ಗೋವಾ ವಿರುದ್ಧದ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಸ್ಥಾನ ಉಳಿಸಿಕೊಳ್ಳಲು ಫತೋರ್ದಾಗೆ ತೆರಳಿದ ಬಿ ಎಫ್ ಸಿ

ಆಶಿಕ್ ಆಟಕ್ಕೆ ಸಿದ್ದ, ಬಿ ಎಫ್ ಸಿ ಶಿಬಿರದಲ್ಲಿ ತರಬೇತಿ ಆರಂಭಿಸಿದ ಡಿಮಾಸ್

ಬೆಂಗಳೂರು ಎಫ್‌ಸಿಯ ಹಂಗಾಮಿ ಮುಖ್ಯ ಕೋಚ್ ನೌಶಾದ್ ಮೂಸಾ ಅವರು ಭಾನುವಾರದಂದು ಫತೋರ್ದಾದಲ್ಲಿ ಗೋವಾ ವಿರುದ್ಧ ನಡೆಯಲಿರುವ ಪಂದ್ಯದ ಹಿನ್ನೆಲೆಯಲ್ಲಿ ಆಟದ ಒತ್ತಡದ ಕುರಿತು ಮಾತನಾಡಿದರು. ಮುಂಬೈ ಸಿಟಿ ಎಫ್‌ಸಿ ವಿರುದ್ಧ ಕಳೆದ ಪಂದ್ಯದ ಗೆಲುವಿನ ನಂತರ ಬೆಂಗಳೂರು ಅಂಕಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದ್ದು ಪ್ಲೇಆಫ್ ಅವಕಾಶಕ್ಕೆ ಸನಿಹದಲ್ಲಿದೆ, ಜುವಾನ್ ತಂಡದ ವಿರುದ್ಧ ಕಠಿಣ ಪಂದ್ಯವನ್ನು ಎದುರು ನೋಡುತ್ತಿರುವುದಾಗಿ ಮೂಸಾ ಅಭಿಪ್ರಾಯ ವ್ಯಕ್ತಪಡಿಸಿದರು.

“ಮುಂಬೈ ಸಿಟಿ ತಂಡದಂತೆಯೆ ಎಫ್ ಸಿ ಗೋವಾ ತಂಡವೂ ಬಲಿಷ್ಠ ಪ್ರತಿಸ್ಪರ್ಧಿಗಳಾಗಿದ್ದು, ಚೆಂಡನ್ನು ಸ್ವಾಧೀನದಲ್ಲಿ ಇರಿಸಿ ಹಿಡಿತ ಸಾಧಿಸುತ್ತಾರೆ. ಜಾರ್ಜ್ ಒರ್ಟಿಜ್ ಮತ್ತು ಇಗೊರ್ ಅಂಗುಲೋ ಅವರಂತಹ ವಿದೇಶಿ ಆಟಗಾರರನ್ನು ಎದುರಾಳಿ ತಂಡ ಒಳಗೊಂಡಿದೆ. ಎಡು ಬೆಡಿಯಾ ತಮ್ಮ ತಂಡಕ್ಕೆ ಆಸರೆಯಾಗುವ ಭರವಸೆಯನ್ನು ನೀಡಿದ್ದಾರೆ. ತಂಡವು ಇತ್ತೀಚೆಗೆ ಯಾವುದೇ ಆಟವನ್ನು ಕಳೆದುಕೊಂಡಿಲ್ಲ, ಸಾಕಷ್ಟು ಅಂಕಗಳನ್ನು ಗಳಿಸಿದ್ದಾರೆ ಮತ್ತು ನಾವು ಈ ಆಟದಲ್ಲಿ ಜಾಗರೂಕರಾಗಿರಬೇಕು ”ಎಂದು ಮೂಸಾ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗೋವಾ ವಿರುದ್ಧದ ಫಲಿತಾಂಶ ಬೆಂಗಳೂರು ತಂಡಕ್ಕೆ ನಿರ್ಣಾಯಕವಾಗಿರಲಿದೆ. ಮೈದಾನದಲ್ಲಿರುವಾಗ ತಮ್ಮ ತಂಡವು ಲೀಗ್ ಟೇಬಲ್ ಬಗ್ಗೆ ಚಿಂತಿಸುವುದಿಲ್ಲವೆಂದು ಎಂದು ತಿಳಿಸಿದ್ದಾರೆ. “ಖಂಡಿತವಾಗಿಯೂ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಯನ್ನು ತಂದೊಡ್ಡಿದೆ. ಆದರೆ ನಾನು ಈ ವಿಷಯವನ್ನು ನನ್ನ ಆಟಗಾರರೊಂದಿಗೆ ಪ್ರಸ್ತಾಪಿಸುವುದಿಲ್ಲ. ಗೋವಾ ತಂಡ ತಮ್ಮ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಒತ್ತಡದಲ್ಲಿದೆ ಎಂದು ನಾನು ಭಾವಿಸುತ್ತೇನೆ. ನಾವು ಶಾಂತವಾಗಿರುತ್ತೇವೆ, ನಾವು ಮುಂಬೈ ವಿರುದ್ಧ ಆಡಿದಂತೆಯೇ ಆಡುತ್ತೇವೆ ಮತ್ತು ನಮ್ಮ ಆಟವನ್ನು ಆನಂದಿಸುತ್ತೇವೆ. ನಮಗೆ ಅವಕಾಶ ಸಿಕ್ಕಾಗ ಎದುರಾಳಿ ತಂಡ ನಮ್ಮ ದಾಳಿಯನ್ನು ಹೇಗೆ ನಿರ್ವಹಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ ಎಂಬುದನ್ನು ಗಮನಿಸುತ್ತೇವೆ.

