ಗೋವಾ ವಿರುದ್ಧದ ಸೋಲಿನಿಂದಾಗಿ ಬೆಂಗಳೂರು ಎಫ್ ಸಿ ತಂಡದ ಪ್ಲೇ ಆಫ್ ಕನಸ್ಸು ಭಗ್ನ

ಅಂಗುಲೊ, ಟ್ಯಾಂಗ್ ಅವರ ಗೋಲ್ನಿಂದಾಗಿ ಗೋವಾ 2-1 ಅಂತರದ ಗೆಲುವು; ತಮ್ಮ ಕೊನೆಯ ಪಂದ್ಯದಲ್ಲಿ ಜೆಮ್ಶೆಡ್ಪುರ್ ತಂಡವನ್ನು ಎದುರಿಸಲಿರುವ ಬ್ಲೂಸ್.

ಭಾನುವಾರದಂದು ಫತೋರ್ದಾ ಅಂಗಳದಲ್ಲಿ ನಡೆದ ಎಫ್ ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಸೋಲನುಭವಿಸಿದ ಕಾರಣ 2020-21 ನೆ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಪ್ಲೇ ಆಫ್ ಕನಸ್ಸು ಭಗ್ನವಾಗಿದೆ. ಇಗೊರ್ ಅಂಗುಲೋ ಮತ್ತು ರಿಡೀಮ್ ಟ್ಯಾಂಗ್ ಅವರ ಗೋಲುಗಳು ಜುವಾನ್ ಫೆರಾಂಡೊ ನೇತೃತ್ವದ ತಂಡಕ್ಕೆ ಅಂಕ ಸೇರಿಸಿದರೆ, ಸುರೇಶ್ ವಾಂಗ್ಜಮ್ ಬ್ಲೂಸ್‌ಗಾಗಿ ಒಂದು ಅಂಕ ಗಳಿಸಿದ ಹೊರತಾಗಿಯೂ ತಂಡ ಹಿನ್ನಡೆ ಅನುಭವಿಸಿದೆ. ಇದರಿಂದಾಗಿ ಈ ಆವೃತ್ತಿಯಿಂದ ಎಲ್ಲ ಲೆಕ್ಕಾಚಾರಗಳ ಪ್ರಕಾರ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳಲ್ಲಿ ಉಳಿಯುವ ಅವಕಾಶ ನೌಶಾದ್ ಮೂಸಾ ತಂಡಕ್ಕೆ ಬಹುತೇಕ ಕ್ಷೀಣವಾಗಿದೆ.

ಇಬ್ಬರೂ ತರಬೇತುದಾರರು ತಮ್ಮ ತಂಡಗಳಲ್ಲಿ ತಲಾ ಎರಡು ಬದಲಾವಣೆಗಳನ್ನು ಮಾಡಿದ್ದರು; ಬ್ಲೂಸ್‌ ಪರ ಹರ್ಮನ್‌ಜೋತ್ ಖಬ್ರಾ ಮತ್ತು ಅಜಿತ್ ಕುಮಾರ್ ಅವರ ಸ್ಥಾನದಲ್ಲಿ ರಾಹುಲ್ ಭೆಕೆ ಮತ್ತು ಆಶಿಕ್ ಕುರುನಿಯನ್ ಸ್ಥಾನ ಪಡೆದಿದ್ದರೆ, ಪ್ರಿನ್ಸ್ಟನ್ ರೆಬೆಲ್ಲೊ ಮತ್ತು ಜಾರ್ಜ್ ಒರ್ಟಿಜ್ ಅವರ ಬದಲಾಗಿ ಎಡು ಬೆಡಿಯಾ ಮತ್ತು ರಿಡೀಮ್ ಟ್ಯಾಂಗ್ ತಂಡದಲ್ಲಿ ಸ್ಥಾನ ಪಡೆದಿದ್ದರು.

ಗೆಲುವಿನ ನಂತರದ ಪಂದ್ಯದಲ್ಲಿ ಬೆಂಗಳೂರು ತಂಡ ಪಂದ್ಯದ ಮೇಲೆ ಆರಂಭದಲ್ಲಿ ಹಿಡಿತ ಸಾಧಿಸುವ ಅವಕಾಶ ಗಳಿಸಿತ್ತು. ಪರಾಗ್ ಶ್ರಿವಾಸ್ ಅವರ ಲಾಂಗ್ ಥ್ರೋ ಅನ್ನು ಗೋವಾ ತಂಡದ ಗೋಲ್ ಕೀಪರ್ ಧೀರಜ್ ಸಿಂಘ್ ತಡೆಯುವಲ್ಲಿ ಕೈಚೆಲ್ಲಿದರು ನಂತರ ಕ್ಲಿಟಾನ್ ಸಿಲ್ವಾ ಅವರ ಪ್ರಯತ್ನವನ್ನು ಸೆರೆಟೋನ್ ಫೆರ್ನಾಂಡಿಸ್ ತಡೆದರು. ಆದರೆ 20 ನಿಮಿಷದ ಆಟದ ನಂತರ ಎದುರಾಳಿ ತಂಡ ತಮ್ಮ ಮೊಟ್ಟಮೊದಲ ಗೋಲ್ ಪಡೆದು ಮುನ್ನಡೆ ಸಾಧಿಸಿತು.

