ಸರ್ವಿಸಸ್ ತಂಡವನ್ನು 4-0 ಅಂತರದಲ್ಲಿಮಣಿಸುವುದರೊಂದಿಗೆ ಲೀಗ್ ಅಭಿಯಾನದಲ್ಲಿದಾಖಲೆಯ 2ನೇ ಜಯ ಗಳಿಸಿದ ಬ್ಲೂಪಡೆ
ಇಲ್ಲಿನ ಬೆಂಗಳೂರು ಫುಟ್ಬಾಲ್ ಕ್ಲಬ್‌ನಲ್ಲಿಮಂಗಳವಾರ ಎಎಸ್‌ಸಿ ಮತ್ತು ಸೆಂಟರ್ ಎಫ್‌ಸಿ ತಂಡವನ್ನು 4-0 ಗೋಲ್‌ಗಳಿಂದ ಮಣಿಸುವುದರೊಂದಿಗೆ ಬೆಂಗಳೂರು ಎಫ್‌ಸಿ ಬಿಡಿಎಫ್‌ಎ ಸೂಪರ್ ಡಿವಿಜನ್ ಲೀಗ್‌ನಲ್ಲಿಮತ್ತೆ ಗೆಲುವಿನ ಹಳಿಗೆ ಮರಳಿದೆ. ರಾಹುಲ್ ರಾಜು, ಜಗದೀಪ್ ಸಿಂಗ್, ಲಾಲ್ತಾಂಗ್ಲಿಯಾನ ಮತ್ತು ರಾಬಿನ್ ಯಾದವ್ ತಲಾ ಒಂದು ಗೋಲ್ ಗಳಿಸುವ ಮೂಲಕ ಬ್ಲೂಬಳಗಕ್ಕೆ ಪೂರ್ಣ ಅಂಕ ತಂದುಕೊಟ್ಟರು. ಇದರೊಂದಿಗೆ ಆಡಿದ ಐದು ಪಂದ್ಯಗಳಲ್ಲಿಎರಡು ಜಯ, ಎರಡು ಡ್ರಾ ಮತ್ತು ಒಂದು ಸೋಲು ಕಂಡಿರುವ ಬೆಂಗಳೂರು ತಂಡ ಒಟ್ಟು ಎಂಟು ಅಂಕಗಳನ್ನು ಹೊಂದಿದೆ.
ಟಾಸ್‌ನೊಂದಿಗೆ ಪಂದ್ಯ ಆರಂಭಿಸಿದ ಬ್ಲೂಬಳಗ ಪಂದ್ಯದ ಮೊದಲ ಇಪ್ಪತ್ತು ನಿಮಿಷ ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಇದರಲ್ಲಿಹಲವು ಬಾರಿ ಗೋಲಿನ ಅವಕಾಶಗಳನ್ನೂ ಸೃಷ್ಟಿಸಿತು. ಆರಂಭಿಕ ಗೋಲಿನ ಯತ್ನದಲ್ಲಿಬಿಎಫ್‌ಸಿ ಹಲವು ಬಾರಿ ಕಾರ್ನರ್ ಅವಕಾಶಗಳನ್ನು ಗಿಟ್ಟಿಸಿತು ಆದರೆ ಯಾವುದೇ ಲಾಭ ಪಡೆಯಲು ಸಾಧ್ಯವಾಗಿಲ್ಲಲ. 32ನೇ ನಿಮಿಷದಲ್ಲಿಎಎಸ್‌ಸಿ ತಂಡ ಗೋಲ್ ಗಳಿಕೆಯ ಉತ್ತಮ ಅವಕಾಶ ಗಿಟ್ಟಿಸಿತಾದರೂ ಮುನ್ನಡೆಯ ಲಾಭ ಗಿಟ್ಟಿಸಲು ಸಾಧ್ಯವಾಗಲಿಲ್ಲ.
