ಜಮ್ಶೆಡ್ಪುರ ಎಫ್‌ಸಿ ವಿರುದ್ಧ ಗೆಲುವಿನೊಂದಿಗೆ ಆವೃತ್ತಿಗೆ ಅಂತ್ಯ ಹಾಡುವ ಗುರಿಯಲ್ಲಿ ಬೆಂಗಳೂರು

ಆಶಿಕ್ ಕುರುನಿಯನ್ ಅಲಭ್ಯ, ಅಂಕಪಟ್ಟಿಯ ಆರನೇ ಸ್ಥಾನದಲ್ಲಿ ಪಂದ್ಯಾವಳಿಯನ್ನು ಮುಕ್ತಾಯಗೊಳಿಸಲು ನೌಶಾದ್ ಮೂಸಾ ನೇತೃತ್ವದ ಬ್ಲೂಸ್ ಯೋಜನೆ…

ತಿಲಕ್ ಮೈದಾನದಲ್ಲಿ ಗುರುವಾರ ನಡೆಯಲ್ಲಿರುವ ಜಮ್ಶೆಡ್ಪುರ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬ್ಲೂಸ್ ಉತ್ತಮ ಫಲಿತಾಂಶ ಪಡೆದು ಮುಂಬರುವ ಪಂದ್ಯಗಳಿಗೆ ಸ್ಥೈರ್ಯ ತುಂಬಿಕೊಳ್ಳುವಂತೆ ಹಂಗಾಮಿ ತರಬೇತುದಾರ ನೌಶಾದ್ ಮೂಸಾ ಕರೆ ನೀಡಿದ್ದಾರೆ. ಮುಂಬೈ ಸಿಟಿ ಎಫ್‌ಸಿ ವಿರುದ್ಧ ಗೆದ್ದ ಜಮ್‌ಶೆಡ್ಪುರ್ ತಂಡ ವಿಶ್ವಾಸದೊಂದಿಗೆ ಈ ಆಟಕ್ಕೆ ಬಂದರೆ, ಬ್ಲೂಸ್ ತಮ್ಮ ಹಿಂದಿನ ಪಂದ್ಯದಲ್ಲಿ ಎಫ್‌ಸಿ ಗೋವಾ ವಿರುದ್ಧ 2-1 ಅಂತರದಲ್ಲಿ ಸೋಲು ಅನುಭವಿಸಿ ಆಡಲಿದೆ.

ನೈಜೀರಿಯಾದ ಡಿಫೆಂಡರ್ ಸ್ಟೀಫನ್ ಈಜೆ ಅವರ ಸ್ಟ್ರೈಕ್ ಈ ಎರಡೂ ತಂಡಗಳು ಈ ಹಿಂದೆ ಫತೋರ್ದಾದಲ್ಲಿ ಮುಖಾಮುಖಿಯಾದ ಪಂದ್ಯದ ಫಲಿತಾಂಶಕ್ಕೆ ಕಾರಣವಾಗಿತ್ತು. ಗುರುವಾರ ರಾತ್ರಿಯ ವಿಜಯವು ಬೆಂಗಳೂರಿಗೆ ಲೀಗ್ ಟೇಬಲ್‌ನಲ್ಲಿ ಆರನೇ ಸ್ಥಾನ ಗಳಿಸಲು ಅನುವು ಮಾಡಿಕೊಡುತ್ತದೆ, ಪ್ರಸ್ತುತ ಆತಿಥೇಯರು ಈ ಸ್ಥಾನವನ್ನು ಎರಡು ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಅನುಭವಿಸುತ್ತಿದ್ದಾರೆ ಮತ್ತು ನಿಯಮಿತ ಸ್ಥಾನದಲ್ಲಿಯೇ ಉಳಿಯಲು ಕೇವಲ ಪಂದ್ಯದ ಡ್ರಾ ಫಲಿತಾಂಶ ಆವೃತ್ತಿಯ ಅಂತ್ಯದ ಪಂದ್ಯದವರೆಗೂ ಅವರನ್ನು ಅದೇ ಸ್ಥಾನದಲ್ಲಿ ಮುಂದುವರೆಸಲು ಸಾಕಾಗಲಿದೆ. “ಜಮ್ಶೆಡ್ಪುರ ಪ್ರಸ್ತುತ ಟೇಬಲ್ನಲ್ಲಿ ಆರನೇ ಸ್ಥಾನದಲ್ಲಿದೆ ಮತ್ತು ನಾವು ಅವರ ಹಿಂದೆ ಎರಡು ಪಾಯಿಂಟ್ಗಳಲ್ಲಿದ್ದೇವೆ. ನಾವು ಈ ಪಂದ್ಯವನ್ನು ಗೆಲ್ಲುತ್ತೇವೆಯೇ ಅಥವಾ ಇಲ್ಲವೇ ಎಂಬುದು ನಾವು ಅಂಕಪಟ್ಟಿಯಲ್ಲಿ ಯಾವ ಸ್ಥಾನದಲ್ಲಿ ಪಂದ್ಯವಳಿ ಮುಗಿಸಲಿದ್ದೇವೆ ಎಂಬುದನ್ನು ನಿರ್ಧರಿಸುತ್ತದೆ ಮತ್ತು ಹುಡುಗರು ಉತ್ತಮ ಫಲಿತಾಂಶದೊಂದಿಗೆ ಪಂದ್ಯಾವಳಿ ಮುಗಿಸಲು ಉತ್ಸುಕರಾಗಿದ್ದಾರೆ. ಅವರ ಮೇಲೆ ಈಗ ಹೆಚ್ಚಿನ ಒತ್ತಡವಿಲ್ಲದಿರುವುದನ್ನು ನಾವು ನೋಡಬಹುದಾಗಿದೆ, ”ಎಂದು ಪಂದ್ಯದ ಮುನ್ನಾದಿನದಂದು ಮಾಧ್ಯಮಗಳನ್ನು ಉದ್ದೇಶಿಸಿ ಮೂಸಾ ಹೇಳಿದರು.

