ಬಿಎಫ್ಸಿ-ಚೆನ್ನೈಯಿನ್ ನಡುವಿನ ಮಾಡು ಇಲ್ಲವೆ ಮಡಿ ಪಂದ್ಯಕ್ಕೆ ಗಾಯದಿಂದ ಮರಳಿದ ಭೆಕೆ, ಅಮಾನತಿನಿಂದಾಗಿ ಖಾಬ್ರಾ ಹೊರಕ್ಕೆ
ಚೆನ್ನೈ: ಇಲ್ಲಿನ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಐಎಸ್ ಎಲ್ ಪಂದ್ಯದಲ್ಲಿ ಸೂರ್ತಿಯುತ ಚೆನ್ನೈಯಿನ ಎಫ್‌ಸಿ ವಿರುದ್ದ ಕಣಕ್ಕಿಳಿಯುತ್ತಿರುವ ಬೆಂಗಳೂರು ಎಫ್ಸಿಗೆ ಉತ್ತಮವಾಗಿ ಆಡುವ ಜತೆಗೆ ಎಚ್ಚರದಿಂದಿರುವಂತೆ ಬಿಎಫ್ಸಿ ಕೋಚ್ ಕಾರ್ಲೊಸ್ ಕ್ವಾಡ್ರಟ್ ಸಲಹೆ ನೀಡಿದ್ದಾರೆ.
ಎಎಫ್ ಸಿ ಕಪ್ ಪ್ರಾಥಮಿಕ ಹಂತದ ಎರಡು ಮುಖಾಮುಖಿಗಳ ಪೈಕಿ ಮೊದಲ ಚರಣದಲ್ಲಿ ಪಾರೊ ಎಫ್ ಸಿ ವಿರುದ್ದ 1-0 ಅಂತರದಲ್ಲಿ ಗೆದ್ದು ಭೂತಾನ್ ಪ್ರವಾಸದಿಂದ ಮರಳಿರುವ ಬೆಂಗಳೂರು ಎಫ್ ಸಿ, ವರ್ಷಾರಂಭದಿಂದಲೂ ಪ್ರಬಲಗೊಳ್ಳಲು ತವಕಿಸುತ್ತಿರುವ ಚೆನ್ನೈ ತಂಡದ ವಿರುದ್ಧ ಮೇಲುಗೈ ಸಾಸಲು ತವಕಿಸುತ್ತಿದೆ. ಕಳೆದ ಆರು ಪಂದ್ಯಗಳಲ್ಲಿ ಐದರಲ್ಲಿ ಜಯ ಗಳಿಸಿರುವ ಆತಿಥೇಯ ತಂಡದ ವಿರುದ್ಧ ಗೆದ್ದು ಟೂರ್ನಿಯಲ್ಲಿ ಮೂರನೇ ಬಾರಿ ಪ್ಲೇಆಫ್ ಸ್ಥಾನ ಖಾತರಿಪಡಿಸಿಕೊಳ್ಳುವ ಇರಾದೆ ಬೆಂಗಳೂರು ತಂಡಕ್ಕಿದೆ.
“ಹೊಸ ತರಬೇತುದಾರರು ಬಂದಾಗಿನಿಂದಲೂ ಚೆನ್ನೈಯಿನ್ ತಂಡದಲ್ಲಿ ಹೊಸ ಸೂರ್ತಿ ತುಂಬಿದೆ ಎಂಬುದು ಸ್ಪಷ್ಟವಾಗಿದೆ. ಆ ತಂಡದಲ್ಲಿ ಮತ್ತಷ್ಟು ಕ್ರಿಯಾತ್ಮಕತೆ ನಡೆಯುತ್ತಿದ್ದು, ಅವರು ಸಾಕಷ್ಟು ಗೋಲ್ ಗಳಿಸಿದ್ದಾರೆ. ಜತೆಗೆ ರಕ್ಷಣಾ ಆಟವೂ ಉತ್ತಮವಾಗಿದೆ. ಸದ್ಯದ ಸ್ಥಿತಿಯಲ್ಲಿ ಅವರು ಬಲಿಷ್ಠ ತಂಡವಾಗಿದೆ.ಆದರೆ ನಾನು ಮೊದಲೇ ಹೇಳಿದಂತೆ ನೀವು ಪಂದ್ಯವನ್ನು ಗೆದ್ದಾಗಲೆಲ್ಲಾ ನೀವು ಒಂದನ್ನು ಕಳೆದುಕೊಳ್ಳುವಷ್ಟು ಹತ್ತಿರದಲ್ಲಿರಿತ್ತೀರಿ,” ಎಂದು ಚೆನ್ನೈ ಪ್ರವಾಸಕ್ಕೂ ಮುನ್ನ ಕ್ವಾಡ್ರಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒವೆನ್ ಕೊಹ್ಲಿ ನೇತೃತ್ವದ ಚೆನ್ನೈಯಿನ್ ತಂಡ ಸತತ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದೆ. ಕಳೆದ ವಾರವಷ್ಟೇ ಕೇರಳ ಬ್ಲಾಸ್ಟರ್ಸ್ ವಿರುದ್ದ 