ಚೆನ್ನೈಯಿನ್‌ ವಿರುದ್ಧ ಬೆಂಗಳೂರು ಎಫ್‌ಸಿಗೆ ಭರ್ಜರಿ ಜಯ

ಚೆನ್ನೈಯಿನ್‌ ಎಫ್‌ಸಿ ವಿರುದ್ಧ 4-2ರಲ್ಲಿಗೆದ್ದ ಬ್ಲೂಸ್‌ ಪರ ಕ್ಲೀಟನ್‌, ಅಲನ್‌, ಉದಾಂತ, ಪ್ರತೀಕ್‌ ಗೋಲ್‌

ಆರಂಭಿಕ ಹಿನ್ನಡೆಯ ಹೊರತಾಗಿಯೂ ಬಳಿಕ ಚೇತೋಹಾರಿ ಪ್ರದರ್ಶನ ನೀಡಿದ ಬೆಂಗಳೂರು ಎಫ್‌ಸಿ, ಹಾಲಿ ಇಂಡಿಯನ್‌ ಸೂಪರ್‌ ಲೀಗ್‌ನ ತನ್ನ 9ನೇ ಪಂದ್ಯದಲ್ಲಿಚೆನ್ನೈಯಿನ್‌ ಎಫ್‌ಸಿ ವಿರುದ್ಧ ಭರ್ಜರಿ ಜಯ ದಾಖಲಿಸಿ ಸತತ ಏಳು ಪಂದ್ಯಗಳ ನಂತರ ಪೂರ್ಣ 3 ಅಂಕ ಸಂಪಾದಿಸಿತು.
ತಿಲಕ್‌ ಮೈದಾನದಲ್ಲಿ3 ಅಂಕ ಗಿಟ್ಟಿಸುವ ವಿಶ್ವಾಸದಲ್ಲಿಗುರುವಾರ ಕಣಕ್ಕಿಳಿದ ಬ್ಲೂಸ್‌ ಆರು ಗೋಲ್‌ಗಳ ಜಿದ್ದಾಜಿದ್ದಿನ ಹಣಾಹಣಿಯಲ್ಲಿ4-2ರಲ್ಲಿಚೆನ್ನೈಯಿನ್‌ ತಂಡವನ್ನು ಮಣಿಸಿತು. ಇದರೊಂದಿಗೆ ಒಟ್ಟಾರೆ 9 ಅಂಕ ಕಲೆಹಾಕಿದ ಬ್ಲೂಸ್‌ ಅಂಕಪಟ್ಟಿಯಲ್ಲಿ8ನೇ ಸ್ಥಾನಕ್ಕೆ ಜಿಗಿಯಿತು.
ಬೆಂಗಳೂರು ಎಫ್‌ಸಿ ಪರ ಕ್ಲೀಟನ್‌ ಸಿಲ್ವಾ (39ನೇ ನಿಮಿಷ- ಪೆನಾಲ್ಟಿ) ಮತ್ತು ಅಲನ್‌ ಕೋಸ್ಟಾ (43ನೇ ನಿಮಿಷ), ಉದಾಂತ ಸಿಂಗ್‌(70ನೇ ನಿಮಿಷ) ಮತ್ತು ಪ್ರತೀಕ್‌ (74ನೇ ನಿಮಿಷ) ತಲಾ ಒಂದು ಗೋಲ್‌ ಬಾರಿಸಿ ಗೆಲುವಿನ ರೂವಾರಿಯೆನಿಸಿದರು. ಅತ್ತ ಚೆನ್ನೈಯಿನ್‌ ಎಫ್‌ಸಿ ಪರ ಮುರ್ಝೀವ್‌ (4ನೇ ನಿಮಿಷ) ಮತ್ತು ರಹೀಮ್‌ (49ನೇ ನಿಮಿಷ) ಗೋಲ್‌ ದಾಖಲಿಸಿ ಆರಂಭಿಕ ಮುನ್ನಡೆಗೆ ನೆರವಾದರು.
ಪ್ರಥಮಾರ್ಧಕ್ಕೆ 2-1ರಲ್ಲಿಮುನ್ನಡೆ ಗಳಿಸಿದ ಕೋಚ್‌ ಮಾರ್ಕೊ ಪೆಜ್ಜೈಯಲಿ ಬಳಗ, ದ್ವಿತೀಯಾರ್ಧದ ಆರಂಭದಲ್ಲಿ2-2ರಲ್ಲಿಮರು ಹೋರಾಟ ಎದುರಿಸಿತು. ಆದರೆ ಗಾಯದಿಂದ ಚೇತರಿಸಿಕೊಂಡ ತಂಡಕ್ಕೆ ಮರಳಿದ ಉದಾಂತ 70ನೇ ನಿಮಿಷದಲ್ಲಿಗೋಲ್‌ ಬಾರಿಸಿ ತಂಡದ ಮುನ್ನಡೆಯನ್ನು 3-1ಕ್ಕೆ ಹಿಗ್ಗಿಸಿದರು. ಇದಾದ ನಾಲ್ಕೇ ನಿಮಿಷಗಳ ಅಂತರದಲ್ಲಿಪ್ರತೀಕ್‌ ತಂಡದ ನಾಲ್ಕನೇ ಗೋಲ್‌ ಗಳಿಸಿ ತಂಡದ ಎರಡನೇ ಗೆಲುವು ಖಚಿತಪಡಿಸಿದರು.
