ಶಿವಶಕ್ತಿ, ಥೋಯಿ ಗುರಿ ನಿಶ್ಚಲ, ಬೆಂಗಳೂರು ಎಫ್‌ಸಿ 3-0 ಗೆಲುವಿನೊಂದಿಗೆ ಪಂದ್ಯಾವಳಿಯಲ್ಲಿ ಮುನ್ನಡೆ.
ಬೆಂಗಳೂರು ಎಫ್‌ಸಿ ಶುಕ್ರವಾರ ಸತತ ಮೂರನೇ ಬಾರಿಗೆ ಬಿಡಿಎಫ್‌ಎ ಸೂಪರ್ ಡಿವಿಷನ್ ಅಲ್ಲಿ ಎಎಸ್‌ಸಿ ಮತ್ತು ಸೆಂಟರ್ ಎಫ್‌ಸಿ ವಿರುದ್ಧ 3-0 ಗೋಲುಗಳ ಅಂತರದ ಗೆಲುವಿನೊಂದಿಗೆ ಪ್ರಶಸ್ತಿಯತ್ತ ದಾಪುಗಾಲಿಟ್ಟಿದೆ. ಥೋಯ್ ಸಿಂಗ್ ಮತ್ತು ಶಿವಶಕ್ತಿ (2) ಅವರ ಗೋಲ್ ಕಾರಣದಿಂದ ಸಂದೇಶ್ ಭೋಯಿಟ್ ಅವರ ತಂಡ ಪೂರ್ಣ ಅಂಕ ಪಡೆಯಲು ಸಾಧ್ಯವಾಯ್ತು. ಆವೃತ್ತಿಯಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬ್ಲೂ ಕೋಲ್ಟ್ಸ್ ಆಟದ ಆರಂಭದಿಂದಲೂ ಹಿಡಿತ ಸಾಧಿಸಿದ್ದರು ಮತ್ತು ತಂಡದ ಅಗ್ರ ಸ್ಕೋರರ್ ಶಿವಶಕ್ತಿ ಅವರು ಎಎಸ್ಸಿ ರಕ್ಷಣಾಬಣದ ಮೇಲೆ ಒತ್ತಡ ಹೇರುತ್ತಲೇ ಇದ್ದರು. ಆಕಾಶ್‌ದೀಪ್ ಸಿಂಗ್ ಅವರನ್ನು ಚೆಂಡಿನೊಂದಿಗೆ ಕಂಡುಕೊಂಡು ಹೊಡೆತವನ್ನು ನಿರ್ಬಂಧಿಸಲಾಗಿ, ಅಂಕಗಳಿಸಲಾಗಲಿಲ್ಲ. ಮೊದಲ ಅವಧಿಯಲ್ಲಿ ಹಲವಾರು ಅವಕಾಶಗಳು ಸೃಷ್ಟಿಯಾದರೂ, ಎರಡೂ ತಂಡದ ರಕ್ಷಣೆ ಮನರಂಜನಾತ್ಮಕವಾಗಿತ್ತು. ಮೊದಲಾರ್ಧದಲ್ಲಿ ಗೋಲ್ ಇಲ್ಲದೆ ಎರಡೂ ತಂಡಗಳು ಕೊನೆಗೊಳಿಸಿದ್ದವು.
ಪುನರಾರಂಭದ ಹತ್ತು ನಿಮಿಷಗಳ ನಂತರ, ಥೋಯ್ ಸಿಂಗ್ ಮೂಲಕ ಬ್ಲೂ ಕೋಲ್ಟ್ಸ್ ಡೆಡ್ಲಾಕ್ ಅನ್ನು ಮುರಿಯಿತು. ನಂ.10 ಅಂಗಳದ ಎಡಭಾಗದಿಂದ ಶಿವಶಕ್ತಿಯ ನೇರವಾದ ಹೊಡೆತದೊಂದಿಗೆ ಚೆಂಡಿನ ಮೇಲೆ ಲಯ ಸಾಧಿಸಿ ಗೋಲ್ ಪೋಸ್ಟ್ ಅತ್ತ ಚೆಂಡನ್ನು ಎಎಸ್ಸಿ ಪಾಲಕ ಪ್ರೇಮ್‌ಚಂದ್ ಸಿಂಗ್ ಅವರನ್ನು ಹಿಮ್ಮೆಟ್ಟಿ ಅಂಕ ಗಳಿಸಿದರು.
ಕೇವಲ ನಾಲ್ಕು ನಿಮಿಷಗಳ ನಂತರ, ಆಕಾಶ್‌ದೀಪ್ ಬಲಗಡೆಯಿಂದ ಲೋ ಕ್ರಾಸ್ ಮೂಲಕ ಶಿವಶಕ್ತಿ ಅವರನ್ನು ಕಂಡುಕೊಂಡರು ಹತ್ತಿರದ ವ್ಯಾಪ್ತಿಯಲ್ಲಿದ್ದ ಶಿವಶಕ್ತಿ ಸ್ಪರ್ಶ ನೀಡಿ ಬ್ಲೂ ಕೋಲ್ಟ್ಸ್ ಪರ ತಮ್ಮ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಕಮಲೇಶ್ ಅವರ ಪಾಸ್ ನಿರ್ಜನ ಅಂಗಳದಲ್ಲಿ ಮಿಡ್ಫೀಲ್ಡರ್ ಅನ್ನು ಕಂಡುಕೊಂಡಾಗ ಆಕಾಶ್ ದೀಪ್ ಮತ್ತೆ ಚೆಂಡನ್ನು ತಲುಪಿಸಿದರು ಆದರೆ ಶಾಟ್ ಪೋಸ್ಟ್ನ ಹೊರಗೆ ದೂರದಲ್ಲಿ ಸರಿಯಿತು.
ಎಂಟು ನಿಮಿಷಗಳ ನಂತರ ಎಎಸ್ಸಿ ನಾಯಕ ರಾಬಿನ್ಸನ್ ಸಿಂಗ್ ಅವರ ರಕ್ಷಣಾಪಡೆಯ ದೋಷದ ಲಾಭ ಪಡೆದ ಶಿವಶಕ್ತಿ ಪಂದ್ಯದ ತನ್ನ ಎರಡನೆಯ ಗೋಲ್ ಕಂಡುಕೊಂಡರು. ಅಂಗಳದಂಚಿನ ಆಟಗಾರನನ್ನು ಮೀರಿ ನಂತರದಲ್ಲಿ ಕಡಿಮೆ ಅಂತರದಲ್ಲಿ ಬ್ಲೂ ಕೋಲ್ಟ್ಸ್ ಪರ ಪೋಸ್ಟ್ ಅಂಚಿನಲ್ಲಿ ಗೋಲ್ ಗಳಿಸಿದರು.
ಮಾರ್ಚ್ 4 ರಂದು ಎಂಇಜಿ ಮತ್ತು ಸೆಂಟರ್ ಎಫ್‌ಸಿ ವಿರುದ್ಧ ಬೆಂಗಳೂರು ಎಫ್‌ಸಿ ಆಡಲಿದ್ದಾರೆ.