ಒಡಿಶಾ ವಿರುದ್ಧದ ಬೆಂಗಳೂರು ಎಫ್‌ಸಿ ಪಂದ್ಯ ಡ್ರಾನಲ್ಲಿ ಅಂತ್ಯ

ಪಾರ್ತಲು ಗುರಿಯತ್ತ ಯಶಸ್ವಿಯಾದರೆ ಮೂಸ ತಂಡದ ಗೆಲುವಿಗಾಗಿ ಎದುರುನೋಡುತ್ತಿದ್ದಾರೆ.

ಬೆಂಗಳೂರು ಎಫ್‌ಸಿ ಹಂಗಾಮಿ ಕೋಚ್ ಮೂಸಾ ಅವರ ಮಾರ್ಗದರ್ಶನದಲ್ಲಿ ಗೆಲುವು ಸಾಧಿಸುವತ್ತ ವಿಫಲಯತ್ನದ ಹೊರತಾಗಿಯೂ ಒಡಿಶಾ ಎಫ್ ಸಿ ವಿರುದ್ಧ 1-1 ಅಂಕಗಳ ಅಂತರದಲ್ಲಿ ಪಂದ್ಯ ಫತೋರ್ದಾ ಕ್ರೀಡಾಂಗಣದಲ್ಲಿ ಭಾನುವಾರದಂದು ಡ್ರಾನಲ್ಲಿ ಅಂತ್ಯವಾಯ್ತು. ಡಿಯಾಗೋ ಮೌರಿಸಿಯೊ ಅವರ ಆರಂಭಿಕ ಗೋಲ್ (8 ’) ಎರಿಕ್ ಪಾರ್ತಲು ಅವರ ಹೆಡರ್ ಮೂಲಕ 82 ನೇ ನಿಮಿಷದಲ್ಲಿ ಸಮಗೊಂಡಿತು, ಇದರ ಫಲಿತಾಂಶವು ಬ್ಲೂಸ್‌ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು ಪ್ಲೇಆಫ್ ಸ್ಥಾನ ಪಡೆಯಲು ನಾಲ್ಕು ಅಂಕಗಳ ಅಂತರ ಇನ್ನೂ ಉಳಿದಿದೆ.

ಬುಧವಾರ ಕೇರಳ ಬ್ಲಾಸ್ಟರ್ಸ್ ವಿರುದ್ಧ ಆಡಿದ ಅದೇ ತಂಡವನ್ನು ನೌಷಾದ್ ಮೂಸಾ ಕಣಕ್ಕಿಳಿಸಿದ್ದಾರೆ, ಈ ಮಧ್ಯೆ ಎದುರಾಳಿ ತಂಡದ ಸ್ಟುವರ್ಟ್ ಬ್ಯಾಕ್ಸ್ಟರ್ ತಮ್ಮ ಒಡಿಶಾ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಿದ್ದಾರೆ, ಈ ತಂಡ ತಮ್ಮ ಕಳೆದ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿಯೊಂದಿಗೆ ಪಂದ್ಯ ಡ್ರಾ ಮಾಡಿಕೊಂಡಿತ್ತು. ತಂಡದಲ್ಲಿ ಮೊಹಮ್ಮದ್ ಸಾಜಿದ್ ಧೋಟ್ ಬದಲಿಗೆ ಸ್ಟೀವನ್ ಟೇಲರ್ ಕಣಕ್ಕಿಳಿದಿದ್ದಾರೆ.

ಕ್ಲೆಟನ್ ಸಿಲ್ವಾ, ಸುರೇಶ್ ವಾಂಗ್ಜಮ್ ಮತ್ತು ಸುನಿಲ್ ಛೇತ್ರಿ ಆಕ್ರಮಣಕಾರಿಯಾಗಿ ಪಂದ್ಯದ ಆರಂಭದಲ್ಲಿ ಕಂಡುಬಂದು ಉತ್ತಮ ಅವಕಾಶಗಳನ್ನು ಪಡೆದುಕೊಂಡರು. ಬ್ಲೂಸ್ ಅವರ ಆರಂಭಿಕ ಪ್ರಾಬಲ್ಯದ ಹೊರತಾಗಿಯೂ, ಒಡಿಶಾ ತಮ್ಮ ಆಟದಲ್ಲಿ ಎದುರಾಳಿಯ ಅದ್ಭುತ ಓಟದ ವಿರುದ್ಧ ಮುನ್ನಡೆಯನ್ನು ಸಾಧಿಸಿದರು. 8 ನೇ ನಿಮಿಷದಲ್ಲಿ ಜೆರ್ರಿ ಮಾವಿಹ್ಮಿಂಗ್ಥಂಗಾ ತ್ವರಿತ ಫ್ರೀ-ಕಿಕ್ ಮೂಲಕ ಬಲಭಾಗದಲ್ಲಿ ಮ್ಯಾನುಯೆಲ್ ಒನ್ವು ಅವರನ್ನು ಕಂಡುಕೊಂಡರು ಮತ್ತು ಸ್ಪೇನಿಯಾರ್ಡ್‌ನ ಕ್ರಾಸ್ ಅನ್ನು ದೂರದ ಪೋಸ್ಟ್‌ನಲ್ಲಿ ಡಿಯಾಗೋ ಮೌರಿಸಿಯೋ ಪೋಸ್ಟ್ ಅತ್ತ ತಳ್ಳಿದರು ಮತ್ತು ಇದರಿಂದ ಪ್ರವಾಸಿ ತಂಡಕ್ಕೆ ಮುನ್ನಡೆ ದೊರೆಯಿತು.

