ಹೈದರಾಬಾದ್ ಸವಾಲು ಗೆದ್ದ ಬಿಎಫ್‌ಸಿ

28 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ ಕಾರ್ಲೊಸ್ ಕ್ವಾಡ್ರಟ್ ಬಳಗ

ಬೆಂಗಳೂರು: ನಿಶು ಕುಮಾರ್ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಬೆಂಗಳೂರು ಪ್ರಸಕ್ತ ಎಫ್ಸಿ ಇಂಡಿಯನ್ ಸೂಪರ್ ಲೀಗ್ ತನ್ನ 15ನೇ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ ವಿರುದ್ದ ಗೆಲುವು ದಾಖಲಿಸಿದೆ.

ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ನ್ಯೂಸ್ ತಂಡ 1-0 ಗೋಲಿನಿಂದ ದುರ್ಬಲ ಹೈದರಾಬಾದ್ ವಿರುದ್ಧ ಏಕಪಕ್ಷೀಯ ಜಯ ಗಳಿಸಿತು. ಇದರೊಂದಿಗೆ ಪೂರ್ಣ 3 ಅಂಕ ಸಂಪಾದಿಸಿದ ಸುನಿಲ್ ಛಟಿ ಬಳಗ ಒಟ್ಟು 28 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಇಷ್ಟೇ ಪಂದ್ಯಗಳನ್ನಾಡಿರುವ ಎಫ್‌ಸಿ ಗೋವಾ 30 ಅಂಕಗಳೊಂದಿಗೆ ಅಗ್ರಸ್ಥಾನ ಹೊಂದಿದೆ. ಬೆಂಗಳೂರು ಎಫ್ಸಿ ಪರ ಆರಂಭದಲ್ಲೇ ಮಿಂಚಿದ ನಿಶುಕುಮಾರ್ 7ನೇ ನಿಮಿಷದಲ್ಲಿ ಗೋಲ್ ಬಾರಿಸಿ ಜಯದ ರೂವಾರಿಯೆನಿಸಿದರೆ, ಪ್ರವಾಸಿ ತಂಡ ತಿರುಗೇಟು ನೀಡುವಲ್ಲಿ ಸಂಪೂರ್ಣ ವಿಫಲಗೊಂಡಿತು. ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದ ಬಿಎಫ್‌ಸಿ ಆಟಗಾರರು ಎದುರಾಳಿ ತಂಡದ ಎಲ್ಲ ಗೋಲಿನ ಯತ್ನಗಳನ್ನು ಹಿಮ್ಮೆಟ್ಟಿಸಿ ತವರಿನಲ್ಲಿ ಮತ್ತೊಂದು ಜಯದ ಸವಿಯುಂಡರು.

ಇದಕ್ಕೂ ಮುನ್ನ ಮುನ್ನಡೆ ವಿಸ್ತರಿಸುವ ಆತುರದಲ್ಲಿ ದ್ವಿತೀಯಾರ್ಧದ ಆರಂಭದಲ್ಲೇ ಡಿಮಾಸ್, ಯೆಲ್ಲೋ ಕಾರ್ಡ್‌ಗೆ ಒಳಗಾದರು. ನಂತರ 52ನೇ ನಿಮಿಷದಲ್ಲಿ ಆತಿಥೇಯರು ಉತ್ತಮ ಗೋಲಿನ ಅವಕಾಶವನ್ನು ಕೈಚೆಲ್ಲಿದರು. 59ನೇ ನಿಮಿಷದಲ್ಲಿ ಹೈದಾರಾಬಾದ್ ತಂಡದ ಯಾಸೀರ್ ಸಹ ರೆಫರಿಯ ಕೆಂಗಣ್ಣಿಗೆ ತುತ್ತಾದರು. ಪ್ರವಾಸಿ ತಂಡದ ದಿಟ್ಟ ಪ್ರತಿರೋಧದ ನಡುವೆಯೂ ಬೆಂಗಳೂರು ಎಫ್ಸಿ ಪ್ರಥಮಾರ್ಧಕ್ಕೆ 1-0 ಅಂತರದಲ್ಲಿ ಮೇಲುಗೈ ಸಾಸಿತು. 23ನೇ ನಿಮಿಷದಲ್ಲಿ ಸುರೇಶ್ ಮಾಡಿದ ತಪ್ಪಿಗೆ ಎದುರಾಳಿ ತಂಡ ಪೆನಾಲ್ಟಿ ಅವಕಾಶ ಪಡೆಯಿತು. ಆದರೆ ಗುರ್‌ಪ್ರೀತ್ ಮತ್ತೊಮ್ಮೆ ಹೀರೋ ಆಗಿ ಕಂಗೊಳಿಸಿದರು. 43ನೇ ನಿಮಿಷದಲ್ಲಿ ನಾಯಕ ಸುನಿಲ್ ಛಟ್ರಿ ಗೋಲಿನ ಅವಕಾಶ ಗಿಟ್ಟಿಸಿದರಾದರೂ ತಂಡದ ಮುನ್ನಡೆ ವಿಸ್ತರಿಸುವಲ್ಲಿ ವಿಫಲರಾದರು.

