ಎಎಫ್ಸಿ ಕಪ್ ಗ್ರೂಪ್ ಹಂತಕ್ಕೇರುವ ಬ್ಲೂಸ್ ಹಿನ್ನಡೆ ತಗ್ಗಿಸಲು ಮನೆಯಂಗಳ ಸಜ್ಜು

ದ್ವಿತೀಯ ಲೆಗ್‌ನ ಪ್ಲೇಆಫ್ ಪಂದ್ಯದಲ್ಲಿ ಮಾಲೀವ್ ಮೂಲದ ಮಜಿಯಾ ವಿರುದ್ಧ 2-1ರ ಹಿನ್ನಡೆ ತಗ್ಗಿಸುವತ್ತ ಕ್ವಾಡ್ರಟ್ ಬಳಗದ ಕಣ್ಣು

ಬೆಂಗಳೂರು: ಎಎಫ್ಸಿ ಕಪ್ ಗ್ರೂಪ್ ಹಂತದಲ್ಲಿ ಮಾಲೀವ್ ಮೂಲದ ಮಜಿಯಾ ಎಸ್ ಆಂಡ್ ಆರ್‌ಸಿ ತಂಡದ ವಿರುದ್ದ ಸವಾಲು ಎದುರಿಸಲು ಬೆಂಗಳೂರು ಎಫ್ಸಿ ತವರಿನಂಗಳದಲ್ಲಿ ಸಜ್ಜಾಗಿದೆ. ಹಾಗೆಯೇ ಮೊದಲ ಲೆಗ್‌ನಲ್ಲಿ 1-2ರ ಹಿನ್ನಡೆ ತಗ್ಗಿಸಲು ಬುಧವಾರ ಹಾತೊರೆಯುತ್ತಿದೆ.

ಕಳೆದ ವಾರ ಮಾಲೆಯ ರಾಎಎಫ್ಸಿ ಕಪ್ ಗ್ರೂಪ್ ಹಂತಕ್ಕೇರುವ ಬ್ಲೂಸ್ ಹಿನ್ನಡೆ ತಗ್ಗಿಸಲು ಮನೆಯಂಗಳ ಸಜ್ಜು ಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಬ್ಲೂಸ್ ತಂಡ 1-2ರಲ್ಲಿ ಮಜಿಯಾ ವಿರುದ್ಧ ಪರಾಭವಗೊಂಡಿತು. ಬ್ಲೂಸ್ ಪರ ನಿಲಿ ಪೆರ್ಡೊಮೊ ಒಂದು ಗೋಲ್ ಬಾರಿಸಿದರೆ, ಮಾಲೀವ್ ತಂಡದ ಪರ ಇಬ್ರಾಹಿಂ ಮಹ ಮತ್ತು ಕೊರ್ನೆಲೀಯಸ್ ಸೊವಾರ್ಟ್‌ ತಲಾ ಒಂದು ಗೋಲ್ ದಾಖಲಿಸಿ ಗೆಲುವಿನ ರೂವಾರಿಯೆನಿಸಿದ್ದರು.ಆದರೆ ಬ್ಲೂಸ್ ಕೋಚ್ ಕಾರ್ಲೊಸ್ ಕ್ವಾಡ್ರಟ್, ಈ ಋತುವಿನಲ್ಲಿ ಗೆಲುವಿನ ಮೆಟ್ಟಿಲೆತ್ತುವ ಮೂಲಕ ಬ್ಲೂಸ್ ನಿರ್ಣಾಯಕ ಹಂತಕ್ಕೆ ಮುನ್ನಡೆಯಲಿದೆ ಎಂದಿದ್ದಾರೆ.

“ಬುಧವಾರದ ಪಂದ್ಯದಲ್ಲಿ ಮಜಿಯಾ ವಿರುದ್ಧ ನಾವು ಕನಿಷ್ಠ 1 ಅಂಕ ಗಳಿಸಬೇಕೆಂಬುದು ನಮಗೆ ಅರಿವಿದೆ. ನಮ್ಮ ಆದ್ಯತೆ ಕೂಡ ಇದೆ ಆಗಿದ್ದು , ಪರಿಣಾಮಕಾರಿ ಆಟ ಆಡಬೇಕಿದೆ. ಆದರೆ ಇದೇ ಸಮಯದಲ್ಲಿ ಎದುರಾಳಿಗೆ ಗೋಲ್ ಬಿಟ್ಟುಕೊಡಂದತೆ ನಾವು ಎಚ್ಚರಿಕೆ ವಹಿಸಬೇಕಿದೆ. ಫುಟ್ಬಾಲ್ 90 ನಿಮಿಷಗಳ ಆಟವಾಗಿದ್ದು , ಏನು ಬೇಕಾದರೆ ನಡೆಯಬಹುದಾಗಿದೆ,” ಎಂದು ಕ್ಯಾಡ್ರಟ್ ಹೇಳಿದ್ದಾರೆ.