ಬೆಂಗಳೂರು ಹಿನ್ನಡೆಯಲ್ಲಿದ್ದರೂ ಒಡಿಶಾದ ಆಟದ ಮೇಲೆ ಕೊಂಚ ಹಿಡಿತವನ್ನು ಸಾಧಿಸಿತ್ತು ಮತ್ತು ಎದುರಾಳಿ ಗೋಲ್ ಕೀಪರ್ ಅರ್ಷ್‌ದೀಪ್ ಸಿಂಗ್ ಅವರಿಂದ ಎರಡು ಅತ್ಯುತ್ತಮ ಗೋಲುಗಳು ಉಳಿಸಲ್ಪಟ್ಟವು. ಬ್ಲೂಸ್ ಪಂದ್ಯದಲ್ಲಿ ಮುನ್ನಡೆ ಸಾಧಿಸಬಹುದಾದ ಅವಕಾಶಗಳು ಕಳೆದುಕೊಂಡಿತ್ತು.

38 ನೇ ನಿಮಿಷದಲ್ಲಿ ರಾಹುಲ್ ಭೆಕೆ ಅವರ ಲಾಂಗ್ ಥ್ರೋ – ಸ್ಟೀವನ್ ಟೇಲರ್ ತೆರವುಗೊಳಿಸಿದರು ಮತ್ತು ಎರಿಕ್ ಪಾರ್ತಲು ತಮ್ಮ ಎಡಗಾಲಿನ ಸ್ಟ್ರೈಕ್ ಮೂಲಕ ಅದನ್ನು ಹಿಮ್ಮೆಟ್ಟಿದರು, ಆದರೆ ಅರ್ಷ್‌ದೀಪ್ ಸಮರ್ಥವಾಗಿ ತಮ್ಮ ಎಡಗೈ ಚಾಚಿ ಗೋಲ್ ಪಡೆಯುವ ಅವಕಾಶವನ್ನು ತಡೆದರು. ಕೇವಲ ಮೂರು ನಿಮಿಷಗಳಲ್ಲಿ ಕ್ಲೀಟನ್‌ ಮೂಲೆಯಿಂದ ಇತ್ತ ಚೆಂಡು ಭೆಕೆ ಅವರ ಹೆಡರ್ ಮೂಲಕ ಗೋಲ್ ಪೋಸ್ಟ್ ಅತ್ತ ಮುನ್ನುಗ್ಗುತ್ತಿದ್ದಾಗ ಎದುರಾಳಿ ಕೀಪರ್ ಮತ್ತೊಮ್ಮೆ ತಮ್ಮ ಕೆಲಸ ನಿರ್ವಹಿಸಿ ಗೋಲ್ ಅವಕಾಶ ತಡೆದರು.

38 ನೇ ನಿಮಿಷದಲ್ಲಿ ರಾಹುಲ್ ಭೆಕೆ ಅವರ ಲಾಂಗ್ ಥ್ರೋ – ಸ್ಟೀವನ್ ಟೇಲರ್ ತೆರವುಗೊಳಿಸಿದರು ಮತ್ತು ಎರಿಕ್ ಪಾರ್ತಲು ತಮ್ಮ ಎಡಗಾಲಿನ ಸ್ಟ್ರೈಕ್ ಮೂಲಕ ಅದನ್ನು ಹಿಮ್ಮೆಟ್ಟಿದರು, ಆದರೆ ಅರ್ಷ್‌ದೀಪ್ ಸಮರ್ಥವಾಗಿ ತಮ್ಮ ಎಡಗೈ ಚಾಚಿ ಗೋಲ್ ಪಡೆಯುವ ಅವಕಾಶವನ್ನು ತಡೆದರು. ಕೇವಲ ಮೂರು ನಿಮಿಷಗಳಲ್ಲಿ ಕ್ಲೀಟನ್‌ ಮೂಲೆಯಿಂದ ಇತ್ತ ಚೆಂಡು ಭೆಕೆ ಅವರ ಹೆಡರ್ ಮೂಲಕ ಗೋಲ್ ಪೋಸ್ಟ್ ಅತ್ತ ಮುನ್ನುಗ್ಗುತ್ತಿದ್ದಾಗ ಎದುರಾಳಿ ಕೀಪರ್ ಮತ್ತೊಮ್ಮೆ ತಮ್ಮ ಕೆಲಸ ನಿರ್ವಹಿಸಿ ಗೋಲ್ ಅವಕಾಶ ತಡೆದರು.