ಇದಕ್ಕೂ ಮುನ್ನ ಚೆಂಡಿನ ನಿಯಂತ್ರಣದ ವೇಳೆ ಪ್ರಮಾದ ಎಸೆಗಿದ ಪರಿಣಾಮ ನಿಶು ಕುಮಾರ್ 25ನೇ ನಿಮಿಷದಲ್ಲಿ ರೆಫರಿಯಿಂದ ಹಳದಿ ಕಾರ್ಡ್‌ಗೆ ಗುರಿಯಾದರು. ಇದಾದ ಮರು ನಿಮಿಷದಲ್ಲೇ ಎದುರಾಳಿ ತಂಡದ ಅದ್ಭುತ ಗೋಲಿನ ಯತ್ನವನ್ನು ಬ್ಲೂಸ್‌ ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ಹಿಮ್ಮೆಟ್ಟಿ ತವರು ಅಭಿಮಾನಿಗಳ ಮನಸೂರೆಗೊಂಡರು. 28ನೇ ನಿಮಿಷದಲ್ಲಿ ಖಾಬ್ರಾ ಸಹ ರೆಫರಿಯಿಂದ ಎಚ್ಚರಿಕೆಗೆ ಗುರಿಯಾದರು.

ಆತಿಥೇಯರು ಮುನ್ನಡೆ ಗಳಿಸಿದ ಎರಡು ನಿಮಿಷಗಳ ಅಂತರದಲ್ಲೇ ಪ್ರವಾಸಿ ತಂಡ ತಿರುಗೇಟು ನೀಡುವ ಅವಾಕಾಶ ಸೃಷ್ಟಿಸಿತು. ಆಕ್ರಮಣಕಾರಿ ಆಟಗಾರ ನಿಖಿಲ್ ಪೂಜಾರಿ ಚೆಂಡನ್ನು ಬಿಎಫ್‌ಸಿ ರಕ್ಷಣಾಕೋಟೆಯನ್ನು ಭೇದಿಸಿ ಗುರಿಯತ್ತ ಕೊಂಡೊಯ್ದರಾದರೂ ಗೋಲ್ ಗಳಿಸಲು ವಿಫಲರಾದರು. ಪ್ರವಾಸಿ ತಂಡದ ಮರು ಹೋರಾಟವನ್ನು ಅರಿತ ಕಾರ್ಲೊಸ್ ಕ್ವಾಡ್ರಟ್ ಬಳಗ ಇನ್ನಷ್ಟು ಪರಿಣಾಮಕಾರಿ ಆಟಕ್ಕೆ ಒತ್ತು ನೀಡಿತು. ಹೀಗಾಗಿ ಮೊದಲ ಇಪ್ಪತ್ತು ನಿಮಿಷ ಬೆಂಗಳೂರು ತಂಡ ಮೇಲುಗೈ ಸಾಸಿತು. ತವರಿನಂಗಳದಲ್ಲಿ ಉತ್ತಮ ದಾಖಲೆ ಹೊಂದಿರುವ ಬೆಂಗಳೂರು ಎಫ್ಸಿ ಮತ್ತೊಂದು ಗೆಲುವು ಸಾಸುವ ವಿಶ್ವಾಸದಲ್ಲಿ ಹೈದರಾಬಾದ್ ತಂಡದ ಸವಾಲಿಗೆ ಇಳಿಯಿತು. ಪಂದ್ಯ ಆರಂಭವಾಗುತ್ತಿದ್ದಂತೆಯೇ ಆಕ್ರಮಣಕಾರಿ ದಾಳಿಗೆ ಮುಂದಾದ ಬಿಎಫ್ಸಿ ನಿರೀಕ್ಷೆಯಂತೆಯೇ ನಿಶು ಕುಮಾರ್ ಸಾಹಸದಿಂದ ಗೋಲಿನ ಖಾತೆ ತೆರೆಯಿತು. ಡಿಮಾಸ್ ಡೆಲ್ಲಾಡೊ ಅವರು ನೀಡಿದ ಪಾಸನ್ನು ಸಮರ್ಥವಾಗಿ ಬಳಸಿಕೊಂಡ ನಿಶು ಎದುರಾಳಿಯ ಗೋಲ್ ಕೀಪರ್ ಕಣ್ಣಪ್ಪಿಸಿ 7ನೇ ನಿಮಿಷದಲ್ಲಿ ಬ್ಲೂಸ್ ಪರ ಗೋಲ್ ದಾಖಲಿಸಿದರು. ಇದರೊಂದಿಗೆ ಆರಂಭದಲ್ಲೇ 1-0 ಅಂತರದ ಮುನ್ನಡೆ ಪಡೆದ ಬಿಎಫ್ಸಿ ಪ್ರವಾಸಿ ತಂಡದ ಮೇಲೆ ಒತ್ತಡ ಹೇರಿತು.

ಬೆಂಗಳೂರು ಎಫ್ ಸಿ ತನ್ನ ಮುಂದಿನ ಪಂದ್ಯದಲ್ಲಿ ಫೆಬ್ರವರಿ 9ರಂದು ಚೆನ್ನೈನಲ್ಲಿ ಚೆನ್ನೈಯಿನ್ ಎಫ್‌ಸಿ ತಂಡವನ್ನು ಎದುರಿಸಲಿದೆ.

Malcare WordPress Security