ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಬ್ಲೂಸ್ ಗೆಲುವಿನೊಂದಿಗೆ ಹಿಂತಿರುಗಲು ಸನ್ನದ್ಧ

ಫತೋರ್ದಾ ಅಂಗಳದಲ್ಲಿ ಮಧ್ಯಂತರ ಮುಖ್ಯ ತರಬೇತುದಾರರಾಗಿ ಉಸ್ತುವಾರಿ ವಹಿಸಿಕೊಂಡಿರುವ ನೌಶಾದ್ ಮೂಸಾ ತಮ್ಮ ಮೊದಲ ಪಂದ್ಯ ಎದುರಿಸಲಿದ್ದಾರೆ.

ಮಧ್ಯಂತರ ಮುಖ್ಯ ಕೋಚ್ ನೌಶಾದ್ ಮೂಸಾ ತಂಡದ ಉಸ್ತುವಾರಿ ತೆಗೆದುಕೊಂಡ ನಂತರ ಅವರ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡ ಎಸ್‌ಸಿ ಈಸ್ಟ್ ಬೆಂಗಾಲ್ ಅನ್ನು ಶನಿವಾರ ಎದುರಿಸಲಿದ್ದಾರೆ. ಈ ವರದಿಯ ಸಮಯದಲ್ಲಿ ಬೆಂಗಳೂರು, ಲೀಗ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿತ್ತು, ಪ್ಲೇಆಫ್ ಪ್ರವೇಶಿಸಲು ಅವಶ್ಯ ಇರುವ ಹೆಚ್ಚುವರಿ ಒಂದು ಅಂಕದಿಂದ ತಂಡ ಹೊರಗುಳಿದಿದೆ. ಆದರೆ ನಾಲ್ಕು ಪಂದ್ಯಗಳ ಅಜೇಯ ಓಟದ ಹೊರತಾಗಿಯೂ ಎಸ್ ಸಿ ಈಸ್ಟ್ ಬೆಂಗಾಲ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಸತತ ಮೂರು ಸೋಲುಗಳ ಹಿನ್ನಲೆಯೊಂದಿಗೆ ಬ್ಲೂಸ್ ಈ ಆಟಕ್ಕೆ ಬರುತ್ತಾರೆ, ಇದು ಕ್ಲಬ್‌ನ ಇತಿಹಾಸದಲ್ಲಿ ಮೊದಲನೆಯದು, ಮತ್ತು ಮೈದಾನಕ್ಕೆ ಇಳಿದಾಗ ಅಂಕ ಬಿಟ್ಟುಕೊಡುವ ಪ್ರಮೇಯವೇ ಇಲ್ಲವೆಂಬ ನಿರ್ಧಾರ ತಂಡವು ತೆಗೆದುಕೊಂಡಿದೆ ಎಂದು ಮೂಸಾ ತಿಳಿಸಿದರು. “ಕ್ಲಬ್‌ನಲ್ಲಿರುವ ಯಾರಿಗಾದರೂ ಇದು ಸುಲಭದ ಸನ್ನಿವೇಶವಲ್ಲ, ಆದರೆ ನಾವು ವೃತ್ತಿಪರರು. ಆಟಗಾರರು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನಾಳೆ ನಮಗೆ ಒಂದು ಪ್ರಮುಖ ಆಟವಿದೆ ಎಂದು ತಿಳಿದಿದೆ. ಅವರು ಮತ್ತೆ ಪುಟಿದೇಳಲು ಮತ್ತು ಮತ್ತೆ ಪಂದ್ಯಗಳನ್ನು ಗೆಲ್ಲಲು ಬಯಸುತ್ತಾರೆ.”

