ಬೆಂಗಳೂರು ಎಫ್ ಸಿ ಕನಸು ಭಗ್ನ

ಎಎಫ್ಸಿ ಕಪ್ ಗುಂಪು ಹಂತಕ್ಕೆ ತೇರ್ಗಡೆ ಹೊಂದುವಲ್ಲಿ ಕಾರ್ಲೊಸ್ ಕ್ವಾಡ್ರಟ್ ಬಳಗ ವಿಫಲ

ಬೆಂಗಳೂರು: ಬೆಂಗಳೂರು ಎಫ್ ಸಿ ಎಎಫ್ ಸಿ ಕಪ್ ಪ್ಲೇ ಆಫ್ ಹಂತದ ದ್ವಿತೀಯ ಚರಣದಲ್ಲಿ ಮಾಲೀವ್ ಮೂಲದ ಮಯಾ ತಂಡದ ಸಮಬಲ ಸಾಸಿದ ಹೊರತಾಗಿಯೂ ಶೂಟೌಟ್‌ನಲ್ಲಿ 3-4 ಗೋಲ್‌ಗಳ ಅಂತರದಿಂದ ಸೋಲುಂಡು ಟೂರ್ನಿಯ ಗುಂಪು ಹಂತಕ್ಕೆ ತೇರ್ಗಡೆ ಹೊಂದುವಲ್ಲಿ ವಿಫಲಗೊಂಡಿದೆ.

ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಬ್ಲೂಸ್ ತಂಡ (30 ನಿಮಿಷಗಳ ಪೆನಾಲ್ಟಿ ಅವ ಸೇರಿದಂತೆ) 3–2 ಗೋಲ್‌ಗಳಿಂದ ಮಝಿಯಾ ವಿರುದ್ಧ ಗೆಲುವು ಸಾಸಿತು. ಆದರೆ ಹಿಂದಿನ ಪಂದ್ಯದಲ್ಲಿ ಮಝಿಯಾ ವಿರುದ್ಧ 1-2ರಲ್ಲಿ ಸೋತಿದ್ದ ಕಾರಣ ಉಭಯ ತಂಡಗಳು 4-4 ಗೋಲ್‌ಗಳಿಂದ ಸಮಬಲ ಸಾಸಿದ ಪರಿಣಾಮ ಪಂದ್ಯ ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಬೆಂಗಳೂರು ಎಫ್ ಸಿ 3-4ಗಳಿಂದ ಪರಾಭವಗೊಂಡ ಪರಿಣಾಮ ಮಯಾ ಗುಂಪು ಹಂತಕ್ಕೆ ಮುನ್ನಡೆಯಿತು.

ಇದಕ್ಕೂ ಮುನ್ನ ಬೆಂಗಳೂರು ಎಫ್ ಸಿ ಪರ ದೇಶಾನ್ ಬ್ರೌನ್ 58ನೇ ನಿಮಿಷದಲ್ಲಿ ಹಾಗೂ ಛತ್ರಿ 78ನೇ ನಿಮಿಷದಲ್ಲಿ ತಲಾ ಒಂದು ಗೋಲ್ ಬಾರಿಸಿದರೆ, ಮಯಾ ಪರ ಇಬ್ರಾಹಿಂ ವಾಹೀದ್ ಹಸನ್ 73ನೇ ನಿಮಿಷದಲ್ಲಿ ಏಕೈಕ ಗೋಲ್ ದಾಖಲಿಸಿದರು. ಪ್ರಥಮಾರ್ಧದಲ್ಲಿ ಗೋಲ್ ರಹಿತಗೊಂಡ ಪರಿಣಾಮ ದ್ವಿತೀಯಾರ್ಧದಲ್ಲಿ ತನ್ನ ಎಂದಿನ ಆಕ್ರಮಣಕಾರಿ ಆಟವನ್ನು ಮುಂಚೂಣಿಗೆ ತಂದ ಬಿಎಫ್ಸಿ 58ನೇ ನಿಮಿಷದಲ್ಲಿ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಇದರಿಂದ ಒತ್ತಡಕ್ಕೆ ಸಿಲುಕಿದ ಮಝಿಯಾ ಛಲ ಬಿಡದೆ ಆತಿಥೇಯರ ಮೇಲೆ ಮುಗಿ ಬಿದ್ದಿತು. ಆತಿಥೇಯರು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರೆ ಪ್ರವಾಸಿ ತಂಡ ಆಕ್ರಮಣಕಾರಿ ಆಟಕ್ಕೆ ಆದ್ಯತೆ ನೀಡಿತು.

