ತಿಲಕ್ ಮೈದಾನದಲ್ಲಿ ಒಡಿಶಾ ವಿರುದ್ಧ 3-1 ಅಂತರದಿಂದ ಸೋತ ಬೆಂಗಳೂರು

ಹೆರ್ನಾಂಡೆಜ್, ಕ್ಯಾಬ್ರೆರಾ ಅವರ ತಪ್ಪದ ಗುರಿಯಿಂದಾಗಿ ವಾಸ್ಕೋದಲ್ಲಿ ಬ್ಲೂಸ್ ವಿರುದ್ಧ ಒಡಿಶಾಗೆ ಚೊಚ್ಚಲ ಗೆಲುವು

ವಾಸ್ಕೋ, ಗೋವಾ: ಬುಧವಾರದಂದು ವಾಸ್ಕೋದ ತಿಲಕ್ ಮೈದಾನದಲ್ಲಿ 2021-22ರ ಇಂಡಿಯನ್ ಸೂಪರ್ ಲೀಗ್ ಅಭಿಯಾನದಲ್ಲಿ ಒಡಿಶಾ ಎಫ್‌ಸಿ ವಿರುದ್ಧ 3-1 ಗೋಲುಗಳ ಅಂತರದೊಂದಿಗೆ ಮೊದಲ ಸೋಲು ಕಂಡ ಮಾರ್ಕೊ ಪೆಜೈಯುಲಿ ನೇತೃತ್ವದ ಬೆಂಗಳೂರು ಎಫ್‌ಸಿ. ಆಟದ ಮೂರನೇ ನಿಮಿಷದಲ್ಲೇ ಜೇವಿ ಹೆರ್ನಾಂಡೆಜ್ ಆತಿಥೇಯರ ಪರ ಆರಂಭಿಕ ಗೋಲ್ ಗಳಿಸಿದರೆ, ಅಲನ್ ಕೋಸ್ಟಾ ಅವರು ಬ್ಲೂಸ್ ಪರ ಸಮಾನ ಅಂಕಗಳಿಸಲು ಯಶಸ್ವಿಯಾದರು. ಆದಾಗ್ಯೂ, ಸ್ಟ್ರೈಕರ್ ಅರಿಡೈ ಕ್ಯಾಬ್ರೆರಾ ನಂತರದಲ್ಲಿ ಅಂಗಳಕ್ಕೆ ಇಳಿದು, ಕಿಕೊ ರಮಿರೆಜ್ ನೇತೃತ್ವದ ತಂಡಕ್ಕೆ ಅಂಕಗಳನ್ನು ಗಳಿಸಿ ಅಥಿತೇಯ ಒಡಿಶಾಗೆ ಮುನ್ನಡೆಯನ್ನು ತಂದುಕೊಟ್ಟರು.

ಇಂದಿನ ಪಂದ್ಯದ ಆರಂಭದಲ್ಲಿ ಮಾರ್ಕೊ ಪೆಜೈಯುಲಿ, ಕಾಂಗೋಲೀಸ್ ಸ್ಟ್ರೈಕರ್ ಪ್ರಿನ್ಸ್ ಇಬಾರಾ ಅವರು ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ತನ್ನ ಚೊಚ್ಚಲ ಪಂದ್ಯದಲ್ಲಿ ಅಂಕಗಳಿಸಿದ್ದನ್ನು ಗಮನಿಸಿ, ಆರಂಭಿಕ ಸ್ಟ್ರೈಕ್ ಅನ್ನು ಅವರಿಗೇ ನೀಡಿದ್ದರು, ಇದರೊಂದಿಗೆ ಕ್ಲಿಟನ್ ಸಿಲ್ವಾ ಅವಕಾಶಕ್ಕಾಗಿ ಅಂಗಳದಿಂದ ಹೊರಗುಳಿಯಬೇಕಾಯ್ತು. ಮತ್ತೊಂದು ಷಫಲ್‌ನಲ್ಲಿ, ಅಜಿತ್ ಕುಮಾರ್ ಬದಲಿಗೆ ರೈಟ್ ಬ್ಯಾಕ್‌ನಲ್ಲಿ ನೌರೆಮ್ ರೋಷನ್ ಸಿಂಗ್ ಅಂಗಳಕ್ಕಿಳಿದರು.

