ಬ್ಲೂಸ್-ಎಟಿಕೆ ನಡುವೆ ಯುದ್ಧತಂತ್ರದ ಹೋರಾಟ

ಐಎಸ್ ಎಲ್ ಸೆಮಿಫೈನಲ್‌ನ ಮೊದಲ ಲೆಗ್‌ನಲ್ಲಿ ಕೋಲ್ಕಿತಾ ತಂಡದ ವಿರುದ್ದ ತವರಿನ ಲಾಭ ಪಡೆಯುವ ನಿರೀಕ್ಷೆಯಲ್ಲಿ ಬೆಂಗಳೂರು ಎಫ್‌ಸಿ

ಬೆಂಗಳೂರು: ಕಳೆದ ಬಾರಿಯ ಚಾಂಪಿಯನ್ ಬೆಂಗಳೂರು ಎಫ್ ಸಿ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್‌ನ ಸೆಮಿಫೈನಲ್ ವೇಳಾಪಟ್ಟಿಯ ಮೊದಲ ಲೆಗ್‌ನಲ್ಲಿ ಕೋಲ್ಗೊತಾ ಮೂಲದ ಎಟಿಕೆ ವಿರುದ್ಧ ಯುದ್ಧತಂತ್ರದ ಹೋರಾಟ ನಡೆಸುವ ಮೂಲಕ ತವರಿನಲ್ಲಿ ಪ್ರಭುತ್ವ ಸಾಸುವ ನಿರೀಕ್ಷೆಯಲ್ಲಿದೆ.

ಮುನ್ನಡೆಯೊಂದಿಗೆ ಮುಂದಿನ ವಾರ ಕೋಲ್ಗೊತಾ ಪ್ರಯಾಣಕ್ಕೆ ಕಾರ್ಲೊಸ್ ಕ್ವಾಡ್ರಟ್ ಬಳಗ ಎದುರು ನೋಡುತ್ತಿದೆ. ಆದರೆ ಮೊದಲ ಚರಣದ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ಹೊರಹಾಕಬೇಕಿದೆ. ಲೀಗ್ ಹಂತದಲ್ಲಿ ಹತ್ತು ದಿನಗಳಿಗೂ ಕಡಿಮೆ ಅವಯಲ್ಲಿ ಇದೇ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು , ಇತ್ತಂಡಗಳಿಗೂ ಫಲಿತಾಂಶದ ಬಗ್ಗೆ ಅರಿವಿದೆ. ಆದರೆ ಕಾರ್ಲೊಸ್ ಕ್ವಾಡ್ರಟ್ ಮತ್ತು ಆ್ಯಂಟಿನೊ ಲೋಪೆಜ್ ಹಬಾಸ್ ಬಳಗ ಅಂದಿನಿಂದಲೂ ಗಣನೀಯವಾಗಿ ಚೇತರಿಸಿಕೊಳ್ಳುತ್ತಿವೆ. ಒಂದೇ ಮಾದರಿಯ ಫುಟ್ಬಾಲ್ ಆಟದೊಂದಿಗೆ ಎರಡು ತಂಡಗಳು ಸೆಮಿಫೈನಲ್ಸ್ ಅಂಗಳಕ್ಕೆ ಬಂದಿವೆ ಎಂದು ಕ್ವಾಡ್ರಟ್ ಉಲ್ಲೇಖಿಸಿದ್ದಾರೆ.

“ಎರಡು ಸೆಮಿಫೈನಲ್ ಪಂದ್ಯಗಳನ್ನು ಒಂದೇ ರೀತಿಯ ಫುಟ್ಬಾಲ್ ಆಟವನ್ನು ಹೊಂದಿರುವ ತಂಡಗಳು ಸೆಣಸಾಟ ನಡೆಸಲಿವೆ. ಚೆನ್ನೈಯಿನ್ ಮತ್ತು ಗೋವಾ ದಾಳಿಗೆ ಆದ್ಯತೆ ನೀಡಿದರೆ, ನಾವು ಮತ್ತು ಎಟಿಕೆ ರಕ್ಷಣೆಗೆ ಆದ್ಯತೆ ನೀಡುತ್ತೇವೆ. ಹೀಗಾಗಿ ಈ ಹಂತದ ಸ್ಪರ್ಧೆಯಲ್ಲಿ ಉಭಯ ತಂಡಗಳು ತುಂಬಾ ತಾಂತ್ರಿಕ ಹೋರಾಟ ನಡೆಸಲಿವೆ,” ಎಂದು ಕ್ವಾಡ್ರಟ್ ಹೇಳಿದ್ದಾರೆ.

