ಕೊನೆ ನಿಮಿಷಗಳಲ್ಲಿ ಬ್ಲಾಸ್ಟರ್ಸ್ ವಿರುದ್ಧ ಪಂದ್ಯ ಕೈಚೆಲ್ಲಿದ ಬೆಂಗಳೂರು

ರೋಚಕ ರೀತಿಯಲ್ಲಿ ಬ್ಲಾಸ್ಟರ್ಸ್ 2-1 ಅಂತರದ ಜಯ ಇದರೊಂದಿಗೆ ಮತ್ತೆ ಜಯ ಕಾಣದ ಬ್ಲೂಸ್.

ಬುಧವಾರ ಗೋವಾದ ಬಾಂಬೋಲಿಮ್ ಅಲ್ಲಿನ ಜಿ.ಎಂ.ಸಿ ಕ್ರೀಡಾಂಗಣದಲ್ಲಿ, ಬಿ ಎಫ್ ಸಿ ಮತ್ತೊಂದು ಸೋಲು ಎದುರಿಸಿದೆ. 2-1ರ ಅಂತರದ ಗೆಲುವಿನೊಂದಿಗೆ ಬ್ಲಾಸ್ಟರ್ಸ್ ಜಯ ಸಾಧಿಸಿ ಬಿ ಎಫ್ ಸಿ ಗೆಲುವಿನ ಆಸೆಗೆ ತಣ್ಣೀರೆರಚಿದೆ. ಕ್ಲಿಟಾನ್ ಸಿಲ್ವಾ ಅವರು ಆವೃತ್ತಿಯ ನಾಲ್ಕನೆಯ ಗೋಲ್ನೊಂದಿಗೆ ಬೆಂಗಳೂರು ತಂಡಕ್ಕೆ 24 ನೇ ನಿಮಿಷದಲ್ಲಿ ಅಕ್ರೋಬ್ಯಾಟಿಕ್ ವೊಲಿ ಮೂಲಕ ಅಂಕ ತಂದರು. ಆದರೆ ಕೇರಳ ತಂಡದ ಸಬ್ಸ್ಟಿಟ್ಯೂಟ್ ಲ್ಯಾಲ್ತಾಥಾಂಗ ಖವ್ಲ್ರಿಂಗ್ 73 ನೇ ನಿಮಿಷದಲ್ಲಿ ಗೋಲ್ ಪಡೆಯುವ ಯತ್ನದಲ್ಲಿ ನೇರವಾಗಿ ಗರ್ಪ್ರೀತ್ ಸಿಂಗ್ ಸಂಧು ಅವರನ್ನು ಎದುರಿಸಿ ಸಂಧು ಗಾಯಗೊಂಡರು. ಎದೆಗೆ ಹೊಡೆತ ತಾಗಿದ ನಂತರ ವೈದ್ಯಕೀಯ ನೆರವಿಗಾಗಿ ತೊಳಲಾಡುತ್ತಿದ್ದರು. ಈ ಮಧ್ಯೆ ಎದುರಾಳಿ ತಮ್ಮ ಮೊದಲ ಗೋಲ್ ಗಳಿಸಿಕೊಂಡರು. ನಂತರ ಪಂದ್ಯದಲ್ಲಿ 5 ಹೆಚ್ಚಿನ ನಿಮಿಷಗಳ ಅವಕಾಶದೊಂದಿಗೆ ರಾಹುಲ್ ಕೆ ಪಿ ತಮ್ಮ ತಂಡದ ಪರ ಮತ್ತೊಂದು ಗೋಲ್ ಗಳಿಸಿ ಪಂದ್ಯ ಗೆದ್ದು ಅಂಕ ತಮ್ಮದಾಗಿಸಿಕೊಂಡರು.

