ಕಿಕ್‌ಸ್ಟಾರ್ಟ್‌ ಎಫ್‌ಸಿಗೆ 2-4ರಲ್ಲಿಮಣಿದ ಬ್ಲೂಕೋಲ್ಟ್ಸ್‌

ಮೊದಲಾರ್ಧದ ನೀರಸ ಪ್ರದರ್ಶನದಿಂದ ಚೇತರಿಸಿಕೊಳ್ಳಲು ಬ್ಲೂಸ್‌ ವಿಫಲ

ಇಲ್ಲಿನ ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿಮಂಗಳವಾರ ನಡೆದ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಲೀಗ್‌ ಪಂದ್ಯದಲ್ಲಿಮೊದಲಾರ್ಧದ ಹಿನ್ನಡೆಯಿಂದ ಚೇತರಿಸಿಕೊಳ್ಳಲು ವಿಫಲಗೊಂಡ ಬೆಂಗಳೂರು ಎಫ್‌ಸಿ, ಕಿಕ್‌ಸ್ಟಾರ್ಟ್‌ ಎಫ್‌ಸಿ ವಿರುದ್ಧ ಪರಾಭವಗೊಂಡಿತು. ಹೀಗಾಗಿ ಎದುರಾಳಿ ತಂಡ ಪೂರ್ಣ ಮೂರು ಅಂಕ ಗಿಟ್ಟಿಸಿತು.
ಕಿಕ್‌ಸ್ಟಾರ್ಟ್‌ ಪರ ಅಂಕಿತ್‌ ಪಿ (12ನೇ ನಿಮಿಷ), ಸೊಲೈಮಲೈ (33, 45ನೇ ನಿಮಿಷ), ಪ್ರಿನ್ಸ್‌ವಿಲ್‌ ಒಲಾರಿಚೆ (42ನೇ ನಿಮಿಷ), ಗೋಲ್‌ ದಾಖಲಿಸಿದರೆ, ಬ್ಲೂಕೋಲ್ಟ್ಸ್‌ ಪರ ದ್ವಿತೀಯಾರ್ಧದಲ್ಲಿಮ್ಯಾಕರ್ಟನ್‌ ನಿಕ್ಸನ್‌ (47ನೇ ನಿಮಿಷ) ಮತ್ತು ರಾಬಿನ್‌ ಯಾದವ್‌ (89ನೇ ನಿಮಿಷ) ತಲಾ ಒಂದು ಗೋಲ್‌ ಬಾರಿಸಿದರು.
ಅಂಕಿಂತ್‌, ಕಿಕ್‌ಸ್ಟಾರ್ಟ್‌ ಎಫ್‌ಸಿ ಪರ ಗೋಲಿನ ಖಾತೆ ತೆರೆಯುವವರೆಗೂ ಮೊದಲ ಹತ್ತು ನಿಮಿಷ ಬ್ಲೂಕೋಲ್ಟ್ಸ್‌ ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಆದರೆ ನಂತರ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕಿಕ್‌ಸ್ಟಾರ್ಟ್‌ ಪರ ಅಂಕಿತ್‌ ಎದುರಾಳಿ ಗೋಲ್‌ ಕೀಪರ್‌ ದಿಪೇಶ್‌ ಚೌಹಾಣ್‌ ಅವರನ್ನು ಕಣ್ತಪ್ಪಿಸಿ ಖಾತೆ ತೆರೆದರು. ಕೆಲವೇ ನಿಮಿಷದಲ್ಲಿಸಮಬಲದ ಹೋರಾಟ ನೀಡುವ ಅವಕಾಶ ಬ್ಲೂಸ್‌ ಮುಂದಿತ್ತು. ಆದರೆ ಇದರ ಲಾಭ ಪಡೆಯಲು ಸೊಲೈಮಲೈ ಅವಕಾಶ ಕಲ್ಪಿಸಲಿಲ್ಲ. ಆದರೆ 33ನೇ ಸೊಲೈಮಲೈ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿದರು.
