ಆ್ಯಶಿಕ್ ಪ್ರಮಾದ, ಬಿಎ್ಸಿಗೆ ತಪ್ಪಿದ ಗೆಲುವು

ಕೇರಳ ಬ್ಲಾಸ್ಟರ್ಸ್ ಎ್ಸಿ ಜತೆ 1-1ರಲ್ಲಿ ಡ್ರಾ ಸಾಧಿಸಿ ಅಂಕ ಹಂಚಿಕೊಂಡ ಬೆಂಗಳೂರು ಎ್ಸಿ

ಬಂಬೊಲಿಮ್(ಗೋವಾ): ಪಂದ್ಯದ ಕೊನೆಯ ಕ್ಷಣದಲ್ಲಿ ಆ್ಯಶಿಕ್ ಕುರುನಿಯನ್ ಎಸಗಿದ ಪ್ರಮಾದದಿಂದಾಗಿ ಬೆಂಗಳೂರು ಎ್ಸಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಭಾನುವಾರ ಕೇರಳ ಬ್ಲಾಸ್ಟರ್ಸ್ ಎ್ಸಿ ವಿರುದ್ಧ ಪೂರ್ಣ 3 ಅಂಕ ಕಲೆಹಾಕುವ ಅದ್ಭುತ ಅವಕಾಶವನ್ನು ಕೈಚೆಲ್ಲಿ ನಿರಾಸೆ ಅನುಭವಿಸಿತು.
ಜಿಎಂಸಿ ಅಥ್ಲೆಟಿಕ್ಸ್ ಮೈದಾನದಲ್ಲಿ ನಡೆದ ದಕ್ಷಿಣ ಡರ್ಬಿಯಲ್ಲಿ ಪ್ರಥಮಾರ್ಧ ಗೋಲ್ ರಹಿತಗೊಂಡರೂ ದ್ವಿತೀಯಾರ್ಧದ 84ನೇ ನಿಮಿಷದಲ್ಲಿ ಆ್ಯಶಿಕ್ ಗೋಲಿನ ಖಾತೆ ತೆರೆದು ಬಿಎ್ಸಿ ಬಳಗದಲ್ಲಿ ಸಂಭ್ರಮ ತಂದರು. ಆದರೆ ಇದಾದ ನಾಲ್ಕೇ ನಿಮಿಷಗಳ ಅಂತರದಲ್ಲಿ ಗೋಲ್ ತಡೆಯುವ ಯತ್ನದಲ್ಲಿ ಎದುರಾಳಿಗೆ ಉಡೂಗೊರೆ ಗೋಲ್ ನೀಡಿದ ಕುರುನಿಯನ್ ತಂಡದ ಗೆಲುವಿಗೆ ಮುಳ್ಳಾದರು. ಹೀಗಾಗಿ ಉಭಯ ತಂಡಗಳು ತಲಾ 1 ಅಂಕ ಹಂಚಿಕೊಳ್ಳಬೇಕಾಯಿತು. ನಾಲ್ಕು ನಿಮಿಷಗಳ ಅಂತರದಲ್ಲಿ ಆ್ಯಶಿಕ್ ಗೌರವ ಹಾಗೂ ಆಗೌರವ ಎರಡಕ್ಕೂ ಒಳಗಾದರು. ಇದಕ್ಕೂ ಮುನ್ನ 82ನೇ ನಿಮಿಷದಲ್ಲಿ ಗೋಲ್ ಗಳಿಸುವ ಉತ್ತಮ ಅವಕಾಶವನ್ನು ಬಿಎ್ಸಿ ಕೈಚೆಲ್ಲಿತ್ತುಘಿ. ಈ ಡ್ರಾದೊಂದಿಗೆ ಒಟ್ಟಾರೆ 4 ಅಂಕ ಗಳಿಸಿರುವ ಬೆಂಗಳೂರು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿಯಿತು.
75ನೇ ನಿಮಿಷದಲ್ಲಿ ಉದಾಂತ ಬದಲು ಯುವ ಆಟಗಾರ ಶಿವಶಕ್ತಿ ಐಎಸ್‌ಎಲ್‌ಗೆ ಪದಾರ್ಪಣೆ ಮಾಡಿದರು. 60ರಿಂದ 65 ನಿಮಿಷಗಳ ಅಂತರದಲ್ಲಿ ಬಿಎ್ಸಿ ಆಟಗಾರರನ್ನು ಬದಲಿಸಿದರೆ, 70ರಿಂದ 75 ನಿಮಿಷಗಳಲ್ಲಿ ಕೇರಳ ಈ ಪ್ರಯತ್ನ ನಡೆಸಿತು. ಆದರೆ ಉಭಯ ತಂಡಗಳಿಗೆ ಇದರಿಂದ ಯಾವುದೇ ಲಾಭ ದೊರೆಯಲಿಲ್ಲಘಿ.
