ಆತ್ಮವಿಶ್ವಾಸದಲ್ಲಿದ್ದ ಬೆಂಗಳೂರಿಗೆ ಸೋಲಿನ ಆಘಾತ

ಮಧ್ಯಂತರ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ ಮೂಸ ನವಯುವ ಆಟಗಾರರಿಗೆ ಈಸ್ಟ್ ಬೆಂಗಾಲ್ ವಿರುದ್ಧ ಆಡುವ ಅವಕಾಶ ನೀಡಿದರು. ಪಂದ್ಯದ ದ್ವಿತೀಯಾರ್ಧದಲ್ಲಿ ಹೋರಾಟದ ಆಟ ಕಂಡರೂ ಸೋಲು ಅತಿಥೇಯರ ಬೆನ್ನುಬಿಡಲಿಲ್ಲ.

ಮಾರ್ಗೋವಾ: ಬೆಂಗಳೂರು ಎಫ್ ಸಿ ತಂಡವು ಮಧ್ಯಂತರ ಮುಖ್ಯ ಕೋಚ್ ಮೂಸ ಮಾರ್ಗದರ್ಶನದಲ್ಲಿ ತಂಡ ಕಟ್ಟುವುದರೊಂದಿಗೆ ಆವೃತ್ತಿಯನ್ನು ಪುನರಾರಂಭಿಸಿದರು ಮತ್ತು ಈಸ್ಟ್ ಬೆಂಗಾಲ್ ವಿರುದ್ಧ 1-0 ಅಂತರದಿಂದ ಫತೋರ್ದಾ ಅಂಗಳದಲ್ಲಿ ಶನಿವಾರ ಸೋಲನುಭವಿಸಿದರು. ಸ್ಟೈನ್ಮನ್ 20ನೆ ನಿಮಿಷದಲ್ಲಿ ಗಳಿಸಿದ ಗೋಲ್ ಇಂದಿನ ಪಂದ್ಯದ ಫಲಿತಾಂಶಕ್ಕೆ ಮುಖ್ಯ ಕಾರಣವಾಯ್ತು. ಬೆಂಗಳೂರು ಹಲವು ಯುವ ಪ್ರತಿಭೆಗಳನ್ನು ಅಂಗಳಕ್ಕೆ ಕರೆತಂದರಾದರೂ ಪಂದ್ಯದ ಮೇಲೆ ಹಿಡಿತ ಸಾಧಿಸಲು ಕಷ್ಟಪಟ್ಟರು. ನವ ಆಟಗಾರರೊಂದಿಗೆ ಪಂದ್ಯದ ದ್ವಿತೀಯಾರ್ಧದಲ್ಲಿ ಅಲ್ಪ ಚೇತರಿಕೆ ಕಂಡರೂ ಪಂದ್ಯದ ಕೊನೆಯಲ್ಲಿ ಗೋಲ್ ಪಡೆಯಲಾಗದೆ ಹೆಣಗಿದರು.

ಸೋಲಿನ ಪರಿಣಾಮ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಬೆಂಗಳೂರು ತಂಡ 6ನೆ ಸ್ಥಾನದಲ್ಲಿದ್ದು, ಮೂರೇ ದಿನಗಳಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಮುಂದಿನ ಪಂದ್ಯವನ್ನು ಮೂಸ ಅತೀ ಸೂಕ್ಷ್ಮವಾಗಿ ನಿರ್ವಹಿಸಬೇಕಾಗಿದೆ.

