ಕೊಚ್ಚಿಯಲ್ಲಿ ಬೆಂಗಳೂರಿಗೆ ಬ್ಲಾಸ್ಟರ್ಸ್ ಸವಾಲು

ಗರಿಷ್ಠ ಅಂಕಗಳೊಂದಿಗೆ ಲೀಗ್ ಹಂತವನ್ನು ಪೂರ್ಣಗೊಳಿಸಲು ನೋಡುತ್ತಿರುವ ಬ್ಲೂಸ್‌ನ ರೋಟೇಶನ್ ಕುರಿತು ಮಾತನಾಡಿದ ಕ್ವಾಡ್ರಟ್

ಬೆಂಗಳೂರು: ಪ್ಲೇ ಆಫ್ ಸ್ಥಾನವನ್ನು ಖಾತರಿಪಡಿಸಿಕೊಂಡಿರುವ ಹೊರತಾಗಿಯೂ ಕೊಚ್ಚಿಯ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಕೇರಳ ಬ್ಲಾಸ್ಟರ್ಸ್ ತಂಡದ ಸವಾಲು ಎದುರಿಸುವ ಮೂಲಕ ಲೀಗ್ ಹಂತದಲ್ಲಿನ ಅಂತಿಮ ಪಂದ್ಯಗಳಲ್ಲಿ ಸಾಧ್ಯವಿರುವ ಮೂರು ಅಂಕ ಗಿಟ್ಟಿಸಲು ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ ಮತ್ತೊಮ್ಮೆ ಎದುರು ನೋಡುತ್ತಿದೆ.

ಕಳೆದ ಬುಧವಾರ ಎಫ್‌ಸಿ ಗೋವಾ ತಂಡ ಮುಂಬಯಿ ಸಿಟಿ ಎಫ್ ಸಿಯನ್ನು ಸೋಲಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಎಫ್ ಸಿ 16 ಪಂದ್ಯಗಳಿಂದ 29 ಅಂಕಗಳೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ಮುನ್ನಡೆದಿದೆ. ಆದರೆ ಪ್ರತಿ ಪಂದ್ಯವನ್ನು ಗೆಲ್ಲಲೇ ಬೇಕು ಎನ್ನುವ ರೀತಿಯಲ್ಲಿ ಮುಂದುವರಿಯಲು ಕ್ವಾಡ್ರಟ್ ಬಳಗ ಚಿಂತಿಸಿದೆ.

“ಒಂದು ತಂಡವಾಗಿ, ನಾವು ಕೇರಳ ವಿರುದ್ದ ಪೂರ್ಣ ಅಂಕ ಗಿಟ್ಟಿಸಲು ನಿಜವಾಗಿಯೂ ಬಯಸಿದ್ದೇವೆ.ರೋಟೇಶನ್ ಕುರಿತು ನನಗೆ ನಂಬಿಕೆ ಇಲ್ಲ. ಏಕೆಂದರೆ ಕೆಲವು ಬಾರಿ ನಿಮ್ಮ ಯೋಜನೆಗಳು ಸುತ್ತುತ್ತಿರುತ್ತವೆ ಮತ್ತು ಕೆಲಸಕ್ಕೆ ಬರುವುದಿಲ್ಲ .ನನ್ನ ಮುಖ್ಯ ಆಟಗಾರರರನ್ನು ಸ್ಪರ್ಧಾತ್ಮಕ ಕ್ರಮದಲ್ಲಿ ಇಡುವುದು ಮುಖ್ಯ. ಆದ್ದರಿಂದ ಇತರ ಪಂದ್ಯಗಳಿಂದ ಈ ಪಂದ್ಯವನ್ನು ನಾವು ಪರಿಗಣಿಸಲಿದ್ದೇವೆ, ” ಎಂದು ಕ್ವಾಡ್ರಟ್ ಪಂದ್ಯ ಪೂರ್ವಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಆಟಗಾರರಿಗೆ ಗಾಯಗಳಾಗಿದ್ದು, ಇದು ಅವರ ಪ್ರದರ್ಶನಕ್ಕೆ ಅಡ್ಡಿಯನ್ನುಂಟು ಮಾಡುವುದರೊಂದಿಗೆ ಬ್ಲಾಸ್ಟರ್ಸ್ ಮತ್ತೊಂದು ಅಭಿಯಾನ ಆರಂಭಿಸುತ್ತಿದೆ. 16 ಪಂದ್ಯಗಳಿಂದ 15 ಅಂಕ ಹೊಂದಿರುವ ಕೋಚ್ ಈಲ್ಲೊಶಟ್ಟೋರಿ ನೇತೃತ್ವದ ತಂಡ ಪ್ಲೇಆಫ್ ಸ್ಥಾನದಿಂದ ಈಗಾಗಲೇ ಹೊರಬಿದ್ದಿದೆ.

