ಕ್ಲಿಟನ್ ಸಿಲ್ವಾ ಗೋಲ್ನಿಂದಾಗಿ ಬ್ಲೂಸ್ನ ಎಂಟು ಪಂದ್ಯಗಳ ಗೆಲುವಿಗಾಗಿನ ಹೋರಾಟ ಅಂತ್ಯ…
ಗೋವಾದ ತಿಲಕ್ ಮೈದಾನದಲ್ಲಿ ಮಂಗಳವಾರ ನಡೆದ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳ ಅಂತರದಿಂದ ಸೋಲಿಸಿದ ಬೆಂಗಳೂರು ಎಫ್‌ಸಿ ತಮ್ಮ ಎಂಟು ಪಂದ್ಯಗಳ ಗೆಲುವಿಲ್ಲದ ಓಟವನ್ನು ಕೊನೆಗೊಳಿಸಿತು. ಈ ಗೆಲುವು, ಕ್ಯಾಲೆಂಡರ್ ವರ್ಷದಲ್ಲಿ ತಂಡದ ಮೊದಲನೆಯ ಗೆಲುವಾಗಿದ್ದು, ಮಧ್ಯಂತರ ಮುಖ್ಯ ತರಬೇತುದಾರ ನೌಶಾದ್ ಮೂಸಾ ಅವರಿಗೆ ತಂಡದ ಪರ ಮೊದಲ ವಿಜಯ ಇದಾಗಿದೆ. ಬ್ಲೂಸ್ ಪರ ಡೆಬ್ಜಿತ್ ಮಜುಂದರ್ ಗೋಲ್ ಪೋಸ್ಟ್ ಬಳಿ ಸ್ವಂತ ಗೋಲ್ ಮಾಡಿ ಬ್ಲೂಸ್‌ಗೆ 2-0 ಮುನ್ನಡೆ ನೀಡಿದರೆ ಅದಕ್ಕೂ ಮುನ್ನ ಕ್ಲೀಟನ್ ಸಿಲ್ವಾ ಅದ್ಭುತ ಗೋಲ್ ಪಡೆದುಕೊಂಡಿದ್ದರು. ನಾಲ್ಕನೇ ಸ್ಥಾನದಲ್ಲಿರುವ ಎಫ್‌ಸಿ ಗೋವಾಕ್ಕಿಂತ ಮೂರು ಪಾಯಿಂಟ್‌ಗಳ ಹಿಂದೆ, ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸುವ ಯೋಜನೆಯೊಂದಿಗೆ ಈ ಬಾರಿ ಮೈದಾನದಲ್ಲಿ ಬ್ಲೂಸ್ ಸಂಕಲ್ಪತೊಟ್ಟಂತೆ ಕಂಡಿತ್ತು.
ನೌಶಾದ್ ಮೂಸಾ ಹೈದರಾಬಾದ್ ಎಫ್‌ಸಿ ವಿರುದ್ಧ ಆಡಿದ್ದ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿದ್ದರು. ಗಾಯದ ಸಮಸ್ಯೆ ಮತ್ತು ಅಮಾನತುಗಳ ಕಾರಣ ಕ್ರಮವಾಗಿ ಜುವಾನನ್ ಗೊನ್ಜಾಲೆಜ್ ಮತ್ತು ಎರಿಕ್ ಪಾರ್ತಲು ತಂಡದಿಂದ ಹೊರಗುಳಿದಿದ್ದು ಬದಲಿಯಾಗಿ ಪ್ರತೀಕ್ ಚೌಧರಿ ಮತ್ತು ಅಜಿತ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಎದುರಾಳಿ ಈಸ್ಟ್ ಬೆಂಗಾಲ್ ತಂಡದ ಪ್ರತಿಸ್ಪರ್ಧಿ ರಾಬಿ ಫೌಲರ್ ಎಫ್‌ಸಿ ಗೋವಾ ಪರ ಐದು ಬದಲಾವಣೆಗಳನ್ನು ಮಾಡಿದ್ದರು. ಮ್ಯಾಟಿ ಸ್ಟೇನ್‌ಮನ್, ಅಂಕಿತ್ ಮುಖರ್ಜಿ, ವಹೆಂಗ್‌ಬಾಮ್ ಲುವಾಂಗ್, ಆರನ್ ಜೋಶುವಾ ಹಾಲೊವೇ ಮತ್ತು ಹರ್ಮನ್‌ಪ್ರೀತ್ ಸಿಂಗ್ ಅವರು ತಂಡದಲ್ಲಿ ಸ್ಥಾನ ಪಡೆದರೆ, ರಾಣಾ ಘರಾಮಿ, ಮೊಹಮ್ಮದ್ ರಫೀಕ್, ಜಾಕ್ವೆಸ್ ಮಾಘೋಮಾ, ಆಂಥೋನಿ ಪಿಲ್ಕಿಂಗ್ಟನ್ ಮತ್ತು ಜೆಜೆ ಲಾಲ್ಪೆಖ್ಲುವಾ ಅವರನ್ನು ಆಡುವ ತಂಡದಿಂದ ಹೋರಾಗಿಡಲಾಗಿತ್ತು.