ನೌಶಾದ್ ಮೂಸಾ ಅವರು ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಪಂದ್ಯ ಡ್ರಾ ಮಾಡಿಕೊಂಡಿದ್ದ ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿದ್ದರು. ಪ್ರತೀಕ್ ಚೌಧರಿ, ಹರ್ಮನ್‌ಜೋತ್ ಖಬ್ರಾ, ಡಿಮಾಸ್ ಡೆಲ್ಗಾಡೊ ಮತ್ತು ಕ್ರಿಸ್ಟಿಯನ್ ಒಪ್ಸೆತ್ ಅವರ ಸ್ಥಾನದಲ್ಲಿ ಫ್ರಾನ್ ಗೊನ್ಜಾಲೆಜ್, ಸುರೇಶ್ ವಾಂಗ್ಜಮ್, ಉದಾಂತ ಸಿಂಗ್ ಮತ್ತು ಚೊಚ್ಚಲ ಪಂದ್ಯದಲ್ಲಿ ಅಮಯ್ ಮೊರಾಜ್ಕರ್ ಅಂಗಳಕ್ಕೆ ಪಾದಾರ್ಪಣೆ ಮಾಡಿದರು. ಮೂಸಾ ತಮ್ಮ ತಂತ್ರಗಳಲ್ಲಿ ಅಲ್ಪ ಬದಲಾವಣೆ ಕಂಡುಕೊಂಡರು. ಬ್ಲೂಸ್ 4-4-2 ರಚನೆಯೊಂದಿಗೆ ಸುನಿಲ್ ಛೇತ್ರಿ ಅವರು ಉದಾಂತ ಸಿಂಗ್ ಜೊತೆ ಆಡಿದರು.

ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಡ್ರಾ ಮಾಡಿಕೊಂಡಿದ್ದ ಬ್ಲಾಸ್ಟರ್ಸ್ ತಂಡದಲ್ಲಿ ಕಿಬು ವಿಕುನಾ ಮೂರು ಬದಲಾವಣೆಗಳನ್ನು ಮಾಡಿದ್ದರು. ರಾಹುಲ್ ಕೆಪಿ, ಜುವಾಂಡೆ ಮತ್ತು ಯೊಂಡ್ರೆಂಬೆಮ್ ಡೆನೆಚಂದ್ರ ಅವರು ನಿಶು ಕುಮಾರ್, ಜೆಸ್ಸೆಲ್ ಕಾರ್ನೆರೊ ಮತ್ತು ಫಕುಂಡೋ ಪೆರೆರಾ ಅವರನ್ನು ಬದಲಾಯಿಸಿದರು.

ಆರಂಭಿಕ ನಿಮಿಷಗಳು ಸ್ವಲ್ಪ ಜಗ್ಗಾಟದಂತೆ ಕಂಡುಬಂದಿತ್ತು. ಮಿಡ್‌ಫೀಲ್ಡ್‌ನಲ್ಲಿ ಆಟದ ಮೇಲೆ ಹಿಡಿತ ಸಾಧಿಸಲು ಎರಡೂ ಪಡೆಯವರು ಉತ್ಸುಕರಾಗಿದ್ದರು. ಎರಡೂ ತುದಿಗಳಲ್ಲಿ ಗೋಲು ಪ್ರಯತ್ನಗಳು ನಡೆದವು ಆದರೆ ಇದು ಗುರ್‌ಪ್ರೀತ್ ಸಿಂಗ್ ಸಂಧು ಮತ್ತು ಅಲ್ಬಿನೋ ಗೋಮ್ಸ್ ಅವರ ಎಂದಿನ ಉಳಿತಾಯದಂತೆಯೇ ಕಂಡಿತು.

24 ನೇ ನಿಮಿಷದಲ್ಲಿ ಬ್ಲಾಸ್ಟರ್ಸ್ ವಿರುದ್ಧ ನಿರಂತರವಾಗಿ ಗೋಲ್ ಯತ್ನ ಮಾಡುತ್ತಿದ್ದ ಬಿ ಎಫ್ ಸಿ ಗೆ ಬಲಭಾಗದಲ್ಲಿ ಥ್ರೋ-ಇನ್ ಅವಕಾಶ ಸಿಕ್ಕು ರಾಹುಲ್ ಭೆಕೆ ಅವರ ಎಸೆತ ಎಲ್ಲರನ್ನೂ ಸೋಲಿಸಿ ಕ್ಲೀಟನ್ ಸಿಲ್ವಾ ಅವರನ್ನು ಕೊಂಡುಕೊಂಡಿತು, ಅವರು ಅದನ್ನು ದೂರದ ಪೋಸ್ಟ್‌ನಲ್ಲಿ ಅರ್ಧ-ವಾಲಿಯಲ್ಲಿ ಗೋಮ್ಸ್ ಅವರನ್ನು ಶಕ್ತಿ ಮತ್ತು ತಮ್ಮ ನಿಯೋಜನೆಯಿಂದ ಸೋಲಿಸಿ ಬ್ಲೂಸ್‌ ಪರ ಅಂಕ ತಂದಿಟ್ಟರು.