ಲೀಗ್ ನ ಆಗ್ರ ಸ್ಥಾನದಲ್ಲಿದ್ದ ಮುಂಬೈ ವಿರುದ್ಧದ ಗೆಲುವು ಶಿಬಿರದಲ್ಲಿ ಸ್ಥೈರ್ಯವನ್ನು ತಂದಿದ್ದು ಆವೃತ್ತಿಯಲ್ಲಿನ ಅಂತಿಮ ಎರಡು ಪಂದ್ಯಗಳಲ್ಲಿ ಬಲವನ್ನು ಹೆಚ್ಚಿಸಿದೆ. “ಕಳೆದ ಪಂದ್ಯವು ಆಟಗಾರರಿಗೆ ಒತ್ತಡದಲ್ಲಿ ಪ್ರದರ್ಶನ ನೀಡುವ ಆತ್ಮವಿಶ್ವಾಸವನ್ನು ನೀಡಿದೆ. ಒಂದು ತಂಡವಾಗಿ ಕೆಲಸ ಮಾಡುವುದೇ ತಂಡದ ಶಕ್ತಿ ಎಂಬುದನ್ನು ಆಟಗಾರರು ಅರಿತುಕೊಳ್ಳುವುದು ಮುಖ್ಯವಾಗಿದೆ. ಇದು ಮುಂಬೈ ವಿರುದ್ಧ ನಮಗೆ ಕೆಲಸ ಮಾಡಿತ್ತು. ನಾವು ಇದನ್ನೇ ಗೋವಾ ವಿರುದ್ಧ ಪುನರಾವರ್ತಿಸಬೇಕು. ನಮಗೆ ಎರಡು ಪಂದ್ಯಗಳು ಉಳಿದಿವೆ, ನಾವು ಸಕಾರಾತ್ಮಕವಾಗಿರುತ್ತೇವೆ, ನಮ್ಮ 100% ನೀಡುತ್ತೇವೆ ಮತ್ತು ಲೀಗ್ ಸ್ಥಾನಗಳ ಬಗ್ಗೆ ಚಿಂತಿಸುವುದಿಲ್ಲ ”

ಎಫ್‌ಸಿ ಗೋವಾ ಹನ್ನೊಂದು ಪಂದ್ಯಗಳ ಅಜೇಯ ಓಟದಲ್ಲಿದ್ದರೆ, ಬೆಂಗಳೂರು ತಂಡ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಮನೋರಂಜನಾತ್ಮಕವಾಗಿ ಗೆಲುವು ಸಾಧಿಸಿದ ನಂತರ ಚೆನ್ನೈಯಿನ್ ಎಫ್‌ಸಿ ವಿರುದ್ಧ ಡ್ರಾ ಮಾಡಿಕೊಂಡು ಈ ವಾರದ ಆರಂಭದಲ್ಲಿ ಮುಂಬೈ ವಿರುದ್ಧ ಪೂರ್ಣ ಅಂಕಗಳನ್ನು ಪಡೆದರು. ಮೂಸಾ ಆಟಗಾರರು ತಮ್ಮ ಮುಂದಿನ ಪಂದ್ಯದಲ್ಲಿ ಎದುರಾಳಿ ವಿರುದ್ಧ ತಪ್ಪು ಹೆಜ್ಜೆಗಳನ್ನು ಇಡುವಂತಿಲ್ಲ .