ವಿರಾಮಕ್ಕೆ ಇನ್ನೊಂದು ನಿಮಿಷವಿರುವಾಗ ಬ್ಲೂಸ್ ಖಾತೆ ತೆರೆಯುವಲ್ಲಿಯಶಸ್ವಿಯಾಯಿತು. ಲಾಲ್ತಾಂಗ್ಲಿಯಾನಾ ನೀಡಿದ ಸುಂದರ ಪಾಸನ್ನು ರಾಹುಲ್ ಯಾವುದೇ ಪ್ರಮಾದ ಮಾಡದೆ ಗೋಲ್ ಗಳಿಸಿ ಬ್ಲೂಸ್‌ಗೆ 1-0 ಅಂತರದ ಮುನ್ನಡೆ ಕಲ್ಪಿಸಿದರು.
ಸರೋಜ್ ರಾಯ್ ಬಾಕ್ಸ್‌ನಲ್ಲಿದ್ದ ಕಾರಣ ಫ್ರೀಕಿಕ್ ಅವಕಾಶ ಗಿಟ್ಟಿಸಿದ ಎಎಸ್‌ಸಿ ಮತ್ತು ಸೆಂಟರ್ ದ್ವಿತೀಯ ಆರಂಭವಾದ 15ನೇ ನಿಮಿಷದಲ್ಲಿತಿರುಗೇಟು ನೀಡಲು ಉತ್ತಮ ಅವಕಾಶ ಹೊಂದಿತು. ಆದರೆ ಎದುರಾಳಿಯ ಎಲ್ಲಯತ್ನಗಳನ್ನು ಬಿಎಫ್‌ಸಿ ರಕ್ಷ ಣಾ ಬಳಗ ಬುಡಮೇಲು ಮಾಡಿತು. ರಾಹುಲ್ ಅವರನ್ನು ತಡೆಯುವ ಯತ್ನದಲ್ಲಿಎಎಸ್‌ಸಿ ಕೀಪರ್ ಮತುಮ್ ರಾಜ್ ಸಿಂಗ್ ಮುಂದಾದರು. ಗುರಿಯು ಸ್ಟ್ರೈಕರ್‌ನಿಂದ ದೂರ ಸರಿದರೂ ಜಗದೀಪ್‌ಗೆ ಅವಕಾಶ ಕಲ್ಪಿಸಿತು. ಕೂಡಲೇ ಎಚ್ಚೆತ್ತ ಜಗದೀಪ್ 65ನೇ ನಿಮಿಷದಲ್ಲಿಗೋಲ್ ಬಾರಿಸಿ ಬ್ಲೂಬಳಗದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.
ಪಂದ್ಯ ಮುಕ್ತಾಯಕ್ಕೆ ಹತ್ತು ನಿಮಿಷಗಳಿರುವಾಗ ಬೆಂಗಳೂರು ತಂಡ ಬೊಯಿಟೆ ಬದಲಿಗೆ ಮೊನಿರುಲ್ ಮೊಲ್ಲಾಹಾಗೂ ಎಡ್ವಿನ್ ರೊಸ್ಸಾರಿಯೋ ಬದಲಿಗೆ ವಿನಿಥ್ ಅವರನ್ನು ಕರೆ ತಂದಿತು. ಲಾಲ್ಲಾಂಗ್ಲಿಯಾನಾ ಮತ್ತು ರಾಬಿನ್ ಯಾದವ್ ಕೇವಲ ನಾಲ್ಕು ನಿಮಿಷಗಳ ಅಂತರದಲ್ಲಿಎರಡು ಗೋಲ್ ಗಳಿಸಿ ಬೆಂಗಳೂರು ತಂಡದ ಗೆಲುವಿನ ಅಂತರವನ್ನು 4-0ಗೆ ವಿಸ್ತರಿಸಿದರು.
ಬೆಂಗಳೂರು ಎಫ್‌ಸಿ ಡಿಸೆಂಬರ್ 10ರಂದು ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿಎಡಿಇ ಎಫ್‌ಸಿ ತಂಡದ ಸವಾಲು ಎದುರಿಸಲಿದೆ.