ಬಂಬೋಲಿಮ್‌ನಲ್ಲಿಮರಿನರ್ಸ್ ವಿರುದ್ಧ ಜಯದ ಹಳಿಗೆ ಮರಳುವತ್ತ ಮಾರ್ಕೊ ಪೆಜ್ಜೈಯಲಿ ಬಳಗ ಬ್ಲೂಸ್
ಇಲ್ಲಿನ ಜಿಎಂಸಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿಗುರುವಾರ ಎಟಿಕೆ ಮೋಹನ್ ಬಗಾನ್ ತಂಡದ ವಿರುದ್ಧ ಕಣಕ್ಕಿಳಿಯುತ್ತಿರುವ ಕೋಚ್ ಮಾರ್ಕೊ ಪೆಜ್ಜೈಯಲಿ ಅವರ ಬೆಂಗಳೂರು ತಂಡ ಅದೃಷ್ಟದ ಬದಲಾವಣೆಗೆ ಉತ್ಸುಕವಾಗಿದೆ.
ತನ್ನ ಆರಂಭಿಕ ಪಂದ್ಯದಲ್ಲಿನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧ ಜಯದ ಅಭಿಯಾನ ಆರಂಭಿಸಿದ ನಂತರ ಬೆಂಗಳೂರು ತಂಡ ಹಿಂದಿನ ಐದು ಪಂದ್ಯಗಳಲ್ಲಿಜಯ ಗಳಿಸಲು ಸಾಧ್ಯವಾಗಿಲ್ಲ. ಈ ನಡುವೆ ಎಟಿಕೆ ಮೋಹನ್ ಬಗಾನ್ ಕೂಡ ತನ್ನ ಕೊನೆಯ ಮೂರು ಪಂದ್ಯಗಳಲ್ಲಿಜಯ ಗಳಿಸಿಲ್ಲ. ಮುಂಬೈ ಸಿಟಿ ಎಫ್‌ಸಿ ಮತ್ತು ಜಮ್ಶೆಡ್‌ಪುರ ಎಫ್‌ಸಿ ವಿರುದ್ಧ ಸೋತಿರುವ ಎಟಿಕೆ, ಚೆನ್ನೈಯಿನ್ ಎಫ್‌ಸಿ ವಿರುದ್ಧ ಡ್ರಾದೊಂದಿಗೆ ಅಂಕ ಹಂಚಿಕೊಂಡಿದೆ.
‘‘ ರಾಯ್ ಕೃಷ್ಣ, ಮನ್ವಿರ್ ಸಿಂಗ್ ಮತ್ತು ಲಿಸ್ಟನ್ ಕಕೊಲಾಕೊ ರಂತಹ ಆಟಗಾರರನ್ನು ಹೊಂದಿರುವ ಎಟಿಕೆ ಮೋಹನ್ ಬಗಾನ್ ತಂಡ ಒಂದು ಗುಣಮುಟ್ಟದ ತಂಡವಾಗಿದೆ. ಅವರು ಕೌಂಟರ್‌ನಲ್ಲಿಉತ್ತಮವಾಗಿ ಆಡುವ ತಂಡವೆನಿಸಿದೆ ಮತ್ತು ನಾವು ಉತ್ತಮವಾಗಿ ಸಂಘಟಿತರಾಗಿದ್ದು, ಯಾವುದೇ ದಾಳಿಗೆ ಸಿದ್ದರಾಗಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ,’’ ಎಂದು ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿಪೆಜ್ಜೈಯಲಿ ಹೇಳಿದ್ದಾರೆ.
ಲೀಗ್‌ನಲ್ಲಿತನ್ನ ಕೊನೆಯ ಐದು ಪಂದ್ಯಗಳಲ್ಲಿಒಂದನ್ನೂ ಗೆಲ್ಲಲಾಗದ ಬ್ಲೂಸ್ ಕುರಿತು ಪ್ರತಿಕ್ರಿಯಿಸಿದ ಪೆಜ್ಜೈಯಲಿ, ತಂಡದಲ್ಲಿರುವ ಹಿರಿಯ ಆಟಗಾರರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಜತೆಗೆ ಯುವ ಆಟಗಾರರಿಗೆ ಸಲಹೆ ನೀಡಬೇಕಿದೆ ಎಂದಿದ್ದಾರೆ. ‘‘ ತಂಡದಲ್ಲಿರುವ ಅಪಾರ ಅನುಭವ ಹೊಂದಿರುವ ಆಟಗಾರರು ಯುವಕರಿಗೆ ಮಾರ್ಗದರ್ಶನ ನೀಡಬೇಕಿದೆ. ಯಾರೂ ಗಾಯಗೊಂಡಿದ್ದರೂ ಕ್ರೀಡಾಂಗಣಕ್ಕೆ ಇಳಿಯುವ ಆಟಗಾರರು ಪರಸ್ಪರ ಉತ್ತಮವಾದದನ್ನು ತರಲು ಎದುರು ನೋಡಬೇಕು, ’’ ಎಂದು ಬ್ಲೂಸ್ ಕೋಚ್ ಪೆಜ್ಜೈಯಲಿ ನುಡಿದರು.
