ಪಾರೊ ಎಫ್ ಸಿ ವಿರುದ್ಧ ಬ್ಲೂಸ್‌ಗೆ ಭರ್ಜರಿ ಗೆಲುವು

ಎಎಫ್ ಸಿ ಕಪ್ 2020ರ ಅರ್ಹತಾ ಸುತ್ತಿನ ಅಂತಿಮ ಸುತ್ತಿಗೆ ಬೆಂಗಳೂರು ಲಗ್ಗೆ | ಹಾಕಿಷ್, ಬ್ರೌನ್ ಹ್ಯಾಟ್ರಿಕ್ ಸಾಧನೆ

ಬೆಂಗಳೂರು: ಪಂದ್ಯದ ಉಭಯ ಅವಗಳಲ್ಲಿ ಗೋಲ್‌ಗಳ ಸುರಿ ಮಳೆಗರೆದ ಬೆಂಗಳೂರು ಎಎಫ್ಸಿ ಕಪ್‌ನ ಪ್ರಾಥಮಿಕ ಸುತ್ತಿನ ದ್ವಿತೀಯ ಲೆಗ್‌ನಲ್ಲಿ ಭೂತಾನ್ ಮೂಲದ ಪಾರೊ ಎಫ್ಸಿ ವಿರುದ್ದ ಭರ್ಜರಿ ಗೆಲುವು ಸಾಸಿದೆ. ಇದರೊಂದಿಗೆ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ ಅರ್ಹತಾ ಸುತ್ತಿನ ಫೈನಲ್‌ಗೆ ಅರ್ಹತೆ ಗಳಿಸಿದೆ.

ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಹಣಾಹಣಿಯಲ್ಲಿ ಮಿಂಚಿದ ಕಳೆದ ಬಾರಿಯ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ ಬೆಂಗಳೂರು ಎಫ್ಸಿ 9-1 ಗೋಲ್‌ಗಳಿಂದ ಪಾರೊ ಎಫ್ ಸಿ ವಿರುದ್ದ ಅಕಾರಯುತ ಜಯಗಳಿಸಿದೆ.. ಭೂತಾನ್‌ನಲ್ಲಿ ನಡೆದ ಮೊದಲ ಲೆಗ್‌ನಲ್ಲಿ 1-0 ಅಂತರದಲ್ಲಿ ಪಾರೊ ತಂಡವನ್ನು ಸೋಲಿಸಿದ್ದ ಬೆಂಗಳೂರು ಎಫ್ ಸಿ, ತವರಿನಲ್ಲಿ ತಾನೇಷ್ಟು ಬಲಶಾಲಿ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿತು. ಬ್ಲೂಸ್ ಮುಂದಿನ ಸುತ್ತಿನಲ್ಲಿ ಮಾಲೀವ್ನ ಮಯಾ ಅಥವಾ ಬಾಂಗ್ಲಾದೇಶದ ಅಬಾಹನಿ ಢಾಕಾ ತಂಡವನ್ನು ಎದುರಿಸಲಿದೆ.

ಬೆಂಗಳೂರು ತಂಡದ ಪರ ಥಾಂಗೊಸೀಮ್ ಹಾಕಿಪ್ (6, 26, 66, 85ನೇ ನಿಮಿಷ) ಹ್ಯಾಟ್ರಿಕ್ ಸೇರಿ ನಾಲ್ಕು ಗೋಲ್ ಬಾರಿಸಿದರೆ, ದೇಶಾನ್ ಬ್ರೌನ್ (29, 54, 64ನೇ ನಿಮಿಷ) ಮೂರು ಗೋಲ್ ಗಳಿಸಿ ಜಯದ ರೂವಾರಿಯೆನಿಸಿದರೆ, ಜವಾನಾನ್ (14ನೇ ನಿಮಿಷ) ಮತ್ತು ನಿಲಿ (79ನೇ ನಿ.) ತಲಾ ಒಂದು ಗೋಲ್ ಗಳಿಸಿ ಜಯದ ಅಂತರ ವಿಸ್ತರಿಸಿದರು. ಅತ್ತ ಪಾರೊ ಎಫ್ ಸಿ ಪರ ಚೆಂಚೊ ಡೊರ್ಜಿ(16ನೇ ನಿಮಿಷ) ಏಕೈಕ ಗೋಲ್ ಗಳಿಸಲಷ್ಟೇ ಶಕ್ತಗೊಂಡರು.