ಈವರೆಗೆ ಎಂಟು ಯುವ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದ್ದು ಮೂಸಾ ಅವರು ಮೈದಾನ್‌ನಲ್ಲಿ ಕೆಲವರಿಗೆ ಅವಕಾಶವನ್ನು ನೀಡುವ ಯೋಜನೆಯನ್ನು ವಿವರಿಸಿದ್ದಾರೆ. “ನಾವು ಹೆಚ್ಚಿನ ಯುವಕರಿಗೆ ಅವಕಾಶಗಳನ್ನು ನೀಡುವ ಬಗ್ಗೆ ಯೋಚಿಸುತ್ತಿದ್ದೇವೆ, ಆದರೆ ನಾನು ಪಿಚ್‌ನಲ್ಲಿ ಸರಿಯಾದ ಸಮತೋಲನವನ್ನು ಕಂಡುಕೊಳ್ಳಬೇಕಾಗಿದೆ. ನಾವು ಅನುಭವಿ ತರಬೇತುದಾರರ ನೇತೃತ್ವದ ಉತ್ತಮ ತಂಡದ ವಿರುದ್ಧ ಆಡಲಿದ್ದೇವೆ, ಅವರು ಆವೃತ್ತಿಯನ್ನು ಉತ್ತಮ ಫಲಿತಾಂಶದೊಂದಿಗೆ ಮುಗಿಸಲು ಬಯಸುತ್ತಾರೆ. ”

ಹೊಸ ಮುಖ್ಯ ತರಬೇತುದಾರನಾಗಿ ಮಾರ್ಕೊ ಪೆಜಿಯುಲಿಯನ್ನು ನೇಮಕ ಮಾಡಿರುವುದಾಗಿ ಬ್ಲೂಸ್ ಇತ್ತೀಚೆಗೆ ಘೋಷಿಸಿತು ಮತ್ತು ಮೂಸಾ ಅವರು ಪ್ರತಿದಿನವೂ ಇಟಾಲಿಯ ತಾರಬೇತುದಾರರೊಂದಿಗೆ ಸಂಭಾಷಣೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. “ನಾನು ಮಾರ್ಕೊ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ನಾವು ಆಟಗಾರರು, ಮುಂಬರುವ ಎಎಫ್‌ಸಿ ಕಪ್ ಪಂದ್ಯಗಳು, ಆಟಗಾರರ ನೇಮಕಾತಿ ಮತ್ತು ಹೆಚ್ಚಿನವುಗಳ ಬಗ್ಗೆ ಸಾಕಷ್ಟು ಚರ್ಚಿಸುತ್ತಿದ್ದೇವೆ. ಅವರು ಇಲ್ಲಿ ಗೋವಾದಲ್ಲಿದ್ದಾರೆ ಮತ್ತು ಸ್ಟ್ಯಾಂಡ್‌ಗಳಿಂದ ಆಟಗಳನ್ನು ನೋಡುತ್ತಿದ್ದಾರೆ. ನಾವು ತರಬೇತಿ ಅವಧಿಗಳನ್ನು ರೆಕಾರ್ಡ್ ಮಾಡುತ್ತಿದ್ದೇವೆ ಮತ್ತು ಅವುಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.”

ಬೆಂಗಳೂರು ತಂಡದಲ್ಲಿ, ಬಿಸ್ವಾ ದರ್ಜಿ ಅವರು ಮಂಡಿರಜ್ಜು ಗಾಯದ ಸಲುವಾಗಿ ಆಡಲು ಸಾಧ್ಯವಿಲ್ಲದೇ ಅಲಭ್ಯರ ಪಟ್ಟಿಗೆ ಸೇರುತ್ತಾರೆ, ಅವರೊಂದಿಗೆ ಆಶಿಕ್ ಕುರುನಿಯನ್ ಗೋವಾ ವಿರುದ್ಧದ ಪಂದ್ಯದಲ್ಲಿ ಆವೃತ್ತಿಯ ನಾಲ್ಕನೇ ಹಳದಿ ಕಾರ್ಡ್ ಅನ್ನು ಪಡೆದ ಕಾರಣ ಆಟ ತಪ್ಪಿಸಿಕೊಳ್ಳಲಿದ್ದಾರೆ. ಏತನ್ಮಧ್ಯೆ, ಲಿಥುವೇನಿಯನ್ ಸ್ಟ್ರೈಕರ್ ನೆರಿಜಸ್ ವಾಲ್ಸ್ಕಿಸ್ ಸೇವೆಗಳಿಂದ ಹೊರಗುಳಿದಿದ್ದಾರೆ.

ತಿಲಕ್ ಮೈದಾನದಲ್ಲಿ ಕಿಕ್ ಆಫ್ ಸಂಜೆ 7: 30 ಕ್ಕೆ ನಿಗದಿಯಾಗಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security