ಹತ್ತು ನಿಮಿಷಗಳ ನಂತರ ಬ್ಲೂಸ್‌ಗೆ ತಮ್ಮ ಅಂಕವನ್ನು ದ್ವಿಗುಣಗೊಳಿಸುವ ಅವಕಾಶ ಸಿಕ್ಕಿತು. ಉದಾಂತಾ ಸಿಂಗ್ ಪೋಸ್ಟ್ ಅತ್ತ ಓಡಿ, ಅದನ್ನು ಬೈಲೈನ್ ಕಡೆಗೆ ತೆಗೆದುಕೊಂಡು ಹೊಡೆತವನ್ನು ತೆಗೆದುಕೊಂಡರು ಆದ್ರೆ ಗೋಲ್ ಸಾಧ್ಯವಾಗಿರಲಿಲ್ಲ.

ಮೊದಲಾರ್ಧದ ಅಂತಿಮ ಕ್ಷಣಗಳಲ್ಲಿ ಗೋಮ್ಸ್ ಅವರು ಸುನಿಲ್ ಛೇತ್ರಿಯವರ ಫ್ರೀ ಕಿಕ್ ಅನ್ನು ಹೊರಗಿಡಲು ಉತ್ತಮ ಡೈವಿಂಗ್ ಸೇವ್ ಮಾಡಿದರು.

ದ್ವಿತೀಯಾರ್ಧದಲ್ಲಿ ಬ್ಲೂಸ್ ಪ್ರಾಬಲ್ಯ ಮುಂದುವರಿಸುವುದರೊಂದಿಗೆ, ಬ್ಲೂಸ್ ರಕ್ಷಣೆಯ ಹಿಂದಿನ ದಾರಿ ಕಂಡುಕೊಳ್ಳಲು ಬ್ಲಾಸ್ಟರ್ಸ್ ಗೆ ಅದೃಷ್ಟದ ಅವಶ್ಯಕತೆ ಬೇಕೆನಿಸುತ್ತಿತ್ತು. ಅವರು ಮೂರನೇ ಕ್ವಾರ್ಟರ್ ಕೊನೆಯಲ್ಲಿ ಅದನ್ನು ಪಡೆದರು. ಗ್ಯಾರಿ ಹೂಪರ್ ಅವರ ಹೊಡೆತವನ್ನು ಗುರ್‌ಪ್ರೀತ್ ಬಹಳ ತೀಕ್ಷ್ಣ ಶ್ರೇಣಿಯಿಂದ ಉಳಿಸಿದರು, ಮತ್ತವರು ಗಾಯಗೊಂಡರು. ಬ್ಲಾಸ್ಟರ್ಸ್ ಆಟವಾಡುವುದನ್ನು ಮುಂದುವರೆಸಿದರು ಮತ್ತು ಬಾಕ್ಸ್‌ನಲ್ಲಿನ ಪಿನ್‌ಬಾಲ್ ಇಂದ ಲ್ಯಾಲ್ತಾಥಾಂಗ ಚೆಂಡನ್ನು ಗೋಲಿನತ್ತ ತಿರುಗಿಸಿ ತಂಡದ ಪರ 1-1 ರ ಗೋಲ್ ಗಳಿಸಿದರು.

