ಒಡಿಶಾ ಎದುರಿಸಲು ಸಜ್ಜಾಗಿರುವ ಬೆಂಗಳೂರಿಗೆ ಅಗ್ರಸ್ಥಾನದ ಗುರಿ

ಮುಂಬೈ ವಿರುದ್ಧದ ಸೋಲಿನ ನಡುವೆಯೂ ಅಗ್ರಸ್ಥಾನಕ್ಕೆ ಎದುರು ನೋಡುತ್ತಿರುವ 3ನೇ ಸ್ಥಾನಿ ಬ್ಲೂಸ್‌ಗೆ ಪ್ರವಾಸಿ ಒಡಿಶಾ ಸವಾಲು ಇಂದು

ಬೆಂಗಳೂರು: ಇಲ್ಲಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಒಡಿಶಾ ಎಫ್‌ಸಿ ತಂಡವನ್ನು ಎದುರಿಸಲಿರುವ ಬೆಂಗಳೂರು ಎಫ್ ಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ.

ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ ಸದ್ಯ 22 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ. ಒಂದು ವೇಳೆ ಬುಧವಾರ ರಾತ್ರಿ ಜಯ ಗಳಿಸಿದ್ದಲ್ಲಿ ತಲಾ 24 ಅಂಕಗಳನ್ನು ಹೊಂದಿರುವ ಎಫ್‌ಸಿ ಗೋವಾ ಮತ್ತು ಎಟಿಕೆ ತಂಡಗಳನ್ನು ಹಿಂದಿಕ್ಕಲಿದೆ. ಆದಾಗ್ಯೂ ಒಡಿಸಾ ಎಫ್ ಸಿ, ಬೆಂಗಳೂರು ತಂಡವನ್ನು ಸೋಲಿಸಿದರೆ ಅಂಕಪಟ್ಟಿಯಲ್ಲಿ ಮೇಲೇರಲಿದೆ. ನಾಲ್ಕು ಸತತ ಗೆಲುವು ಸಾಸಿ ಅದ್ಭುತ ಲಯದೊಂದಿಗೆ ಇಲ್ಲಿಗೆ ಆಗಮಿಸಿರುವ ಒಡಿಶಾ ಎಫ್ ಸಿ ಈ ಪಂದ್ಯ ಎದುರಿಸುತ್ತಿರುವುದು ಬಹಳ ಮುಖ್ಯವಾಗಿದೆ. ಬೆಂಗಳೂರಿನ ಬಗ್ಗೆಯೂ ಎಚ್ಚರದಿಂದಿರಬೇಕಿದೆ.

“ಒಡಿಶಾ ವಿರುದ್ಧದ ಪಂದ್ಯ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಇದು ತೋರುತ್ತದೆ. ಲೀಗ್ ಹಂತದಲ್ಲಿ ನಾವು 15ಕ್ಕೂ ಹೆಚ್ಚು ಅಂಕ ಗಳಿಕೆಗೆ ಆಡಬೇಕಿದೆ.ನಾವು ಸಾಧ್ಯವಾದಷ್ಟು ಹೆಚ್ಚಿನ ಅಂಕಗಳನ್ನು ಹಿಂತಿರುಗಿಸಬೇಕಾದರೆ ಆವೇಗವನ್ನು ಬದಲಾಯಿಸಬೇಕಾಗುತ್ತದೆ. ಉತ್ತಮ ಫಾರ್ಮ್ನೊಂದಿಗೆ ಒಡಿಶಾ ತಂಡ ಇಲ್ಲಿಗೆ ಪ್ರಯಾಣಿಸಿದೆ. ಆದರೆ ತವರಿನಲ್ಲಿ ನಮ್ಮ ಪ್ರದರ್ಶನ ಗಮನಾರ್ಹವಾಗಿದ್ದು ಅದ್ಭುತ ಫುಟ್ಬಾಲ್ ಪಂದ್ಯವನ್ನು ನಾನು ನಿರೀಕ್ಷಿಸುತ್ತಿದ್ದೇನೆ,” ಎಂದು ಪಂದ್ಯ ಪೂರ್ವ ಪತ್ರಿಕಾ ಗೋಷ್ಠಿಯಲ್ಲಿ ಕ್ವಾಡ್ರಟ್ ಹೇಳಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಮುಂಬಯಿ ಸಿಟಿ ಎಫ್ಸಿ ವಿರುದ್ಧ ಸೋಲುವ ಮುನ್ನ ಸುಮಾರು ಎರಡು ವರ್ಷಗಳ ಕಾಲ ಕಂಠೀರವ ಕ್ರೀಡಾಂಗಣದಲ್ಲಿ ಬ್ಲೂಸ್ ಅಜೇಯ ದಾಖಲೆ ಕಾಯ್ದುಕೊಂಡಿತ್ತು. ಕಳೆದ ವಾರ ತವರಿನಾಚೆಯ ಪಂದ್ಯದಲ್ಲಿ ಮುಂಬೈ ವಿರುದ್ಧವೇ ಬ್ಲೂಸ್‌ ನಿರಾಸೆ ಕಂಡಿದೆ. ಇದೀಗ ಗೆಲುವಿನ ಹಾದಿಗೆ ಮರಳುವ ಜತೆಗೆ ಬೆಂಗಳೂರು ತಂಡ ಅಗ್ರಸ್ಥಾನಕ್ಕೇರಲು ತವರಿನಂಗಣಕ್ಕಿಂತ ಉತ್ತಮ ಸ್ಥಳ ದೊರೆಯದು.

