ಚೆನ್ನೈಯಿನ್‌ ಎಫ್‌ಸಿ ವಿರುದ್ಧ ಪುಟಿದೇಳುವ ಬಯಕೆಯಲ್ಲಿಬೆಂಗಳೂರು ಎಫ್‌ಸಿ

ಜಯದೊಂದಿಗೆ ವರ್ಷಾಂತ್ಯ ಕೊನೆಗೊಳಿಸಲು ಮಾರ್ಕೊ ಪೆಜ್ಜೈಯಲಿ ಚಿತ್ತ, ದಕ್ಷಿಣ ಎದುರಾಳಿ ವಿರುದ್ಧ 3 ಅಂಕದ ಗುರಿಯಲ್ಲಿಬ್ಲೂಸ್‌

ಕೋಚ್‌ ಮಾರ್ಕೊ ಪೆಜ್ಜೈಯಲಿ ಅವರ ಬೆಂಗಳೂರು ಎಫ್‌ಸಿ ವಾಸ್ಕೋದ ತಿಲಕ್‌ ಮೈದಾನದಲ್ಲಿಗುರುವಾರ ನಡೆಯಲಿರುವ ಚೆನ್ನೈಯಿನ್‌ ಎಫ್‌ಸಿ ಎದುರಿನ ಪಂದ್ಯದಲ್ಲಿಸಂಪೂರ್ಣ ಮೂರು ಅಂಕಗಳಿಸುವ ಗುರಿಯಲ್ಲಿದೆ. ಹಿಂದಿನ ಎರಡು ಪಂದ್ಯಗಳಲ್ಲಿಎಟಿಕೆ ಮೋಹನ್‌ ಬಗಾನ್‌ ಮತ್ತು ಜಮ್‌ಶೆಡ್ಪುರ ಎಫ್‌ಸಿ ವಿರುದ್ಧ ಡ್ರಾ ಸಾಧಿಸಿರುವ ಬ್ಲೂಸ್‌ ಕೇವಲ ಎರಡು ಅಂಕ ಗಳಿಸಿದೆ.
ತಂಡದ ಕೊನೆಯ ಪಂದ್ಯದಲ್ಲಿರೆಡ್‌ ಮೈನರ್ಸ್‌ ವಿರುದ್ಧದ ಪಂದ್ಯದ ಬಳಿಕ ಪೆಜ್ಜೈಯಲಿ, ಋುತುವಿನ ತನ್ನ ಮೊದಲ ಕ್ಲೀನ್‌ ಶೀಟ್‌ ಪಡೆದು ಸಾಕಷ್ಟು ಧನಾತ್ಮಕ ಅಂಶಗಳೊಂದಿಗೆ ಡ್ರೆಸ್ಸಿಂಗ್‌ ಕೊಠಡಿಗೆ ತೆರಳಿದರು. ಈ ಮಧ್ಯೆ, ಚೆನ್ನೈಯಿನ್‌ ಎಫ್‌ಸಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧ 0-3 ಅಂತರದಲ್ಲಿಸೋಲುವುದರೊಂದಿಗೆ ಋುತುವಿನಲ್ಲಿಎರಡನೇ ಸೋಲಿಗೆ ಒಳಗಾಗಿದೆ. ಕೋಚ್‌ ಬೊಜಿದಾರ್‌ ಬೊಂಡೊವಿಕ್‌ ನೇತೃತ್ವದ ಚೆನ್ನೈಯಿನ್‌, ತನ್ನ ಅಭಿಯಾನದಲ್ಲಿಕೇವಲ 7 ಗೋಲ್‌ಗಳನ್ನು ಬಿಟ್ಟುಕೊಟ್ಟಿದೆ.
‘‘ ಕ್ಲೀನ್‌ ಶೀಟ್‌ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇದು ನಮ್ಮ ವಿಶ್ವಾಸವನ್ನು ಹೆಚ್ಚುಸುತ್ತದೆ. 90 ನಿಮಿಷಗಳವರೆಗೂ ನಾವು ತಾಳ್ಮೆ ಕಾಯ್ದುಕೊಳ್ಳಬೇಕು ಮತ್ತು ಮಿಡ್‌ಫೀಲ್ಡ್‌ ಮತ್ತು ದಾಳಿಯಲ್ಲಿತನ್ನ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿ ಗೋಲಿನ ಅವಕಾಶಗಳನ್ನು ಸೃಷ್ಟಿಸಬೇಕಿದೆ. ಜತೆಗೆ ನಾವು ನಮ್ಮ ಮೇಲೆ ಹೆಚ್ಚು ಕೇಂದ್ರೀಕರಿಸುವುದರೊಂದಿಗೆ ಸಾಧ್ಯವಾದಷ್ಟು ಬೇಗ ಚೆಂಡನ್ನು ಹಿಂದಿರುಗಿಸಲು ನಾವು ಬಯಸುತ್ತೇವೆ, ’’ ಎಂದು ಪೆಜ್ಜೈಯಲಿ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿಹೇಳಿದ್ದಾರೆ.