ಕಾರ್ಲೆಸ್ ಕ್ವಾಡ್ರಾಟ್, ಕ್ಲಬ್ ಇಂದ ನಿರ್ಗಮಿಸಿ ಮೂಸಾ ಅಧಿಕಾರ ವಹಿಸಿಕೊಂಡ ಬಳಿಕ, ತರಬೇತಿಯಲ್ಲಿ ತಂಡದ ಪ್ರತಿಕ್ರಿಯೆ ಸಂತೋಷದಾಯಕವಾಗಿದೆ ಎಂದು ಅವರು ಹೇಳಿದರು. “ನಾನು ನಿನ್ನೆ ಪಿಚ್ನಲ್ಲಿ ಸಾಕಷ್ಟು ಸಕಾರಾತ್ಮಕತೆಯನ್ನು ನೋಡಿದೆ. ಆಟಗಾರರು ನನ್ನೊಂದಿಗೆ ಕೆಲಸ ಮಾಡಲು ಸಿದ್ಧರಿದ್ದಾರೆ, ಅದು ತರಬೇತುದಾರನಿಗೆ ಅತ್ಯಂತ ಮುಖ್ಯವಾದ ವಿಷಯ. ಈಸ್ಟ್ ಬೆಂಗಾಲ್ ವಿರುದ್ಧ ಹೆಚ್ಚು ಸಕಾರಾತ್ಮಕ ಮತ್ತು ಆಕ್ರಮಣಕಾರಿಯಾಗಿರುವ ತಂಡವನ್ನು ನೀವು ನೋಡುತ್ತೀರಿ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.” ಎಂದರು.

ನಾಳೆ ಬ್ಲೂಸ್‌ನ ಎದುರಾಳಿಗಳು ತಮ್ಮ ಬದಿಯಲ್ಲಿನ ಹೆಚ್ಚಿದ ಆತ್ಮವಿಶ್ವಾಸದೊಂದಿಗೆ ಆಟಕ್ಕೆ ಬರುತ್ತಾರೆ, ನಾಲ್ಕು ಪಂದ್ಯಗಳಲ್ಲಿ ಅಜೇಯರಾಗಿದ್ದಾರೆ ಮತ್ತು ಅವರ ಆಟಗಾರರು ಒಟ್ಟಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಮೂಸಾ ತಮ್ಮ ಕರ್ತವ್ಯವನ್ನು ಅರಿತಿದ್ದಾರೆ ಮತ್ತು ಬ್ಲೂಸ್ ಅತ್ಯುತ್ತಮವಾಗಿರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. “ಈಸ್ಟ್ ಬೆಂಗಾಲ್ ಬಹಳ ಯೋಗ್ಯವಾದ ತಂಡವಾಗಿದೆ ಮತ್ತು ಅವರು ಪ್ರತಿ ಪಂದ್ಯದಲ್ಲೂ ಉತ್ತಮಗೊಳ್ಳುತ್ತಿದ್ದಾರೆ ಎಂಬುದು ನೋಡಬಹುದು. ನಾನು ತುಂಬಾ ಪ್ರತಿಭಾವಂತ ಆಟಗಾರನಾಗಿರುವ ಬ್ರೈಟ್ [ಎನೋಬಖರೆ] ಅನ್ನು ಗಮನಿಸುತ್ತಿದ್ದೆ. ಆದಾಗ್ಯೂ, ನಾವು ನಮ್ಮ ಆಟದ ಮೇಲೆ ಕೇಂದ್ರೀಕರಿಸಲು ಬಯಸುತ್ತೇವೆ. ನಾವು ಹೆಚ್ಚು ಮನರಂಜನಾತ್ಮಕವಾದ ಮತ್ತು ಆಕ್ರಮಣಕಾರಿ ಫುಟ್‌ಬಾಲ್‌ ಆಡುತ್ತೇವೆ ಎಂದು ನಿಮಗೆ ಭರವಸೆ ನೀಡಬಲ್ಲೆ. ನಾವು ಸಾಕಷ್ಟು ಸೋಲು ಒಪ್ಪಿಕೊಂಡಿರುವುದರಿಂದ ಜಾಗರೂಕರಾಗಿರಬೇಕು. ನಾವು ಚೆಂಡನ್ನು ಕಳೆದುಕೊಂಡಾಗ ನಾವು ಹೆಚ್ಚು ಗಮನವಾಗಿರಬೇಕು ಮತ್ತು ನಾವು ಅದರ ಮೇಲೆ ಅಭ್ಯಾಸ ಮಾಡುತ್ತಿದ್ದೇವೆ. ಆರಂಭಿಕ ಹಂತದಲ್ಲಿ ಗೋಲ್ ಬಿಟ್ಟುಕೊಡದೆ ಇರುವತ್ತ ಗಮನಹರಿಸುತ್ತೇವೆ.”

