ಬಿಡಿಎಫ್‌ಎ ಸೂಪರ್ ಡಿವಿಜನ್ ಲೀಗ್‌ನಲ್ಲಿ7-1ರಲ್ಲಿಗೆದ್ದ ಬೆಂಗಳೂರು ಎಫ್‌ಸಿ
ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿಶುಕ್ರವಾರ ನಡೆದ ಬಿಡಿಎಫ್‌ಎ ಸೂಪರ್ ಡಿವಿಜನ್ ಲೀಗ್‌ನಲ್ಲಿ7-1 ಗೋಲ್‌ಗಳಿಂದ ಎಡಿಇ ಎಫ್‌ಸಿ ತಂಡವನ್ನು ಸೋಲಿಸಿದ ಬೆಂಗಳೂರು ಎಫ್‌ಸಿ ಸತತ ಎರಡನೇ ಜಯ ದಾಖಲಿಸಿದೆ. ರಾಹುಲ್ ರಾಜು ಎರಡು ಗೋಲ್ ಗಳಿಸಿದರೆ, ಪಂದ್ಯದ ಆರಂಭದಿಂದ ಕೊನೆಯವರೆಗೂ ಬ್ಲೂಬಳಗ ಪ್ರಭುತ್ವ ಮೆರೆಯಿತು.
ಮೂರು ದಿನಗಳ ಹಿಂದಷ್ಟೇ ಎಎಸ್‌ಸಿ ಮತ್ತು ಸೆಂಟರ್ ವಿರುದ್ಧ ಕಣಕ್ಕಿಳಿಸಿದ್ದ ಆಟಗಾರರ ಪೈಕಿ ಸಂದೇಶ್ ಬೋಯಿಟೆ ಎರಡು ಬದಲಾವಣೆ ತಂದರು. ಹೀಗಾಗಿ ಆಡುವ ಹನ್ನೊಂದರ ಬಳಗಕ್ಕೆ ವಿನಿಥ್ ವೆಂಕಟೇಶ್ ಮತ್ತು ಮಾಣಿಕ್ ಬಲಿಯಾನ್ ಮರಳಿದರು.
ಪಂದ್ಯ ಆರಂಭವಾಗುತ್ತಿದ್ದಂತೆಯೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಬೆಂಗಳೂರು ತಂಡ ಮನೀಶ್ ಚೌಧರಿ ನೀಡಿದ ಪಾಸ್‌ನಿಂದ ರಾಹುಲ್ ಖಾತೆ ತೆರೆದರು. ಹೀಗಾಗಿ ಬಿಎಫ್‌ಸಿ ಆರಂಭದಲ್ಲೇ ಮುನ್ನಡೆ ಪಡೆಯಿತು. ಇದಾದ ಏಳು ನಿಮಿಷಗಳ ನಂತರ ಲಾಲ್ರೆಮ್ತ್‌ಲುಂಗಾ ಮೂಲಕ ಮುನ್ನಡೆಯನ್ನು ದ್ವಿಗುಗೊಳಿಸಿತು. 7ನೇ ನಿಮಿಷದಲ್ಲಿಒಮೆಗಾ ವನ್ಲಾಲ್ರುವಾಟ್ಲುಂಗಾ ಫ್ರಿ ಕಿಕ್ ಮೂಲಕ ನೀಡಿದ ನೆರವನ್ನು ಲಾಲ್ರೆಮ್ತ್‌ಲುಂಗಾ ಗೋಲಾಗಿ ಪರಿವರ್ತಿಸಿದರು.
ಇದಾದ ಎರಡು ನಿಮಿಷಗಳ ಅಂತರದಲ್ಲೇ ಬಿಎಫ್‌ಸಿ ಪರ ಮತ್ತೆರಡು ಗೋಲ್ ದಾಖಲಿಸಿದ್ದು, ಎಡಿಇ ತಂಡದ ರಕ್ಷ ಣಾ ವೈಫಲ್ಯಕ್ಕೆ ಸಾಕ್ಷಿ. ಒತ್ತಡದಲ್ಲಿಎಡಿಇ ಗೋಲ್ ಕೀಪರ್ ಎಸ್.ಕೆ. ಸಾಡೆಕುದ್ದೀನ್ ಅಪಾಯಕಾರಿ ಪ್ರದೇಶದಲ್ಲಿಚೆಂಡನ್ನು ಸ್ವಾಧೀನಕ್ಕೆ ಯತ್ನಿಸಿದಾಗ ಎಡ್ವಿನ್ ತಂಡದ ಮೂರನೇ ಗೋಲ್ ಬಾರಿಸಿದರು. ಇದಾದ ಮರು ಕ್ಷ ಣವೇ ರಾಹುಲ್ ಬ್ಲೂಸ್‌ನ 4ನೇ ಗೋಲ್ ಬಾರಿಸಿ ತಂಡದ ಮೇಲಾಟಕ್ಕೆ ಕಾರಣರಾದರು.