ಚೆನ್ನೈಯಿನ್‌ ದಾಳಿಯ ಬಗ್ಗೆ ಜಾಗರೂಕರಾಗಿರುವುದರ ಪ್ರಾಮುಖ್ಯತೆಯನ್ನು ಪೆಜ್ಜೈಯುಲಿ ಒತ್ತಿಹೇಳಿದ್ದಾರೆ. ‘‘ ಉಭಯ ತಂಡಗಳ ಪೂರ್ವ-ಋುತುವಿನ ಸ್ನೇಹಪರ ಪಂದ್ಯಗಳಲ್ಲಿಎರಡು ಬಾರಿ ಮುಖಾಮುಖಿಯಾಗಿವೆ. ನಾವು ಪೂರ್ವ ಋುತುವಿನಲ್ಲಿಚೆನ್ನೈಯಿನ್‌ನಲ್ಲಿಆಡಿದ್ದೇವೆ, ಅಲ್ಲಿಅವರು 4-4-2 ಮತ್ತು 4-3-3 ರಲ್ಲಿಆಡಿದರು. ಅವರು ಈಗ 3-5-2 ಸಿಸ್ಟಮ್‌ನಲ್ಲಿಆಡುತ್ತಿದ್ದಾರೆ. ಆದ್ದರಿಂದ ಅವರು ಹೇಗೆ ಹೊಂದಿಸುತ್ತಾರೆ ಎಂಬುದನ್ನು ಊಹಿಸಲು ಕಷ್ಟವಾಗುತ್ತದೆ. ಆದರೆ ನಾವು ನಮ್ಮ ಮೇಲೆ ಕೇಂದ್ರೀಕರಿಸಬೇಕು, ’’ ಎಂದು ಅವರು ಹೇಳಿದ್ದಾರೆ.
11 ಅಂಕ ಹೊಂದಿರುವ ಚೆನ್ನೈಯಿನ್‌ ಎಫ್‌ಸಿ ಪ್ರಸ್ತುತ ಅಂಕಪಟ್ಟಿಯಲ್ಲಿ6ನೇ ಸ್ಥಾನದಲ್ಲಿದ್ದು, ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯಲು ಒಂದು ಗೆಲುವನ್ನು ಎದುರು ನೋಡುತ್ತಿದೆ. ಆದರೆ ತನ್ನ ಹಿಂದಿನ ಐದು ಪಂದ್ಯಗಳಲ್ಲಿಒಂದರಲ್ಲಿಮಾತ್ರ ಜಯಿಸಿದೆ. ಅತ್ತ ತನ್ನ ಸತತ ಏಳು ಪಂದ್ಯಗಳಲ್ಲಿಜಯ ಗಳಿಸದ ಬೆಂಗಳೂರು ಎಫ್‌ಸಿ ಗೆಲುವಿಗಾಗಿ ಹಾತೊರೆಯುತ್ತಿದೆ.
ಜಮ್‌ಶೆಡ್ಪುರ ಎಫ್‌ಸಿ ವಿರುದ್ಧ ಒಂದು ಪಂದ್ಯ ಅಮಾನತು ಶಿಕ್ಷೆಗೆ ಒಳಗಾಗಿದ್ದ ನೋರೆಮ್‌ ರೋಶನ್‌ ಇದೀಗ ಮತ್ತೆ ತಂಡಕ್ಕೆ ಮರಳುತ್ತಿದ್ದು ತಂಡದ ಬಲವನ್ನು ಇಮ್ಮಡಿಗೊಳಿಸಿದೆ. ಇದೇ ವೇಳೆ ಪ್ರಮುಖ ಆಟಗಾರರ ಫಿಟ್ನೆಸ್‌ ಕುರಿತು ಮಾಹಿತಿ ನೀಡಿರುವ ಪೆಜ್ಜೈಯಲಿ, ‘‘ ಇನ್ನೂ ಚೇತರಿಸಿಕೊಳ್ಳುತ್ತಿರುವ ಲಿಯೋನ್‌ ಮತ್ತು ಹರ್ಮನ್‌ಪ್ರೀತ್‌ ಸದ್ಯ ಲಭವಿಲ್ಲ. ಗಾಯದಿಂದ ಬಳಲುತ್ತಿರುವ ಉದಾಂತ ಮತ್ತು ಕಿಂಗ್‌ ಬಗ್ಗೆಇನ್ನಷ್ಟು ಸ್ಪಷ್ಟತೆ ಲಭಿಸಿಲ್ಲ,’’ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಎಫ್‌ಸಿ ಮತ್ತು ಚೆನ್ನೈಯಿನ್‌ ಎಫ್‌ಸಿ ನಡುವಿನ ಪಂದ್ಯ ಗುರುವಾರ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಪಂದ್ಯ ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ +ಹಾಸ್ಟರ್‌ ಮತ್ತು ಜಿಯೋ ಟಿವಿಯಲ್ಲಿನೇರ ಪ್ರಸಾರ ಇರಲಿದೆ.

Malcare WordPress Security