ಸೆಮಿಫೈನಲ್ ಮೊದಲ ಚರಣದಲ್ಲಿ ಎಟಿಕೆ ವಿರುದ್ಧ ಕಾರ್ಲೊಸ್ ಕ್ವಾಡ್ರಟ್ ಬಳಗಕ್ಕೆ 1-0 ಅಂತರದ ಭರ್ಜರಿ ಗೆಲುವು
ಬೆಂಗಳೂರು: ಜಮೈಕಾ ಸ್ಪೆಕರ್ ದೇಶಾನ್ ಬ್ರೌನ್ (31ನೇ ನಿಮಿಷ) ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಬೆಂಗಳೂರು ಎಫ್‌ಸಿ ತಂಡ ಐಎಸ್ಎಲ್ ಟೂರ್ನಿಯ ಸೆಮಿಫೈನಲ್ ಎರಡರ ಮೊದಲ ಚರಣದಲ್ಲಿ ಎಟಿಕೆ ವಿರುದ್ಧ ಗೆಲುವು ಸಾಸಿ ಮುನ್ನಡೆ ಗಳಿಸಿದೆ.
ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ವೇಟ್ ಪಂದ್ಯದಲ್ಲಿ ಮಿಂಚಿದ ಆತಿಥೇಯ ಬೆಂಗಳೂರು ಎಫ್ ಸಿ 1-0 ಗೋಲಿನಿಂದ ಕೋಲ್ಗೊತಾ ಮೂಲದ ಎಟಿಕೆಗೆ ಸೋಲುಣಿಸಿತು. ಇದರೊಂದಿಗೆ ಇದೇ 8ರಂದು ಕೋಲ್ಗೊತಾದಲ್ಲಿ ನಡೆಯಲಿರುವ ಸೆಮಿಫೈನಲ್ ದ್ವಿತೀಯ ಚರಣದ ಪಂದ್ಯಕ್ಕೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.
84ನೇ ನಿಮಿಷದಲ್ಲಿ ಚೆಂಡಿನ ಮೇಲಿನ ನಿಯಂತ್ರಣಕ್ಕೆ ಯತ್ನಿಸಿ ಎಟಿಕೆ ತಂಡದ ಆಟಗಾರರನ್ನು ಕೆಳಗೆ ಬೀಳಿಸಿದ ಪರಿಣಾಮ ಬಿಎಫ್ಸಿ ಆಟಗಾರ ನಿಶು ಕುಮಾರ್ ರೆಫರಿಯಿಂದ ನೇರ ರೆಡ್ ಕಾರ್ಡ್‌ಗೆ ಗುರಿಯಾದರು. ಹೀಗಾಗಿ ಹತ್ತು ಮಂದಿಯಿಂದ ಎದುರಾಳಿ ತಂಡವನ್ನು ಎದುರಿಸಬೇಕಾದ ಸಂಕಷ್ಟ ಬ್ಲೂಸ್‌ಗೆ ಎದುರಾಯಿತು. ಆದಾಗ್ಯೂ ರಕ್ಷಣಾತ್ಮಕ ಆಟವಾಡಿದ ಬ್ಲೂಸ್ ಎದುರಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಸಫಲಗೊಂಡಿತು.
ದ್ವಿತೀಯಾರ್ಧದ ಆರಂಭದಲ್ಲೇ ಬೆಂಗಳೂರು ಎಫ್ಸಿ ಬದಲಾವಣೆಗೆ ಒತ್ತು ನೀಡಿತು. ಹೀಗಾಗಿ ಸೆರಾನ್ ಮೈದಾನದಿಂದ ಹೊರಬಂದರೆ ಫಟೇರಾ ಅಂಗಣಕ್ಕಾಗಿಮಿಸಿದರು. ಪ್ರಥಮಾರ್ಧದಲ್ಲಿ ಮುನ್ನಡೆ ಸಿಕ್ಕ ಕಾರಣ ಬಿಎಫ್ಸಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರೆ, ಎಟಿಕೆ ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿತು. ಹೀಗಾಗಿ ಉಭಯ ತಂಡಗಳ ನಡುವಿನ ಹೋರಾಟ ತೀವ್ರಗೊಂಡಿತು. 75ನೇ ನಿಮಿಷದಲ್ಲಿ ಪಟೇರ್ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು.