“ಈಸ್ಟ್ ಬೆಂಗಾಲ್ ವಿರುದ್ಧ ಮೂರು ಅಂಕಗಳನ್ನು ಪಡೆದ ನಂತರ, ನಾವು ಗಮನ ಕಳೆದು ಕೊಂಡಿದ್ದೆವು. ಈಗ ಹಾಗಾಗದು, ಒಂದು ಗೆಲುವು ನಮ್ಮನ್ನು ಪ್ಲೇಆಫ್‌ ಹತ್ತಿರದಲ್ಲಿ ಇರಿಸಲಿದ್ದು ಆಕಾಂಕ್ಷೆಯೊಂದಿಗೆ ಹತಾಶರಾಗಲು ಇಷ್ಟ ಪಡುವುದಿಲ್ಲ. ನನ್ನ ಆಟಗಾರರು ಗಮನಹರಿಸಬೇಕೆಂದು ನಾನು ಬಯಸುತ್ತೇನೆ, ನಮ್ಮ ಯೋಜನೆಗಳ ಅನುಸಾರ, ನಿರಾಶೆಗೊಳ್ಳದೆ ಆಟವನ್ನು ಆನಂದಿಸಲಿದ್ದೇವೆ. ಆಟಗಾರರು ಚೆನ್ನೈ ವಿರುದ್ಧದ ತಪ್ಪುಗಳನ್ನು ತಿಳಿದಿದ್ದಾರೆ ಮತ್ತು ಪುನರಾವರ್ತಿಸಲು ಬಯಸುವುದಿಲ್ಲ. ”

ತಂಡದಲ್ಲಿ ಹೊಸ ಗಾಯಾಳುಗಳಿಲ್ಲ ಎಂದು ಮೂಸಾ ಖಚಿತ ಪಡಿಸಿದರು, ಮತ್ತು ಸ್ಪ್ಯಾನಿಷ್ ಮಿಡ್‌ಫೀಲ್ಡರ್ ಡಿಮಾಸ್ ಡೆಲ್ಗಾಡೊ ಅವರ ಕಡ್ಡಾಯ ಸಂಪರ್ಕತಡೆಯನ್ನು ಪೂರ್ಣಗೊಳಿಸಿದ ನಂತರ ಆಯ್ಕೆಗೆ ಲಭ್ಯವಿದ್ದಾರೆ. “ಡಿಮಾಸ್ ಹಿಂತಿರುಗಿದ್ದಾರೆ, ಆದರೆ ಅವರು ಮತ್ತೆ ತರಬೇತಿಗೆ ಸೇರಿಕೊಂಡಿದ್ದರಿಂದ ಅವರು ಆಟವನ್ನು ಪ್ರಾರಂಭಿಸುವುದಿಲ್ಲ. ಕ್ಸಿಸ್ಕೊ (ಹೆರ್ನಾಂಡೆಜ್) ಮುಂಬೈ ವಿರುದ್ಧ ಪಂದ್ಯ ಪ್ರಾರಂಭವಾದ 60 ನಿಮಿಷಗಳ ಕಾಲ ಆಡಿದ್ದರು. ಅವರು ಹೇಗೆ ಪ್ರಗತಿ ಹೊಂದುತ್ತಿದ್ದಾರೆ ಎಂದು ನಾವು ನೋಡುತ್ತೇವೆ ಮತ್ತು ಅವರಿಗೆ ಹೆಚ್ಚಿನ ನಿಮಿಷಗಳನ್ನು ನೀಡಲು ಆಲೋಚಿಸುತ್ತೇವೆ. ಆಶಿಕ್ (ಕುರುನಿಯನ್) ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ , ಆದರೆ ನಂತರದಲ್ಲಿ ಈ ಆಟದಲ್ಲಿ ಪ್ರಾರಂಭಿಸಬಹುದೇ ಎಂಬುದರ ಬಗ್ಗೆ ನಾವು ಯೋಚಿಸುತ್ತೇವೆ. ”

ಫತೋರ್ದಾದಲ್ಲಿ ಕಿಕ್ ಆಫ್ ಸಂಜೆ 5 ಗಂಟೆಗೆ ನಿಗದಿಯಾಗಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿವೆ.

Malcare WordPress Security