1ಗಂಟೆಯ ಆಟದ ನಂತರ ಬೆಂಗಳೂರು ತಂಡ ಕೇವಲ ಒಂದೇ ನಿಮಿಷದ ಅಂತರದಲ್ಲಿ ಎರಡು ಬಾರಿ ತಮ್ಮ ಈಕ್ವಲೈಜರ್ ಪಡೆಯುವ ಅವಕಾಶಗಳನ್ನು ಕೈಚೆಲ್ಲಿದರು. ಪರಾಗ್ ಶ್ರೀವಾಸ್ ಅವರ ಲಾಂಗ್ ಥ್ರೋ ಪಡೆದುಕೊಳ್ಳಲು ಅರ್ಷ್‌ದೀಪ್ ವಿಫಲರಾದರು ಮತ್ತು ಚೆಂಡು ಒಪ್ಸೆತ್‌ ಬಳಿ ಬಿದ್ದರೂ, ಅದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಬ್ಲೂಸ್ ಬಾಕ್ಸ್ ಅಂಚಿನಲ್ಲಿ ಫ್ರೀ ಕಿಕ್ ಪಡೆದರು ನಂತರ ಛೇತ್ರಿ ಅವಕಾಶ ಪಡೆದು, ಕ್ಲೀಟನ್‌ ತಮ್ಮ ಯತ್ನದಲ್ಲಿ ಎದುರಾಳಿ ಕೀಪರ್ ಅನ್ನು ಹಿಮ್ಮೆಟ್ಟಿಸಿದರೂ ಹೊಡೆತ ನೇರವಾಗಿ ಅಡ್ಡಪಟ್ಟಿಯನ್ನು ತಲುಪಲು ಶಕ್ತವಾಯ್ತೆ ಹೊರತು ಗೋಲ್ ಸಿಗಲಿಲ್ಲ.

ಬೆಂಗಳೂರು ತಂಡದ ಸತತ ಪ್ರಯತ್ನ 82ನೆ ನಿಮಿಷದಲ್ಲಿ ಸಿಲ್ವಾ ಅವರ ಕಾರ್ನರ್ ಕಿಕ್ ಫಲ ನೀಡಿತು. ಪಾರ್ತಲು ಇದನ್ನು ಹೆಡರ್ ಮೂಲಕ ಗೋಲ್ ಅತ್ತ ತಳ್ಳಿದರು ಆದ್ರೆ ಅರ್ಷ್‌ದೀಪ್ ತಡೆಯಲಾಗಲಿಲ್ಲ. ಅಭಿಯಾನದಲ್ಲಿ ಆಸ್ಟ್ರೇಲಿಯ ಆಟಗಾರನಿಂದ ಎರಡನೇ ಗೋಲು ಬ್ಲೂಸ್‌ ದಾಳಿಯಲ್ಲಿ ಬಲ ನೀಡುವ ಸುಳಿವಿದ್ದಾಗಲೇ ತಂಡ ದಾಳಿಯಲ್ಲಿ ಮುನ್ನುಗ್ಗಿ ಹೋರಾಡಲು ಆರಂಭಿಸಿತು. ಮೂಸಾ ಹುಡುಗರು ಪಂದ್ಯವನ್ನು ಗೆಲ್ಲುವ ಗುರಿಯೊಂದಿಗೆ ತೀವ್ರ ಪ್ರಯತ್ನಗಳನ್ನು ಮುಂದುವರೆಸಿದರು.

ಛೇತ್ರಿ ಪೋಸ್ಟ್ ಬಳಿ ಲಾಂಗ್ ಪಾಸ್ ಅನ್ನು ನೀಡಿ ಗೋಲ್ ಪಡೆಯುವ ಉದ್ದೇಶದಲ್ಲಿದ್ದಾಗ ಪಂದ್ಯದ ನಿಯತ ಸಮಯದ ಕೊನೆಯಲ್ಲಿ ಅವರ ಇಚ್ಛೆಯನುಸಾರ ಅಂಕ ಪಡೆಯಬಹುದಿತ್ತು. ತನಗಾಗಿ ಜಾಗವನ್ನು ಮಾಡಿಕೊಳ್ಳುತ್ತಾ ನಾಯಕ ಗೋಲ್ ಯತ್ನ ಮಾಡಿದರು ಆದ್ರೆ ಚೆಂಡು ಬಾರ್‌ನ ಮೇಲೆ ಹಾದುಹೋಯಿತು. ಕ್ಲೇಟನ್ ಮತ್ತು ಒಪ್ಸೆತ್ ಮೂಲಕ ಬೆಂಗಳೂರಿಗೆ ಹೆಚ್ಚಿನ ಅವಕಾಶಗಳು ಮತ್ತೆ ದೊರೆತವು, ಆದರೆ ಪಂದ್ಯದ ಅಂತ್ಯಕ್ಕೆ ಮಾರ್ಗೊವಾದಲ್ಲಿ ಅಂಕಗಳನ್ನು ಎರಡೂ ತಂಡಗಳು ಹಂಚಿಕೊಳ್ಳಬೇಕಾಯ್ತು.

ಬೆಂಗಳೂರು ತಮ್ಮ ಮುಂದಿನ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ ವಿರುದ್ಧ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ಜನವರಿ 28ರಂದು ಸೆಣೆಸಲಿದ್ದಾರೆ.

Malcare WordPress Security