ಅಗ್ರಸ್ಥಾನಕ್ಕೇರಿದ ಬೆಂಗಳೂರು ಎಫ್ ಸಿ

ಒಡಿಶಾ ಎಫ್ಸಿ ವಿರುದ್ಧ ಕಾರ್ಲೊಸ್ ಬಳಗಕ್ಕೆ 3-0 ಅಂತರದ ಏಕಪಕ್ಷೀಯ ಗೆಲುವು

ಬೆಂಗಳೂರು: ದೇಶಾನ್ ಬ್ರೌನ್, ರಾಹುಲ್ ಭೇಕೆ ಮತ್ತು ನಾಯಕ ಸುನಿಲ್ ಛತ್ರಿ ಅವರ ಅದ್ಭುತ ಕಾಲ್ಬಳಕದ ನೆರವಿನಿಂದ ಬೆಂಗಳೂರು ಎಫ್ಸಿ ಪ್ರಸಕ್ತ ಐಎಸ್ಎಲ್ ಟೂರ್ನಿಯ ತನ್ನ 14ನೇ ಪಂದ್ಯದಲ್ಲಿ ಒಡಿಶಾ ಎಫ್ಸಿ ವಿರುದ್ದ ಅಕಾರಯುತ ಜಯ ಗಳಿಸಿ ತವರಿನಲ್ಲಿ ಮತ್ತೆ ಜಯದ ಹಳಿಗೆ ಮರಳಿದೆ.

ಮನೆಯಂಗಳ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ಜಿದ್ದಾಜಿದ್ದಿನ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಬೆಂಗಳೂರು ಎಫ್ ಸಿ 3-0 ಅಂತರದಲ್ಲಿ ಒಡಿಶಾ ತಂಡವನ್ನು ಸೋಲಿಸಿ ಪೂರ್ಣ ಮೂರು ಅಂಕ ಕಲೆಹಾಕಿತು. ಇದರೊಂದಿಗೆ ಆಡಿದ 14 ಪಂದ್ಯಗಳಿಂದ 25 ಅಂಕ ಸಂಪಾದಿಸಿದ ಸುನಿಲ್ ಛಟ್ರಿ ಪಡೆ, ಪ್ರತಿರ್ಸ್ಪಗಳಾದ ಎಟಿಕೆ ಮತ್ತು ಎಫ್‌ಸಿ ಗೋವಾ ತಂಡಗಳನ್ನು ಕ್ರಮವಾಗಿ 2 ಮತ್ತು 3ನೇ ಸ್ಥಾನಕ್ಕೆ ದೂಡಿ ಅಂಕಪಟ್ಟಿಯ ಮೊದಲ ಸ್ಥಾನ ಅಲಂಕರಿಸಿದೆ.

ಬೆಂಗಳೂರು ಪರ ದೇಶಾನ್ ಬ್ರೌನ್ (23ನೇ ನಿಮಿಷ), ರಾಹುಲ್ ಭೇಕೆ (25ನೇ ನಿಮಿಷ) ಮತ್ತು ಸುನಿಲ್ ಛಟಿ(61-ಪೆನಾಲಿ ನಿಮಿಷ) ತಲಾ ಒಂದು ಗೋಲ್ ದಾಖಲಿಸಿ ಜಯದ ರೂವಾರಿಯೆನಿಸಿದರು. ಪೆನಾಲ್ಟಿ ಮೂಲಕ 61ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಮುನ್ನಡೆಯನ್ನು 3-0ಗೆ ವಿಸ್ತರಿಸಿದ ಛ, ಈ ಋತುವಿನಲ್ಲಿ ತಮ್ಮ 9ನೇ ಗೋಲ್ ದಾಖಲಿಸಿದರು. ಈ ಮೂಲಕ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿರುವ ಅರಿಡಾನೆ (9 ಗೋಲ್)ಗೆ ಪ್ರಬಲ ಪೈಪೋಟ ಒಡ್ಡಿದರು.

ಇದಕ್ಕೂ ಮುನ್ನ ಪ್ರಥಮಾರ್ಧಕ್ಕೆ ಬ್ರೌನ್ ಮತ್ತು ಭೇಕೆ ಸಾಹಸದಿಂದ ಬೆಂಗಳೂರು ಎಫ್ ಸಿ 2-0 ಅಂತರದಲ್ಲಿ ಮೇಲುಗೈ ಸಾಸುವ ಮೂಲಕ ಪ್ರವಾಸಿ ತಂಡದ ಮೇಲೆ ಸಂಪೂರ್ಣ ಒತ್ತಡ ಹೇರಿತು. ಹಿನ್ನಡೆ ತಗ್ಗಿಸುವ ಹಾದಿಯಲ್ಲಿ ಒಡಿಶಾ ತಂಡ 33 ಮತ್ತು 34ನೇ ನಿಮಿಷದಲ್ಲಿ ಆಟಗಾರರ ಬದಲಾವಣೆಗೆ ಒತ್ತು ನೀಡಿತಾದರೂ ಇದು ತಂಡದ ಮೇಲೆ ಯಾವುದೇ ಪ್ರಯೋಜನ ಬೀರಲಿಲ್ಲ . ಪ್ರಮಾದಕ್ಕಾಗಿ 37ನೇ ನಿಮಿಷದಲ್ಲಿ ಬ್ಲೂಸ್ ಆಟಗಾರ ಖಾದ್ರಾ ರೆಫರಿಯಿಂದ ಎಚ್ಚರಿಕೆಗೆ ಗುರಿಯಾದರು. ಇದೇ ತಪ್ಪಿಗಾಗಿ ಪ್ರವಾಸಿ ತಂಡದ ಶುಭಂ ಸಹ ವಿರಾಮಕ್ಕೂ ಮುನ್ನ ಹಳದಿ ಕಾರ್ಡ್ ಪಡೆದರು.

