ಆರು ಅಂಕಗಳ ರೋಚಕ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಜಯ ಗಳಿಸಿದ ಬೆಂಗಳೂರು

ಗುರಿ ತಪ್ಪದ ಕ್ಲೀಟನ್, ರಾಣೆ, ಇಬಾರಾ. ಹೈಲ್ಯಾಂಡರ್ಸ್ ವಿರುದ್ಧ 4-2 ಅಂತರದ ಜಯದೊಂದಿಗೆ ಇಂಡಿಯನ್ ಸೂಪರ್ ಲೀಗ್ ಅಲ್ಲಿ ವಿಜಯಯಾತ್ರೆ ಆರಂಭಿಸಿದ ಪೆಜೈಯುಲಿ.

ಬಾಂಬೋಲಿಮ್, ಗೋವಾ: ಬಾಂಬೋಲಿಮ್ನ ಜಿಎಂಸಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ನಡೆದ 2021-22ರ ಇಂಡಿಯನ್ ಸೂಪರ್ ಲೀಗ್ ಆರಂಭಿಕ ಪಂದ್ಯದಲ್ಲಿ, ಬೆಂಗಳೂರು ಎಫ್ಸಿ ತಂಡವು ಎದುರಾಳಿ ನಾರ್ತ್ ಈಸ್ಟ್ ಯುನೈಟೆಡ್ನ ಪ್ರಬಲ ಸವಾಲಿನ ಹೊರತಾಗಿಯೂ ಗೋಲ್ ಮಳೆ ಸುರಿಸಿ, ಖಾಲಿದ್ ಜಮೀಲ್ ಪಡೆಯನ್ನು 4-2 ಗೋಲುಗಳ ಅಂತರದಿಂದ ಸೋಲಿಸಿತು. ಹೈಲ್ಯಾಂಡರ್ಸ್ ಎರಡು ಬಾರಿ ಪಂದ್ಯಕ್ಕೆ ಮರಳಿದರಾದರೂ, ಬ್ಲೂಸ್ ಯಾವುದೇ ತಡೆಯಿಲ್ಲದೆ ಮತ್ತೆರಡು ಬಾರಿ ಅಂಕ ಕಂಡುಕೊಂಡರು, ಇದರೊಂದಿಗೆ ತರಬೇತುದಾರ ಮಾರ್ಕೊ ಪೆಜೈಯುಲಿ ತಮ್ಮ ಮೊದಲ ಇಂಡಿಯನ್ ಸೂಪರ್ ಲೀಗ್ ನ ಪಂದ್ಯವನ್ನು ತಮ್ಮದಾಗಿಸಿಕೊಂಡರು.
ಪಂದ್ಯಾರಂಭಕ್ಕೂ ಮುನ್ನ ಪೆಜೈಯುಲಿ, ಬ್ರೆಜಿಲಿಯನ್ ಮಿಡ್ಫೀಲ್ಡರ್ ಬ್ರೂನೋ ರಾಮೈರೆಸ್ ಗೆ ತಂಡದ ಪರ ಆಡುವ ಚೊಚ್ಚಲ ಅವಕಾಶವನ್ನು ನೀಡಿದರು ಮತ್ತು ಯರೊಂಡು ಮುಸಾವು-ಕಿಂಗ್ ಮತ್ತು ಅಲನ್ ಕೋಸ್ಟಾ ಬ್ಲೂಸ್ ಬ್ಯಾಕ್ಲೈನ್ ಅನ್ನು ಮುನ್ನಡೆಸಿದರು. ಕ್ಲಿಟನ್ ಸಿಲ್ವಾ, ಸುನಿಲ್ ಛೇತ್ರಿ ಮತ್ತು ಉದಾಂತ ಸಿಂಗ್ ಅಟ್ಯಾಕ್ ಅಲ್ಲಿ ಆರಂಭಿಸಿದರೆ, ಜಯೇಶ್ ರಾಣೆ, ಸುರೇಶ್ ವಾಂಗ್ಜಮ್ ಮತ್ತು ರಾಮೈರೆಸ್ ಬೆಂಗಳೂರಿನ ಮಿಡ್ಫೀಲ್ಡ್ನಲ್ಲಿ ಕಣಕ್ಕಿಳಿಸಿದರು.
