ಜಮ್‌ಶೆಡ್ಪುರ ಎಫ್‌ಸಿ ವಿರುದ್ಧ ಅಂಕ ಹಂಚಿಕೊಂಡ ಬೆಂಗಳೂರು ಎಫ್‌ಸಿ

0-0 ಗೋಲ್‌ ರಹಿತವಾಗಿ ಮುಕ್ತಾಯಗೊಂಡ ಬ್ಲೂಸ್‌ ಮತ್ತು ಜಮ್‌ಶೆಡ್ಪುರ ನಡುವಿನ ಹೋರಾಟ

ಪಂದ್ಯದ ಉಭಯ ಅವಧಿಗಳಲ್ಲಿಲಭಿಸಿದ ಗೋಲಿನ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿವಿಫಲಗೊಂಡ ಬೆಂಗಳೂರು ಎಫ್‌ಸಿ ಇಂಡಿಯನ್‌ ಸೂಪರ್‌ ಲೀಗ್‌ನ ತನ್ನ 8ನೇ ಪಂದ್ಯದಲ್ಲಿಜಮ್‌ಶೆಡ್‌ಪುರ ಎಫ್‌ಸಿ ವಿರುದ್ಧ ಡ್ರಾ ಮಾಡಿಕೊಳ್ಳಲಷ್ಟೇ ಶಕ್ತಗೊಂಡಿತು.
ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿಸೋಮವಾರ ನಡೆದ ಹಣಾಹಣಿಯಲ್ಲಿಜಮ್‌ಶೆಡ್ಪುರ ವಿರುದ್ಧ 0-0 ಗೋಲ್‌ ರಹಿತ ಡ್ರಾಗೆ ತೃಪ್ತಿಪಟ್ಟ ಬ್ಲೂಸ್‌, ಟೂರ್ನಿಯಲ್ಲಿಸತತ 2ನೇ ಹಾಗೂ ಒಟ್ಟಾರೆ 3ನೇ ಡ್ರಾ ಮಾಡಿಕೊಂಡಿತು. ಬ್ಲೂಸ್‌ ತನ್ನ ಹಿಂದಿನ ಪಂದ್ಯದಲ್ಲಿಎಟಿಕೆ ಮೋಹನ್‌ ಬಗಾನ್‌ ವಿರುದ್ಧವೂ ಡ್ರಾಗಷ್ಟೇ ಶಕ್ತಗೊಂಡಿತ್ತು.
84ನೇ ನಿಮಿಷದಲ್ಲಿಆ್ಯಶಿಕ್‌ ಕುರುನಿಯನ್‌ ಫ್ರೀ ಕಿಕ್‌ ಮೂಲಕ ನೀಡಿದ ಪಾಸನ್ನು ಸುನೀಲ್‌ ಛೆಟ್ರಿ ಹೇಡರ್‌ ಮೂಲಕ ಗೋಲ್‌ ಪೆಟ್ಟಿಗೆಯತ್ತ ತಳ್ಳಿದರು. ಆದರೆ ಚೆಂಡು ಗೋಲ್‌ಪೆಟ್ಟಿಗೆಯ ಬಾರ್‌ಗೆ ಹೊಡೆದು ಹಿಮ್ಮುಖವಾಗಿ ಚಿಮ್ಮಿತು. ಕೂಡಲೇ ಎದುರಾಳಿಯ ಡಿಫೆಂಡರ್‌ಗಳು ಎಚ್ಚೆತ್ತುಗೊಂಡರು. ಹೀಗಾಗಿ ಕೊನೆಯ ಹಂತದಲ್ಲಿಗೋಲ್‌ ಬಾರಿಸುವ ಬ್ಲೂಆಸೆ ಈಡೇರಲಿಲ್ಲ.
ಪಂದ್ಯ ಮುಕ್ತಾಯಕ್ಕೆ ಇಪ್ಪತ್ತು ನಿಮಿಷಗಳು ಬಾಕಿ ಇರುವಾಗ ಸುನೀಲ್‌ ಛೆಟ್ರಿ ಮೈದಾನ ಪ್ರವೇಶಿಸಿದರೆ, ಸ್ಟಾರ್‌ ಆಟಗಾರ ಕ್ಲೀಟನ್‌ ಸಿಲ್ವಾ ಹೊರ ನಡೆದರು. ಈ ಬದಲಾವಣೆಯಿಂದ ಬ್ಲೂಸ್‌ ಮುನ್ನಡೆ ಗಳಿಸಬಹುದು ಎಂದು ಊಹಿಸಲಾಯಿತು. ಆದರೆ ಹತ್ತು ನಿಮಿಷ ಸಾಗಿದರೂ ಗೋಲ್‌ ಮಾತ್ರ ದಾಖಲಾಗಲಿಲ್ಲ.
69ನೇ ನಿಮಿಷದಲ್ಲಿಜಮ್‌ಶೆಡ್ಪುರ ಎಫ್‌ಸಿ ನಾಯಕ ಅಜಿತ್‌ ಅವರ ಗೋಲಿನ ಯತ್ನವನ್ನು ಬ್ಲೂಸ್‌ ಪಡೆಯ ಗೋಲ್‌ ಕೀಪರ್‌ ಗುರ್‌ಪ್ರೀತ್‌ ಸಿಂಗ್‌ ಸಂಧು ಯಶಸ್ವಿಯಾಗಿ ತಡೆಯುವಲ್ಲಿಸಫಲರಾದರು. ಇದಕ್ಕೂ ಮುನ್ನ ಪ್ರಥಮಾರ್ಧ ಗೋಲ್‌ ರಹಿತಗೊಂಡ ಕಾರಣ ದ್ವಿತೀಯಾರ್ಧಲ್ಲಿಉಭಯ ತಂಡಗಳು ಮುನ್ನಡೆಯ ಗುರಿಯೊಂದಿಗೆ ಕಣಕ್ಕಿಳಿದವು. ಬಿಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿದ ಕಾರಣ 57ನೇ ನಿಮಿಷದಲ್ಲಿಜಿತೇಂದ್ರ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು.ಇದಾದ ಮರು ನಿಮಿಷದಲ್ಲೇ ಸಿಲ್ವಾ ಹೊಡೆದ ಚೆಂಡು ಗೋಲ್‌ ಪೆಟಿಗೆ ಮೇಲೆ ಹಾರಿತು. ಹೀಗಾಗಿ ಬ್ಲೂಹೋರಾಟ 0-0 ಗೋಲ್‌ರಹಿತವಾಗಿ ಮುಂದುವರಿಯಿತು.
ಗೋಲ್‌ ಗಳಿಕೆಯ ಹಲವು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿಮತ್ತೊಮ್ಮೆ ಎಡವಿದ ಬೆಂಗಳೂರು ಎಫ್‌ಸಿ ವಿರಾಮಕ್ಕೆ 0-0 ಗೋಲ್‌ ರಹಿತ ಸಮಬಲದ ಹೋರಾಟ ನೀಡಿತು. ಅದರಲ್ಲೂ39ನೇ ನಿಮಿಷದಲ್ಲಿಲಭಿಸಿದ ಅದ್ಭುತ ಅವಕಾಶವನ್ನು ಕೈಚೆಲ್ಲಿದ ಬೆಂಗಳೂರು ವಿರಾಮಕ್ಕೂ ಮುನ್ನ ಮೇಲುಗೈ ಸಾಧಿಸುವ ಅದ್ಭುತ ಅವಕಾಶವನ್ನು ಕೈಚೆಲ್ಲಿತು.
ಆ್ಯಶಿಕ್‌ ಕುರುನಿಯನ್‌ ಕ್ರಾಸ್‌ ಮೂಲಕ ನೀಡಿದ ಪಾಸನ್ನು ಕ್ಲೀಟನ್‌ ಸಿಲ್ವಾ ಹೆಡರ್‌ ಮೂಲಕ ತ್ವರಿತವಾಗಿ ಗೋಲ್‌ ಪೆಟ್ಟಿಗೆಯತ್ತ ತಳ್ಳಿದರು. ಆದರೆ ಎದುರಾಳಿ ತಂಡದ ಗೋಲ್‌ ಕೀಪರ್‌ ಟಿಪಿ ರೇಹೇನೇಶ್‌ ಅದ್ಭುತವಾಗಿ ಚೆಂಡನ್ನು ಹಿಮ್ಮೆಟ್ಟಿಸಿ ತಂಡಕ್ಕೆ ಆಗುತ್ತಿದ್ದ ಹಿನ್ನಡೆಯನ್ನು ತಪ್ಪಿಸುವಲ್ಲಿಯಶಸ್ವಿಯಾದರು. 20ನೇ ನಿಮಿಷದಲ್ಲಿಕ್ಲೀಟನ್‌ ಫ್ರೀ ಕಿಕ್‌ ಮೂಲಕ ಗೋಲಿನ ಯತ್ನ ಮಾಡಿದರು. ಆದರೆ ಜಮ್‌ಶೆಡ್ಪುರ ಎಫ್‌ಸಿ ಕಸ್ಟೋಡಿಯನ್‌ ಇದಕ್ಕೆ ಆಸ್ಪದ ನೀಡಲಿಲ್ಲ. ಪಂದ್ಯದ ಮೊದಲಾರ್ಧದಲ್ಲಿಉಭಯ ತಂಡಗಳ ಯಾರೊಬ್ಬರೂ ಹಳದಿ ಕಾರ್ಡ್‌ಗೆ ಗುರಿಯಾಗದೆ ಉತ್ತಮ ಆಟ ತೋರಿದವು. ಅದರಲ್ಲೂಮಾರ್ಕೊ ಪೆಜ್ಜೈಯಲಿ ಬಳಗ ಚೆಂಡಿನ ಮೇಲೆ ಹೆಚ್ಚಿನ ಹಿಡಿತ ಸಾಧಿಸಿದರೂ ಇದರ ಲಾಭ ಪಡೆಯಲು ಸಾಧ್ಯವಾಗಲಿಲ.
ಇದಕ್ಕೂ ಮುನ್ನ ಜಮ್‌ಶೆಡ್ಪುರ ಎಫ್‌ಸಿ ಪಂದ್ಯ ಆರಂಭಿಸಿದರೆ, ಬೆಂಗಳೂರು ಎಫ್‌ಸಿ ಸತತ ಆರು ಪಂದ್ಯಗಳ ನಂತರ ಮೊದಲ ಗೆಲುವಿನ ಶೋಧದಲ್ಲಿಕಣಕ್ಕಿಳಿಯಿತು.
ಬೆಂಗಳೂರು ಎಫ್‌ಸಿ ತನ್ನ ಮುಂದಿನ ಪಂದ್ಯದಲ್ಲಿಇದೇ ತಿಂಗಳ 30ರಂದು ತಿಲಕ್‌ ಮೈದಾನದಲ್ಲಿಚೆನ್ನೈಯಿನ್‌ ಎಫ್‌ಸಿ ತಂಡವನ್ನು ಎದುರಿಸಲಿದೆ.

Malcare WordPress Security