ಆತಿಥೇಯರ ಆಕ್ರಮಣಕಾರಿ ಆಟದ ಮುಂದೆ ಸಂಪೂರ್ಣ ಮಂಕಾದ ಒಡಿಶಾ ಆಟಗಾರರು ಹೊಂದಾಣಿಕೆ ಆಟದಲ್ಲಿ ಹಿಂದೆ ಬಿದ್ದರು. ಹೀಗಾಗಿ 28ನೇ ನಿಮಿಷದಲ್ಲಿ ಗೋಲ್ ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ಅವರ ನೆರವಿನಿಂದ ಮತ್ತೊಂದು ಗೋಲ್ ಬಾರಿಸುವ ಅವಕಾಶ ಆತಿಥೇಯರಿಗೆ ಸಿಕ್ಕಿಸಿತು. ಆದರೆ ಪ್ರವಾಸಿ ತಂಡದ ರಕ್ಷಣಾತ್ಮಕ ಆಟ ಬ್ಲೂಸ್‌ಗೆ ನಿರಾಸೆ ಮೂಡಿಸಿತು. ಮೊದಲ ಗೋಲಿನ ಸಂಭ್ರಮದಿಂದ ಹೊರಬರುವ ಮುನ್ನವೇ ಮತ್ತೊಂದು ಗೋಲ್ ಬಾರಿಸಿದ ಬಿಎಫ್‌ಸಿ, 25 ನಿಮಿಷಗಳಲ್ಲೇ 2-0 ಅಂತರದ ಮುನ್ನಡೆ ಗಳಿಸಿತು. ಡಿಮಾಸ್ ಡೆಲ್ಲಾಡೊ ಮತ್ತು ಉದಾಂತ ಸಿಂಗ್ ಅವರ ಅದ್ಭುತ ನೆರವಿನಿಂದ ರಾಹುಲ್ ಭೇಕೆ ತಂಡದ ಮುನ್ನಡೆಯನ್ನು 2-0ಗೆ ಹಿಗ್ಗಿಸಿದರು.

ಪಂದ್ಯದ 15ನೇ ನಿಮಿಷದಲ್ಲಿ ಬೆಂಗಳೂರು ಎಫ್ಸಿ ಖಾತೆ ತೆರೆಯುವ ಅವಕಾಶ ಗಿಟ್ಟಿಸಿತು. ಆದರೆ ದೇಶಾನ್ ಬ್ರೌನ್ ಅವರ ವಿಫಲಯತ್ನ ಕೈಗೊಡದ ಕಾರಣ ಆತಿಥೇಯರ ಆರಂಭಿಕ ಮುನ್ನಡೆಯ ಯತ್ನ ಸಾಕಾರಗೊಳ್ಳಲಿಲ್ಲ. ಆದಾಗ್ಯೂ ಆತಿಥೇಯರ ಆಕ್ರಮಣಕಾರಿ ಆಟ ಮಾತ್ರ ನಿಲ್ಲಲಿಲ್ಲ. ಇದರ ಫಲವಾಗಿ 23ನೇ ನಿಮಿಷದಲ್ಲಿ ದೇಶಾನ್ ಬ್ರೌನ್ ಅಮೋಘವಾದ ಗೋಲ್ ಬಾರಿಸಿ ಬ್ಲೂಸ್ ತಂಡಕ್ಕೆ 1-0 ಅಂತರದ ಮುನ್ನಡೆ ಒದಗಿಸುವಲ್ಲಿ ಯಶಸ್ವಿಯಾದರು. ಎರಿಕ್ ಪಾರ್ತಾಲು ನೀಡಿದ ಸುಂದರ ಪಾಸನ್ನು ಗೋಲಾಗಿ ಪರಿವರ್ತಿಸಿದ ಬ್ರೌನ್, ಬ್ಲಾಸ್ ಬಳಗದಲ್ಲಿ ಸಂತವನ್ನು ಹಿಮ್ಮಡಿಗೊಳಿಸಿದರು. ಒಂದು ವಾರದ ಹಿಂದಷ್ಟೇ ತಂಡಕ್ಕೆ ಸೇರ್ಪಡೆಗೊಂಡಿದ್ದ ಬ್ರೌನ್, ತಮ್ಮ ಆರಂಭಿಕ ಪಂದ್ಯದಲ್ಲೇ ಗೋಲಿನ ಖಾತೆ ತೆರೆದು ತಮ್ಮ ಒಪ್ಪಂದಕ್ಕೆ ಇನ್ನಷ್ಟು ಮೆರಗು ನೀಡಿದರು.

ಇದಕ್ಕೂ ಮುನ್ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಗುರಿಯೊಂದಿಗೆ ಬಿಎಫ್ಸಿ ಕಣಕ್ಕಿಳಿದರೆ, ಅದರದ್ದೇ ನೆಲದಲ್ಲಿ ಅಚ್ಚರಿಯ ಫಲಿತಾಂಶ ನೀಡುವ ಉದ್ದೇಶದೊಂದಿಗೆ ಪ್ರವಾಸಿ ಒಡಿಶಾ ತಂಡ ಅಖಾಡಕ್ಕಿಳಿಯಿತು. ಬೆಂಗಳೂರು ಎಫ್ ಸಿ ತನ್ನ ಮುಂದಿನ ಪಂದ್ಯದಲ್ಲಿ ಇದೇ 30ರಂದು ತವರಿನಂಗಳದಲ್ಲೇ ಹೈದರಾಬಾದ್ ಎಫ್ ಸಿ ತಂಡವನ್ನು ಎದುರಿಸಲಿದೆ.

Malcare WordPress Security