ನಾರ್ತ್ಈಸ್ಟ್ ಯುನೈಟೆಡ್ ನ ಬ್ಯಾಕ್ಲೈನ್ ಅನ್ನು ಬೇಧಿಸಿ ಸುಭಾಶಿಶ್ ರಾಯ್ ಚೌಧರಿ ಅವರನ್ನು ಸುತ್ತುವರಿಯುವಲ್ಲಿ ಕ್ಲೀಟನ್ ಸಿಲ್ವಾ ಯಶಸ್ವಿಯಾದರು. ಇದರೊಂದಿಗೆ ಬ್ಲೂಸ್ 14 ನೇ ನಿಮಿಷದಲ್ಲಿ ಅಂಕ ಗಳಿಸಿ ತಮ್ಮ ಮೊದಲು ಮುನ್ನಡೆಯನ್ನು ಸಾಧಿಸಿದರು. ಕೆಲವೇ ಕ್ಷಣಗಳಲ್ಲಿ, ಸುಹೈರ್ ವಡಕ್ಕೆಪೀಡಿಕಾ ನೀಡಿದ ಪಾಸ್ ಪಡೆದ ದೇಶೋರ್ನ್ ಬ್ರೌನ್ ಅವರು ಗುರ್ಪ್ರೀತ್ ಸಿಂಗ್ ಸಂಧು ಅವರನ್ನು ತಪ್ಪಿಸಿ ಗೋಲ್ ಗಳಿಸಿ ಹೈಲ್ಯಾಂಡರ್ಸ್ಗೆ ಅಂಕಗಳಲ್ಲಿ ಸಮಾನತೆ ಕಾಪಾಡಿಕೊಳ್ಳಲು ಅನುವಾದರು.
ಅದೃಷ್ಟ ಮತ್ತು ದುರದೃಷ್ಟಗಳ ಸಂಯೋಜನೆ ಬೆಂಗಳೂರಿಗೆ ಮತ್ತೊಮ್ಮೆ ಮುನ್ನಡೆ ಸಾಧಿಸಲು ಅನುಕೂಲವಾಯ್ತು, ಆಶಿಕ್ ಕುರುಣಿಯನ್ ಅವರ ಕ್ರಾಸ್ ಗುರಿ ತಲುಪದೇ ಅಂಗಳದಲ್ಲಿ ಕ್ರಾಸ್ ಬಾರ್ ಗೆ ಮರಳಿತು. ರಿಬೌಂಡ್ನಲ್ಲಿ ಉದಾಂತ ಅವರ ಹೊಡೆತವನ್ನು ಚೌಧರಿ ಅವರು ಲೈನ್ನಲ್ಲಿ ತಡೆದರು, ಇದರಿಂದಾಗಿ ಮಶೂರ್ ಶೆರೀಫ್ ತಮ್ಮ ನೆಟ್ಗೆ ಅದನ್ನು ಗುರಿ ಇಡುವಂತಾಯಿತು.
ನಾರ್ತ್ ಈಸ್ಟ್ ತಂಡವು ಮತ್ತೊಮ್ಮೆ ಒಗ್ಗೂಡಿ ಬ್ಲೂಸ್ ಅನ್ನು ಎಡಬದಿಯಿಂದ ಎದುರಿಸಿದರು, ವಡಕ್ಕೆಪೀಡಿಕಾ ಗೆ ಹೆಚ್ಚಿನ ಅವಕಾಶ ಒದಗಿಬಂದಿತ್ತು. ವಿಂಗರ್ ನ ಕ್ರಾಸ್ ಅನ್ನು ಆಶಿಕ್ ಅಡ್ಡಗಟ್ಟಿದರು, ಆದರೆ ಅದು ಮಾರ್ಟಿನಿಕ್ವಾಯ್ಸ್ ನ ಸ್ಟ್ರೈಕರ್ ಮಥಿಯಾಸ್ ಕೊರಿಯರ್ ಗೆ ತಲುಪಿಸಿದಂತಾಯಿತು, ಅವರು ಮತ್ತೊಮ್ಮೆ ತಮ್ಮ ಶಾಟ್ ಅನ್ನು ಪೋಕ್ ಮಾಡುವ ಮೂಲಕ ಗುರ್ಪ್ರೀತ್ ರನ್ನು ಯಾಮಾರಿಸಿ ಅಂಕ ಗಳಿಸಿದರು.
ಬ್ಲೂಸ್ ಒಗ್ಗಟ್ಟಿನಿಂದ ಮುನ್ನುಗ್ಗಿ ಅಂತರವನ್ನು ಕಾಯ್ದುಕೊಂಡರು, ಜಯೇಶ್ ರಾಣೆ ಮೂಲಕ ತಮ್ಮ ಮೂರನೇ ಗೋಲ್ ಗಳಿಸುವುದರೊಂದಿಗೆ ಬ್ಲೂಸ್ ಮತ್ತೊಮ್ಮೆ ಮುನ್ನಡೆ ಸಾಧಿಸಿತು. ಈ ಹಿಂದೆ ಬ್ಲೂಸ್ಗಾಗಿ ತನ್ನ ಎಎಫ್ಸಿ ಕಪ್ ನ ಚೊಚ್ಚಲ ಪಂದ್ಯದಲ್ಲಿ ಸ್ಕೋರ್ ಮಾಡಿದ್ದ ಈ ಮಿಡ್ಫೀಲ್ಡರ್, ಬಾಕ್ಸ್ ನ ಹೊರಗಿನಿಂದ ಹೊಡೆದ ರಭಸದ ಹೊಡೆತವು ನೆಟ್ ಅನ್ನು ಸೇರುವುದರೊಂದಿಗೆ ಪೆಜೈಯುಲಿ ತಂಡಕ್ಕೆ ವಿರಾಮಕ್ಕೂ ಮುನ್ನ ಮುನ್ನಡೆ ದೊರೆಯಿತು.