ಇದಕ್ಕೂ ಮುನ್ನ ನಿರೀಕ್ಷೆಯಂತೆಯೇ ತವರಿನಂಗಳ ಮತ್ತು ತವರು ಅಭಿಮಾನಿಗಳ ಅಭೂತಪೂರ್ವ ಬೆಂಬಲ ಪಡೆದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ, ಪಂದ್ಯದ ಪ್ರಥಮಾರ್ಧಕ್ಕೆ 1-0 ಅಂತರದಲ್ಲಿ ಪ್ರಾಬಲ್ಯ ಮೆರೆಯಿತು. ಪಂದ್ಯದ 7ನೇ ನಿಮಿಷದಲ್ಲೇ ಬಿಎಫ್‌ಸಿ ಗೋಲಿನ ಖಾತೆ ತೆರೆಯುವ ಎಲ್ಲ ಅವಕಾಶಗಳನ್ನು ಸೃಷ್ಟಿಸಿತು. ಆದರೆ ರಾಹುಲ್ ಭೆಕೆ ಹೆಡರ್ ಮೂಲಕ ಯತ್ನ ಮಾಡಿದರು. ಆದರೆ ಚೆಂಡು ಗೋಲ್ ಪೆಟ್ಟಿಗೆ ಸನಿಹದಲ್ಲಿ ಹಾದು ಹೋಯಿತು. ಹೀಗಾಗಿ ಆರಂಭದಲ್ಲೇ ಮುನ್ನಡೆ ಪಡೆಯುವ ಆತಿಥೇಯರ ಕನಸು ಈಡೇರಲಿಲ್ಲ.
17ನೇ ನಿಮಿಷದಲ್ಲಿ ಪ್ರವಾಸಿ ತಂಡದ ಪರ ಡೇವಿಡ್ ವಿಲಿಯಮ್ಪನ್ ಗೋಲ್ ಗಳಿಕೆ ಯತ್ನ ಮಾಡಿದರು. ಆದರೆ ಇಡೀ ಲೀಗ್‌ನಲ್ಲೇ ರಕ್ಷಣೆಯಲ್ಲಿ ಪ್ರಬಲ ತಂಡ ಎನಿಸಿರುವ ಬೆಂಗಳೂರು ಎಫ್ ಸಿ ಇದಕ್ಕೆ ಅವಕಾಶ ಕಲ್ಪಿಸಲಿಲ್ಲ. ಹೀಗಾಗಿ ಉಭಯ ತಂಡಗಳ ಹೋರಾಟ ಗೋಲ್ ರಹಿತವಾಗಿ ಮುಂದುವರಿಯಿತು.
ಆಕ್ರಮಣಕಾರಿ ಆಟದೊಂದಿಗೆ ಎಟಿಕೆ ತಂಡದ ರಕ್ಷಣಾ ಪಡೆಗೆ ಪದೇ ಪದೇ ಆತಂಕವೊಡ್ಡಿದ ಕೋಚ್ ಕಾರ್ಲೊಸ್ ಕ್ವಾಡ್ರಟ್ ಗರಡಿಯಲ್ಲಿ ಪಳಗಿರುವ ಬ್ಲೂಸ್ ಮತ್ತೆ 24ನೇ ನಿಮಿಷದಲ್ಲಿ ಗೋಲ್ ಗಳಿಸುವ ಉತ್ತಮ ಅವಕಾಶ ಸೃಷ್ಟಿಸಿತು. ಆದರೆ ಎದುರಾಳಿಯ ಕಸ್ಟೋಡಿಯನ್ ಅರಿಂಧಮ್ (ಗೋಲ್‌ಕೀಪರ್) ಪ್ರಬಲವಾಗಿ ಹಿಮ್ಮೆಟ್ಟಿಸಿ ತಂಡದ ಹಿನ್ನಡೆಯನ್ನು ತಡೆದರು. ಆದಾಗ್ಯೂ 31ನೇ ನಿಮಿಷದಲ್ಲಿ ಆತಿಥೇಯರ ದಾಳಿಯನ್ನು ಅರಿಂಧಮ್ ಹಿಮ್ಮೆಟ್ಟಿಸುವಲ್ಲಿ ವಿಫಲಗೊಂಡರು.ನಾಯಕ ಸುನಿಲ್ ಛಟ್ರಿ , ಎರಿಕ್ ಪಾರ್ತಾಲು ಮತ್ತು ಜುವಾನಾನ್ ನೆರವಿನಿಂದ ಜಮೈಕಾ ಸ್ಪೆಕರ್ ದೇಶಾನ್ ಬ್ರೌನ್ ಪ್ರವಾಸಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಬ್ಲೂಸ್‌ಗೆ 1-0 ಅಂತರದ ಮುನ್ನಡೆ ಕಲ್ಪಿಸಿದರು. ನಂತರ ವಿರಾಮಕ್ಕೂ ಮುನ್ನ ಆತಿಥೇಯ ತಂಡ ಹಿನ್ನಡೆ ತಗ್ಗಿಸಲು ನಡೆಸಿದ ಎಲ್ಲ ಯತ್ನಗಳನ್ನು ಛಿ ಬಳಗ ಪ್ರಬಲವಾಗಿ ಹಿಮ್ಮೆಟ್ಟಿಸಿತು.
ಉಭಯ ತಂಡಗಳ ಸೆಮಿಫೈನಲ್ ಪಂದ್ಯದ ದ್ವಿತೀಯ ಚರಣ ಮಾ. 8ರಂದು ಕೋಳ್ಕೊತಾದಲ್ಲಿ ನಡೆಯಲಿದೆ.