ಎರಿಕ್ ಪಾರ್ತಲು ಅಮಾನತುಗೊಂಡ ನಂತರ ತಂಡಕ್ಕೆ ಇಂದು ಮರಳಿದ್ದರೆ ಸ್ಥಾನ ಬಿಟ್ಟುಕೊಟ್ಟ ಹರ್ಮನ್‌ಜೋತ್ ಖಾಬ್ರಾ ಪಂದ್ಯದಿಂದ ಹೊರಗುಳಿದಿದ್ದರು. ಪರಾಗ್ ಶ್ರೀವಾಸ್ ಮತ್ತು ಅಜಿತ್ ಕುಮಾರ್ ಈ ಆವೃತ್ತಿಯಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದರು ಮತ್ತು ಕ್ಲೀಟನ್ ಸಿಲ್ವಾ ಸ್ಟ್ರೈಕರ್ ಆಗಿ ಪಂದ್ಯ ಪ್ರಾರಂಭಿಸಿದರು. ಕ್ರಿಸ್ಟಿಯನ್ ಆಪ್ಸೆತ್ ಮತ್ತು ದೇಶೋರ್ನ್ ಬ್ರೌನ್ ಅವಕಾಶಕ್ಕಾಗಿ ಕಾಯುತ್ತಾ ಪಂದ್ಯದಿಂದ ಹೊರಗುಳಿದಿದ್ದರು. ಎದುರಾಳಿ ತಂಡದಲ್ಲಿ, ರಾಬಿ ಫೌಲರ್ ತಮ್ಮ ತಂಡದಲ್ಲಿ ಏಕೈಕ ಬದಲಾವಣೆಯೊಂದಿಗೆ ಆರಂಭಿಕ ಹನ್ನೊಂದರಲ್ಲಿ ಆರನ್ ಜೋಶುವಾ ಹಾಲೊವೇ ಬದಲಾಗಿ ಜಾಕ್ವೆಸ್ ಮಾಘೋಮಾ ಅವರಿಗೆ ಆಡುವ ಅವಕಾಶ ನೀಡಿದ್ದರು.

ಇಂದಿನ ಪಂದ್ಯದಲ್ಲಿ ಬ್ಲೂಸ್ ತಮ್ಮ ಮೊದಲ ಗೋಲ್ನತ್ತದ ಹೊಡೆತವನ್ನು ದಾಖಲಿಸಲು ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಂಡಿದ್ದರು. ಈಸ್ಟ್ ಬೆಂಗಾಲ್ ತಂಡದ ರಕ್ಷಣೆಯಲ್ಲಿ ದೇಬ್ಜಿತ್ ಮಜುಂದರ್ ಅವರನ್ನು ಪರೀಕ್ಷಿಸುವಂತೆ ನಾಯಕ ಸುನೀಲ್ ಚಿಪ್ ಮಾಡುವ ಮೂಲಕ ಗೋಲ್ ಗಾಗಿ ಯತ್ನಿಸಿದರೂ ಫಲಿಸಲಿಲ್ಲ.

ಬೆಂಗಳೂರು ತಂಡ ಕಠಿಣಯತ್ನ ಮತ್ತು ಎದುರಾಳಿಯ ದಿಟ್ಟ ಆಟವನ್ನು ಬೆನ್ನಟ್ಟಿದರೂ, 20 ನೇ ನಿಮಿಷದಲ್ಲಿ ಪ್ರವಾಸಿ ತಂಡ ಅದ್ಭುತ ಒಗ್ಗಟ್ಟಿನ ಪ್ರದರ್ಶನ ನೀಡಿ ಬೆರಗು ಮೂಡಿಸಿದರು. ಅಂಕಿತ್ ಮುಖರ್ಜಿ ನೀಡಿದ ಕ್ರಾಸ್ ಅನ್ನು ನಾರಾಯಣ್ ದಾಸ್ ಪಡೆದುಕೊಂಡರು ಮತ್ತು ಅವರು ಕ್ರಾಸ್ ಅನ್ನು ಮ್ಯಾಟಿ ಸ್ಟೈನ್ಮನ್ ಗೆ ತಲುಪಿಸಿದರೆ, ಅವರು ತಮ್ಮ ಬೂಟ್ನ ಹೊರಭಾಗದಿಂದ ತಳ್ಳಿ ಗೋಲ್ ಆಗಿ ಪರಿವರ್ತಿಸಿದರು. ಇದರಿಂದ ಈಸ್ಟ್ ಬೆಂಗಾಲ್ 1-0 ಅಂತರದೊಂದಿಗೆ ಪಂದ್ಯದಲ್ಲಿ ಮುನ್ನಡೆ ಸಾಧಿಸಿತು.