ಒಂದು ಗಂಟೆಯ ಆಟದ ನಂತರ ಪೆಜೈಯುಲಿ ಎರಡು ಬದಲಾವಣೆಗಳನ್ನು ಮಾಡಿದರು. ಉದಾಂತ ಮತ್ತು ಮುಸಾವು-ಕಿಂಗ್ ಬದಲಿಗೆ ಲಿಯಾನ್ ಅಗಸ್ಟಿನ್ ಮತ್ತು ಪ್ರತೀಕ್ ಚೌಧರಿಯನ್ನು ಅಂಗಳಕ್ಕೆ ಕರೆತರಲಾಯಿತು. ಸ್ವಲ್ಪ ಸಮಯದ ನಂತರ, ಲಿಯಾನ್ ಗುರ್ಜಿಂದರ್ರಿಂದ ತಡವಾದ ಟ್ಯಾಕಲ್ ಪಡೆದ ಕಾರಣ ವಿಂಗರ್ಗೆ ಮುಂದುವರಿಯಲು ಸಾಧ್ಯವಾಗಲಿಲ್ಲ ಹಾಗಾಗಿ ಜರ್ಮನ್-ಇಟಾಲಿಯನ್ ಮತ್ತೊಂದು ಬದಲಾವಣೆಗೆ ಒತ್ತಾಯಿಸಲ್ಪಟ್ಟರು.
ಇಬಾರಾ ಅವರ ಮೊದಲ ಹೊಡೆತ ನೇರವಾಗಿ ಗೋಲ್ ಮೂಲಕ ಬಂದಿತು, ಆದರೆ ರೆಫರಿಯ ಸಹಾಯಕರು ಆಫ್ಸೈಡ್ ಎಂದು ಫ್ಲ್ಯಾಗ್ ತೋರಿದರು, ರೀಪ್ಲೇಯಲ್ಲಿ ಸ್ಟ್ರೈಕರ್ ಅಂಗಾಳದೊಳಗೆ ಸಾಲಿನಲ್ಲಿರುವಂತೆಯೇ ತೋರಿಸಿತು. . ಆದಾಗ್ಯೂ, ಇಬಾರಾ ಮತ್ತೆ ಅವಕಾಶ ಪಡೆದರು, ಅವರು ಕೋಸ್ಟಾದಿಂದ ಪಾಸ್ಗೆ ಓಡಿ ನಾರ್ತ್ ಈಸ್ಟ್ ಡಿಫೆಂಡರ್ ಜೆಸ್ಟಿನ್ ಜಾರ್ಜ್ ಅವರ ಕಾಲುಗಳ ಮೂಲಕ ಶೂಟ್ ಮಾಡಿದಾಗ, ಸುಭಾಶಿಶ್ ಅವರ ತಪ್ಪು ಹೆಜ್ಜೆಗಳಿಂದ ಅಂಕ ಪಡೆದರು.
ಬ್ಲೂಸ್ ಪಂದ್ಯದ ಉಳಿದ ಭಾಗವನ್ನು ಬಿರುಸಾಗಿ ಅಂಕ ಗಳಿಸುವ ಮೂಲಕ ಆಟವನ್ನ ತನ್ನ ಹತೋಟಿಯಲ್ಲಿಟ್ಟುಕೊಂಡಿತ್ತು, ಇದರೊಂದಿಗೆ ಅಂಕಪಟ್ಟಿಯಲ್ಲಿ ಎಟಿಕೆ ಮೋಹನ್ ಬಗಾನ್ ನೊಂದಿಗೆ ಸ್ಥಾನ ಹಂಚಿಕೊಂಡಿತು. ಮುಂದಿನ ಪಂದ್ಯದಲ್ಲಿ ಬೆಂಗಳೂರು ತಂಡವು ಒಡಿಶಾ ಎಫ್ಸಿ ಯನ್ನು ನವೆಂಬರ್ 24 ರಂದು ತಿಲಕ್ ಮೈದಾನದಲ್ಲಿ ಎದುರಿಸಲಿದೆ.
ಅಂತಿಮ ಸ್ಕೋರ್: ಬೆಂಗಳೂರು ಎಫ್ಸಿ 4 (14’ ಸಿಲ್ವಾ, 23 ಮಶೂರ್ (ಒಜಿ), 42’ ರಾಣೆ, 81’ ಪ್ರಿನ್ಸ್) ನಾರ್ತ್ ಈಸ್ಟ್ ಯುನೈಟೆಡ್ 2 (17’ ಬ್ರೌನ್, 25’ ಕೊರಿಯರ್)

Malcare WordPress Security