ಎಫ್‌ಸಿ ಗೋವಾ ಮುಖಾಮುಖಿಯಲ್ಲಿತಿರುಗೇಟಿಗೆ ಬೆಂಗಳೂರು ಉತ್ಸಾಹ

ಉದಾಂತ ಸಿಂಗ್‌ ಸೇವೆ ಇಲ್ಲದ ಬೆಂಗಳೂರು ಎಫ್‌ಸಿಗೆ ಗೆಲುವಿನ ಹಂಬಲ

ಬಂಬೋಲಿಮ್‌ ಜಿಎಂಸಿ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿಶನಿವಾರ ನಡೆಯಲಿರುವ ಇಂಡಿಯನ್‌ ಸೂಪರ್‌ ಲೀಗ್‌ ಪಂದ್ಯದಲ್ಲಿಎಫ್‌ಸಿ ಗೋವಾ ತಂಡದ ವಿರುದ್ಧ ಕಣಕ್ಕಿಳಿದಾಗ ತಮ್ಮ ಅದೃಷ್ಟವನ್ನು ಬದಲಾಯಿಸಲು ತಮ್ಮ ತಂಡವು ಉತ್ಸುಕವಾಗಿದೆ ಎಂದು ಬೆಂಗಳೂರು ಎಫ್‌ಸಿ ಮುಖ್ಯ ಕೋಚ್‌ ಮಾರ್ಕೊ ಪೆಜ್ಜೈಯಲಿ ಹೇಳಿದ್ದಾರೆ.ಲೀಗ್‌ನಲ್ಲಿಈವರೆಗೆ ಆಡಿದ ಐದು ಪಂದ್ಯಗಳಲ್ಲಿಬ್ಲೂಸ್‌ ಕೇವಲ ನಾಲ್ಕು ಅಂಕ ಹೊಂದಿದೆ. ಅದರಲ್ಲೂಹಿಂದಿನ ಎರಡು ಪಂದ್ಯಗಳಲ್ಲಿಮುಂಬೈ ಸಿಟಿ ಎಫ್‌ಸಿ ಮತ್ತು ಹೈದರಾಬಾದ್‌ ಎಫ್‌ಸಿ ವಿರುದ್ಧ ಸೋಲುಂಡಿದೆ.
‘‘ ತಂಡದಲ್ಲಿನ ಶಕ್ತಿಯು ಧನಾತ್ಮಕವಾಗಿದೆ. ಆದರೆ ನಾವು ಬಯಸಿದ ಫಲಿತಾಂಶಗಳನ್ನು ಪಡೆಯಲು ಅದು ನಮಗೆ ಸಹಾಯ ಮಾಡುತ್ತಿಲ್ಲ. ಮೂರು ಅಂಕಗಳು ಅತ್ಯಂತ ಮಹತ್ವದ್ದಾಗಿದೆ. ಇದನ್ನು ಪಡೆಯಲು ನಾವು ಸಾಕಷ್ಟು ಶ್ರಮಿಸುತ್ತಿದ್ದೇವೆ. ಪ್ರತಿ ಮೂರು ದಿನಗಳಿಗೊಮ್ಮೊ ಪಂದ್ಯ ಆಡುವುದು ಸುಲಭವಲ್ಲ. ಆದರೆ ನಾವು ಸಾಧ್ಯವಾದಷ್ಟು ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದೇವೆ,’’ ಎಂದು ಪಂದ್ಯ ಪೂರ್ವಪತ್ರಿಕಾಗೋಷ್ಠಿಯಲ್ಲಿಪೆಜ್ಜೈಯಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಎಫ್‌ಸಿ ಗೋವಾ ತಂಡ ಇತ್ತೀಚೆಗೆ ಈಸ್ಟ್‌ ಬೆಂಗಾಲ್‌ ವಿರುದ್ಧ 4-3 ಅಂತರದಲ್ಲಿಗೆಲ್ಲುವ ಮುನ್ನ ಸತತ ಮೂರು ಪಂದ್ಯಗಳಲ್ಲಿಸೋತು ಕಠಿಣ ಆರಂಭ ಕಂಡಿದೆ. ಹೀಗಾಗಿ ಎದುರಾಳಿ ತಂಡದ ನ್ಯೂನತೆಗಳ ಲಾಭ ಪಡೆಯಲು ಸಾಕಷ್ಟು ಅವಕಾಶವಿದೆ ಎಂದು ತಮ್ಮ ತಂಡದ ಪ್ರದರ್ಶನವನ್ನು ಪೆಜ್ಜೈಯಲಿ ಸಮರ್ಥಿಸಿಕೊಂಡರು.
