ ಆರಂಭಕ್ಕೆ ಹೆಜ್ಜೆ ಇಡಲಿದೆ. ಫೆಬ್ರವರಿಯಲ್ಲಿ ನೇಮಕಗೊಂಡ ನಂತರದಲ್ಲಿನ ಈ ಪಂದ್ಯವು ಮುಖ್ಯ ಕೋಚ್ ಮಾರ್ಕೊ ಪೆಜೈಯುಲಿಯವರಿಗೆ ಮೊದಲ ಸ್ಪರ್ಧಾತ್ಮಕ ಆಟವಾಗಿರಲಿದೆ.

“ನನ್ನ ಈ ಮೊದಲ ಪಂದ್ಯಕ್ಕಾಗಿ ತುಂಬಾ ಹಸಿದಿದ್ದೆ. ಆಟಗಾರರು ತೀಕ್ಷ್ಣವಾಗಿ ಕಾಣುತ್ತಿದ್ದಾರೆ ಮತ್ತು ತಯಾರಿ ಉತ್ತಮವಾಗಿ ನಡೆದಿದೆ. ನನ್ನ ತಂಡದ ಯುವಕರು ಶ್ರಮಿಸುತ್ತಿದ್ದಾರೆ, ಗೋವಾ ವಿರುದ್ಧದ ನಮ್ಮ ಸ್ನೇಹದ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ತಂಡದಲ್ಲಿರುವ ಇತರರ ಮೇಲೆ ಒತ್ತಡ ಹೇರುತ್ತಿದ್ದಾರೆ ಮತ್ತು ಅದು ಒಳ್ಳೆಯದು. ಇದು ನಮಗೆ ಒಂದು ಪ್ರಮುಖ ಆಟ ಏಕೆಂದರೆ ನಾವು ಕಳೆದ ಆವೃತ್ತಿಯ ಆರಂಭದಲ್ಲಿ ಸ್ಪರ್ಧೆಯಿಂದ ನಿರ್ಗಮಿಸಿದ್ದೇವೆ ಮತ್ತು ಈ ವರ್ಷ ಗುಂಪು ಹಂತವನ್ನು ತಲುಪಲು ನಾವು ಬಯಸುತ್ತೇವೆ. ಆ ದಿಕ್ಕಿನಲ್ಲಿ ಮೊದಲ ಹೆಜ್ಜೆ ಬಲವಾದ ನೇಪಾಳಿ ತಂಡವನ್ನು ಸೋಲಿಸುವುದು ಮತ್ತು ಅದನ್ನು ಮಾಡಲು ನಾವು ಸಾಕಷ್ಟು ಬಲಶಾಲಿಗಳಾಗಿದ್ದೇವೆ ಎಂದು ನಾನು ನಂಬುತ್ತೇನೆ ”ಎಂದು ಪೆಜೈಯುಲಿ ಹೇಳಿದರು.

ಕಳೆದ ವಾರ ನೇಪಾಳದ ದಶರಥ್ ರಂಗಸಲ ಕ್ರೀಡಾಂಗಣದಲ್ಲಿ ನಡೆದ ಪ್ರಾಥಮಿಕ ಹಂತದ ಹಣಾಹಣಿಯಲ್ಲಿ ತ್ರಿಭುವನ್ ಆರ್ಮಿ ಕ್ಲಬ್ ತಂಡವು ಶ್ರೀಲಂಕಾ ಪೊಲೀಸರ ವಿರುದ್ಧ 5-1 ಗೋಲುಗಳ ಜಯ ದಾಖಲಿಸಿದ್ದು, ಸ್ಟ್ರೈಕರ್ ನವಯುಗ್ ಶ್ರೇಷ್ಠಾ ಎರಡು ಗೋಲು ಗಳಿಸಿದರು. ಕಟ್ಮಂಡು ಮೂಲದ ತಂಡವು ತಮ್ಮ ಹಿಂದಿನ ಅಭಿಯಾನದಲ್ಲಿ ಹುತಾತ್ಮರ ಸ್ಮಾರಕ ಲೀಗ್ ಅಲ್ಲಿ ಎರಡನೇ ಸ್ಥಾನದಲ್ಲಿ ಪೂರ್ಣಗೊಳಿಸಿತು, ಮತ್ತು ಶ್ರೇಷ್ಠಾ ಆರು ಗೋಲುಗಳೊಂದಿಗೆ ತಂಡಕ್ಕೆ ಅಗ್ರ ಸ್ಕೋರರ್ ಎನಿಸಿದ್ದರು.