ಇದಕ್ಕೂ ಮುನ್ನ ಪಂದ್ಯದ 4ನೇ ನಿಮಿಷದಲ್ಲಿಗೋಲಿನ ಖಾತೆ ತೆರೆದ ಚೆನ್ನೈಯಿನ್‌ ಎಫ್‌ಸಿ 1-0 ಅಂತರದಲ್ಲಿಮುನ್ನಡೆ ಗಿಟ್ಟಿಸಿತು. ಈ ವೇಳೆ ಬಿಎಫ್‌ಸಿ ಆಟಗಾರರು ಸಮಬಲಗೊಳಿಸಲು ಹರಸಾಹಸ ನಡೆಸಿದರು. ಆದರೆ ಬಲಿಷ್ಠ ಚೆನ್ನೈಯಿನ್‌ ರಕ್ಷ ಣಾ ಬಳಗ ಯಾವುದೇ ಆಸ್ಪದೆ ನೀಡದೆ ಪ್ರಭುತ್ವ ಸಾಧಿಸಿತು. ಆದರೆ ಮೊದಲ ಅರ್ಧಗಂಟೆ ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದ ಬಿಎಫ್‌ಸಿ ಆಟಗಾರರು, ನಾಲ್ಕು ನಿಮಿಷಗಳ ಅಂತರದಲ್ಲಿಎರಡು ಗೋಲ್‌ ಬಾರಿಸಿ ಎದುರಾಳಿ ತಂಡಕ್ಕೆ ತಿರುಗೇಟು ನೀಡಿದರು. ಬ್ಲೂಸ್‌ನ ಸ್ಟಾರ್‌ ಮುನ್ಪಡೆ ಆಟಗಾರ ಕ್ಲೀಟನ್‌ ಸಿಲ್ವಾ, ನೀಡಿದ ಸುಂದರ ಪಾಸನ್ನು ಯಾವುದೇ ಪ್ರಮಾದ ಮಾಡದೇ ಅಲನ್‌ ಕೋಸ್ಟಾ 43ನೇ ನಿಮಿಷದಲ್ಲಿತಂಡದ ಎರಡನೇ ಗೋಲ್‌ ಬಾರಿಸಿದರು.
ಇದಕ್ಕೂ ಮುನ್ನ ಎದುರಾಳಿ ತಂಡದ ಜೆರ್ರಿ ಮಾಡಿದ ತಪ್ಪಿನಿಂದಾಗಿ ಆಶಿಕ್‌ ಕುರುನಿಯನ್‌ ಕೆಳಗೆ ಬಿದ್ದರು. ಇದರಿಂದ ಪೆನಾಲ್ಟಿ ಅವಕಾಶ ಗಿಟ್ಟಿಸಿದ ಬೆಂಗಳೂರು ಎಫ್‌ಸಿ, ಕ್ಲೀಟನ್‌ ಸಿಲ್ವಾ ಮೂಲಕ ಗೋಲ್‌ ದಾಖಲಿಸಿ ಖಾತೆ ತೆರೆಯುವಲ್ಲಿಯಶಸ್ವಿಗೊಂಡಿತು. 26ನೇ ನಿಮಿಷದಲ್ಲಿಆಟಗಾರರ ಬದಲಾವಣೆಗೆ ಬಿಎಫ್‌ಸಿ ಒತ್ತು ನೀಡಿತು. ಹೀಗಾಗಿ ಉದಾಂತ ಸಿಂಗ್‌ ಮೈದಾನಕ್ಕೆ ಬಂದರೆ, ಅಜಿತ್‌ ಕಾಮರಾಜ್‌ ಅಂಗಣ ತೊರೆದರು. 13ನೇ ನಿಮಿಷದಲ್ಲಿಪ್ರಮಾದ ಮಾಡಿದ ಬ್ಲೂಸ್‌ನ ಇಬಾರ ಹಳದಿ ಕಾರ್ಡ್‌ಗೆ ಗುರಿಯಾದರು.
ಹಿಂದಿನ ಪಂದ್ಯದಲ್ಲಿಸೋತಿರುವ ಚೆನ್ನೈಯಿನ್‌ ಎಫ್‌ಸಿ ಗೆಲುವಿನ ವಿಶ್ವಾಸದಲ್ಲಿಕಣಕ್ಕಿಳಿದರೆ, ಕಳೆದ ಏಳು ಪಂದ್ಯಗಳಲ್ಲಿಪೂರ್ಣ ಅಂಕಗಳಿಸಲು ವಿಫಲಗೊಂಡಿದ್ದ ಬಿಎಫ್‌ಸಿ ಮೂರು ಅಂಕದ ಗುರಿಯೊಂದಿಗೆ ಮೈದಾನ ಪ್ರವೇಶಿಸಿತು.
ಬೆಂಗಳೂರು ಎಫ್‌ಸಿ, ತನ್ನ ಮುಂದಿನ ಪಂದ್ಯದಲ್ಲಿಜನವರಿ 4ರಂದು ಬಂಬೋಲಿಮ್‌ನ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿಎಸ್‌ಸಿ ಈಸ್ಟ್‌ ಬೆಂಗಾಲ್‌ ತಂಡವನ್ನು ಎದುರಿಸಲಿದೆ.

Malcare WordPress Security