ಈ ಋತುವಿನ ಲೀಗ್ ಹಂತದಲ್ಲಿ ಅತ್ಯುತ್ತಮ ರಕ್ಷಣಾ ತಂಡ ಎನಿಸಿರುವ ಬೆಂಗಳೂರು ಎಫ್ಸಿ ಕೇವಲ 13 ಗೋಲ್‌ಗಳನ್ನು ಬಿಟ್ಟುಕೊಟ್ಟಿದೆ. ಇದೀಗ ಎಟಿಕೆಯ ಆಕ್ರಮಣಕಾರಿ ಜೋಡಿ ರಾಯ್ ಕೃಷ್ಣ ಮತ್ತು ಡೇವಿಡ್ ವಿಲಿಯಮ್ಸ್ ಅವರ ಆತಂಕವನ್ನು ಎದುರಿಸಲು ಬ್ಲೂಸ್ ಮತ್ತೊಮ್ಮೆ ಸಜ್ಜಾಗಿದೆ. ಫಿಜಿ ಮತ್ತು ಆಸ್ಟ್ರೇಲಿಯಾದ ಈ ಆಟಗಾರರು ಒಟ್ಟು 19 ಗೋಲ್ ಬಾರಿಸಿದರೆ, 9 ಬಾರಿ ಗೋಲಿಗೆ ನೆರವು ನೀಡಿದ್ದಾರೆ. ಋತುವಿನ ಗೋಲ್ ಸ್ಕೋರಿಂಗ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಕೃಷ್ಣ, ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಬೆಂಗಳೂರು ವಿರುದ್ಧ ಖಾತೆ ತೆರೆಯುವಲ್ಲಿ ವಿಫಲರಾಗಿದ್ದಾರೆ.
ಎಟಿಕೆ ಅರಿಂದಮ್ ಭಟ್ಟಾಚಾರ್ಜ ಅವರೊಂದಿಗೆ ಗೋಲ್ಡನ್ ಗ್ಲೆ ಸನಿಹದಲ್ಲಿರುವ ಹತ್ತು ಬಾರಿ ಕ್ಲೀನ್ ಶೀಟ್ ಒಡೆಯ ಗುರ್‌ಪ್ರೀತ್ ಸಿಂಗ್ ಸಂಧು, ಬೆಂಗಳೂರು ತಂಡದ – ಪ್ರಬಲ ಗೋಲ್ ಕೀಪರ್, ಜುವಾನಾನ್ ಗೋಗ್ರಲೆಜ್ ಮತ್ತು ಅಲ್ಬರ್ಟ್ ಸೆರಾನ್ ಮತ್ತು ರಾಹುಲ್ ಭೆಕೆ ಸಮ್ಮುಖದಲ್ಲಿ ಬ್ಲೂಸ್ ಕೀಪರ್ ಡಿಫೆನ್ಸ್‌ನ ಲಾಭ ಪಡೆಯುತ್ತಿದ್ದಾರೆ.

ಲೀಗ್ ಹಂತದಲ್ಲಿ 20ಕ್ಕಿಂತಲೂ ಕಡಿಮೆ ಗೋಲ್ ಬಿಟ್ಟುಕೊಟ್ಟ ಏಕೈಕ ತಂಡವೆನಿಸಿರುವ ಬೆಂಗಳೂರು ತಂಡದ ವಿರುದ್ದ ಸುಲಭವಾಗಿ ಗೋಲು ಗಳಿಸಲು ಸಾಧ್ಯವಿಲ್ಲ. ಜನವರಿಯಲ್ಲಿ ಬ್ಲೂಸ್‌ ತಂಡ ಸೇರಿದ ಜಮೈಕಾ ಸ್ಪೆಕರ್ ದೇಶಾನ್ ಬ್ರೌನ್, ಉತ್ತಮ ಲಯದಲ್ಲಿದ್ದು , ಲೀಗ್‌ನಲ್ಲಿ ಎರಡು ಬಾರಿ ಮತ್ತು ಎಎಫ್ಸಿ ಕಪ್‌ನಲ್ಲಿ ನಾಲ್ಕು ಬಾರಿ ಗೋಲ್ ದಾಖಲಿಸಿದ್ದಾರೆ. ಬ್ಲೂಸ್‌ಗೆ ಸ್ವಲ್ಪ ಆತಂಕಕಾರಿ ಅಂಶವೆಂದರೆ ವಾರದ ಮಧ್ಯದ ಎಎಫ್ಸಿ ಕಪ್‌ನಲ್ಲಿ ಹೋರಾಟದಲ್ಲಿ ಭಾಗಿಯಾಗಿದ್ದ ಕೆಲವು ಪ್ರಮುಖ ಸಿಬ್ಬಂದಿಗೆ ತೊಡಕ್ಕಾಗಿರುವುದು. ಬುಧವಾರ 90 ನಿಮಿಷಕ್ಕಿಂತಲೂ ಹೆಚ್ಚುವರಿಯಾಗಿ 30 ನಿಮಿಷ ಆಡಬೇಕಾಗಿ ಬಂದಿದ್ದು ದುರದೃಷ್ಟಕರ ಎಂದು ನಾನು ಭಾವಿಸುತ್ತೇನೆ, ಆ ಪಂದ್ಯದುದ್ದಕ್ಕೂ ಫೀಲ್ಡ್ನಲ್ಲಿದ್ದ ಕೆಲವರು ಭಾನುವಾರದ ಪಂದ್ಯದಲ್ಲಿಯೂ ಇರುತ್ತಾರೆ. ಆದರೆ ಈ ಪರಿಸ್ಥಿತಿಯನ್ನು ನಾವು ನಿಭಾಯಿಸಲಿದ್ದೇವೆ. ಒಳ್ಳೆಯ ವಿಷಯ ವೆಂದರೆ ನಮ್ಮ ಆಟಗಾರರು ದೈಹಿಕವಾಗಿ ಸಿದ್ದರಿದ್ದು ಯಾವುದೇ ಗಾಯಗೊಂಡಿಲ್ಲ,” ಎಂದು ಕ್ವಾಡ್ರಟ್ ತಿಳಿಸಿದ್ದಾರೆ.