ಕೇರಳ ಸಹ ಬಿಎ್ಸಿ ರಕ್ಷಣಾ ಕೋಟೆಯನ್ನು ಭೇದಿಸಲು ಹರಸಾಹಸ ನಡೆಸಿತು. ಅದರಲ್ಲೂ 55ನೇ ನಿಮಿಷದಲ್ಲಿ ಫ್ರಿ ಕಿಕ್ ಮೂಲಕ ಲಭಿಸಿದ ಚೆಂಡನ್ನು ಆಡ್ರಿಯಾನ್ ಲೂನಾ ಗೋಲ್ ಪೆಟ್ಟಿಗೆಯತ್ತ ಹೊಡೆದರು. ಆದರೆ ಬಿಎ್ಸಿ ಡಿೆಂಡರ್ ಜಿಗಿದು ಚೆಂಡನ್ನು ತೆಡದರು. ಈ ವೇಳೆ ಚಿಮ್ಮಿದ ಚೆಂಡನ್ನು ಮಾರ್ಕೊ ಲೆಸ್ಕೊವಿಕ್ ಬೈಸಿಕಲ್ ಮಾದರಿಯಲ್ಲಿ ಚೆಂಡನ್ನು ಗುರಿಯತ್ತ ತಳ್ಳಿದರು. ಆದರೆ ಗುರ್‌ಪ್ರೀತ್ ಸಿಂಗ್ ಚೆಂಡನ್ನು ತೆಕ್ಕೆಗೆ ತೆಗೆದುಕೊಂಡು ಎದುರಾಳಿ ಮುನ್ನಡೆಯನ್ನು ತಗ್ಗಿಸಿದರು. ಇದಾದ ಮರು ನಿಮಿಷದಲ್ಲೇ ಲಭಿಸಿದ ಗೋಲಿನ ಅವಕಾಶವನ್ನು ಉದಾಂತ ಮತ್ತು ಕ್ಲೀಟನ್ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಲರಾದರು.
49ನೇ ನಿಮಿಷದಲ್ಲಿ ಉದಾಂತ ಸಿಂಗ್ ಮತ್ತು ಕ್ಲೀಟನ್ ಸಿಲ್ವಾ ಸಂಯೋಜಿತವಾಗಿ ನಡೆಸಿದ ಗೋಲಿನ ಯತ್ನ ಕೂಡ ಕೈಗೂಡಲಿಲ್ಲಘಿ. ಹೀಗಾಗಿ ಬಿಎ್ಸಿ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಮೊದಲಾರ್ಧ ಗೋಲ್ ರಹಿತಗೊಂಡ ಹಿನ್ನೆಲೆಯಲ್ಲಿ ಉಭಯ ತಂಡಗಳು ದ್ವಿತೀಯಾರ್ಧದಲ್ಲಿ ಮುನ್ನಡೆಗೆ ಒತ್ತು ನೀಡಿದೆವು. ಅದರಲ್ಲೂ ದ್ವಿತೀಯಾರ್ಧದಲ್ಲಿ ಹೆಚ್ಚು ಯಶಸ್ಸು ಗಳಿಸಿರುವ ಬಿಎ್ಸಿ ಗೋಲಿನ ಮೇಲೆ ಹಿಡಿತ ಸಾಧಿಸಲು ಮುಂದಾಯಿತು. ಇದರ ಪರಿಣಾಮ ಕ್ಲೀಟನ್ ಸಿಲ್ವಾ ಬಲಬದಿಯಲ್ಲಿ ಚೆಂಡನ್ನು ಗೋಲಿನ ಪೆಟ್ಟಿಯತ್ತ ಕೊಂಡೊಯ್ದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸುರೇಶ್ ವಾಂಗ್‌ಜಿಮ್ ಚೆಂಡನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಗೋಲಿನ ಯತ್ನ ನಡೆಸಿದರು. ಆದರೆ ಚೆಂಡು ಸ್ವಲ್ಪದರಲ್ಲೇ ಗುರಿ ತಪ್ಪಿತು.