ಗುರ್‌ಪ್ರೀತ್ ಸಿಂಗ್ ಸಂಧು ಅವರ ತಪ್ಪಾದ ಕ್ಲಿಯರೆನ್ಸ್ ಪಂದ್ಯಾರಂಭದ ಮೂರನೇ ನಿಮಿಷದಲ್ಲೇ ಜಾವಿ ಹೆರ್ನಾಂಡೆಜ್‌ಗೆ ಸಿಕ್ಕಾಗ ಬ್ಲೂಸ್ ಹಿನ್ನಡೆ ಅನುಭವಿಸಿತು. ಸ್ಪ್ಯಾನಿಷ್ ಮಿಡ್‌ಫೀಲ್ಡರ್ ಯಾವುದೇ ತಪ್ಪನ್ನು ಮಾಡದೇ, ದೂರದಿಂದಲೇ ಬೆಂಗಳೂರಿನ ಗೋಲ್ ಕೀಪರ್ ಅತ್ತ ಹೊಡೆತವನ್ನು ಕ್ಲಿಪ್ ಮಾಡಿ ತಮ್ಮ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಬೆಂಗಳೂರು ಪರ ಇಬಾರಾ ಮತ್ತು ಉದಾಂತ ಸಿಂಗ್ ಅವರ ಯತ್ನವನ್ನು ಕಮಲಜಿತ್ ತಡೆದರೂ, ಸತತ ಪರಿಶ್ರಮದ ಫಲವಾಗಿ 21 ನೇ ನಿಮಿಷದಲ್ಲಿ ಸೆಟ್-ಪೀಸ್‌ನಿಂದಾಗಿ ತಂಡ ಸಮಾನ ಅಂಕ ಗಳಿಸಿತು.

ಸಮಾನ ಅಂಕ ಗಳಿಸುವ ಯತ್ನದ ಅನೇಕ ದಾಳಿಗಳಲ್ಲಿ, ಅಂಕ ಗಳಿಸುವ ಹಾದಿಯೊಂದು ಕಂಡಿತು. ಕಾರ್ನರ್ ಗೆದ್ದ ನಂತರ, ರೋಶನ್ ಅವರ ಎಸೆತವನ್ನು ಬ್ರೆಜಿಲಿಯನ್ ಮಿಡ್‌ಫೀಲ್ಡರ್ ಅಲನ್ ಕೋಸ್ಟಾ ಗೋಲ್ನತ್ತ ತಿರುಗಿಸಿದರು, ಅವರು ತಮ್ಮ ಹೆಡರ್ ಮೂಲಕ ಅದನ್ನು ಗೋಲ್ ಆಗಿಸಿದರು. ಕೆಲವೇ ಕ್ಷಣಗಳಲ್ಲಿ ಮುನ್ನಡೆ ಸಾಧಿಸುವ ಅವಕಾಶ ಪೆಜೈಯುಲಿ ತಂಡಕ್ಕೆ ಲಭಿಸಿತು, ಆದರೆ ಇಬಾರಾ ದೂರದ ಪೋಸ್ಟ್‌ ಅಲ್ಲಿ ರೋಶನ್‌ ಅವರ ಫ್ರೀ-ಕಿಕ್‌ ಅನ್ನು ಬಳಸಿ ಅಂಕವಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ನೇರಾನೇರ ಆಟಗಾರರು ತಗುಲಿಸಿಕೊಂಡ ಕಾರಣ ಜಯೇಶ್ ರಾಣೆ ಪಂದ್ಯದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಪೆಜೈಯುಲಿಗೆ ಬದಲಾವಣೆ ಮಾಡಲು ಒತ್ತಾಯಿಸಿದಂತಾಯಿತು, ಇದರಿಂದ ವಿರಾಮಕ್ಕೂ ಮುನ್ನ ಡ್ಯಾನಿಶ್ ಫಾರೂಕ್ ಬದಲಿ ಆಟಗಾರನಾಗಿ ಕಣಕ್ಕಿಳಿದರು. ಪಂದ್ಯದ ಎರಡನೇ ಭಾಗದಲ್ಲಿ ಬೆಂಗಳೂರು ಹೋರಾಟದ ಆಟವನ್ನ ಮುಂದುವರೆಸಿತು, ಉದಾಂತ ಮತ್ತು ಇಬಾರಾ ಅವರ ಚಾಣಾಕ್ಷ ಓಟದೊಂದಿಗೆ ಬಾಕ್ಸ್‌ನಲ್ಲಿ ಜಾಗವನ್ನು ಕಂಡುಕೊಂಡರಾದರೂ ಆಟದ ಗತಿ ಬದಲಾಗಿ, ಆತಿಥೇಯರು ತಮ್ಮ ಮುನ್ನಡೆಯನ್ನು ಮರಳಿ ಪಡೆದರು.