“ತ್ರಿಭುವನ್ ಸೈನ್ಯವು ಉತ್ತಮ ಆಟಗಾರರನ್ನು ಹೊಂದಿದ್ದು, ಅವರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಬಲರಾಗಿದ್ದಾರೆ ಮತ್ತು ಅವರು ಪ್ರತಿದಾಳಿಗಳನ್ನು ಕೇಂದ್ರೀಕರಿಸಿ ನಮ್ಮ ಡಿಫೆನ್ಸ್ ಬಳಗಕ್ಕೆ ಸಮಸ್ಯೆಗಳನ್ನು ಉಂಟುಮಾಡಲು ನೋಡುತ್ತಾರೆ. ಆಟದಲ್ಲಿ 90 ನಿಮಿಷಗಳಿವೆ ಮತ್ತು ಅವರು ಒಂದು ಅಥವಾ ಎರಡು ಗೋಲು ಗಳಿಸಲು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಬಹುದೆಂದು ನಾನು ನಂಬುತ್ತೇನೆ, ಅದನ್ನೇ ನಾವು ತಪ್ಪಿಸಲು ಬಯಸುತ್ತೇವೆ. ನಾವು ಚೆಂಡನ್ನು ಚೆನ್ನಾಗಿ ಇಟ್ಟುಕೊಳ್ಳಲು ಬಯಸುತ್ತೇವೆ, ಹೆಚ್ಚಿನ ಗತಿ ಕಾಪಾಡಿಕೊಳ್ಳಲು, ಅವರ ಮೇಲೆ ಒತ್ತಡ ಹೇರಲು ಮತ್ತು ಅವರು ಬಯಸಿದ ರೀತಿಯಲ್ಲಿ ಆಡಲು ಅವರಿಗೆ ಅವಕಾಶ ನೀಡುವುದಿಲ್ಲ, ಆದರೆ ಪ್ರತಿದಾಳಿಗಳ ಬಗ್ಗೆ ಎಚ್ಚರದಿಂದಿರುತ್ತೇವೆ ”ಎಂದು ಪೆಜೈಯುಲಿ ತಿಳಿಸಿದರು.