ತಂಡದ ಯಾವುದೇ ಆಟಗಾರರಲ್ಲಿ ಹೊಸ ಗಾಯಗಳಿಲ್ಲದಿದ್ದರೂ, ಹರ್ಮನ್‌ಜೋತ್ ಖಾಬ್ರಾ ಅವರು ಆವೃತ್ತಿಯ ನಾಲ್ಕನೇ ಹಳದಿ ಕಾರ್ಡ್ ತೆಗೆದುಕೊಂಡ ಕಾರಣ ಆಟವನ್ನು ತಪ್ಪಿಸಿಕೊಳ್ಳಲಿದ್ದಾರೆ, ಮತ್ತು ಅನುಭವಿಯನ್ನು ಯಾರು ಬದಲಿಸುತ್ತಾರೆ ಎಂಬ ಬಗ್ಗೆ ಈಗಾಗಲೇ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಮೂಸಾ ವಿವರಿಸಿದರು. “ಖಾಬ್ರಾ ಅವರನ್ನು ಅಮಾನತುಗೊಳಿಸಲಾಗಿರುವುದರಿಂದ, ನಾವು ಬದಲಿಯನ್ನು ಪಡೆಯಬೇಕಾಗಿದೆ ಮತ್ತು ನಾಳೆ ಯುವಆಟಗಾರ ಅವರ ಸ್ಥಾನದಲ್ಲಿ ಆಡುತ್ತಾನೆ. ತಂಡದಲ್ಲಿ ನನ್ನ ಒಂದು ಪಾತ್ರವೆಂದರೆ ಕಿರಿಯ ಆಟಗಾರರಿಗೆ ಅವಕಾಶಗಳನ್ನು ನೀಡುವುದು ಮತ್ತು ಅದನ್ನೇ ನಾನು ಮಾಡಲು ಪ್ರಯತ್ನಿಸುತ್ತೇನೆ.”

ಯುವ ಆಟಗಾರರ ಬಗ್ಗೆ ಮಾತನಾಡಿದ ಕೋಚ್, “ಶನಿವಾರದ ಪಂದ್ಯದಲ್ಲಿ, ನಾವು ಇಬ್ಬರು ಅಥವಾ ಮೂರು ಯುವ ಆಟಗಾರರನ್ನು ಅಂಗಳಕ್ಕೆ ತರಲಿದ್ದೇವೆ. ಆದರೆ ನಾವು ತಂಡದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲು ಬಯಸುವುದಿಲ್ಲ. ಮುಂದಿನ ದಿನಗಳಲ್ಲಿ, ನಾವು ತಂಡದ ಪ್ರದರ್ಶನಗಳಿಗೆ ಅನುಸಾರವಾಗಿ ಇನ್ನೂ ಸ್ವಲ್ಪ ಸಮಯದ ನಂತರ, ಹೆಚ್ಚು ಯುವಆಟಗಾರರನ್ನು ಅಂಗಳಕ್ಕೆ ಕರೆತರಲು ಪ್ರಯತ್ನಿಸುತ್ತೇವೆ. ಅದನ್ನೇ ನಾವು ಮಾಡಲು ಬಯಸುತ್ತೇವೆ,” ಎಂದರು.

ಬ್ಲೂಸ್ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ನಡುವಿನ ಪಂದ್ಯ ಶನಿವಾರ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.

Malcare WordPress Security