ಮಾಲೆಯಲ್ಲಿಂದು ಪ್ಲೇಆಪ್ ಸುತ್ತಿನ ಮೊದಲ ಚರಣದ ಸೆಣಸಾಟದಲ್ಲಿ ಕ್ವಾಡ್ರಟ್ ಬ್ಲೂಸ್‌ಗೆ ಮಾಲೀವ್ ಮೂಲದ ಮಜಿಯಾ ಸವಾಲು
ಮಾಲೆ (ಮಾಲೀವ್): ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ಸ್ ಬೆಂಗಳೂರು ಎಫ್ ಸಿ ಮಾಲೆಯ ಮಾಲೀವ್ ರಾಷ್ಟ್ರೀಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ 2020ರ ಎಎಫ್ಸಿ ಕಪ್‌ನ ಪ್ಲೇ ಆಫ್ ಸುತ್ತಿನ ಮೊದಲ ಚರಣದಲ್ಲಿ ಪಂದ್ಯದಲ್ಲಿ ಮಾಲೀವ್ ಮೂಲದ ಮಜಿಯಾ ಎಸ್ ಮತ್ತು ಆರ್‌ಸಿ ತಂಡವನ್ನು ಎದುರಿಸಲಿದೆ.
ಭೂತಾನ್‌ನ ಮೂಲದ ಪಾರೊ ಎಫ್ಸಿ ವಿರುದ್ದ 10-1ರ ಸರಾಸರಿಯಲ್ಲಿ ಭಾರಿ ಅಂತರದ ಗೆಲುವು ಸಾಸಿ ಅರ್ಹತೆ ಗಳಿಸಿದ ಹೊರತಾಗಿಯೂ ಬ್ಲೂಸ್ ಕೋಚ್ ಕಾರ್ಲೊಸ್ ಕ್ವಾಡ್ರಟ್, ಆದ್ರ್ರ ಪರಿಸ್ಥಿತಿಯಲ್ಲಿ ಫಲಿತಾಂಶ ತಮ್ಮದಾಗಿಸಿಕೊಳ್ಳಲು ತಮ್ಮ ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ.
“ತಡವಾದ ಗೋಲಿನೊಂದಿಗೆ ಮಜಿಯಾ ಎಸ್ ಮತ್ತು ಆರ್ ಎಸ್ ವಿರುದ್ಧ ಜಯಿಸಿದ್ದು , ಹಾಗೂ 2017ರಲ್ಲಿ ನ್ಯೂ ರೇಡಿಯಂಟ್ ನಮ್ಮನ್ನು ಉತ್ತಮಗೊಳಿಸಿದಾಗ ನನಗೆ ನೆನಪಿದೆ. ಈ ಟೂರ್ನಿಯಲ್ಲಿ ಪಾರೊ ಎಫ್ಸಿ ವಿರುದ್ಧ ಗೆದ್ದ ದೊಡ್ಡ ಅಂತರದ ಗೆಲುವು ಸಾಸಿದ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಆದರೆ ಈಗ ಸಂಪೂರ್ಣ ವಿಭಿನ್ನ ಸನ್ನಿವೇಶವಿದೆ. ಹೀಗಾಗಿ ಹಿಂದಿನ ಫಲಿತಾಂಶ ಗಣನೆಗೆ ಬಾರದು,” ಎಂದು ಕ್ವಾಡ್ರಟ್ ಹೇಳಿದ್ದಾರೆ.
ಮಜಿಯಾ ಎಸ್ ಮತ್ತು ಆರ್‌ಸಿ ವಿರುದ್ಧ ಕಾಂಟಿನೆಂಟಲ್ ಸ್ಪರ್ಧೆಯಲ್ಲಿ ಮೊದಲ ಗೆಲುವು ಸಾಸಿರುವ ಬ್ಲೂಸ್, ಉಭಯ ತಂಡಗಳ ಸೆಣಸಾಟದಲ್ಲಿ ಮೇಲುಗೈ ಸಾಸಿದರೂ ಹಿಂದಿನ ಪ್ರದರ್ಶನ ಅತ್ಯಂತ ಚಿಕ್ಕದಾಗಿದೆ ಎಂದು ಕ್ವಾಡ್ರಟ್ ನುಡಿದಿದ್ದಾರೆ. “ಮಾಲೀವ್ ತಂಡಗಳ ವಿರುದ್ದ ನಾವು ಹೇಗೆ ಪ್ರದರ್ಶನ ನೀಡಿದವು ಎಂಬುದು ನಿಜ. ಆದರೆ ನಾವು ಕೆಲವು ಆಟಗಳನ್ನು ಹೇಗೆ ಜಯಿಸಿದ್ದೇವೆ ಎಂದು ನೀವು ಗಮನಿಸಿದರೆ, ಇದು ತುಂಬಾ ಕಠಿಣ, ಕಂಠೀರವದಲ್ಲಿ ಗಾಯದ ಸಮಯದಲ್ಲಿ ನಿಶು ಗೋಲ್ ಗಳಿಸಿದರೆ, ಮಾಲೀವ್‌ನಲ್ಲಿ ಜಾನ್ಸನ್ ತಡವಾಗಿ ಗೋಲ್ ಬಾರಿಸಿದರು. ಹೀಗಾಗಿ ನಾವು ಫೇವರಿಟ್ ಎಂದು ಹೇಳಲು ಕಠಿಣವಾಗುತ್ತದೆ,” ಎಂದು ಸ್ಪೇನ್ ಕೋಚ್ ಹೇಳಿದ್ದಾರೆ.
ಸ್ನಾಯು ಸೆಳೆತದ ಗಾಯದಿಂದ ಬಳಲುತ್ತಿರುವ ನಾಯಕ ಸುನಿಲ್ ಛತ್ರಿ ಅವರ ಅಲಭ್ಯತೆಯಲ್ಲಿ ಬ್ಲೂಸ್ ಕಣಕ್ಕಿಳಿಯುತ್ತಿದೆ. ಈ ಮಧ್ಯೆ ಮಿಡ್‌ಫೀಲ್ಡರ್ ಸುರೇಶ್ ವಾಂಗ್ವಾಮ್ ಸಹ ಒಂದು ಪಂದ್ಯ ಅಮನತುಗೊಂಡಿರುವ ಕಾರಣ ಅವರೂ ಅಲಭ್ಯರಾಗಿದ್ದಾರೆ. ಪಾರೊ ಎಫ್ಸಿ ವಿರುದ್ಧದ ಎರಡು ಪಂದ್ಯಗಳಲ್ಲೂ ವಾಂಗ್ವಾಮ್ ಹಳದಿ ಕಾರ್ಡ್‌ಗೆ ಗುರಿಯಾಗಿದ್ದರು.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಮೂಲದ ಅಭಾಹನಿ ಢಾಕಾ ವಿರುದ್ಧ ತವರಿನಾಚೆಯ ಗೋಲಿನಿಂದ ಜಯ ಗಳಿಸಿ ಪ್ಲೇಆಫ್ ಸುತ್ತಿಗೆ ಮುನ್ನಡೆದಿರುವ ಕೋಚ್ ಮರ್ಜಾನ್ ಸೆಕುಲೊವಾಸ್ಯೆ ಬಳಗ, ಮೊದಲ ಚರಣದಲ್ಲಿ ಬಂಗಬಂಧು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 22ರಲ್ಲಿ ಡ್ರಾ ಸಾಸಿತ್ತು. ಪಂದ್ಯ ಸಂಜೆ 4.30ಕ್ಕೆ ಆರಂಭವಾಗಲಿದೆ.