ಐವರು ಬಿಎಫ್‌ಸಿ ಬಿ ತಂಡದ ಆಟಗಾರರು ಮಾರ್ಕೊ ಪೆಜೈಯುಲಿ ನೇತೃತ್ವದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದು ತ್ರಿಭುವನ್ ಆರ್ಮಿ ಎಫ್‌ಸಿಯನ್ನು ಎದುರಿಸಲು ತಯಾರಾಗುತ್ತಿದ್ದಾರೆ.
ಏಪ್ರಿಲ್ 14 ರಂದು ನೇಪಾಳದ ತ್ರಿಭುವನ್ ಆರ್ಮಿ ಎಫ್‌ಸಿ ವಿರುದ್ಧ ಮೊದಲ ಹಂತದ ಎರಡು ಪಂದ್ಯಗಳೊಂದಿಗೆ ಪ್ರಾರಂಭವಾಗುವ 2021ರ ಎಎಫ್‌ಸಿ ಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳಿಗಾಗಿ ತಮ್ಮ 29 ಮಂದಿಯ ತಂಡವನ್ನು ಬೆಂಗಳೂರು ಎಫ್‌ಸಿ ಗುರುವಾರ ಪ್ರಕಟಿಸಿದ್ದು, ಐದು ಮಂದಿ ರಿಸರ್ವ್ ತಂಡದ ಆಟಗಾರರು ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಹೆಡ್ ಕೋಚ್ ಮಾರ್ಕೊ ಪೆಜೈಯುಲಿ ಬ್ಲೂಸ್‌ನ ಉಸ್ತುವಾರಿ ವಹಿಸಿದ ನಂತರದಲ್ಲಿ ಮೊದಲ ಪಂದ್ಯಕ್ಕೆ ಸಿದ್ಧತೆ ನಡೆಯುತ್ತಿದೆ.
ಕ್ಲಬ್‌ನ ಮೀಸಲು ತಂಡದಲ್ಲಿ ತೇರ್ಗಡೆಯಾದವರಲ್ಲಿ ಗೋಲ್‌ಕೀಪರ್ ಶರೋನ್ ಪಡಟ್ಟಿಲ್, ಮಿಡ್‌ಫೀಲ್ಡರ್‌ಗಳಾದ ದಮೈತ್‌ಫಾಂಗ್ ಲಿಂಗ್ಡೊ ಮತ್ತು ಮುಹಮ್ಮದ್ ಇನಾಯತ್, ಜೊತೆಗೆ ಸ್ಟ್ರೈಕರ್‌ಗಳಾದ ಆಕಾಶ್‌ದೀಪ್ ಸಿಂಗ್ ಮತ್ತು ಬಿ ಡಿ ಎಫ್ ಎ ಸೂಪರ್ ಡಿವಿಷನ್ ಲೀಗ್ ಅಲ್ಲಿ ಅತಿ ಹೆಚ್ಚು ಅಂಕಗಳಿಸಿದ ಶಿವಶಕ್ತಿ ನಾರಾಯಣನ್ ಮುಖ್ಯ ತಂಡದ ಭಾಗವಾಗಲಿದ್ದಾರೆ.
ಗ್ಯಾಬೊನೀಸ್ ಡಿಫೆಂಡರ್ ಯೊರುಂಡು ಮುಸಾವು ಕಿಂಗ್ ಬ್ಲೂಸ್‌ನ ವಿದೇಶಿ ಆಟಗಾರರೊಂದಿಗೆ ಸೇರ್ಪಡೆಯಾಗಿದ್ದಾರೆ, ಅವರು ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ತಂಡದ ಜುವಾನ್ ಗೊನ್ಜಾಲೆಜ್, ಕ್ಲೀಟನ್ ಸಿಲ್ವಾ ಮತ್ತು ಎರಿಕ್ ಪಾರ್ಟಲು ಅವರನ್ನು ಸೇರಿಕೊಂಡಿದ್ದಾರೆ. ನಾಯಕ ಸುನಿಲ್ ಛೇತ್ರಿ ಅವರು ಕಾಂಟಿನೆಂಟಲ್ ಫುಟ್‌ಬಾಲ್‌ನ ಈ ಏಳನೇ ಆವೃತ್ತಿಯಲ್ಲಿಯೂ ತಂಡವನ್ನು ಮುನ್ನಡೆಸಲಿದ್ದಾರೆ, 36 ವರ್ಷದ ತಂಡದ ನಾಯಕ ಗೋವಾದಲ್ಲಿ ತಂಡವನ್ನು ಸೇರಿಕೊಂಡಿದ್ದು, ಅಲ್ಲಿ ಈ ಅಭಿಯಾನಕ್ಕಾಗಿ ಸಿದ್ಧತೆಗಳನ್ನು ಉತ್ತಮವಾಗಿಯೇ ನಡೆಸಿಕೊಳ್ಳುತ್ತಿದ್ದಾರೆ.