ಬೆಂಗಳೂರು ತಂಡ ಪಂದ್ಯವನ್ನು ಉತ್ಸಾಹದೊಂದಿಗೆ ಆರಂಭಿಸಿತು. ಗೋಲ್ ಅತ್ತ ಮೊದಲ ದಾಳಿ ಕೇವಲ ಮೂರು ನಿಮಿಷಗಳಲ್ಲಿಯೇ ಕಂಡುಬಂತು. ಉದಂತ ಸಿಂಗ್ ರೈಟ್ ವಿಂಗ್ ಅಲ್ಲಿದ್ದ ಸುನಿಲ್ ಛೇತ್ರಿಯನ್ನು ಕಂಡುಕೊಂಡರು. ನಾಯಕನ ಕ್ರಾಸ್ ಅನ್ನು ಲಿಯಾನ್ ಅಗಸ್ಟೀನ್ ಪಡೆದರೆ ಅವರ ಗೋಲ್ ಯತ್ನ ಬಾರ್ ಮೇಲೆ ಸಾಗಿತು.
ಮತ್ತೊಂದು ತುದಿಯಲ್ಲಿ, ಬ್ರೈಟ್ ಎನೋಬಖಾರೆ ಅವರ ಕ್ರಾಸ್ ಅನ್ನು ಅಡ್ಡಗಟ್ಟಿ ಈಸ್ಟ್ ಬೆಂಗಾಲ್ ಆರಂಭಿಕ ಮುನ್ನಡೆ ಸಾಧಿಸುವುದನ್ನು ತಡೆಯಲು ಅಜಿತ್ ಕುಮಾರ್ ಹರ್ಮನ್‌ಪ್ರೀತ್ ಸಿಂಗ್ ಅವರೊಂದಿಗೆ ಅದ್ಭುತ ಟ್ಯಾಕ್ಲ್ ಮಾಡಿದರು.
ಕ್ಲೀಟನ್ ಸಿಲ್ವಾ ಅವರ ಲಾಂಗ್ ಬಾಲ್ ತಡೆಯಲು ಡ್ಯಾನಿ ಫಾಕ್ಸ್ 9 ನೇ ನಿಮಿಷದಲ್ಲಿ ಪ್ರತಿಬಂಧನ ಮಾಡಿದರು. ಆದಾಗ್ಯೂ, ಮೂರು ನಿಮಿಷಗಳ ನಂತರ ಕ್ಲೀಟನ್ ಸ್ಕೋರ್‌ಬೋರ್ಡ್ ಅಲ್ಲಿ ಅಂಕ ಪಡೆಯುವುದನ್ನು ತಡೆಯಲು ಇಂಗ್ಲಿಷ್ ಸೆಂಟರ್ ಬ್ಯಾಕ್‌ಗೆ ಆಗಲಿಲ್ಲ. ಗುರ್ಪ್ರೀತ್ ಸಿಂಗ್ ಸಂಧು ಅವರ ಫ್ರೀ-ಕಿಕ್ ಅನ್ನು ಪಡೆಯಲು ಛೇತ್ರಿ ಅವರು ಸ್ಕಾಟ್ ನೆವಿಲ್ಲೆ ಅವರನ್ನು ಹಿಂದಿಕ್ಕಿದರು, ಚೆಂಡನ್ನು ಕ್ಲೀಟನ್‌ಗೆ ನೀಡಿದರು ಅವಕಾಶ ಬಳಸಿಕೊಂಡ ಬ್ರೆಜಿಲಿಯನ್ ತನ್ನ ಮೊದಲ ಸ್ಪರ್ಶದಿಂದ ಅದನ್ನು ಗೋಲ್ ಅತ್ತ ತಳ್ಳಿ ಅಂಕ ಗಳಿಸಿದರು.