33 ನೇ ನಿಮಿಷದಲ್ಲಿ ಬ್ಲೂಸ್ ಅಂಕ ಪಡೆಯುವ ಅವಕಾಶವಿತ್ತು. ಪಾರ್ತಲು – ಕ್ಲೀಟನ್‌ರೊಂದಿಗೆ ನೇರಾನೇರ ಒನ್-ಟೂ ಆಟವಾಡುತ್ತಿದ್ದಾಗ, ಗೋಲ್ ಪೋಸ್ಟ್ ಅತ್ತ ಚೆಂಡು ಹೊಡೆದರು ಆದರೆ ರಾಸ್ಪಿಂಗ್ ಡ್ರೈವ್ ಅನ್ನು ದೇಬ್ಜಿತ್ ದೂರತಳ್ಳಿದರು. ಛೇತ್ರಿ ಚೆಂಡಿನ ಮೇಲೆ ಹಿಡಿತ ಸಾಧಿಸಿ ಗೋಲ್ ಗಳಿಸಬಹುದಿತ್ತಾದರೂ ಕ್ರಾಸ್ ಅವರನ್ನು ತಲುಪುವ ಮುನ್ನವೇ ಎದುರಾಳಿ ತಂಡದಿಂದ ತಡೆಯಲಾಗಿತ್ತು.

ಮೊದಲಾರ್ಧದಲ್ಲಿ ಬೆಂಗಳೂರಿನ ಅಂತಿಮ ಅವಕಾಶ ಹಲ್ಫ್ ಟೈಮ್ ಗೆ ಮೂರು ನಿಮಿಷಗಳಿದ್ದಂತೆಯೇ ಬಂದಿತು. ಪರಾಗ್‌ ಅವರ ಲೂಪ್ ಕ್ರಾಸ್ ಅನ್ನು ಛೇತ್ರಿ ಪೋಸ್ಟ್ನ್ ದೂರದ ಅಂಚಿನಲ್ಲಿ ಪಡೆದುಕೊಂಡರು ಆದರೆ ಸ್ಕಾಟ್ ನೆವಿಲ್ಲೆ ತಮ್ಮ ಹೆಡರ್ ಮೂಲಕ ಚೆಂಡನ್ನು ನಿರ್ಬಂಧಿಸಿದರು ಇದರಿಂದ ಈಸ್ಟ್ ಬೆಂಗಾಲ್ ವಿರಾಮಕ್ಕೆ ಮುನ್ನ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಪಂದ್ಯ ಪುನರಾರಂಭವಾದ ಮೂರು ನಿಮಿಷಗಳ ನಂತರ ನಾಯಕ ಛೇತ್ರಿ ಗೋಲ್ ಗಳಿಸುವ ವಿಶ್ವಾಸದಲ್ಲಿ ಅವಕಾಶಗಳನ್ನು ಹುಡುಕುತ್ತಿದ್ದರು. ಬದಲಿ ಆಟಗಾರನಾಗಿ ಅಂಗಳಕ್ಕೆ ಇಳಿದಿದ್ದ ಆಪ್ಸೆತ್ ಅವರೊಂದಿಗೆ ಒನ್ ಟೂ ಪಾಸ್ ಪಡೆಯುತ್ತಿದ್ದ ನಾಯಕ ವೇಗ ಪಡೆದು ಗೋಲ್ ಯತ್ನ ಮಾಡಿದರು ಆದರೆ ಪೋಸ್ಟ್ ನ ಎತ್ತರಕ್ಕೆ ಜಿಗಿದ ದೇಬ್ಜಿತ್ ಗೋಲ್ ಅವಕಾಶ ತಡೆದು ಅಂಕ ಪಡೆಯದಂತೆ ಅಡ್ಡಲಾಗಿ ನಿಂತರು.