ಉದಾಂತ ನೀಡಿದ ಪಾಸ್ ಜೋನಾಥಸ್ ಅನ್ನು ಹಾದಿತಪ್ಪಿ ಸೇರಿತು, ಅದನ್ನು ಟ್ಯಾಕಲ್ ಮಾಡಲು ಯತ್ನಿಸಿದಾಗ ರೆಫರಿ ವೆಂಕಟೇಶ್ ಆರ್ ಒಡಿಶಾಗೆ ಅದನ್ನು ಫ್ರೀ-ಕಿಕ್ ಆಗಿ ನೀಡಿದರು. ಹೆರ್ನಾಂಡೆಜ್ ದ್ವಿತೀಯಾರ್ಧದ ಆರಂಭದ ಆರನೇ ನಿಮಿಷದಲ್ಲೇ, ಸಂಧು ಅವರನ್ನು ಸೆಟ್-ಪೀಸ್ ಅಲ್ಲಿ ತಪ್ಪಿಸಿ ಅಂಕವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಒಂದು ಗಂಟೆಯ ಆಟದ ಗಡಿಯಲ್ಲಿ ಪೆಜೈಯುಲಿ ಅವರು ಆಶಿಕ್, ಉದಾಂತ ಮತ್ತು ಮುಸಾವು-ಕಿಂಗ್ ಬದಲಿಗೆ ಕ್ಲೈಟನ್ ಸಿಲ್ವಾ, ಪ್ರತೀಕ್ ಚೌಧರಿ ಮತ್ತು ಸಾರ್ಥಕ್ ಗೊಲುಯಿ ಅವರನ್ನು ಅಂಗಳಕ್ಕಿಳಿಸಿದರು.

ಸಿಲ್ವಾ ಆಗಮನದ ಪ್ರಭಾವ ಅಂಗಳದಲ್ಲಿ ಕೇವಲ ಐದು ನಿಮಿಷಗಳಲ್ಲೇ ಕೆಲಸಮಾಡಿತು. ಬ್ರೆಜಿಲ್ ಆಟಗಾರ ಬ್ಲೂಸ್‌ಗೆ ಪೆನಾಲ್ಟಿಯನ್ನು ಗೆದ್ದುಕೊಟ್ಟರು, ಡ್ಯಾನಿಶ್ ನೀಡಿದ ಪಾಸ್ ಅನ್ನು ಪರಿವರ್ತಿಸುವ ಯತ್ನದಲ್ಲಿ ಹೆಂಡ್ರಿ ಆಂಟೊನಾಯ್ ಅವರಿಂದ ಫೌಲ್ ಆಯ್ತು ಇದರೊಂದಿಗೆ ನಾಯಕ ಛೇತ್ರಿ ಸ್ಪಾಟ್ ಇಂದ ಗೋಲ್ ಯತ್ನ ಮಾಡಿದರು. ಕಮಲ್ಜಿತ್ ಅದನ್ನು ತಡೆಯುವಲ್ಲಿ ಯಶಸ್ವಿಯಾದರು ಆದರೆ ಬ್ರೆಜಿಲಿಯನ್ ಆಟಗಾರ 18-ಯಾರ್ಡ್ ಬಾಕ್ಸ್ ಅನ್ನು ಅತಿಕ್ರಮಿಸಿ ಮತ್ತೆ ಚೆಂಡಿನ ಹಿಡಿತ ಸಾಧಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.

ಆಟದ ಅಂತಿಮ 20 ನಿಮಿಷಗಳವರೆಗೆ ಪಂದ್ಯದ ಹಿಡಿತ ಸಾಧಿಸಲು ಬ್ಲೂಸ್ ಪ್ರಯತ್ನಿಸಿದರಾದರೂ ಫಲ ಸಿಗದೇ ರಾಮಿರೆಸ್ ಬದಲಿಗೆ ಇರಾನ್ ಮಿಡ್‌ಫೀಲ್ಡರ್ ಇಮಾನ್ ಬಸಾಫಾ ಅವರನ್ನ ಪೆಜೈಯುಲಿ ಅಂಗಳಕ್ಕೆ ತಂದರು. ಇದರ ಹೊರತಾಗಿಯೂ ಎದುರಾಳಿ ತಂಡದ ಬದಲಿ ಸ್ಟ್ರೈಕರ್ ಅರಿದೈ ಕ್ಯಾಬ್ರೆರಾ ಅವರು ಪ್ರತಿಕ್ ಚೌಧರಿ ಅವರನ್ನು ಕಟ್ ಮಾಡಿ ಗೋಲ್ ಗಳಿಸಿ 3-1ರ ಅಂತರವನ್ನು ಕಂಡುಕೊಂಡರು, ಆತಿಥೇಯ ಒಡಿಶಾ ಅಂತಿಮ ವಿಸಿಲ್‌ನವರೆಗೆ ಅಂತರವನ್ನು ಕಾಯ್ದುಕೊಂಡು ಬ್ಲೂಸ್ ಗೆ ಅವಕಾಶ ಕೊಡದೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯ್ತು.

Malcare WordPress Security