ಪ್ರಸಕ್ತ ಐಎಸ್ಎಲ್‌ನಲ್ಲಿ ಸೆಮಿಫೈನಲ್ ಹೊಸ್ತಿಲಲ್ಲಿರುವ ಬ್ಲೂಸ್ ಪಂದ್ಯದ ಉಭಯ ಅವಗಳಲ್ಲಿ ಪಾರಮ್ಯ ಸಾಸಿತು. ಅದರಲ್ಲೂ ಪ್ರಥಮಾರ್ಧಕ್ಕೆ 4-1ರಲ್ಲಿ ಮುನ್ನಡೆ ಗಳಿಸಿದ ಬೆಂಗಳೂರು ತಂಡ ಸಂಪೂರ್ಣ ಪಾರಮ್ಯ ಸಾಸಿತು. ಪಂದ್ಯ ಆರಂಭವಾಗುತ್ತಿದ್ದಂತೆಯೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಬಿಎಫ್ಸಿ ಹಲವು ಬಾರಿ ಗೋಲ್ ಗಳಿಕೆಯ ಅವಕಾಶಗಳನ್ನು ಸೃಷ್ಟಿಸಿತು. ಇದರ ಫಲವಾಗಿ 6ನೇ ನಿಮಿಷದಲ್ಲಿ ಹಾಕಿಷ್ ಆತಿಥೇಯರ ಪರ ಖಾತೆ ತೆರೆದು 1-0 ಅಂತರದ ಮುನ್ನಡೆ ಕಲ್ಪಿಸಿದರು.

ನಂತರ ಜುವಾನಾನ್ ತಂಡದ ಮುನ್ನಡೆಯನ್ನು 14ನೇ ನಿಮಿಷದಲ್ಲಿ 2-0ಗೆ ಹಿಗ್ಗಿಸಿದರು. ಆದರೆ ಇದಾದ ಎರಡೇ ನಿಮಿಷಗಳ ಅಂತರದಲ್ಲಿ ಪ್ರವಾಸಿ ತಂಡ ಒಂದು ಗೋಲ್ ಬಾರಿಸಿ ಹಿನ್ನಡೆಯ ಅಂತರವನ್ನು 1-2ಕ್ಕೆ ತಗ್ಗಿಸಿತು. ಆದಾಗ್ಯೂ ಎದುರಾಳಿಯ ರಕ್ಷಣಾ ಕೋಟೆಯನ್ನು ಸಮರ್ಥವಾಗಿ ಭೇದಿಸಿದ ಹಾಕಿಪ್ 26ನೇ ನಿಮಿಷದಲ್ಲಿ ವೈಯಕ್ತಿಕ ಎರಡನೇ ಗೋಲ್ ಗಳಿಸಿ ಬ್ಲೂಸ್ ಮುನ್ನಡೆಯನ್ನು 3-1ಕ್ಕೆ ವಿಸ್ತರಿಸಿದರು. ಇದಾದ ಮೂರು ನಿಮಿಷಗಳ ಅಂತರದಲ್ಲಿ ಇತ್ತೀಚೆಗಷ್ಟೇ ಬಿಎಫ್ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ದೇಶಾನ್ ಬ್ರೌನ್ ಗೋಲ್ ಬಾರಿಸಿ ತಂಡದ 4-1ರ ಪ್ರಾಬಲ್ಯಕ್ಕೆ ನೆರವಾದರು.

ಕಾಯಂ ನಾಯಕ ಸುನಿಲ್ ಛತ್ರಿ ಅವರ ಅನುಪಸ್ಥಿತಿಯಲ್ಲೂ ತವರಿನಂಗಳದಲ್ಲಿ ಅಮೋಘ ಪ್ರದರ್ಶನವಿತ್ತ ಬಿಎಫ್ಸಿ ದ್ವಿತೀಯಾರ್ಧದಲ್ಲೂ ತನ್ನ ದಾಳಿಯನ್ನು ಮುಂದುವರಿಸಿತು. ಇದರ ಫಲವಾಗಿ ಬ್ರೌನ್ 54ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಗಳಿಸಿ ಮಿಂಚಿದರು. ಎದುರಾಳಿಯ ರಕ್ಷಣಾ ಬೇಲೆಯನ್ನು ಛಿದ್ರಗೊಳಿಸಿದ ಬಿಎಫ್ಸಿ ಮತ್ತೆ ಮೂರು ಗೋಲ್ ಸಿಡಿಸಿತು.

Malcare WordPress Security