ಮತ್ತೆ ಆಟದ ಒಂದು ಗಂಟೆಯ ಸಂಧರ್ಭದಲ್ಲಿ ಈ ಇಬ್ಬರೂ ಆಟಗಾರರು ಎದುರಾಳಿಗೆ ಆಘಾತನೀಡುವತ್ತ ಮುಂದಾದರು. ಛೇತ್ರಿ ತಮ್ಮ ಸ್ಥಾನದಿಂದ ಮುನ್ನುಗ್ಗಿ ಬಲವಾದ ಶಾಟ್ ತೆಗೆದುಕೊಂಡರಾದರೂ ಈಸ್ಟ್ ಬೆಂಗಾಲ್ ಕೀಪರ್ ಅತ್ಯುತ್ತಮವಾಗಿ ಬ್ಲಾಕ್ ಮಾಡಿ ತಮ್ಮ ಸ್ಥಿರ ಪ್ರದರ್ಶನ ತೋರಿದರು.

ದ್ವಿತೀಯಾರ್ಧದಲ್ಲಿ ಆಕರ್ಷಕ ಅವಕಾಶ ಎದುರಾಳಿ ತಂಡಕ್ಕೆ ಪಾನೀಯ ವಿರಾಮದ ನಂತರದಲ್ಲಿ ದೊರೆತಿತ್ತು. ಬೂಟಿಯ ಇಂದು ಆವೃತ್ತಿಗೆ ಪಾದಾರ್ಪಣೆ ಮಾಡಿದ್ದರು ಮತ್ತು ಮೊದಲಲ್ಲೇ ಮಾಡಿದ ಸಣ್ಣ ತಪ್ಪಿನಿಂದಾಗಿ ಎದುರಾಳಿ ತಂಡದ ಬ್ರೈಟ್ ಚೆಂಡು ಪಡೆದು ಸತತ ಓಟ ಮುಂದುವರೆಸಿ ಗೋಲ್ ಪಡೆಯುವತ್ತ ದಾಪುಗಾಲಿಟ್ಟಿದ್ದರು. ಯಾರಿಗೂ ಜಗ್ಗದೆ ಕೊನೆಗೆ ಗುರ್ಪ್ರೀತ್ ಸಿಂಗ್ ಸಾಂಧು ಅವರನ್ನೂ ಮೀರು ಮುನ್ನುಗ್ಗುವಂತಿದ್ದರು ಆದರೆ ಕೀಪರ್ ನ ಚಾಚಿದ ಕಾಲು ತಾಗಿ ಎದುರಾಳಿ ತಂಡದ ಗೋಲ್ ಅವಕಾಶ ಕೈಜಾರಿತ್ತು.

ಐದು ನಿಮಿಷಗಳ ಹೆಚ್ಚುವರಿ ಆಟದೊರೆತು, ತಂಡದ ಪರ ಕೊನೆಯ ಶಾಟ್ ಪಡೆದ ಪಾರ್ತಲು ಚೆಂಡನ್ನು ಗೋಲ್ ಪೋಸ್ಟ್ ಮೇಲೆ ಹಾರಿಸಿದರು. ಇದರೊಂದಿಗೆ ತಂಡ ಕೊನೆಯವರೆಗೂ ಯಾವುದೇ ಗೋಲ್ ಪಡೆಯಲಾಗದೆ ಪಂದ್ಯದ ಸಂಪೂರ್ಣ ಅಂಕಗಳನ್ನು ಎದುರಾಳಿಗೆ ಬಿಟ್ಟುಕೊಟ್ಟು ಸರಣಿಯಲ್ಲಿ ಸತತ ನಾಲ್ಕನೇ ಬಾರಿಗೆ ಸೋಲನುಭವಿಸಿತು.

ಬೆಂಗಳೂರು ತಮ್ಮ ಮುಂದಿನ ಮುಖಾಮುಖಿಯಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಜನವರಿ 12ರಂದು ತಿಲಕ್ ಮೈದಾನದಲ್ಲಿ ಎದುರಿಸಲಿದೆ.

Malcare WordPress Security