“ಕಳೆದ ಪಂದ್ಯದ ಸಂಗತಿಗಳು ನಮಗೆ ಅತೀವ ನಿರಾಸೆಯನ್ನುಂಟು ಮಾಡಿವೆ. ಮನಸ್ಥಿತಿಯ ಮೇಲೆ ಪರಿಣಾಮ ಬೀರುವ ನಿದರ್ಶನಗಳಿವೆ. ಆದರೆ ಒಳ್ಳೆಯ ವಿಷಯವೆಂದರೆ ಈ ಕ್ರೀಡೆಯಲ್ಲಿ ಇದನ್ನು ದೀರ್ಘಾವಯವರೆಗೂ ನಾವು ಕೊಂಡೊಯ್ಯುವುದಿಲ್ಲ. ಏರಿಳಿತವನ್ನು ನಮ್ಮ ಕಡೆಯೂ ತಿರಿಗಿಸಬಬಹುದು,” ಎಂದು ಕ್ವಾಡ್ರಟ್ ನುಡಿದಿದ್ದಾರೆ.

ಪಾದದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮಿಡ್‌ಫೀಲ್ಡರ್ ರಫೀಲ್ ಅಗಸ್ಟೋ ಬೆಂಗಳೂರಿನ ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಇವರಲ್ಲದೆ ಕಳೆದ ವಾರ ಗಾಯಕ್ಕೆ ತುತ್ತಾಗಿರುವ ಯುಗೆನ್ನಾನ್ ಲಿಂಗೊ ಮತ್ತು ರಿನೊ ಆಂಟೊ ಸಹ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಮಧ್ಯೆ, ವಿನಿತ್ ರಾಯ್ (ಅಮಾನತು) ಮತ್ತು ನಂದಕುಮಾರ್ ಸೇಕರ್‌ (ಹ್ಯಾಮ್ಸ್ಟಾಂಗ್) ಒಡಿಶಾ ತಂಡಕ್ಕೆ ಅಲಭ್ಯರಾಗಿದ್ದಾರೆ.

ಪ್ರಸಕ್ತ ಋತುವಿನಲ್ಲಿ ಗಮನ ಸೆಳೆದಿರುವ ಇಬ್ಬರು ಸೈಕರ್‌ಗಳು ಬುಧವಾರದ ಪಂದ್ಯದ ಆಕರ್ಷಣೆ. 9 ಗೋಲ್‌ಗಳೊಂದಿಗೆ ಗೋಲ್ಡನ್ ಬೂಟ್ ರೇಸ್‌ನಲ್ಲಿರುವ ಸ್ಪೇನ್‌ನ ಅರಿಡಾನೆ ಸಾಂತಾನ ಒಡಿಶಾ ತಂಡದ ಪ್ರಮುಖರೆನಿಸಿದರೆ, 8 ಗೋಲ್ ಬಾರಿಸಿರುವ ಸುನಿಲ್ ಛಟಿ ಬಿಎಫ್ಸಿಯ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ನೂತನವಾಗಿ ತಂಡದೊಂದಿಗೆ ಗುತ್ತಿಗೆ ಮಾಡಿಕೊಂಡಿರುವ ದೇಶಾನ್ ಬ್ರೌನ್ ಒಡಿಶಾ ವಿರುದ್ದ ಕಣಕ್ಕಿಳಿಯುವ ಸಾಧ್ಯತೆ ಇದೆ. ಕಳೆದ ವಾರ ತಂಡಕ್ಕೆ ಸೇರ್ಪಡೆಯಾಗಿರುವ ದೇಶಾನ್, “ನೇರವಾಗಿ ಬಂದು ತಂಡಕ್ಕೆ ಹೊಂದಿಕೊಳ್ಳುವುದು ಸದಾ ಕಷ್ಟದ ಕೆಲಸವಾದರೂ ತಂಡಕ್ಕೆ ನೆರವಾಗಲು ಎಲ್ಲ ರೀತಿಯಲ್ಲೂ ಯತ್ನಿಸಲಿದ್ದೇನೆ,” ಎಂದು ಜಮೈಕಾ ಆಟಗಾರ ಹೇಳಿದ್ದಾರೆ.

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು , ಸ್ಟಾರ್ ಸ್ಪೋಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ ಸ್ಟಾರ್‌ನಲ್ಲಿ ನೇರ ಪ್ರಸಾರ ಲಭ್ಯ ಇರಲಿದೆ.

Malcare WordPress Security