ಮೊದಲಾರ್ಧಕ್ಕೆ ಮುಕ್ತಾಯಕ್ಕೆ ಕಿಕ್‌ಸ್ಟಾರ್ಟ್‌ ಎಫ್‌ಸಿ ಮತ್ತೆರಡು ಗೋಲ್‌ ಗಳಿಸಿತು. ಇದರಿಂದ ಒತ್ತಡಕ್ಕೆ ಸಿಲುಕಿದ ಬ್ಲೂಕೋಲ್ಟ್ಸ್‌ ಗೋಲ್‌ ಗಳಿಕೆಗೆ ಇನ್ನಿಲ್ಲದ ಹರಸಾಹಸ ನಡೆಸಿದರೂ ಯಾವುದೇ ಗೋಲ್‌ ದಾಖಲಾಗಲಿಲ್ಲ. ಪ್ರಿನ್ಸ್‌ವಿಲ್‌ ಒಲಾರಿಚೆ ಕೆಎಪ್‌ಸಿ ಪರ ಮೂರನೇ ಗೋಲ್‌ ಗಳಿಸಿ ತಂಡದ ಮುನ್ನಡೆಯನ್ನು 3-0ಗೆ ವಿಸ್ತರಿಸಿದರು. ಇದಾದೇ ಮೂರೇ ನಿಮಿಷದಲ್ಲಿಸುಲೈಮಲೈ ತಮ್ಮ ಎರಡನೇ ಹಾಗೂ ತಂಡದ ನಾಲ್ಕನೇ ಗೋಲ್‌ ಬಾರಿಸಿ ಎದುರಾಳಿ ಮೇಲೆ ಇನ್ನಷ್ಟು ಒತ್ತಡ ಹಾಕಿದರು.
ದ್ವಿತೀಯಾರ್ಧದಲ್ಲಿಬ್ಲೂಕೋಲ್ಟ್ಸ್‌ ಭಿನ್ನ ಆಟಗಾರರೊಂದಿಗೆ ಕಣಕ್ಕಿಳಿಯಿತು. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಕಾರಣ ಮೊದಲಾರ್ಧ ಆರಂಭವಾದ ಎರಡೇ ನಿಮಿಷದಲ್ಲಿಗೋಲ್‌ ಗಳಿಸಿ ತಂಡದ ಹಿನ್ನಡೆಯನ್ನು 1-4ಕ್ಕೆ ತಗ್ಗಿಸಿದರು ಇದಕ್ಕೆ ಕಾರಣವಾಗಿದ್ದು, ಮ್ಯಾಕರ್ಟನ್‌ ನಿಕ್ಸನ್‌. ಥಾಯ್‌ ಸಿಂಗ್‌ ಅವರಿಂದ ನೆರವು ಪಡೆದ ಅವರು ಎದುರಾಳಿ ಗೋಲ್‌ ಕೀಪರ್‌ ವಂಚಿಸಿ ಚೆಂಡನ್ನು ಗೋಲ್‌ ಪೆಟಿಗೆ ಸೇರಿಸುವಲ್ಲಿಯಶಸ್ವಿಯಾದರು. ನಂತರ ಬ್ಲೂಸ್‌ ಪರ ಮ್ಯಾಕರ್ಟನ್‌ ಹಲವು ಬಾರಿ ಗೋಲ್‌ ಗಳಿಕೆಯ ಅವಕಾಶಗಳನ್ನು ಸೃಷ್ಟಿಸಿದರು. ಆದರೆ ಇದರ ಸಂಪೂರ್ಣ ಲಾಭ ಪಡೆಯಲು ಸಾಧ್ಯವಾಗಲಿಲ್ಲ. 80ನೇ ನಿಮಿಷದಲ್ಲಿಮತ್ತೆ ಬ್ಲೂಗೋಲ್‌ ಗಳಿಸುವ ಅವಕಾಶವಿತ್ತು. ಎದುರಾಳಿ ತಂಡ ಪ್ರಬಲವಾಗಿ ಹಿಮ್ಮೆಟ್ಟಿಸಿತು. ಕೊನೆಗೂ 89ನೇ ನಿಮಿಷದಲ್ಲಿರಾಬಿನ್‌ ಯಾದವ್‌ ಗೋಲ್‌ ಗಳಿಸಿ ತಂಡದ ಹಿನ್ನಡೆಯನ್ನು 2-4ಕ್ಕೆ ತಗ್ಗಿಸಿದರು.
ಬ್ಲೂಕೋಲ್ಟ್ಸ್‌ ಇದೇ ಕ್ರೀಡಾಂಗಣದಲ್ಲಿಡಿಸೆಂಬರ್‌ 31ರಂದು ಶುಕ್ರವಾರ ಎಫ್‌ಸಿ ಡೆಕ್ಕನ್‌ ತಂಡವನ್ನು ಎದುರಿಸಲಿದೆ.

Malcare WordPress Security