ಪಂದ್ಯದ ಹಿಡಿತ ಸಾಧಿಸಲು ಪ್ರಯತ್ನ ನಡೆಯುತ್ತಿದ್ದಾಗ, ಎರಿಕ್ ಪಾರ್ತಲು ಅವರಿಂದ ಗ್ಲ್ಯಾನ್ ಮಾರ್ಟಿನ್ಸ್ ಬಾಕ್ಸ್ ಹೊರಗೆ ಚೆಂಡನ್ನು ಕಸಿದು ಇಗೊರ್ ಆಂಗೊಲೋ ಅವರಿಗೆ ತಲುಪಿಸಿದರು. ಸ್ಪೈನ್ ಆಟಗಾರ ಯಾವುದೇ ತಪ್ಪು ಮಾಡದೆ ಚೆಂಡಿನ ಮೇಲೆ ಸ್ಪರ್ಶ ಸಾಧಿಸಿದರು. ಅವರ ಗೋಲ್ ಯತ್ನವನ್ನು ಗುರ್ಪ್ರೀತ್ ಸಿಂಗ್ ಸಂಧು ತಡೆಯಲಾಗದೆ ಅಂಕ ಬಿಟ್ಟುಕೊಟ್ಟರು. ಮೂರು ನಿಮಿಷಗಳ ನಂತರ, ರಿಡೀಮ್ ಟ್ಯಾಂಗ್ ಮೂಲಕ ಮತ್ತೊಂದು ಗೋಲ್ ಪಡೆಯುವಲ್ಲಿ ಎದುರಾಳಿ ತಂಡ ಸಫಲರಾದರು. ಅಲೆಕ್ಸಾಂಡರ್ ಜೇಸುರಾಜ್ ಚೆಂಡನ್ನು ರಿಡೀಮ್ ಗೆ ತಲುಪಿಸಿ ಹೆರ್ನಾಂಡೀಸ್ ಅವರನ್ನು ತಪ್ಪಿಸಿದರು. ಅವಕಾಶ ಪಡೆದ ರಿಡೀಮ್ ಪೋಸ್ಟ್ ಮೂಲೆಗೆ ಚೆಂಡನ್ನು ತಳ್ಳಿ ಗೋಲ್ ಪಡೆದು ತಂಡದ ಅಂಕ ಮೊತ್ತವನ್ನು 2-0 ಏರಿಸಿದರು.

ಹತ್ತು ನಿಮಿಷದ ಆಟದ ನಂತರ ಬೆಂಗಳೂರಿನ ಸುರೇಶ್ ವಂಗ್ಜಮ್ ಅವರ ಗೋಲ್ ಯತ್ನ ದಿoದಾಗಿ ಅಂಕದ ಅಂತರ ಕಡಿಮೆಯಾಯಿತು. ಅಂಗಳದ ಎಡ ಭಾಗದಲ್ಲಿ ಚೆಂಡನ್ನು ಪಡೆದ ಸುರೇಶ್, ಸೆರೆಟೋನ್ ಅವರನ್ನು ತನ್ನ ಪ್ರಥಮ ಸ್ಪರ್ಶದಿಂದ ಹಿಂದಿಕ್ಕಿದರು, ವೃತ್ತಿಪರ ಫುಟ್ಬಾಲ್ನಲ್ಲಿ ತನ್ನ ಮೊದಲ ಗೋಲ್ಗಾಗಿ ಚೆಂಡಿಗೆ ಬಲವಾದ ಹೊಡೆತ ನೀಡಿ ಪೋಸ್ಟ್ನ ಮುಂಭಾಗದಲ್ಲಿ ಅತ್ಯತ್ತಮ ಕೋನದೊಂದಿಗೆ ತಲುಪಿಸಿ ಗೋಲ್ ಗಳಿಸಿದರು.

ಬ್ಲೂಸ್ ತಮ್ಮ ಅಂಕವನ್ನು ಸಮಾನಗೊಳಿಸಿಕೊಳ್ಳುವ ಹಲವಾರು ಅವಕಾಶಗಳು ಅಂಗಳದಲ್ಲಿ ಕಂಡುಬಂದವು. ಆಶಿಕ್‌ ಅವರ ಕ್ರಾಸ್ ಕ್ಲೀಟನ್ ಸಿಲ್ವಾ ಹೆಡರ್ನಿಂದಾಗಿ ಸೆಟ್-ಪೀಸ್‌ ಮೂಲಕ ಕ್ಸಿಸ್ಕೊ ತಲುಪುವ ಮುನ್ನವೇ ಕ್ರಾಸ್‌ಬಾರ್‌ ತಲಿಪಿತ್ತು. ಕ್ಸೆಸ್ಕೊ ಫ್ರೀ ಕಿಕ್‌ನಿಂದ ಛೇತ್ರಿ ಫ್ಲಿಕ್ ಮಾಡಿ ನೇರವಾಗಿ ಗೋವಾದ ಕೀಪರ್ ಧೀರಜ್ ಅವರ ತೋಳುಗಳಿಗೆ ತಾಗಿಸಿದಾಗ ಗೋಲ್ ಅವಕಾಶಗಳು ನಿಚ್ಚಳವಾಗಿದ್ದರು ದೊರೆಯಲಿಲ್ಲ.

