ಎಟಿಕೆ ಮೋಹನ್‌ ಬಗಾನ್‌ ಜತೆ ಅಂಕ ಹಂಚಿಕೊಂಡ ಬ್ಲೂಸ್‌

ಸತತ 3 ಸೋಲುಗಳ ನಂತರ ಡ್ರಾ ಸಾಧಿಸಿದ ಮಾರ್ಕೊ ಪೆಜೈಯಲಿ ಬಳಗ | ಎಟಿಕೆ ವಿರುದ್ಧ 3-3ರಲ್ಲಿಡ್ರಾಗೆ ತೃಪ್ತಿಪಟ್ಟ ಬಿಎಫ್‌ಸಿ

ಕೆಚ್ಚೆದೆಯ ಹೋರಾಟದ ಹೊರತಾಗಿಯೂ ಬೆಂಗಳೂರು ಎಫ್‌ಸಿ ಪ್ರಸಕ್ತ ಇಂಡಿಯನ್‌ ಸೂಪರ್‌ ಲೀಗ್‌ನ ತನ್ನ 7ನೇ ಪಂದ್ಯದಲ್ಲಿಎಟಿಕೆ ಮೋಹನ್‌ ಬಗಾನ್‌ ವಿರುದ್ಧ ಪೂರ್ಣ 3 ಅಂಕ ಗಿಟ್ಟಿಸುವಲ್ಲಿವಿಫಲವಾದರೂ ಡ್ರಾದೊಂದಿಗೆ ಒಂದಂಕಕ್ಕೆ ತೃಪ್ತಿಪಟ್ಟಿತು.
ಇಲ್ಲಿನ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿಗುರುವಾರ ನಡೆದ ಆರು ಗೋಲ್‌ಗಳ ಜಿದ್ದಾಜಿದ್ದಿನ ಹಣಾಹಣಿಯಲ್ಲಿಬಿಎಫ್‌ಸಿ ಮತ್ತು ಎಟಿಕೆ ಬಗಾನ್‌ ತಂಡಗಳು 3-3 ಗೋಲ್‌ಗಳಿಂದ ಸಮಬಲ ಸಾಧಿಸಲಷ್ಟೇ ಶಕ್ತವಾದವು. ಸತತ ಮೂರು ಪಂದ್ಯಗಳ ನಂತರ ಕೋಚ್‌ ಮಾರ್ಕೊ ಪೆಜ್ಜೈಯಲಿ ಬಳಗ 1 ಅಂಕ ಗಿಟ್ಟಿಸಿತು. ಬ್ಲೂಸ್‌ ಪರ ಕ್ಲೀಟನ್‌ ಸಿಲ್ವಾ (18ನೇ ನಿ. ಪೆನಾಲ್ಟಿ), ದಾನಿಶ್‌ (26ನೇ ನಿ.) ಮತ್ತು ಪ್ರಿನ್ಸ್‌ ಇಬಾರ (72ನೇ ನಿ.) ತಲಾ ಒಂದು ಗೋಲ್‌ ಬಾರಿಸಿದರೆ, ಎಟಿಕೆ ಮೋಹನ್‌ ಬಗಾನ್‌ ಪರ ಸುಭಾಶಿಶ್‌ (13ನೇ ನಿ.) ಮತ್ತು ಬೌಮೌಸ್‌ (38ನೇ ನಿ.) ಮತ್ತು ಕೃಷ್ಣ (58ನೇ ನಿ. ಪೆನಾಲ್ಟಿ) ಒಂದೊಂದು ಗೋಲ್‌ ದಾಖಲಿಸಿದರು.
ವಿರಾಮಕ್ಕೆ 2-2ರಲ್ಲಿಸಮಬಲದ ಹೋರಾಟ ನೀಡಿದ ಉಭಯ ತಂಡಗಳು, ದ್ವಿತೀಯಾರ್ಧದ ಆರಂಭದಿಂದಲೇ ಮುನ್ನಡೆಗೆ ಯತ್ನಿಸಿದೆವು. ಇದರ ಫಲವಾಗಿ 58ನೇ ನಿಮಿಷದಲ್ಲಿಗೋಲ್‌ ಗಳಿಸಿದ ಕೃಷ್ಣ , ಎಟಿಕೆ ಮುನ್ನಡೆಯನ್ನು ವಿಸ್ತರಿಸಿದರೆ, 72 ನಿಮಿಷದಲ್ಲಿಇಬಾರ ಬ್ಲೂಸ್‌ ಮರು ಹೋರಾಟಕ್ಕೆ ಸಾಕ್ಷಿಯಾದರು. ಇದಕ್ಕೂ ಮುನ್ನ ಹಿನ್ನಡೆಯಿಂದ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ಎಟಿಕೆ ಕೊನೆಗೂ 38ನೇ ನಿಮಿಷದಲ್ಲಿ2-2ರಲ್ಲಿಸಮಬಲ ತೋರುವಲ್ಲಿಯಶಸ್ವಿಯಾಯಿತು. ಬ್ಲೂಸ್‌ನ ಡಿಫೆಂಡರ್‌ಗಳನ್ನು ಸಮರ್ಥವಾಗಿ ನಿಭಾಯಿಸಿದ ಹುಗೊ ಬೌಮೌಸ್‌ ತಂಡದ ಎಟಿಕೆಯ ಪ್ರತಿ ಹೋರಾಟಕ್ಕೆ ನೆರವಾದರು. ನಂತರ ಬೌಮೌಸ್‌ ಮತ್ತು ಅಜಿತ್‌ ಕಾಮರಾಜ್‌ ಹಳದಿ ಕಾರ್ಡ್‌ಗೆ ಗುರಿಯಾದರು.