77 ನೇ ನಿಮಿಷದಲ್ಲಿ ಕೇರಳ ಪೋಸ್ಟ್ ಅತ್ತ ಸಿಲ್ವಾ ಅವರನ್ನು ಸಂದೀಪ್ ಸಿಂಗ್ ಹಿಂಬದಿಯಿಂದ ಸರಿಸಿದರೂ, ಬೆಂಗಳೂರು ಪೆನಾಲ್ಟಿಗಾಗಿ ಕಾನೂನುಬದ್ಧ ಧ್ವನಿ ಎತ್ತಿತು ಅದನ್ನು ನಿರಾಕರಿಸಿದ ರೆಫರಿ ಹರೀಶ್ ಕುಂದು ಯಾವುದೇ ನಿರ್ಣಾಯಕ ನಿಲುವು ತಳೆಯಲಿಲ್ಲ.

ಬದಲಿ ಆಟಗಾರ ಲಿಯಾನ್ ಅಗಸ್ಟೀನ್ ಬಹುತೇಕ 90 ನೇ ನಿಮಿಷದಲ್ಲಿ ಬ್ಲೂಸ್‌ರನ್ನು ಮುನ್ನಡೆಸಿದರು. ಗುರ್‌ಪ್ರೀತ್‌ನ ಉದ್ದನೆ ಪಂಟ್ ನೊಂದಿಗೆ ಕ್ರಿಸ್ಟಿಯನ್ ಒಪ್ಸೆತ್‌ರನ್ನು ಕಂಡುಕೊಂಡರು, ಅವರು ಚೆಂಡನ್ನು ಯುವ ಆಟಗಾರರಿಗೆ ಇತ್ತರು. ಲಿಯಾನ್ ಒಂದು ಸವಾಲನ್ನು ದಾಟಿ ಪೋಸ್ಟ್ ಅತ್ತ ಸಾಗಿದರು, ಆದರೆ ಅವರ ಹೊಡೆತದಲ್ಲಿ ಬಲವಿಲ್ಲದ ಕಾರಣ ನೇರವಾಗಿ ಗೋಮ್ಸ್ ಕೈಯಲ್ಲಿತ್ತು. ಕೇವಲ ಒಂದು ನಿಮಿಷದ ನಂತರ, ಕ್ಲೆಟನ್ ಸಿಲ್ವಾ ಅವರ ಮತ್ತೊಂದು ಚಮತ್ಕಾರಿಕ ಪ್ರಯತ್ನವು ಅಲ್ಲಿ ಕಂಡುಬಂದಿತು ಮತ್ತು ತಡೆಯಲ್ಪಟ್ಟಿತು.

ಪರಿಣಾಮ ಮತ್ತೊಂದು ಬದಿಯಲ್ಲಿ ಮುನ್ನಡೆ ಸಾಧಿಸಿದವರು ಬ್ಲಾಸ್ಟರ್ಸ್. ರಾಹುಲ್ ಹೇಗೋ ತನ್ನತ್ತ ದೊರೆತ ಚೆಂಡನ್ನು ಅಂಗಳದುದ್ದಕ್ಕೂ ಕೊಂಡೊಯ್ದು ಗುರ್ಪ್ರೀತ್ ಅವರನ್ನು ತಪ್ಪಿಸಿ ಗೋಲ್ ಅತ್ತ ಹೊಡೆತವನ್ನು ಪೋಸ್ಟ್ನ ಹತ್ತಿರದಲ್ಲಿಯೇ ತೆಗೆದುಕೊಂಡರು. ಇದರೊಂದಿಗೆ ಕೇರಳಕ್ಕೆ ಗೆಲುವು ತಂದುಕೊಡುವ ಮೂಲಕ ಬೆಂಗಳೂರು ತಂಡಕ್ಕೆ ಹಿನ್ನಡೆಯನ್ನುಂಟು ಮಾಡಿದರು.

ಜನವರಿ 24 ರಂದು ಫತೋರ್ದಾ ಕ್ರೀಡಾಂಗಣದಲ್ಲಿ ಒಡಿಶಾ ಎಫ್‌ಸಿಯನ್ನು ಬೆಂಗಳೂರು ಎದುರಿಸಲಿದೆ.

Malcare WordPress Security