ಮೊದಲಾರ್ಧದ ಅಂತ್ಯಕ್ಕೂ ಮುನ್ನ ಬೆಂಗಳೂರು ಲಿಯಾನ್ ಅಗಸ್ಟೀನ್ ಅವರ ಗಾಯದ ಕಾರಣ ಬದಲಾವಣೆಗೆ ಒತ್ತಾಯಿಸಲ್ಪಟ್ಟಿತು ನಂತರ ಪರಾಗ್ ಶ್ರೀವಾಸ್ ಬದಲಿಯಾಗಿ ಅಂಗಳಕ್ಕಿಳಿದರು. ಯುವ ಆಟಗಾರ ಅಂಗಳಕ್ಕಿಳಿದ ಸ್ವಲ್ಪ ಹೊತ್ತಲ್ಲೇ ಪ್ರಭಾವ ಬೀರಿದರು. ರಾಹುಲ್ ಭೆಕೆ ರೈಟ್ ವಿಂಗ್ ಅತ್ತ ಓಡಿ, ಪೋಸ್ಟ್ ಬಳಿ ಕ್ರಾಸ್ ಮೂಲಕ ಪರಾಗ್‌ಗೆ ದಾಟಿಸಿದರು, ಅವರ ಹೊಡೆತವು ಪೋಸ್ಟ್‌ಗೆ ತಾಗಿ ಪುಟಿಡೆದ್ದು ಡೆಬ್ಜಿತ್ ಮಜುಂದರ್ ಅವರ ಕಾಲಿನಿಂದ ಗೋಲಿಗೆ ಪ್ರತಿಫಲನಗೊಂಡು ಪಂದ್ಯದಲ್ಲಿ ಬ್ಲೂಸ್‌ಗೆ 2-0 ಮುನ್ನಡೆ ತಂದುಕೊಟ್ಟಿತು.
ದ್ವಿತೀಯಾರ್ಧದ ಮುಂದಿನ 25 ನಿಮಿಷಗಳಲ್ಲಿ ಇನ್ನೂ ಮೂರು ಬದಲಿಗಳನ್ನು ಮಾಡಿದ ಫೌಲರ್ ಪಂದ್ಯದ ಮೇಲೆ ಹತೋಟಿ ಪಡೆಯಲು ವಿಫಲರಾದ್ರು. ಎರಡು ಹಲ್ಫ್ ಟೈಮ್ ಬದಲಿಗಳನ್ನೂ ಮಾಡಿದ್ದರು. ಪಿಚ್‌ನಲ್ಲಿ ಬದಲಿ ಆಟಗಾರರ ಸಹಾಯದಿಂದ, ಈಸ್ಟ್ ಬೆಂಗಾಲ್ ತಂಡ ಬ್ಲೂಸ್‌ನ ರಕ್ಷಣೆಯನ್ನು ಮುರಿಯಲು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಿತು ಆದರೆ ತುಂಬಾ ಹೊತ್ತು ಕೆಲಸಮಾಡಲಿಲ್ಲ.
ರಾಣ ಘರಾಮಿಯ ದೂರದ ವಾಲಿ ಯತ್ನ ವಿಫಲವಾಗುತ್ತಿದ್ದಂತೆ ಎದುರಾಳಿಯ ರಕ್ಷಣಾತ್ಮಕ ನಷ್ಟವನ್ನು ಅವಕಾಶವಾಗಿ ಬಳಸಿಕೊಳ್ಳುವ ಯತ್ನದಲ್ಲಿ ಗೋಲ್ ಅತ್ತ ಹೊಡೆತ ನೀಡಿದರು ನಾಯಕ ಛೇತ್ರಿ ಇದರಿಂದ ತಂಡ ತಮ್ಮ 3ನೆ ಗೋಲ್ ಗಳಿಸುವ ಅವಕಾಶ ಬಲವಾಗಿತ್ತು ಆದರೆ ಪ್ರಯತ್ನವು ಗೋಲ್ ಪೋಸ್ಟ್ ಅಡ್ಡ ಪಟ್ಟಿಗೆ ತಾಗಿ ಮತ್ತೆ ಅಂಗಳದೊಳಕ್ಕೆ ಅಪ್ಪಳಿಸಿತು.
ಬೆಂಗಳೂರು ತಂಡ ಮೂಸಾ ನೇತೃತ್ವದಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸುವುದರೊಂದಿಗೆ ಮೂರು ಅಂಕ ಪಡೆದು, ಪ್ಲೇಆಫ್ ಸ್ಥಾನಕ್ಕಾಗಿ ಇರುವ ಅವಕಾಶಗಳ ಓಟದಲ್ಲಿ ತಂಡ ಜೀವಂತವಾಗಿ ಇನ್ನೂ ಉಳಿದುಕೊಂಡಿದೆ.
ಫೆಬ್ರವರಿ 5 ರಂದು ಫತೋರ್ದಾದಲ್ಲಿ ಬ್ಲೂಸ್ ತಮ್ಮ ಮುಂದಿನ ಪಂದ್ಯವನ್ನು ಚೆನ್ನೈಯಿನ್ ಎಫ್‌ಸಿ ವಿರುದ್ಧ ಆಡಲಿದ್ದಾರೆ.