ಇದೇ ವೇಳೆ ಕ್ವಾಡ್ರಟ್, ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡಿರುವ ನಾಯಕ ಸುನಿಲ್ ಛಟ್ರಿ ಭಾನುವಾರದ ಪಂದ್ಯಕ್ಕೆ ಲಭ್ಯವಿರುವುದಾಗಿ ಖಚಿತಪಡಿಸಿದ್ದಾರೆ. ಬುಧವಾರದ ಪಂದ್ಯದ ದ್ವಿತೀಯಾರ್ಧದಲ್ಲಿ ಮೈದಾನಕ್ಕಿಳಿದ ಚೆಟ್ರಿ, ಎಟಿಕೆ ವಿರುದ್ಧ ಆಡಲಿದ್ದಾರೆ, ಎಂದು ವಿವರಿಸಿದ್ದಾರೆ.

ಕೊನೆಯ ಎರಡು ಋತುಗಳಲ್ಲಿ ಬ್ಲೂಸ್ ತವರಿನಲ್ಲಿ ಸೆಮಿಫೈನಲ್‌ನ ದ್ವಿತೀಯ ಲೆಗ್ ಆಡಿದೆ. ಎರಡರಲ್ಲೂ ತನ್ನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದೆ. 2018ರಲ್ಲಿ ಎಫ್‌ಸಿ ಪುಣೆ ವಿರುದ್ದ 3-1ರಲ್ಲಿ ಗೆದ್ದರೆ, ನಂತರದ ಸಾಲಿನಲ್ಲಿ ನಾರ್ತ್‌ಈಸ್ಟ್ ವಿರುದ್ಧ 3-0 ಅಂತರದಲ್ಲಿ ಜಯ ಗಳಿಸಿದೆ. ಮೊದಲ ಲೆಗ್‌ನ ಅನುಕೂಲತೆ ಬಗ್ಗೆ ಪ್ರತಿಕ್ರಿಯಿಸಿದ ಕ್ವಾಡ್ರಟ್, “ ಕೊನೆಯಲ್ಲಿ ಇದು ಸುಮಾರು 180 ನಿಮಿಷಗಳ ಫುಟ್ಬಾಲ್ ಆಗಲಿದೆ. – ನಾವು ನಮ್ಮ ಎಎಫ್ ಸಿ ಕಪ್ ಪ್ಲೇ ಆಫ್ ಹಂತದಲ್ಲಿ ಎರಡನೇ ಹಂತವನ್ನು
ಮನೆಯಂಗಳದಲ್ಲಿ ಆಡಿದ್ದೇವೆ. ಆದರೆ ನಮ್ಮನ್ನು ಕೈಹಿಡಿಯಲಿಲ್ಲ. ಆದರೆ ಭಾನುವಾರ ತವರು ಅಭಿಮಾನಿಗಳ ಬೆಂಬಲವಿದ್ದು, ನಾವು ಫೈನಲ್‌ಗೆ ಮುನ್ನಡೆಯುತ್ತೇವೆ ಎಂದು ಹೇಳಬಲ್ಲೇ ,” ಎಂದಿದ್ದಾರೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.