ಪಂದ್ಯದ 23ನೇ ನಿಮಿಷದಲ್ಲಿಅಪಾಯಕಾರಿ ವಲಯದಲ್ಲಿ ಕ್ಲೀಟನ್‌ ಅವರನ್ನು ಮತ್ತೊಮ್ಮೆ ಬೀಳಿಸಿದರು. ಇದಕ್ಕೆ ಕಾರಣವಾಗಿದ್ದು, ಪ್ರಿತಮ್‌ ಕೋಟಲ್‌. ನಂತರ ಕ್ಲೀಟನ್‌ ನೀಡಿದ ನೆರವಿನಿಂದ ದಾನಿಶ್‌ ಫರೂಕಿ ತಂಡದ ಎರಡನೇ ಗೋಲ್‌ ಗಳಿಸಿ 2-1ರ ಮುನ್ನಡೆಯನ್ನು ಹೆಚ್ಚಿಸಿದರು.
ಪಂದ್ಯದ 13ನೇ ನಿಮಿಷದಲ್ಲಿಎಟಿಕೆ ಮೋಹನ್‌ ಬಗಾನ್‌ ಖಾತೆ ತೆರೆಯುವ ಮೂಲಕ ಬಿಎಫ್‌ಸಿ ಮೇಲೆ ಒತ್ತಡ ಹೇರಿತು. ಕಾರ್ನರ್‌ ಬಲ ಬದಿಯಿಂದ ಸುಭಾಸಿಶ್‌ ಬೋಸ್‌ ನೀಡಿದ ಪಾಸನ್ನು ಹಿಡಿತಕ್ಕೆ ಪಡೆದ ಹುಗೊ ಬೌಮೌಸ್‌ ಯಾವುದೇ ತಪ್ಪು ಮಾಡದೆ ಬ್ಲೂಸ್‌ ರಕ್ಷ ಣಾ ಕೋಟೆಯನ್ನು ಭೇದಿಸಿ ಗೋಲ್‌ ಗಳಿಸಿದರು. ಇದಾದ ಮೂರೇ ನಿಮಿಷದಲ್ಲಿಕ್ಲೀಟನ್‌ ಸಿಲ್ವಾ ಅವರನ್ನು ತಡೆದ ಲಿಸ್ಟನ್‌ ಕೊಲಾಕೊ ರೆಫ್ರಿಯ ಕೆಂಗಣ್ಣಿಗೆ ಗುರಿಯಾಗಿ ಬ್ಲೂಸ್‌ಗೆ ಪೆನಾಲ್ಟಿ ಲಭಿಸುವಂತೆ ಮಾಡಿದರು. ಇದನ್ನು ಸಮರ್ಥವಾಗಿ ಬಳಸಿಕೊಂಡ ಕ್ಲೀಟನ್‌, 18ನೇ ನಿಮಿಷದಲ್ಲಿಗೋಲ್‌ ಬಾರಿಸಿ 1-1ರ ಹೋರಾಟಕ್ಕೆ ಸಾಕ್ಷಿಯಾದರು.
ಪಂದ್ಯ ಆರಂಭಗೊಂಡ 2ನೇ ನಿಮಿಷದಲ್ಲಿಬ್ಲೂಫ್ರಿ ಕಿಕ್‌ ಅವಕಾಶ ಗಿಟ್ಟಿಸಿತು. ಆದರೆ ರೋಶನ್‌ ನಾರೋಮ್‌ ಹೊಡೆದ ಗೋಲಿನ ಯತ್ನವನ್ನು ಎಟಿಕೆ ಗೋಲ್‌ ಕೀಪರ್‌ ಸಮರ್ಥವಾಗಿ ಹಿಮ್ಮೆಟ್ಟಿಸಿದರು. ಹೀಗಾಗಿ ಆರಂಭದಲ್ಲಿಮುನ್ನಡೆ ಗಳಿಸುವ ಅವಕಾಶ ಬ್ಲೂಕೈತಪ್ಪಿತು. ಇದಕ್ಕೂ ಮುನ್ನ ಮೂರಂಕದ ಗುರಿಯಲ್ಲಿಕಣಕ್ಕಿಳಿದ ಬಿಎಫ್‌ಸಿ ಟಾಸ್‌ ಗೆದ್ದು ಅಭಿಯಾನ ಆರಂಭಿಸಿತು. ಎಟಿಕೆಎಂಬಿ 4-4-2ರ ಮಾದರಿಯಲ್ಲಿಆಟ ಆರಂಭಿಸಿದರೆ, ಬ್ಲೂಸ್‌ ತನ್ನ ಎಂದಿನ 4-3-3 ಮಾದರಿಯಲ್ಲಿಆಟ ಆರಂಭಿಸಿತು.
ಬೆಂಗಳೂರು ಎಫ್‌ಸಿ ತನ್ನ ಮುಂದಿನ ಪಂದ್ಯದಲ್ಲಿಇದೇ 20ರಂದು ಬಂಬೋಲಿಮ್‌ನ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿಜಮ್ಶಡ್‌ಪುರ ಎಫ್‌ಸಿ ತಂಡದ ಸವಾಲು ಎದುರಿಸಲಿದೆ.

Malcare WordPress Security