ಎಎಫ್‌ಸಿ ಕಪ್ ಪ್ಲೇಆಫ್‌ ಪಂದ್ಯಗಳ ಹಿನ್ನೆಲೆಯಲ್ಲಿ ಬೆಂಗಳೂರು ಎಫ್‌ಸಿ ತರಬೇತಿಗೆ ಮರಳಿದೆ

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಬೆಂಗಳೂರು ಎಫ್‌ಸಿ ತಮ್ಮ ಪ್ರವಾಸದ ನಂತರ ಮನೆಯಂಗಳಕ್ಕೆ ಎಎಫ್‌ಸಿ ಕಪ್ ಅಭಿಯಾನದ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಮುಖ್ಯ ಕೋಚ್ ಮಾರ್ಕೊ ಪೆಜೈಯುಲಿ ಅವರ ಮಾರ್ಗದರ್ಶನದಲ್ಲಿ ಆರಂಭಿಸಿದ್ದಾರೆ ಮತ್ತು ಶುಕ್ರವಾರ ತಮ್ಮ ಇಂಡಿಯನ್ ಸೂಪರ್ ಲೀಗ್ ಆವೃತ್ತಿಯ ಆಟದ ಬಳಿಕ ಅಲ್ಪ ವಿರಾಮ ಮುಗಿಸಿಕೊಂಡು ಬ್ಲೂಸ್ ಮತ್ತೆ ಅಂಗಳಕ್ಕಿಳಿದಿದ್ದಾರೆ.

“ತಂಡದೊಂದಿಗಿನ ನನ್ನ ಮೊದಲ ತರಬೇತಿ ತುಂಬಾ ಚೆನ್ನಾಗಿತ್ತು ಮತ್ತು ತೀವ್ರವಾಗಿತ್ತು. ಇದು ವಿಭಿನ್ನ ಶೈಲಿಯ ತರಬೇತಿಯಾಗಿರಲಿದೆ ಮತ್ತು ತಂಡವು ಅದನ್ನು ಆನಂದದಿಂದ ಸ್ವೀಕರಿಸಲಿದೆ ಎಂದು ನಾನು ಭಾವಿಸಿದ್ದೆ ಮತ್ತು ಅದು ಹಾಗೆಯೇ ನಡೆಯಿತು. ಮೊದಲ ಕ್ಷಣದಿಂದಲೇ ಅವರು ತಮ್ಮ ನೂರು ಪ್ರತಿಶತ ಪರಿಶ್ರಮವನ್ನು ನೀಡಿದರು ಮತ್ತು ಅದನ್ನೇ ನಾನು ನಿರೀಕ್ಷಿಸುತ್ತಿದ್ದೆ ”ಎಂದು ಪೆಜೈಯುಲಿ ಮಾಧ್ಯಮಗಳೊಂದಿಗಿನ ಸಂವಾದದಲ್ಲಿ ಹೇಳಿದರು.

ಶುಕ್ರವಾರದ ತರಬೇತಿಯಲ್ಲಿ 22 ಆಟಗಾರರು ಭಾಗವಹಿಸಿದ್ದರು, ಇದರಲ್ಲಿ ಕ್ಲಬ್‌ನ ಬಿಎಫ್‌ಸಿ ಬಿ ತಂಡದಿಂದ ಜಗದೀಪ್ ಸಿಂಗ್, ದಮೈತ್‌ಫಾಂಗ್ ಲಿಂಗ್ಡೊ ಮತ್ತು ಒಮೆಗಾ ವನ್ಲಾಲ್ರುಯಿಟುವಾಂಗಾ ಸೇರಿಕೊಂಡಿದ್ದರು.

“ನಾನು ಬಿಎಫ್‌ಸಿ ಬಿ ತಂಡ ಆಡಿದ ಎರಡು ಪಂದ್ಯಗಳನ್ನು ಗಮನಿಸಿದ್ದೇನೆ ಮತ್ತು ಅವರೊಂದಿಗೆ ಒಮ್ಮೆ ಮಾತನಾಡಲು ನನಗೆ ಸಾಧ್ಯವಾಯಿತು. ಇಂದು ತರಬೇತಿಯ ಅವಧಿಯಲ್ಲಿ ಯುವ ತಂಡದ ಕೆಲವು ಆಟಗಾರರನ್ನು ಹೊಂದಿದ್ದೆವು ಮತ್ತು ಮೊದಲ ತಂಡದ ಬಾಗಿಲು ಅವರಿಗೆ ಯಾವಾಗಲೂ ತೆರೆದಿರುತ್ತದೆ ಎಂದು ಅವರು ತಿಳಿಯಬೇಕೆಂದು ನಾನು ಬಯಸುತ್ತೇನೆ. ಅಸಿಸ್ಟೆಂಟ್ ಕೋಚ್ ಆಗಿ (ನೌಶಾದ್) ಮೂಸಾ ಇರುವುದು ನನಗೆ ಸಹಾಯ ಮಾಡುತ್ತದೆ ಏಕೆಂದರೆ ನಮ್ಮ ಭವಿಷ್ಯವು ಯುವ ವಿಭಾಗದಲ್ಲಿದೆ, ”ಎಂದು ಅವರು ವಿವರಿಸಿದರು.

COVID-19 ಪರೀಕ್ಷೆಯ ಸೋಂಕು ದೃಢಪಟ್ಟ ನಂತರದಲ್ಲಿ ನಾಯಕ ಸುನಿಲ್ ಛೇತ್ರಿ ಚೇತರಿಸಿಕೊಳ್ಳುತ್ತಿದ್ದಾರೆ. ಹೊಸ ಆಟಗಾರ ಯ್ರೊಂಡು ಮುಸಾವು-ಕಿಂಗ್ ಇನ್ನೂ ತಂಡಕ್ಕೆ ಸೇರ್ಪಡೆಯಾಗಿಲ್ಲ. ಬ್ಲೂಸ್‌ನ ಎಎಫ್‌ಸಿ ಕಪ್ ಪ್ರಾಥಮಿಕ ಹಂತದ ಎರಡು ಪಂದ್ಯಗಳು ಏಪ್ರಿಲ್ 14 ರಂದು ಗೋವಾದ ಜಿಎಂಸಿ ಬಾಂಬೋಲಿಮ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Malcare WordPress Security