ಇಂಡಿಯನ್ ಸೂಪರ್ ಲೀಗ್‌ನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಎಟಿಕೆ ವಿರುದ್ದ ಗಾಯಗೊಂಡಿರುವ ಸೈಕರ್ ಥೋಂಗ್ ಖೋಸೀಮ್ ಹಾಕಿಷ್ ಬೆಂಗಳೂರು ತಂಡಕ್ಕೆ ಅಲಭ್ಯರಾಗಿದ್ದಾರೆ. ಎರಡೂ ಸ್ಪರ್ಧೆಗಳಲ್ಲಿ ಫಲಿತಾಂಶಗಳು ಸಾಗದಿದ್ದರೂ ಕ್ವಾಡ್ರಟ್ ತನ್ನ ತಂಡ ಕ್ರಿಯಾತ್ಮಕತೆಯನ್ನು ಹೊಂದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

“ಸೆಂಬಾಯಿ ಆಸ್ಪತ್ರೆಯಲ್ಲಿದ್ದಾರೆ. ಅವರ ಗಾಯದ ಪರೀಕ್ಷೆಯ ಫಲಿತಾಂಶಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಆದರೆ ಆತ ನಾಳಿನ ಪಂದ್ಯಕ್ಕೆ ಲಭ್ಯರಿಲ್ಲ. ಅವರು ಫಿಟ್ ಆಗುವವರೆಗೂ ಅವರ ಸ್ಥಾನಕ್ಕೆ ತಂಡದಲ್ಲಿರುವ ಇತರ ಆಟಗಾರರಿಗೆ ಸ್ಥಾನ ಕಲ್ಪಿಸಲಾಗುವುದು. ಡಿಮಾಸ್ ಮತ್ತು ಅಲ್ಬರ್ಟ್ ಕೂಡ ನಾಳಿನ ಪಂದ್ಯದಲ್ಲಿ ಆಡುತ್ತಿಲ್ಲ . ಐಎಸ್ ಎಲ್ ಪಂದ್ಯದಲ್ಲಿ ಅವರನ್ನು ನಾನು ಬಳಸಿಕೊಂಡಿದ್ದೇನೆ. ಮಜಿಯಾ ವಿರುದ್ದ ವಿಶೇಷ ಫೈನಲ್‌ಗೆ ಈ ಆಟಗಾರರು ಫಿಟ ಆಗಲಿದ್ದಾರೆ,” ಎಂದು ಕ್ವಾಡ್ರಟ್ ಹೇಳಿದ್ದಾರೆ.

ಒಂದು ಪಂದ್ಯ ಅಮಾನತುಗೊಂಡಿರುವ ಹರ್ಮನ್‌ಜೋತ್‌ ಖಾಬ್ರಾ ಸಹ ಬ್ಲೂಸ್ ತಂಡಕ್ಕೆ ಲಭ್ಯವಾಗುತ್ತಿಲ್ಲ. ಹೀಗಾಗಿ ಒಂದು ಪಂದ್ಯದ ಅಮಾನತು ಶಿಕ್ಷೆ ಪೂರೈಸಿರುವ ಸುರೇಶ್ ವಾಂಗ್‌ಜಾಮ್‌ಗೆ ಕ್ವಾಡ್ರಟ್ ಸ್ವಾಗತಿಸಿದ್ದಾರೆ.

ಇದೇ ವೇಳೆ ಕಂಠೀರವ ಕ್ರೀಡಾಂಗಣದಲ್ಲಿ ಅನೇಕ ವಿಶೇಷ ರಾತ್ರಿಗಳ ಭಾಗವಾಗಿದ್ದ ಅಪಾರ ಬೆಂಗಳೂರು ಅಭಿಮಾನಿಗಳ ಬೆಂಬಲವನ್ನು ಬ್ಲೂಸ್ ಬಾಸ್ ಶ್ಲಾಘಿಸಿದ್ದಾರೆ. ‘ನಮ್ಮ ಮುಂದೆ ಮೂರು ಫೈನಲ್‌ಗಳು ಇರುವುದು ನಮ್ಮ ಅದೃಷ್ಟ.ಈ ಪೈಕಿ ಎರಡು ತವರು ಬೆಂಬಲಿಗರ ಮುಂದೆ ನಡೆಯಲಿವೆ. ಹಿಂದಿನ ಇತಿಹಾಸದಲ್ಲಿ ನಾವು ಜೆಡಿಟಿ ವಿರುದ್ಧ 3-1ರಲ್ಲಿ ಐಎಸ್ಎಲ್ ಸೆಮಿಫೈನಲ್‌ನಲ್ಲಿ ಎಫ್ಸಿ ಪುಣೆ ಸಿಟಿ ವಿರುದ್ಧ 3-1ರಲ್ಲಿ ಹಾಗೂ ಕಳೆದ ಋತುವಿನಲ್ಲಿ ನಾರ್ತ್‌ಈಸ್ಟ್ ವಿರುದ್ಧ 3-0 ಅಂತರದಲ್ಲಿ ಜಯ ಸಾಸಿದ್ದೇವೆ. ಆಟಗಾರರ ಗೆಲುವಿನ ಮನಸ್ಥಿತಿ ಮತ್ತು ಅಭಿಮಾನಿಗಳ ಬೆಂಬಲವಿರುವುದು ಉತ್ತಮ ಸಂಯೋಜನೆಯಾಗಿದೆ,” ಎಂದು ಕ್ವಾಡ್ರಟ್ ಹೇಳಿದ್ದಾರೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.

Malcare WordPress Security