‘‘ ಪ್ರಸಕ್ತ ಲೀಗ್‌ನಲ್ಲಿಚೆಂಡಿನ ಮೇಲೆ ಪ್ರಭುತ್ವ ಸಾಧಿಸುವ ತಂಡಗಳ ಪೈಕಿ ಎಫ್‌ಸಿ ಗೋವಾ ಅತ್ಯುತ್ತಮ ತಂಡವಾಗಿದೆ. ಈ ಋುತುವಿನಲ್ಲಿಅವರು ಉತ್ತಮ ಆರಂಭ ಕಂಡಿಲ್ಲ. ಆದರೆ, ಅವರ ಆಟದ ಶೈಲಿ ಉತ್ತಮವಾಗಿದೆ. ಅವರ ಆರಂಭಿಕ ಪಂದ್ಯಗಳಲ್ಲಿಕೆಲವು ದೌರ್ಬಲ್ಯಗಳನ್ನು ಅನಾವರಣಗೊಂಡಿವೆ. ನಾವು ಅವರ ವಿರುದ್ಧ ಉತ್ತಮ ಪ್ರದರ್ಶನ ತೋರಬೇಕಿದೆ,’’ ಎಂದು ಪೆಜ್ಜೈಯಲಿ ನುಡಿದರು. ಅವರ ಆಟಗಾರರ ಫಿಟ್ನೆಸ್‌ ಕುರಿತು ಜರ್ಮನ್‌-ಇಟಲಿಯನ್‌ ಅವರು ಮಾಹಿತಿ ಒದಗಿಸಿದ್ದಾರೆ. ಉದಾಂತ ಸಿಂಗ್‌ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
‘‘ ನೀವು ಪ್ರತಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ಪಂದ್ಯಗಳನ್ನಾಡುತ್ತಿರುವಾಗ ನಿಮ್ಮ ಆಟಗಾರರನ್ನು ಉತ್ತಮವಾಗಿ ನಿರ್ವಹಿಸುವುದು ಬಹಳ ಮುಖ್ಯ. ನಮ್ಮ ಪ್ರಮುಖ ಆಟಗಾರರಿಗೆ ಸಾಕಷ್ಟು ಗಾಯಗಳಾಗಿವೆ. ಆದರೆ ಅವರಲ್ಲಿಕೆಲವರು ಈಗ ಆಟಕ್ಕಾಗಿ ಸ್ಪರ್ಧೆಗೆ ಮರಳಿದ್ದಾರೆ. ಉದಾಂತ ಶನಿವಾರ ತಂಡದ ಭಾಗವಾಗುವುದಿಲ್ಲ, ಇತರರು ಚೇತರಿಸಿಕೊಂಡಿದ್ದಾರೆ ಮತ್ತು ಮುಂದಿನ ಪಂದ್ಯಕ್ಕೆ ಅವರನ್ನು ಲಭ್ಯವಾಗಲಿದ್ದಾರೆ,’’ ಎಂದು ಪೆಜ್ಜೈಯಲಿ ತಿಳಿಸಿದರು.
ಬ್ಲೂಸ್‌ ಮತ್ತು ಎಫ್‌ಸಿ ಗೋವಾ ನಡುವಿನ ಪಂದ್ಯ ಶನಿವಾರ ರಾತ್ರಿ 9.30ಕ್ಕೆ ಆರಂಭವಾಗಲಿದೆ. ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌, ಡಿಸ್ನಿ ಹಾಟ್‌ಸ್ಟಾರ್‌ ಮತ್ತು ಜಿಯೋ ಟಿವಿಯಲ್ಲಿನೇರ ಪ್ರಸಾರ ಇರಲಿದೆ.

Malcare WordPress Security