ಒಮೆಗಾ ನೀಡಿದ ಕ್ರಾಸನ್ನು ತಡೆಯುವ ಆತುರದಲ್ಲಿಎಡಿಇ ಡಿಫೆಂಡರ್ ಸುಯಾಶ್ ಗೋಲಿನ ಪೆಟ್ಟಿಗೆ ಸೇರಿಸಿದರು. ಹೀಗಾಗಿ ವಿರಾಮಕ್ಕೂ ಮುನ್ನ ಬೆಂಗಳೂರು ಎಫ್‌ಸಿ 5-0 ಅಂತರದಲ್ಲಿಮುನ್ನಡೆ ಪಡೆಯುವಲ್ಲಿಸಫಲಗೊಂಡಿತು.
ವಿರಾಮದ ನಂತರ ಎಡಿಇ ಬ್ಯಾಕ್‌ಲೈನ್‌ನಿಂದ ಜಗದೀಪ್ ಅತ್ಯುತ್ತಮ ಪಾಸ್ ನೀಡಿದನ್ನು ನಿಯಂತ್ರಣಕ್ಕೆ ಪಡೆದ ಲಾಲ್ತಾಂಗ್ಲಿಯಾನಾ ಸ್ಕೋರ್‌ಪಟ್ಟಿಯಲ್ಲಿತಮ್ಮ ಹೆಸರು ನಮೂದಿಸಿ ಬಿಎಫ್‌ಸಿ ಮುನ್ನಡೆಯನ್ನು 6-1ಕ್ಕೆ ಹಿಗ್ಗಿಸಿದರು. ನಂತರ ವಿನಿಥ್, ಎಡ್ವಿನ್ ಮತ್ತು ಒಮೆಗಾ ಬದಲಿಗೆ ಮೊನಿರುಲ್ ಮೊಲ್ಲಾ, ಯಫಾಥೋಯಿ ಮಗ್ಸಾಟಾಬಾಮ್ ಮತ್ತು ಶಿಘಿಲ್ ಎನ್‌ಎಸ್ ಅವರನ್ನು ಕೋಚ್ ಭೋಯಿಟೆ ಬದಲಾಯಿಸಿದರು. ಇದಾದ ಕೆಲವೇ ನಿಮಿಷದಲ್ಲಿಲಾಲ್ತಾಂಗ್ಲಿಯಾನಾ ಅವರ ಬದಲಿಗೆ ಅಬು ಸ್ವಲಿಹ್‌ಗೆ ಸ್ಥಾನ ಕಲ್ಪಿಸಲಾಯಿತು. ಇವರು ಬೆಂಗಳೂರು ಎಫ್‌ಸಿ ಪರ ಆಡಿದ ಅತ್ಯಂತ ಕಿರಿಯ ಆಟಗಾರನಾಗಿದ್ದು, ಸದ್ಯ ಅವರಿಗೆ ಕೇವಲ 15 ವರ್ಷ.
ಯಫಾಥೋಯಿ ಚೆಂಡನ್ನು ರಕ್ಷ ಣೆ ಮಾಡುವ ಯತ್ನದಲ್ಲಿಕೆಳಗೆ ಬಿದ್ದರು. ಇದು ಸಾಡೆಕುದ್ದೀನ್ ಗೋಲ್ ಗಳಿಸಲು ಅವಕಾಶ ಮಾಡಿಕೊಟ್ಟಿತು. ಹೀಗಾಗಿ ಬೆಂಗಳೂರು ಎಫ್‌ಸಿ 7-1ರಲ್ಲಿಮುನ್ನಡೆ ವಿಸ್ತರಿಸಿಕೊಂಡಿತು. ಪಂದ್ಯದ ಅಂತಿಮ ನಿಮಿಷದಲ್ಲಿಶಿಘಿಲ್ ತಂಡದ 8ನೇ ಗೋಲ್ ಬಾರಿಸುವ ಅವಕಾಶ ಹೊಂದಿದ್ದರಾದರೂ ಮಿಡ್‌ಫೀಲ್ಡರ್ ಅಬು ಇದಕ್ಕೆ ಅಡ್ಡ ಬಂದರು. ಹೀಗಾಗಿ ಮತ್ತೊಂದು ಗೋಲಿನ ಅವಕಾಶ ತಪ್ಪಿತು.
ಬ್ಲೂಬಳಗ, ಇದೇ ಕ್ರೀಡಾಂಗಣದಲ್ಲಿಡಿಸೆಂಬರ್ 13ರಂದು ಬೆಂಗಳೂರು ಇಂಡಿಪೆಂಡೆಂಟ್ಸ್ ತಂಡದ ಸವಾಲು ಎದುರಿಸಲಿದೆ.