ಅಗ್ರಸ್ಥಾನಕ್ಕಾಗಿ ಬ್ಲೂಸ್‌ಗೆ ಮತ್ತೊಂದು ಟೆಸ್ಟ್ | ಪ್ರವಾಸಿ ತಂಡಕ್ಕೆ ಕ್ಯಾಸ್ಟೆಲ್, ಪಿಟಿ ಅಲಭ್ಯ
ಬೆಂಗಳೂರು: ಲೀಗ್ ಲೀಡರ್ ಎಫ್‌ಸಿ ಗೋವಾ ವಿರುದ್ದ ಸೂರ್ತಿದಾಯಕ ಗೆಲುವು ಸಾಸಿ ಇನ್ನೂ ಒಂದುವಾರ ಕಳೆದಿಲ್ಲ. ಆದಾಗಲೇ ಇಂಡಿಯನ್ ಸೂಪರ್ ಲೀಗ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಎದುರು ನೋಡುತ್ತಿರುವ ಬೆಂಗಳೂರು ಎಫ್ ಸಿ, ಮತ್ತೊಂದು ಸವಾಲು ಎದುರಿಸಲು ಸಜ್ಜಾಗಿದ್ದು , ಗುರುವಾರ ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಮ್ಶೆಡ್ಡುರ ಎಫ್‌ಸಿ ತಂಡದ ಸವಾಲು ಎದುರಿಸುತ್ತಿದೆ.
ಗೋವಾ ವಿರುದ್ಧ 2-1ರ ಗೆಲುವಿನೊಂದಿಗೆ ಬ್ಲೂಸ್ ತಂಡ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ. ಋತುವಿನಲ್ಲಿ ಇನ್ನೂ ಏಳು ಪಂದ್ಯಗಳನ್ನಾಡಲಿರುವ ಬಿಎಫ್ ಸಿ, ಕಾರ್ಯಕ್ಷಮತೆ ಮತ್ತು ಫಲಿತಾಂಶದೊಂದಿಗೆ ಅಂತಿಮ ಗುರಿ ಮುಟ್ಟಲು ಇದು ಅತ್ಯುತ್ತಮ ವೇದಿಕೆಯೆನಿಸಿದೆ. ತವರಿನಾಚೆ ಗೋಲ್ ರಹಿತ ಡ್ರಾ, ಜಮ್ಶೆಡ್ಡುರ ಕಠಿಣ ತಂಡವೆಂಬುದನ್ನು ಆದಾಗಲೇ ಸಾಬೀತುಪಡಿಸಿದ್ದು, ಬೆಂಗಳೂರು ಎದುರು ನೋಡುತ್ತಿರುವ ಉತ್ತಮ ಪಂದ್ಯವಾಗುವುದ ಬಗ್ಗೆ ಇದು ಸುಳಿವು ನೀಡಿದೆ.
“ಈ ಋತುವಿನಲ್ಲಿ ಉತ್ತಮ ತಂಡವೆಂಬುದನ್ನು ಜಮ್ಶೆಡ್ಡುರ ತೋರಿಸಿಕೊಟ್ಟಿದೆ. ಕಳೆದ ಎರಡು ಋತುಗಳಲ್ಲಿ ಅವರು ಹೆಚ್ಚಿನ ಭಾಗ ಅಗ್ರ ನಾಲ್ಕರಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಆ ತಂಡದ ವಿರುದ್ಧ ಸಂತೃಪ್ತರಾಗುವ ಪ್ರಶ್ನೆಯೇ ಇಲ್ಲ , ” ಎಂದು ಬೆಂಗಳೂರು ಎಫ್ಸಿ ಸಹಾಯಕ ಕೋಚ್ ಜಾವಿ ಫಿನಿಲ್ಲೋಸ್ ಹೇಳಿದ್ದಾರೆ. ಕಾರ್ಲೊಸ್ ಕ್ವಾಡ್ರಟ್ ಅಮಾನತುಗೊಂಡಿರುವ ಕಾರಣ ನ್ಯೂಸ್ ಟಚ್‌ಲೈನ್‌ನಲ್ಲಿ ಜಾವಿ ಕಾಣಿಸಿಕೊಳ್ಳಲಿದ್ದಾರೆ.