“ಕೇರಳ ಆಟಗಾರರಿಗೆ ಗಾಯಗಳಾಗಿವೆ ಎಂಬುದು ವಿಷಾದದ ಸಂಗತಿ.ಏಕೆಂದರೆ ನಾವು ಪಿಚ್‌ನಲ್ಲಿ ಉತ್ತಮ ಆಟಗಾರರನ್ನು ನೋಡಲು ಬಯಸುತ್ತೇವೆ. ಆದರೆ ಫುಟ್ಬಾಲ್‌ನಲ್ಲಿ ಇದೊಂದು ಭಾಗವಾಗಿದೆ. ನಾವು ಸಹ ಗಾಯಳುಗಳನ್ನು ಹೊಂದಿದ್ದೇವೆ. ಈ ಋತುವಿನಲ್ಲಿ ಮಿಕು ಅವರನ್ನು ಕಳೆದುಕೊಂಡಿದ್ದೇವೆ. ಸದಾ ತಂಡಕ್ಕೆ ಫಿಟ್ ಆಗಿದ್ದ ರಫೀಲ್ (ಆಗಸ್ಟೋ) ಈ ವರ್ಷ ಅಲಭ್ಯರಾಗಿದ್ದಾರೆ. ಈ ಋತುವಿನ ಅಂತಿಮ ಸಮಯದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸ ನನಗಿದೆ,” ಎಂದು ಸ್ಪೇನ್ ಕೋಚ್ ಕ್ವಾಡ್ರಟ್ ಹೇಳಿದ್ದಾರೆ.

ಆಗಸ್ಟೋ ಸ್ಥಾನಕ್ಕೆ ಅಲ್ಪಾವಗೆ ಒಪ್ಪಂದ ಮಾಡಿಕೊಂಡಿರುವ ಜಮೈಕಾದ ಸೈಕರ್ ಕೆವಾಫ್ಟ್ ಫ್ರಾಟರ್ ಕೇರಳ ಪ್ರವಾಸಕೈಗೊಳ್ಳಲಿದ್ದಾರೆ ಎಂದು ಕ್ವಾಡ್ರಟ್ ಖಚಿತಪಡಿಸಿದ್ದಾರೆ.’ಕೆವಾಫ್ಟ್ ವಿಂಗ್, ಸ್ನೇಕ್ ಮತ್ತು ಎಲ್ಲ ಸ್ಥಾನಗಳಲ್ಲೂ ಆಡಬಲ್ಲ ಸಾಮರ್ಥ್ಯವಿರುವ ಆಟಗಾರನಾಗಿದ್ದಾರೆ. ದೇಶಾನ್ ಬ್ರೌನ್, ಸೆಂಬಾಯಿ ಹಾಕಿಪ್ ಮತ್ತು ನಿಲಿ ಪೆರ್ಡೂಮೊ ಸಹ ದಾಳಿಯಲ್ಲಿ ಆಯ್ಕೆಗಳನ್ನು ನೀಡಿದ್ದಾರೆ. ಆದರೆ ಫೈನಲ್ ಹಂತಕ್ಕೇರುವುದು ನಮ್ಮ ಗುರಿಯಾಗಿದೆ,” ಎಂದು ಕಾರ್ಲೊಸ್ ಹೇಳಿದ್ದಾರೆ.

ಜುವನಾನ್ ಗೋಸ್ಟಲೆಜ್ ಮತ್ತು ನಾಯಕ ಸುನಿಲ್ ಚೆಟ್ರಿ ಒಂದು ಪಂದ್ಯದಿಂದ ಅಮಾನತುಗೊಂಡಿರುವ ಕಾರಣ ಇವರ ಅನುಪಸ್ಥಿಯಲ್ಲಿ ಬಿಎಫ್ಸಿ ಕಣಕ್ಕಿಳಿಯುತ್ತಿದೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ ಸ್ಟಾರ್‌ನಲ್ಲಿ ನೇರ ಪ್ರಸಾರ ಲಭ್ಯ ಇರಲಿದೆ.