ಆರಂಭದಿಂದಲೂ ಚೆಂಡಿನ ಮೇಲೆ ಪ್ರಭುತ್ವ ಸಾಧಿಸಿದ ಹೊರತಾಗಿಯೂ ಬೆಂಗಳೂರು ಎ್ಸಿ ಪ್ರಥಮಾರ್ಧಕ್ಕೆ ಮುನ್ನಡೆ ಗಳಿಸುವಲ್ಲಿ ಸಾಧ್ಯವಾಗಲ್ಲಿಘಿ. ಮೊದಲ 45 ನಿಮಿಷಗಳ ಆಟದಲ್ಲಿ ಒಮ್ಮೆ ಮಾತ್ರ ಗೋಲಿನ ಯತ್ನ ನಡೆಸಿದ ಪ್ರಬಲ ಬಿಎ್ಸಿ ಎದುರಾಳಿ ಕೇರಳ ರಕ್ಷಣಾ ಕೋಟೆಯನ್ನು ಭೇದಿಸಲು ಎಡವಿತು. ಆದರೆ ಕೇರಳ ಬ್ಲಾಸ್ಟರ್ಸ್ ತಂಡ ಬಿಎ್ಸಿಗೆ ಹೋಲಿಸಿದರೆ ಹೆಚ್ಚಿನ ಬಾರಿ ಗೋಲಿನ ಯತ್ನ ನಡೆಸಿತಾದರೂ ಒಮ್ಮೆಯೂ ಗೋಲ್ ದಾಖಲಿಸಲು ಕಸ್ಟೋಡಿಯನ್ ಗುರ್‌ಪ್ರೀತ್ ಸಿಂಗ್ ಆಸ್ಪದ ಮಾಡಿಕೊಡಲಿಲ್ಲಘಿ. ಉಭಯ ತಂಡಗಳು ಅತ್ಯುತ್ತಮ ಟ್ಯಾಕಲ್ ಮತ್ತು ಬ್ಲಾಕ್ಸ್‌ಗಳ ಮೂಲಕ ಬ್ಯಾಕ್‌ಲೈನ್‌ನಲ್ಲಿ ಮಿಂಚಿದೆವು. ಅದರಲ್ಲೂ ಮೊದಲಾರ್ಧಕ್ಕೆ ಸೇರ್ಪಡೆಯಾದ ಹೆಚ್ಚುವರಿ ನಾಲ್ಕು ನಿಮಿಷಗಳ ಅವಧಿಯಲ್ಲಿ ಕ್ಲೀಟನ್ ಮತ್ತು ಛೆಟ್ರಿ ನಡೆಸಿದ ಯತ್ನ ಕೈಗೊಡಲಿಲ್ಲಘಿ. ಹೀಗಾಗಿ ಉತ್ತರಾರ್ಧ 0-0 ಗೋಲ್ ರಹಿತಗೊಂಡಿತು.
ಇದಕ್ಕೂ ಮುನ್ನ 25ನೇ ನಿಮಿಷದಲ್ಲಿ ಬೆಂಗಳೂರು ಖಾತೆ ತೆರೆಯುವ ಅವಕಾಶ ಗಳಿಸಿತು. ಆದರೆ ನಾಯಕ ಸುನೀಲ್ ಛೆಟ್ರಿ ಇದರ ಪೂರ್ಣ ಲಾಭ ಗಳಿಸುವಲ್ಲಿ ವಿಲಗೊಂಡರು. 22ನೇ ನಿಮಿಷದಲ್ಲಿ ಎದುರಾಳಿ ತಂಡದ ಆಡ್ರಿಯಾನ್ ಲುನಾ ಟ್ಯಾಕಲ್ ವೇಳೆ ಕೆಳಗೆ ಬೀಳಿಸಿದ ಪರಿಣಾಮ ಬೆಂಗಳೂರು ತಂಡದ ಪ್ರತೀಕ್ ಚೌಧರಿ ರೆರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. ಇದು ಪಂದ್ಯದಲ್ಲಿ ಬಿಎ್ಸಿ ಪಡೆದ ಮೊದಲ ಯೆಲ್ಲೊ ಕಾರ್ಡ್.
ಪಂದ್ಯ ಆರಂಭವಾಗುತ್ತಿದ್ದಂತೆಯೇ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಕೇರಳದ ಜಾಕ್ಸನ್ ಸಿಂಗ್ ಉಭಯ ಬದಿಗಳಲ್ಲಿನ ಆಟಗಾರರ ನೆರವಿನಿಂದ ಚೆಂಡನ್ನು ಗೋಲಿನ ಪೆಟ್ಟಿಗೆಯತ್ತ ಕೊಂಡೊಯ್ದರಾದರೂ ಗುರಿಯತ್ತ ದೂಡುವಲ್ಲಿ ಎಡವಿದರು. ಇದಕ್ಕೂ ಮುನ್ನ 4-4-2 ಮಾದರಿಯಲ್ಲಿ ಕಣಕ್ಕಿಳಿದ ಕೇರಳ ಬ್ಲಾಸ್ಟರ್ಸ್ ಆಟ ಆರಂಭಿಸಿದರೆ, ಬಿಎ್ಸಿ 4-3-3 ಸಂಯೋಜನೆಯಲ್ಲಿ ಅಖಾಡಕ್ಕಿಳಿಯಿತು.
ಬೆಂಗಳೂರು ಎ್ಸಿ ಡಿಸೆಂಬರ್ 4ರಂದು ಬಂಬೊಲಿಮ್ ಕ್ರೀಡಾಂಗಣದಲ್ಲಿ ಮುಂಬೈ ಸಿಟಿ ಎ್ಸಿ ತಂಡವನ್ನು ಎದುರಿಸಲಿದೆ.

Malcare WordPress Security