ಐದು ಪಂದ್ಯಗಳಲ್ಲಿಏಳು ಅಂಕಗಳನ್ನು ಹೊಂದಿರುವ ಎಟಿಕೆ ಮೋಹನ್ ಬಗಾನ್ ತಂಡ ಅಂಕಪಟ್ಟಿಯಲ್ಲಿಆರನೇ ಸ್ಥಾನದಲ್ಲಿದ್ದರೆ, ಬ್ಲೂಸ್ ಆಡಿರುವ ಆರು ಪಂದ್ಯಗಳಲ್ಲಿನಾಲ್ಕು ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಪೆಜ್ಜೈಯಲಿ ತಂಡದ ಪರ ಕ್ಲೀಟನ್ ಸಿಲ್ವಾ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಲೀಗ್‌ನಲ್ಲಿಬ್ರೆಜಿಲ್ ಆಟಗಾರ ಮುಂಬೈ ಸಿಟಿ ಎಫ್‌ಸಿ ಮತ್ತು ಎಫ್‌ಸಿ ಗೋವಾ ವಿರುದ್ಧ ಎರಡು ಗೋಲ್ ಸೇರಿದಂತೆ ಒಟ್ಟು ಮೂರು ಗೋಲ್ ಗಳಿಸಿರುವುದು ಇದಕ್ಕೆ ಸಾಕ್ಷಿ.
ಎಫ್‌ಸಿ ಗೋವಾ ವಿರುದ್ಧ ರೆಡ್ ಕಾರ್ಡ್‌ಗೆ ಗುರಿಯಾಗಿ ಒಂದು ಪಂದ್ಯದಿಂದ ಅಮಾನತುಗೊಂಡಿರುವ ಮಿಡ್‌ಫೀಲ್ಡರ್ ಸುರೇಶ್ ವಾಂಗ್ಜಾಮ್ ಸೇವೆ ಇಲ್ಲದೆ ಬೆಂಗಳೂರು ತಂಡ ಎಟಿಕೆಎಂಡಿ ವಿರುದ್ಧ ಕಣಕ್ಕಿಳಿಯುತ್ತಿದೆ. ಇದೇ ವೇಳೆ ಕ್ಯಾಲೆಂಡರ್ ವರ್ಷದ ಇತರ ಅವಧಿಗೆ ಗಾಯಗೊಂಡಿರುವ ಲಿಯೊನ್ ಆಗಸ್ಟೀನ್ ಮತ್ತು ಡಿಫೆಂಡರ್ ರೋಂಡು ಮುಸಾವು ಕಿಂಗ್ ಅವರ ಸೇವೆ ಸಹ ಲಭ್ಯವಿಲ್ಲಎಂದು ಪೆಜ್ಜೈಯಲಿ ಸ್ಪಷ್ಟಪಡಿಸಿದ್ದಾರೆ. ‘‘ ತಂಡದ ಸುದ್ದಿಯಲ್ಲಿಜನವರಿವರೆಗೂ ಲಿಯೋನ್ ಮತ್ತು ಮುಸಾವು ಕಿಂಗ್ ತಂಡಕ್ಕೆ ಲಭ್ಯರಿಲ್ಲಎಂದು ನಾವು ಖಚಿತಪಡಿಸುತ್ತೇನೆ. ತಂಡದ ಇತರ ಸದಸ್ಯರು ಗುರುವಾರದ ಪಂದ್ಯಕ್ಕೆ ಲಭ್ಯರಿದ್ದಾರೆ, ’’ ಎಂದು ಪೆಜ್ಜೈಯಲಿ ಹೇಳಿದ್ದಾರೆ.
ಬೆಂಗಳೂರು ಎಫ್‌ಸಿ ಮತ್ತು ಎಟಿಕೆ ಮೋಹನ್ ಬಗಾನ್ ನಡುವಿನ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ + ಹಾಸ್ಟರ್ ಮತ್ತು ಜಿಯೋ ಟಿವಿಯಲ್ಲಿಪಂದ್ಯ ನೇರ ಪ್ರಸಾರ ಇರಲಿದೆ.