6-3ರಲ್ಲಿ ಜಯ ಗಳಿಸಿದೆ. ಈ ಮಧ್ಯೆ, ಉಭಯ ತಂಡಗಳಿಗೂ ಮೂರು ಅಂಕ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಈ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿರುತ್ತದೆ ಎಂದು ಕ್ವಾಡ್ರಟ್ ಹೇಳಿದ್ದಾರೆ. “ಪ್ಲೇಆಫ್ ಸ್ಥಾನಕ್ಕಾಗಿ ಅವರು ಆಡಲಿದ್ದಾರೆ. ನಾವು ಮತ್ತಷ್ಟು ಅಂಕ ಗಳಿಸಲು ಕಾತರಿಸುತ್ತಿದ್ದೇವೆ. ಏಕೆಂದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಲು ನಾವು ಎದುರು ನೋಡುತ್ತಿದ್ದೇವೆ. ನಾವು ನಮ್ಮ ಆಟಗಾರರಲ್ಲಿ ರೋಟೆಷನ್ ಮಾಡುವುದಿಲ್ಲ . ಭಾನುವಾರದ ಪಂದ್ಯದ ರೋಚಕತೆಯಿಂದ ಕೂಡಿರಲಿದೆ ಎಂಬ ಬಗ್ಗೆ ನನಗೆ ಖಾತರಿಯಾಗಿದೆ. ಏಕೆಂದರೆ ಉಭಯ ತಂಡಗಳು ಗೆಲುವಿಗಾಗಿ ಹವಣಿಸುತ್ತಿವೆ,” ಎಂದು ಬಿಎಫ್ಸಿ ಕೋಚ್ ಹೇಳಿದ್ದಾರೆ.
ಗಾಯಕ್ಕೆ ಒಳಗಾಗಿರುವ ಬ್ರೆಜಿಲ್ ಮಿಡ್‌ಫೀಲ್ಡರ್‌ಗಳಾದ ರಾಫೀಲ್ ಆಗಸ್ಟೋ , ಯುಗಾನ್ ಲಿಂಗೊ ಮತ್ತು ಡಿಫೆಂಡರ್ ರಿನೊ ಆಂಟೊ ಬ್ಲೂಸ್‌ಗೆ ಅಲಭ್ಯರಾಗಿದ್ದಾರೆ. ಹೈದರಾಬಾದ್ ಎಫ್ಸಿ ವಿರುದ್ಧ ಸತತ ನಾಲ್ಕು ಹಳದಿ ಕಾರ್ಡ್‌ಗೆ ಗುರಿಯಾದ ಹರ್ಮನ್‌ಜೋತ್ ಖಾದ್ರಾ ಅವರ ಸೇವೆ ಸಹ ಬಿಎಫ್ಸಿಗೆ ಲಭ್ಯವಿಲ್ಲ. ಆದರೆ ಗಾಯದಿಂದ ಚೇತರಿಸಿಕೊಂಡಿರುವ ರಾಹುಲ್ ಭೆಕೆ ತಂಡಕ್ಕೆ ಲಭ್ಯರಾಗಿದ್ದಾರೆ.
ಲೀಗ್‌ನಲ್ಲೇ ಅತ್ಯುತ್ತಮ ರಕ್ಷಣಾ ತಂಡ ಎಂಬ ದಾಖಲೆ ಹೊಂದಿರುವ ಬ್ಲೂಸ್, 12 ಗೋಲ್‌ಗಳೊಂದಿಗೆ ಟೂರ್ನಿಯಲ್ಲಿ ಅತ್ಯಕ ಗೋಲ್ ಗಳಿಸಿರುವ ಲುಡ್ವಾನಿಯ ಸ್ಪೆಕರ್ ನೆರಿಜಸ್ ವಾಲ್ಮೀಕಿಸ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದೆ. ಇತ್ತೀಚೆಗೆ ಬೆಂಗಳೂರು ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿರುವ ನಿಲಿ ಪೆರ್ಡೊಮೊ ಅವರನ್ನು ಕಾರ್ಲೊಸ್ ಕಣಕ್ಕಿಳಿಸುವ ಸಾಧ್ಯತೆ ಇದೆ.
ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್ ಸ್ಪೋಟ್ಸ್ ನೆಟ್‌ವರ್ಕ್ ಮತ್ತು ಹಾಟ್ ಸ್ಟಾರ್‌ನಲ್ಲಿ ನೇರ ಪ್ರಸಾರ ಲಭ್ಯ ಇರಲಿದೆ.