ಬೆಂಗಳೂರು ತಂಡ ಗೋವಾದಲ್ಲಿ ಮೂರು ವಾರಗಳಿಗಿಂತಲೂ ಹೆಚ್ಚು ಕಾಲ ಕಳೆದಿದ್ದು, ಪೆಜೈಯುಲಿ ಅವರ ಅಡಿಯಲ್ಲಿ ಒಂದು ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ, ಅವರು ತಮ್ಮ ತಂಡದ ಆಟಗಾರರು ತಮ್ಮ ಬಗ್ಗೆ ಮತ್ತು ತಮ್ಮ ಆಟದ ಶೈಲಿಯತ್ತ ಗಮನ ಕೇಂದ್ರೀಕರಿಸುವತ್ತ ಉತ್ಸುಕರಾಗಿದ್ದಾರೆಂದು ಸಮರ್ಥಿಸಿಕೊಂಡರು. ಗ್ಯಾಬೊನೀಸ್ ಡಿಫೆಂಡರ್ ಯೊರುಂಡು ಮುಸಾವ್ ಕಿಂಗ್ ತಂಡದಲ್ಲಿ ಏಕೈಕ ವಿದೇಶಿ ಸೇರ್ಪಡೆಯಾಗಿ ಉಳಿದಿದ್ದಾರೆ ಮತ್ತು ಜುವನಾನ್ ಗೊನ್ಜಾಲೆಜ್ ಜೊತೆಗೆ ಬ್ಲೂಸ್‌ ಬಳಗದಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ನಿರೀಕ್ಷೆಯನ್ನು ಮೂಡಿಸಿದ್ದಾರೆ. ಐದು ಬಿಎಫ್‌ಸಿ ಬಿ ಆಟಗಾರರಾದ ಶರೋನ್ ಪಡಟ್ಟಿಲ್, ಮುಹಮ್ಮದ್ ಇನಾಯತ್, ದಮೈತ್‌ಫಾಂಗ್ ಲಿಂಗ್ಡೊ, ಆಕಾಶ್‌ದೀಪ್ ಸಿಂಗ್ ಮತ್ತು ಶಿವಶಕ್ತಿ ನಾರಾಯಣನ್ ಅವರು ಪ್ಲೇಆಫ್ ಹಂತಗಳಿಗಾಗಿ ಮಾರ್ಕೊ ಪೆಜೈಯುಲಿಯ ತಂಡವನ್ನು ಸೇರಿಕೊಳ್ಳುವ ಭರವಸೆಯನ್ನು ಮೂಡಿಸಿದ್ದಾರೆ.

“ತಂಡವು ದೈಹಿಕವಾಗಿ ಮತ್ತು ತಂತ್ರ ಪ್ರತಿತಂತ್ರಗಳೊಂದಿಗೆ ಸಿದ್ಧವಾಗುವುದು ಬಹಳ ಮುಖ್ಯ ಮತ್ತು ನಾವು ಅದನ್ನು ಮಾಡಲು ಸಮರ್ಥರಾಗಿದ್ದೇವೆ. ಕೋಚ್ ಉತ್ತಮ ಕೆಲಸ ಮಾಡಿದ್ದಾರೆ ಮತ್ತು ಎಲ್ಲಾ ಆಟಗಾರರು ಆತ್ಮವಿಶ್ವಾಸ ಮತ್ತು ನವ ಉಲ್ಲಾಸದ ಭಾವನೆ ಹೊಂದಿದ್ದಾರೆ. ನಾವು ಪಂದ್ಯಗಳಿಗೆ ಎದುರುನೋಡುತ್ತಿದ್ದೇವೆ, ಏಕೆಂದರೆ ಎಎಫ್‌ಸಿ ಕಪ್ ಎಂಬುದು ಪ್ರತಿಷ್ಠಿತ ಪಂದ್ಯಾವಳಿಯಾಗಿದೆ ಮತ್ತು ನಮಗೆ ಬಹಳ ಮುಖ್ಯವಾಗಿದೆ. ನಾವು ಉತ್ತಮ ಆರಂಭವನ್ನು ಹೊಂದಲು ಬಯಸುತ್ತೇವೆ ”ಎಂದು ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ಹೇಳಿದರು.

ಬುಧವಾರ ನಡೆಯಲಿರುವ ಮೊದಲ ಹಂತದ ಎರಡು ಪಂದ್ಯಗಳ ವಿಜೇತರು ಅದೇ ಅಂಗಳದಲ್ಲಿ ಪ್ಲೇಆಫ್ ಸುತ್ತಿನಲ್ಲಿ ಬಾಂಗ್ಲಾದೇಶದ ಅಬಹಾನಿ ಡಾಕಾ ಅಥವಾ ಕ್ಲಬ್ ಈಗಲ್ಸ್ ಆಫ್ ಮಾಲ್ಡೀವ್ಸ್ ಅನ್ನು ಎದುರಿಸಲಿದ್ದಾರೆ.

ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7.30 ಕ್ಕೆ ಪ್ರಾರಂಭವಾಗಲಿದೆ ಮತ್ತು ಬೆಂಗಳೂರು ಎಫ್‌ಸಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ ಬಿಎಫ್‌ಸಿ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security