ದ್ವಿತೀಯಾರ್ಧದ ಮೊದಲ ದೊಡ್ಡ ಅವಕಾಶ ಅಂಗುಲೋಗೆ ಸಿಕ್ಕಿತ್ತು. ಅವರು ಆಫ್‌ಸೈಡ್ ಆಟಗಾರರನ್ನು ತಪ್ಪಿಸುವಲ್ಲಿ ಯಶಸ್ವಿಯಾದರು ಆದರೆ ಗುರ್‌ಪ್ರೀತ್‌ ಅನ್ನು ಎದುರಿಸಲಾಗದೆ ಪೋಸ್ಟ್ನ ಬಹಳ ದೂರದಲ್ಲಿ ಚೆಂಡನ್ನು ಕಳೆದುಕೊಂಡರು. ಬ್ಲೂಸ್ ಪರ ಸಮಾನ ಅಂಕ ಗಳಿಸುವ ವಿಶ್ವಾಸದೊಂದಿಗೆ ಮೂಸಾ ದ್ವಿತೀಯಾರ್ಧದ ಆರಂಭದಲ್ಲಿ ಡಿಮಾಸ್ ಡೆಲ್ಗಾಡೊವನ್ನು ಅಂಗಳಕ್ಕೆ ಕರೆತಂದರು.

ಎರಡನೇ ಅವಧಿಯಲ್ಲಿ ಬೆಂಗಳೂರು ಎಲ್ಲಾ ಪ್ರಯತ್ನಗಳನ್ನು ಉತ್ತಮವಾಗಿಯೇ ಮಾಡಿತು ಆದರೆ ಅಂತಿಮ ಹಂತಗಳಲ್ಲಿ ಆಶಿಕ್ ವಿಂಗ್ ಬಳಿಯ ಓಟದಲ್ಲಿನ ಕೊರತೆ ಮತ್ತು ಪರಾಗ್ ಶ್ರೀವಾಸ್ ಅವರ ಕಡಿಮೆ ಅಂತರದ ಕ್ರಾಸ್ ಪ್ರಯತ್ನ ಇವಾನ್ ಗೊನ್ಜಾಲೆಜ್ ಅವರಿಂದ ಆದ ನಿರ್ಬಂಧ ತಂಡಕ್ಕೆ ಆಘಾತ ತಂದೊಡ್ಡಿತು.

ಬ್ಲೂಸ್ ಆಟಕ್ಕೆ ಮರಳಲು ದಾರಿ ಹುಡುಕುತ್ತಿರುವಾಗ, ಗೋವಾ ಮತ್ತಷ್ಟು ಅವಕಾಶಗಳೊಂದಿಗೆ ಹೆಚ್ಚಿನ ಅಂಕ ಪಡೆಯಲು ಪ್ರಯತ್ನಿಸಿತು ಆದರೆ ಗುರ್‌ಪ್ರೀತ್ ಎರಡು ಬಾರಿ ತಡೆಯಲು ಯಶಸ್ವಿಯಾದರು. ಬ್ಲೂಸ್ ತಂಡದ ನಂ.1 ತಡೆಗೋಡೆಯಾಗಿ ನಿಂತು ಮೊಹಮ್ಮದ್ ಅಲಿಯ ಅವರ ಹೆಡರ್ ಅನ್ನು ಹೊರಗಿಟ್ಟರು ಮತ್ತು ಇಶಾನ್ ಪಂಡಿತಾ ಅವರ ಯತ್ನವನ್ನು ವಿಫಲಗೊಳಿಸಿದರು.

ಫತೋರ್ದಾ ಅಂಗಳದಲ್ಲಿ ಸೋಲು ಅನುಭವಿಸಿದ ಕಾರಣ ಇಂಡಿಯನ್ ಸೂಪರ್ ಲೀಗ್ ಪ್ಲೇಆಫ್‌ನಲ್ಲಿ ಸ್ಥಾನ ಗಿಟ್ಟಿಸುವ ಯೋಜನೆ ಬೆಂಗಳೂರು ತಂಡಕ್ಕೆ ದೂರದ ಮಾತಾಗಿದ್ದು, ಫೆಬ್ರವರಿ 25 ರಂದು ತಿಲಕ್ ಮೈದಾನದಲ್ಲಿ ಜಮ್ಶೆಡ್ಪುರ ಎಫ್‌ಸಿ ವಿರುದ್ಧ ಆವೃತ್ತಿಯ ಅಂತಿಮ ಪಂದ್ಯವನ್ನು ಆಡಲಿದ್ದಾರೆ.