ಎಂಇಜಿ ವಿರುದ್ಧ ಬ್ಲೂಸ್ ಪಡೆಗೆ 3-0 ಅಂತರದ ಜಯ

ಲಾಲ್ತಾಂಗ್ಲಿಯಾನಾ, ಥೋಯ್, ಬಿಸ್ವಾ ಗೋಲ್ ಬಿಡಿಎ್ ಎ ಸೂಪರ್ ಡಿವಿಜನ್ ಲೀಗ್‌ನಲ್ಲಿ ಮೊದಲ ಜಯ ಗಳಿಸಿದ ಬೆಂಗಳೂರು ಎ್ ಸಿ

ಬೆಂಗಳೂರು ುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಂಇಜಿ ವಿರುದ್ಧ 3-0 ಅಂತರದಲ್ಲಿ ಏಕಪಕ್ಷೀಯ ಜಯ ದಾಖಲಿಸುವುದರೊಂದಿಗೆ ಬೆಂಗಳೂರು ಎ್ ಸಿ ಬಿಡಿಎ್ ಎ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿದೆ.
ಪಂದ್ಯದ ಮೊದಲಾರ್ಧದಲ್ಲಿ ಲಾಲ್ತಾಂಗ್ಲಿಯಾನಾ (32ನೇ ನಿಮಿಷ) ಮತ್ತು ಥೋಯ್ (45ನೇ ನಿಮಿಷ) ಸಿಡಿಸಿದ ಎರಡು ಗೋಲ್‌ಗಳಿಂದ ದ್ವಿತೀಯಾರ್ಧ ಆರಂಭಿಸಿದ ಬೆಂಗಳೂರು ತಂಡ, ಪೂರ್ಣ ಅಂಕ ಕಲೆಹಾಕುವ ಮುನ್ನ ಪಂದ್ಯದ ಕೊನೆಯ ಕ್ಷಣದಲ್ಲಿ ಬಿಸ್ವಾ ಒಂದು ಗೋಲ್ ದಾಖಲಿಸಿದರು.
ಮಿಡ್‌ಫೀಲ್ಡ್‌ನಲ್ಲಿ ಎಡ್ವಿನ್ ರೊಸ್ಸಾರಿಯೊ ಮತ್ತು ಬಿಸ್ವಾ ದಾರ್ಜೀ, ಬ್ಯಾಕ್‌ಲೈನ್‌ನಲ್ಲಿ ರಾಬಿನ ಯಾದವ್ ಮತ್ತು ಹರ್‌ಪ್ರೀತ್ ಸಿಂಗ್ ಅವರೊಂದಿಗೆ ಬೆಂಗಳೂರು ತಂಡ ಅಭಿಯಾನ ಆರಂಭಿಸಿತು. ಆರಂಭದ ಮೊದಲ ಅರ್ಧ ಗಂಟೆಯ ನಂತರ ಆತಿಥೇಯ ಆಟಗಾರರು ಚುರುಕಿನ ಆಟಕ್ಕೆ ಒತ್ತು ನೀಡಿದರು. ಇದರ ಲವಾಗಿ ಥೋಯ್ ಅವರಿಂದ ನೆರವು ಪಡೆದ ಲಾಲ್ತಾಂಗ್ಲಿಯಾನಾ ಎಂಇಜಿ ಗೋಲ್ ಕೀಪರ್ ಪ್ರಮೋದ್ ಜೋಸಿ ಅವರನ್ನು ಕಣ್ತಪ್ಪಿಸಿ ಬ್ಲೂಸ್ ಪಡೆಗೆ 1-0 ಅಂತರದ ಮುನ್ನಡೆ ಒದಗಿಸಿದರು.
ಇದಾದ ಕೆಲವೇ ಕ್ಷಣಗಳಲ್ಲಿ ಅಪಾಯಕಾರಿ ಪ್ರದೇಶದಲ್ಲಿ ರಾಬಿನ್ ಚೆಂಡಿನ ಮೇಲೆ ಹಿಡಿತ ಕಳೆದುಕೊಂಡರು. ಹೀಗಾಗಿ ಲೆಥೋಲೆನ್ ಗೋಲಿನ ಯತ್ನಕ್ಕೆ ಮುಂದಾದರು. ಆದರೆ ಕೂಡಲೇ ಎಚ್ಚೆತ್ತ ಬಿಎ್ಸಿಯ ರಕ್ಷಣಾ ಬಳಗ ಮತ್ತು ಕಸ್ಟೋಡಿಯನ್ ಎದುರಾಳಿಯ ಗೋಲನ್ನು ತಡೆಯುವಲ್ಲಿ ಯಶಸ್ವಿಯಾದರು.
