ದೇಶಾನ್ ಬ್ರೌನ್ ಹೋರಾಟ ವ್ಯರ್ಥ | ಬ್ಲಾಸ್ಟರ್ಸ್‌ಗೆ 2-1 ಅಂತರದ ರೋಚಕ ಗೆಲುವು
ಕೊಚ್ಚಿ: ಪಂದ್ಯದ ಅಂತಿಮ ಕ್ಷಣದಲ್ಲಿನ ರಕ್ಷಣಾ ವೈಫಲ್ಯದಿಂದಾಗಿ ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನ ತನ್ನ 17ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ವಿರುದ್ಧ ಪರಾಭವಗೊಂಡಿತು.
ಇಲ್ಲಿನ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕೋಚ್ ಕಾರ್ಲೋಸ್ ಕ್ವಾಡ್ರಟ್ ಬಳಗ 1-2 ಗೋಲ್‌ಗಳಿಂದ ಆತಿಥೇಯ ಕೇರಳ ತಂಡಕ್ಕೆ ಮಂಡಿಯೂರಿತು. ಈಗಗಾಲೇ ಸೆಮಿಫೈನಲ್ ಪ್ರವೇಶಿಸಿರುವ ಬೆಂಗಳೂರು ಎಫ್ ಸಿ ಪರ ದೇಶಾನ್ ಬ್ರೌನ್ 16ನೇ ನಿಮಿಷದಲ್ಲಿ ಒಂದು ಗೋಲ್ ಬಾರಿಸಿದರೆ, ನಾಕೌಟ್ ಹಂತದಿಂದ ಹೊರಬಿದ್ದಿರುವ ಕೇರಳ ಪರ ಒಗೈಚೆ 45 ಮತ್ತು 72ನೇ (ಪೆನಾಲ್ಟಿ) ನಿಮಿಷದಲ್ಲಿ ಎರಡು ಗೋಲ್ ದಾಖಲಿಸಿ ಜಯದ ರೂವಾರಿಯೆನಿಸಿದರು.
ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿರುವ ಬಿಎಫ್ಸಿ , ಶನಿವಾರವೂ ಪೂರ್ಣ ಅಂಕ ಗಳಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಿತು. ಅಂತೆಯೇ 16ನೇ ನಿಮಿಷದಲ್ಲಿ ಎದುರಾಳಿ ತಂಡದ ರಕ್ಷಣಾಕೋಟೆಯನ್ನು ಭೇದಿಸಿದ ಕಾರ್ಲೊಸ್ ಬಳಗ 1-0 ಅಂತರದಲ್ಲಿ ಮುನ್ನಡೆ ಗಳಿಸಿ ಆತಿಥೇಯ ತಂಡದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು. ಬಳಿಕ ತನ್ನ ಆಕ್ರಮಣಕಾರಿ ಆಟವನ್ನು ಇನ್ನಷ್ಟು ಪರಿಣಾಮಗೊಳಿಸಲು ಮುಂದಾದ ಬೆಂಗಳೂರು ಪದೇ ಪದೇ ಪ್ರಮಾದವೆಸಗಿ ರೆಫರಿಯಿಂದ ಎಚ್ಚರಿಕೆ ಪಡೆಯಿತು. 43ನೇ ನಿಮಿಷದಲ್ಲಿ ದೇಶಾನ್ ಬ್ರೌನ್ ಮತ್ತು 45ನೇ ನಿಮಿಷದಲ್ಲಿ ಸೆರಾನ್ ರೆಫರಿಯಿಂದ ಹಳದಿ ಕಾಡ್‌ಗೆ ಗುರಿಯಾದರು.
ಇದರಿಂದ ಹಿನ್ನಡೆಗೊಳಗಾದ ಬೆಂಗಳೂರು ಎಫ್ಸಿ ಮೇಲೆ ಸವಾರಿ ಮಾಡಿದ ಕೇರಳ ತಂಡ ವಿರಾಮಕ್ಕೂ ಮುನ್ನ ಒಂದು ಗೋಲ್ ಗಳಿಸಿ 1-1ರಲ್ಲಿ ಸಮಬಲದ ಹೋರಾಟ ನೀಡಿತು. ಜ್ವುವೆರ್‌ಲೂನ್ ನೀಡಿದ ನೆರವಿನಿಂದ ಒಗೈಚೆ ಆಕರ್ಷಕ ಗೋಲ್ ಬಾರಿಸಿ ತವರು ತಂಡದ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು.
ಆತಿಥೇಯ ತಂಡ ಮರು ಹೋರಾಟ ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಬೆಂಗಳೂರು ತಂಡದ ಕೋಚ್ ಕಾರ್ಲೊಸ್, ದ್ವಿತೀಯಾರ್ಧ ಆರಂಭವಾಗುತ್ತಿದಂತೆಯೇ ಆಟಗಾರರ ಬದಲಾವಣೆಗೆ ಒತ್ತು ನೀಡಿದರು. ಆದರೆ ಇದ್ಯಾವುದು ತಂಡದ ಮೇಲೆ ಪರಿಣಾಮ ಬೀರಲಿಲ್ಲ. ಬದಲಾಗಿ ಕೇರಳ ಹಲವು ಬಾರಿ ಗೋಲಿನ ಅವಕಾಶಗಳನ್ನು ಸೃಷ್ಟಿಸಿತು. ಆದರೆ ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ಮತ್ತು ರಕ್ಷಣಾ ಪಡೆ | ಆತಿಥೇಯರ ಎಲ್ಲ ಗೋಲಿನ ಯತ್ನಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದರು. ಅಲ್ಬರ್ಟ್ ಸೆರಾನ್ ಮಾಡಿದ ಪ್ರಮಾದಕ್ಕೆ 70ನೇ ನಿಮಿಷದಲ್ಲಿ ಕೇರಳ ಪೆನಾಲ್ಟಿ ಅವಕಾಶ ಗಿಟ್ಟಿಸಿತು. ಕೇರಳ ತಂಡದ ಹಿನ್ನಡೆ ತಗ್ಗಿಸಿದ್ದ ಒಗ್ಲೆಚೆ, ಯಾವುದೇ ತಪ್ಪೆಸಗದೆ 72ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ತಂಡದ ಗೆಲುವಿಗೆ ವೇದಿಕೆ ನಿರ್ಮಿಸಿದರು. ಪಂದ್ಯದ ಅಂತಿಮ ಕ್ಷಣದಲ್ಲಿ ಬಿಎಫ್ಸಿ ಹಿನ್ನಡೆ ತಗ್ಗಿಸುವ ವಿಫಲಯತ್ನ ಮಾಡಿತಾದರೂ ಕೇರಳ ಮೇಲುಗೈ ಸಾಸಿತು.
ಬೆಂಗಳೂರು ಎಫ್ ಸಿ ತನ್ನ ಮುಂದಿನ ಲೀಗ್ ಪಂದ್ಯದಲ್ಲಿ ಫೆಬ್ರವರಿ 22ರಂದು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಎಟಿಕೆ ಎಫ್ಸಿಯನ್ನು ಎದುರಿಸಲಿದೆ.