ಏಪ್ರಿಲ್ 14 ರಂದು ಬಂಬೋಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ತ್ರಿಭುವನ್ ಆರ್ಮಿ ಎಫ್‌ಸಿ ವಿರುದ್ಧ ಬ್ಲೂಸ್ ತಮ್ಮ ಮೊದಲ ಹಂತದ ಎರಡು ಪಂದ್ಯಗಳನ್ನು ಆಡಲಿದ್ದು, ಪ್ರೇಕ್ಷಕರಿಗೆ ಆಟವನ್ನು ಕಣ್ತುಂಬಿಕೊಳ್ಳುವ ಅವಕಾಶ ಇರುವುದಿಲ್ಲ.
ಗೋಲ್ಕೀಪರ್ಸ್: ಗುರ್‌ಪ್ರೀತ್ ಸಿಂಗ್ ಸಂಧು, ಲಾಲ್ತುಮ್ಮಾವಿಯಾ ರಾಲ್ಟೆ, ಲಾರಾ ಶರ್ಮಾ, ಶರೋನ್ ಪಡಟ್ಟಿಲ್
ಡಿಫೆಂಡರ್ಸ್: ರಾಹುಲ್ ಭೆಕೆ, ಪ್ರತೀಕ್ ಚೌಧರಿ, ಜುವಾನ್ ಗೊನ್ಜಾಲೆಜ್, ವುಂಗ್‌ಗಯಂ ಮುಯಿರಾಂಗ್, ಅಜಿತ್ ಕುಮಾರ್, ಆಶಿಕ್ ಕುರುನಿಯನ್, ಜೋ ಜೊಹರ್ಲಿಯಾನಾ, ಪರಾಗ್ ಶ್ರೀವಾಸ್, ಯೊರುಂಡು ಮುಸಾವ್ ಕಿಂಗ್, ಬಿಸ್ವಾ ಡರ್ಜಿ
ಮಿಡ್‌ಫೀಲ್ಡರ್‌ಗಳು: ಎರಿಕ್ ಪಾರ್ತಲು, ಸುರೇಶ್ ವಾಂಗ್ಜಮ್, ಹರ್ಮನ್‌ಜೋತ್ ಖಬ್ರಾ, ನಮ್‌ಗ್ಯಾಲ್ ಭುಟಿಯಾ, ಇಮ್ಯಾನ್ಯುಯೆಲ್ ಲಾಲ್‌ಚಾಂಚುಹಾ, ದಮೈತ್‌ಫಾಂಗ್ ಲಿಂಗ್ಡೊ, ಮುಹಮ್ಮದ್ ಇನಾಯತ್
ಫಾರ್ವರ್ಡ್ಗಳು: ಸುನಿಲ್ ಛೇತ್ರಿ, ಎಡ್ಮಂಡ್ ಲಲ್ರಿಂಡಿಕಾ, ಉದಂತ ಸಿಂಗ್, ಕ್ಲೀಟನ್ ಸಿಲ್ವಾ, ಲಿಯಾನ್ ಅಗಸ್ಟೀನ್, ನೌರೆಮ್ ರೋಶನ್ ಸಿಂಗ್, ಶಿವಶಕ್ತಿ ನಾರಾಯಣನ್, ಆಕಾಶ್‌ದೀಪ್ ಸಿಂಗ್
ಮುಖ್ಯ ತರಬೇತುದಾರ: ಮಾರ್ಕೊ ಪೆಜೈಯುಲಿ
ಸಹಾಯಕ ಕೋಚ್: ನೌಶಾದ್ ಮೂಸಾ