ಇಬ್ಬರು ಎಂಇಜಿ ಆಟಾಗರರೊಂದಿಗೆ ಡಿಕ್ಕಿ ಹೊಡೆದ ನಂತರ ಸ್ಟ್ರೇಚರ್ ನಲ್ಲಿ ಬೇಕೆ ಒರಾಮ್ ಅವರನ್ನು ಒತ್ತಾಯ ಪೂರ್ವಕವಾಗಿ ಮೈದಾನದಿಂದ ಕರೆದೊಯ್ಯಬೇಕಾಯಿತು. ಹೀಗಾಗಿ ಮಿಡ್‌ಫೀಲ್ಡರ್ ಮ್ಯಾಕಾರ್ಟನ್ ನಿಕ್ಸನ್ ಅವರನ್ನು ಬದಲಾಯಿಸಲಾಯಿತು. ಥೋಯ್ ಸಿಂಗ್ ಅವರ ಗಾಳಿಯಲ್ಲಿನ ಸವಾಲನ್ನು ತಡೆಯುವ ಯತ್ನದಲ್ಲಿ ಜೋಶಿ ಪ್ರಮಾದ ಎಸಗಿದರು. ಹೀಗಾಗಿ ಎಂಇಜಿ ಹತ್ತು ಸದಸ್ಯರಿಗೆ ಕುಸಿಯಬೇಕಾಯಿತು. ಇದೇ ವೇಳೆ ಸ್ಪಾಟ್ ಕಿಕ್ ರಕ್ಷಿಸುವ ಸಲುವಾಗಿ ಸಬ್‌ಸ್ಟಿಟ್ಯೂಟ್ ಕೀಪರ್ ಪ್ರಶೋಭ್ ಅವರನ್ನು ಕರೆ ತರಲು ಎಂಇಜಿ ಮಿಶಾಲ್ ಅವರನ್ನು ಹಿಂಪಡೆಯಿತು. ಎದುರಾಳಿ ಸದಸ್ಯರ ವಿಲ ಯತ್ನದ ನಡುವೆಯೂ ಥೋಯ್ ಬ್ಲೂಸ್ ಪಡೆಯ ಗೋಲಿನ ಅಂತರವನ್ನು ಹೆಚ್ಚಿಸುವಲ್ಲಿ ಸಲರಾದರು.
ಮೊದಲಾರ್ಧ ನಿಧಾನಗತಿಯಿಂದ ಕೂಡಿದ ನಂತರ ದ್ವಿತೀಯಾರ್ಧ ಆರಂಭವಾದ 15 ನಿಮಿಷಗಳಲ್ಲಿ ಮ್ಯಾಕರ್ಟನ್ ಬಹುತೇಕ ಗೋಲಿನ ಯತ್ನ ಮಾಡಿದರು. ಆದರೆ ಕೀಪರ್ ಪ್ರಶೋಭ್ ಅದ್ಭುತವಾಗಿ ರಕ್ಷಣೆ ಮಾಡಿ ಎದುರಾಳಿ ಮುನ್ನಡೆಯನ್ನು ತಗ್ಗಿಸಿದರು. 69ನೇ ನಿಮಿಷದಲ್ಲೂ ಮ್ಯಾಕರ್ಟನ್ ಗೋಲಿನ ಯತ್ನ ಮಾಡಿದರೂ ಸಾಕಾರಗೊಳ್ಳಲಿಲ್ಲಘಿ. ಮ್ಯಾಕರ್ಟನ್ ಅವರ ಮೂರನೇ ಯತ್ನದಲ್ಲೂ ಚೆಂಡು ಕೂದಲೆಳೆಯ ಅಂತರದಲ್ಲಿ ಗೋಲ್ ಪೆಟ್ಟಿಗೆ ಹಾದು ಹೋಯಿತು. ಆದಾಗ್ಯೂ ಪಂದ್ಯದ ನಿಗದಿಯ ಅವಧಿಯ ಕೊನೆಯಲ್ಲಿ ಬಿಸ್ವಾ ತಂಡದ ಮೂರನೇ ಗೋಲ್ ಗಳಿಸಿ ಬ್ಲೂಸ್ ಪಡೆಯ ಜಯದ ಅಂತರವನ್ನು ವಿಸ್ತರಿಸಿದರು.
ಡಿಸೆಂಬರ್ 2ರಂದು ಬೆಂಗಳೂರು ಬಳಗ ಇದೇ ಮೈದಾನದಲ್ಲಿ ಬೆಂಗಳೂರು ಈಗಲ್ಸ್ ತಂಡದ ಸವಾಲು ಎದುರಿಸಲಿದೆ.

Malcare WordPress Security