ಆ್ಯಂಟೊನಿಯಾ ಇರಿಯೋಂಡೊ ಗರಡಿಯಲ್ಲಿ ಬಳಗಿರುವ ಜಮ್ಶೆಡ್‌ಪುರ ತನ್ನ ಕೊನೆಯ ಐದು ಪಂದ್ಯಗಳಲ್ಲಿ ಗೆಲುವು ಸಾಸಲು ವಿಫಲಗೊಂಡಿದೆ. ನವೆಂಬರ್‌ನಲ್ಲಿ ಎಫ್‌ಸಿ ಗೋವಾ ವಿರುದ್ಧ ಗೆದ್ದ ನಂತರ ನಾರ್ತ್‌ಈಸ್ಟ್ ಯುನೈಟೆಡ್, ಕೇರಳ ಬ್ಲಾಸ್ಟರ್ಸ್ ಮತ್ತು ಚೆನ್ನೈಯಿನ್ ಎಫ್ಸಿ ವಿರುದ್ದ ಡ್ರಾ ಮಾಡಿಕೊಂಡು ಅಂಕ ಹಂಚಿಕೊಂಡಿತ್ತು. ಬಳಿಕ ಕೊನೆಯ ಎರಡು ಪಂದ್ಯಗಳಲ್ಲಿ ಮುಂಬಯಿ ಸಿಟಿ ಎಫ್ ಸಿ ಮತ್ತು ಒಡಿಶಾ ವಿರುದ್ಧ ಸೋಲು ಕಂಡಿದೆ. ಜತೆಗೆ ಪ್ರಮುಖ ಆಟಗಾರರಾದ ಸೆರ್ಗಿಯೊ ಕ್ಯಾಸ್ಟಲ್ ಮತ್ತು ಮಿಡ್‌ಫೀಲ್ಡರ್ ಪಿತಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಬೆಂಗಳೂರು ಪಂದ್ಯಕ್ಕೆ ಅಲಭ್ಯರಾಗಿರುವುದು ಪ್ರವಾಸಿ ತಂಡಕ್ಕೆ ದೊಡ್ಡ ಹಿನ್ನಡೆ ಎನಿಸಿದೆ. ಆದರೆ ಸ್ಪಾನಿಸ್ ಸ್ಪೆಕರ್ ಡೇವಿಡ್ ಗ್ಯಾಂಡೆ ತಂಡಕ್ಕೆ ಮರಳಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಏತನ್ಮಧ್ಯೆ, ಮಿಡ್‌ಫೀಲ್ಡರ್ ನಿಯೊ ಅಕೋಸ್ಟಾ ಸಹ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಹಿಂತಿರುಗಿದ್ದಾರೆ.
ಸುನಿಲ್ ಛತ್ರಿ ಹೊರತುಪಡಿಸಿ ಇತರ ಆಟಗಾರರಿಂದ ಗೋಲ್ ದಾಖಲಿಸಲು ಸಾಧ್ಯವಾಗದಿರುವ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಿನಿಲ್ಲೊಸ್, “ಪ್ರತಿಯೊಂದು ಪಂದ್ಯದಲ್ಲೂ ನಾವು ಸಾಧ್ಯವಾದಷ್ಟು ಗೋಲಿನ ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ.ಇತರ ಆಟಗಾರರು ಗೋಲ್ ಗಳಿಸುತ್ತಾರೆ ಎಂಬುದು ನಮಗೆ ಖಚಿತವಾಗಿದೆ. ಜಮ್ಶೆಡ್ಡುರದಲ್ಲಿ ನಡೆದ ತವರಿನಾಚೆಯ ಪಂದ್ಯದಲ್ಲಿ ಸುಬ್ರಾತೊ ಅತ್ಯುತ್ತಮ ಆಟಗಾರ ಎನಿಸಿದ್ದರು. ಅದು ನಾವು ರಚಿಸುತ್ತಿರುವ ರೀತಿಯ ಅವಕಾಶಗಳ ಸೂಚಕವಾಗಿದೆ,” ಎಂದು ಹೇಳಿದ್ದಾರೆ.
ವೀಸಾ ಸಮಸ್ಯೆಯಿಂದಾಗಿ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿರುವ ದೇಶಾನ್ ಬ್ರೌನ್ ಗುರುವಾರದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಮಧ್ಯೆ, ಮಿಡ್‌ಫೀಲ್ಡರ್ ರಫೀಲ್ ಆಗಸ್ಟೋ ಗೋವಾ ಪಂದ್ಯದ ಬಳಿಕ ತಂಡಕ್ಕೆ ಲಭ್ಯರಿದ್ದಾರೆ.ಆತಿಥೇಯರು ಹೆಚ್ಚಿನ ಪ್ರೇರಣೆಯಾಗಿ ಕಾರ್ಯನಿರ್ವಹಿಸಬೇಕಾದರೆ, ತವರು ಕೋಟೆಯಲ್ಲಿ ಇನ್ನೂ ಸೋಲಿಸದ ಏಕೈಕ ಐಎಸ್ಎಲ್ ತಂಡವಾಗಿ ಜಮ್ಶೆಡ್ಡುರ ಉಳಿದಿದೆ. ಹೀಗಾಗಿ ಬ್ಲೂಸ್ ಇದನ್ನು ಬದಲಾಯಿಸಲು ಉತ್ಸುಕವಾಗಿದೆ.
ಪಂದ್ಯ ಗುರುವಾರ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್‌ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್‌ನಲ್ಲಿ ನೇರ ಪ್ರಸಾರ ಲಭ್ಯ ಇರಲಿದೆ.