ಕೊನೆಗೂ ಬಿಎಫ್ಸಿ ರಕ್ಷಣಾ ಕೋಟೆಯನ್ನು ಭೇದಿಸಿದ ಮಾಲೀವ್ ತಂಡದ ಪರ ಇಬ್ರಾಹಿಂ 73ನೇ ನಿಮಿಷದಲ್ಲಿ ಗೋಲ್ ಸಿಡಿಸಿ 1-1ರ ಸಮಬಲದ ಹೋರಾಟಕ್ಕೆ ಸಾಕ್ಷಿಯಾದರು. ಇದರಿಂದ ಮತ್ತೆ ಸಂಕಷ್ಟಕ್ಕೆ ಒಳಗಾದ ಕಾರ್ಲೊಸ್ ಬಳಗ ಚುರುಕಿನ ಆಟಕ್ಕೆ ಮುಂದಾಯಿತು. ಇದರ ಫಲವಾಗಿ ನಾಯಕ ಛತ್ರಿ 78ನೇ ನಿಮಿಷದಲ್ಲಿ ತಂಡದ ಎರಡನೇ ಗೋಲ್ ಬಾರಿಸಿ ಮುನ್ನಡೆಯನ್ನು 2-1ಕ್ಕೆ ವಿಸ್ತರಿಸಿದರು.

ಅಂತಿಮ ಕ್ಷಣದಲ್ಲಿ ಗಾಯದ ಸಂಬಂಧ ಹೆಚ್ಚುವರಿಯಾಗಿ ದೊರೆತ ಆರು ನಿಮಿಷಗಳಲ್ಲಿ ಆಟದಲ್ಲಿ ಎಚ್ಚರಿಕೆ ಆಟವಾಡಿದ ಬ್ಲೂಸ್ 2-1ರಲ್ಲಿ ಗೆಲುವು ಸಾಸುವಲ್ಲಿ ಯಶ ಕಂಡಿತು.ಇದಕ್ಕೂ ಮುನ್ನ ಎಎಫ್ ಸಿ ಕಪ್ ಗುಂಪು ಹಂತಕ್ಕೆ ಅರ್ಹತೆ ಹೊಂದಲು ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿದ ಬೆಂಗಳೂರು ಎಫ್ಸಿ ಪ್ರಥಮಾರ್ಧದಲ್ಲಿ ಸಿಕ್ಕ ಹಲವು ಗೋಲಿನ ಅವಕಾಶಗಳನ್ನು ಕೈಚೆಲ್ಲಿದ ಪರಿಣಾಮ ವಿರಾಮಕ್ಕೆ ಮುನ್ನಡೆ ಗಳಿಸುವಲ್ಲಿ ವಿಫಲಗೊಂಡಿತು. ಹೀಗಾಗಿ ಉಭಯ ತಂಡಗಳು ಗೋಲ್ ರಹಿತವಾಗಿ ವಿರಾಮಕ್ಕೆ ತೆರಳಿದವು.

17ನೇ ನಿಮಿಷದಲ್ಲಿ ದೇಶಾನ್ ನೀಡಿದ ಚೆಂಡನ್ನು ರಿನೊ ಉತ್ತಮವಾಗಿ ಅಶಿಕ್ಗೆ ನೀಡಿದರು. ಆದರೆ ಗೋಲಿಗಾಗಿ ಹೊಡೆದ ಚೆಂಡು ಗೋಲ್‌ಪೆಟ್ಟಿಗೆ ಮೇಲಿಂದ ಮೈದಾನದಿಂದ ಹೊರ ಹೋಯಿತು. ಹೀಗಾಗಿ ಆರಂಭದಲ್ಲೇ ಮುನ್ನಡೆ ಗಳಿಸುವ ಬ್ಲೂಸ್ ಕನಸು ನನಸಗಾಲಿಲ್ಲ. ನಂತರ ಇನ್ನಷ್ಟು ಪರಿಣಾಮಕಾರಿ ಆಟಕ್ಕೆ ಒತ್ತು ನೀಡಿದ ಬ್ಲೂಸ್ ಪದೇ ಪದೇ ಪ್ರವಾಸಿ ತಂಡ ಮಝಿಯಾ ತಂಡದ ರಕ್ಷಣಾ ಪಡೆಗೆ ಆತಂಕವೊಡ್ಡಿದರು. ಇದರ ಫಲವಾಗಿ 30ರಿಂದ 34 ನಿಮಿಷಗಳ ಅಂತರದಲ್ಲಿ ಎರಡು ಬಾರಿ ಗೋಲ್ ಗಳಿಸುವ ಅವಕಾಶ ಸೃಷ್ಟಿಸಿತು. ಆದರೆ ಒಮ್ಮೆಯೂ ಲಾಭ ಪಡೆಯುವಲ್ಲಿ ಕಾರ್ಲೊಸ್ ಕ್ವಾಡ್ರಟ್ ಬಳಗ ಯಶಸ್ವಿಯಾಗಲಿಲ್ಲ. 34 ನಿಮಿಷದಲ್ಲಿ ನಿಶು ಒದಗಿಸಿದ ಪಾಸನ್ನು ಬ್ರೌನ್ ಗುರಿ ತಲುಪಿಸುವಲ್ಲಿ ವಿಫಲರಾದರೆ, 30ನೇ ನಿಮಿಷದಲ್ಲಿ ಎರಿಕ್ ಪ್ರಮಾದ ಎಸಗಿದರು.

Malcare WordPress Security