ಜಯದೊಂದಿಗೆ ಕಂಠೀರವಕ್ಕೆ ವಾಪಾಸ್ಸಾಗಲು ಬ್ಲೂಸ್‌ಗೆ ನೆರವಾದ ಸಂಬಾಯಿ
ಥಿಂಪು, ಭೂತಾನ್: ಪಂದ್ಯದ ದ್ವಿತೀಯಾರ್ಧದಲ್ಲಿ ಫಾರ್ವಡ್್ರ ಆಟಗಾರ ಥೋಂಗ್ಲಸೀಯಾಮ್ ಹಾಕೀಪ್ ದಾಖಲಿಸಿದ ಗೋಲಿನ ನೆರವಿನಿಂದ ಕೋಚ್ ಕಾರ್ಲೊಸ್ ಕ್ವಾಡ್ರಟ್ ಸಾರಥ್ಯದ ಬೆಂಗಳೂರು ಎಫ್ ಸಿ ಇಲ್ಲಿನ ಚಾಂಗ್ಲಿಮಿಥಾಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 1-0 ಗೋಲಿನಿಂದ ಗೆಲುವು ಸಾಸಿದೆ. ಬಿಎಫ್ಸಿ ಬಿ ತಂಡದ ನಾರೆಮ್ ರೋಸನ್ ಸಿಂಗ್ ಅವರೊಂದಿಗೆ ನೂತನವಾಗಿ ಒಪ್ಪಂದ ಮಾಡಿಕೊಂಡಿರುವ ನಿಲಿ ಪೆರ್ಡೊಮೊ ಅವರನ್ನು ಕಣಕ್ಕಿಳಿಸುವ ಮೂಲಕ ಬಿಎಫ್ ಸಿ ಈ ಪಂದ್ಯದಲ್ಲಿ ಹಲವು ಬದಲಾವಣೆಗೆ ಒತ್ತ ನೀಡಿತು.
ಪಂದ್ಯದ ಕ್ವಾರ್ಟ‌್ರ ಅವಯಲ್ಲೇ ವಿಂಗರ್ ಕೀನ್ ಲೂಯಿಸ್ ಗೋಲ್ ಗಳಿಸುವ ಅದ್ಭುತ ಯತ್ನ ನಡೆಸಿದರು. ಆದರೆ ಇದು ಯಶ ಕಾಣಲಿಲ್ಲ. ಬಳಿಕ ರೋಶನ್ ಅವರಿಂದ ಚೆಂಡು ಪಡೆದ ಜುವಾನಾನ್ ಗೋಸ್ಟಲೆಜ್, ಚೆಂಡನ್ನು ಫ್ರೀಕಿಕ್ ಮೂಲಕ ಗುರಿಯತ್ತ ಹೊಡೆದರು. ಆದರೆ ಪಾರೊ ಗೋಲ್ಕೀಪರ್ ಇದನ್ನು ತಡೆಯುವಲ್ಲಿ ಸಫಲರಾದರು. ರೋಶನ್ ಜತೆ ಆಡಲಿಳಿದ ಸಂಬಾಯಿ ಮೊದಲ ಬಾರಿ ಗೋಲ್ ಗಳಿಸುವ ಅವಕಾಶ ಗಿಟ್ಟಿಸಿದರು. ಆದರೆ ಪಾರೊ ಕಸ್ಟೋಡಿಯನ್ ಅವರ ಕಣ್ಣಪ್ಪಿಸಿ ಗುರಿ ಮುಟ್ಟಿಸುವಲ್ಲಿ ವಿಫಲಗೊಂಡರು. ಇಂಡೀ ಪಂದ್ಯದಲ್ಲಿ ಬೆಂಗಳೂರು ಆಟಗಾರರ ಆತಿಥೇಯ ಪಾರೊ ತಂಡದ ಮೇಲೆ ಸಂಪೂರ್ಣ ಪಾರಮ್ಯ ಮೆರೆದರೂ ಗೋಲ್ ಗಳಿಸಲು ಮಾತ್ರ ಸಾಧ್ಯವಾಗಲಿಲ್ಲ. ಹೀಗಾಗಿ ಉಭಯ ತಂಡಗಳು ಗೋಲ್ ರಹಿತವಾಗಿ ವಿರಾಮಕ್ಕೆ ತೆರಳಿದವು.
ಉಭಯ ತಂಡಗಳು ದ್ವಿತೀಯಾರ್ಧದಲ್ಲಿ ಮುನ್ನಡೆಗಾಗಿ ಆಕ್ರಮಣಕಾರಿ ಆಟಕ್ಕೆ ಇನ್ನಷ್ಟು ಆದ್ಯತೆ ನೀಡಿದವು. ಆದರಲ್ಲೂ ಬೆಂಗಳೂರು ಎಫ್ ಸಿ ಕೇವಲ 8 ನಿಮಿಷಗಳ ಅವಯಲ್ಲಿ ಗೋಲ್ ಗಳಿಸಿ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಅತ್ಯುತ್ತಮ ಹೊಂದಾಣಿಕೆ ಆಟವಾಡಿದ ಪೆರ್ಡೂಮೊ ಮತ್ತು ರೋಶನ್ ಚೆಂಡನ್ನು ಸಂಬಾಯಿಗೆ ಪಾಸ್ ನೀಡಿದರು. ಕಠಿಣ ಕೋನದಲ್ಲೂ ಗುರಿ ಕಾಯ್ದುಕೊಂಡ ಸಂಬಾಯಿ ಆತಿಥೇಯರ ರಕ್ಷಣಾ ಪಡೆಯನ್ನು ಭೇದಿಸಿ ಚೆಂಡನ್ನು ಗುರಿ ಮುಟ್ಟಿಸಿ ತಂಡಕ್ಕೆ 1-0 ಅಂತರದ ಮುನ್ನಡೆ ಕಲ್ಪಿಸಿದರು.
ಥಿಂಪುನಲ್ಲಿನ ತಾಪಾಮಾನದಿಂದ ಬಳಲಿದ ಕಾರಣ ರೋಶನ್ ಪಂದ್ಯದ ಮಧ್ಯದಲ್ಲಿ ವಿರಾಮ ಪಡೆದ ಕಾರಣ ಕ್ವಾಡ್ರಟ್ ಇದೇ ಮೊದಲ ಬಾರಿ ಸುನಿಲ್ ಛತ್ರಿಯನ್ನು ಬದಲಾಯಿಸಿದರು. ಸೆಂಬಾಯಿ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸುವ ಮತ್ತೊಂದು ಅವಕಾಶ ಪಡೆದರಾದರೂ ಆಟಗಾರರ ಹೊಂದಾಣಿಕೆಯ ಕೊರತೆಯ ಜತೆಗೆ ಎದುರಾಳಿಯ ದಿಟ್ಟ ಪ್ರತಿರೋಧದಿಂದ ಇದು ಸಾಧ್ಯವಾಗಲಿಲ್ಲ.
ಪಂದ್ಯದ ಅಂತಿಮ ಹಂತದಲ್ಲಿ ಸಾರಾವುತ್ ಕಿಮಾ ಮತ್ತು ಬಿಎಫ್ಸಿ ಬಿ ತಂಡದ ಮತ್ತೊಬ್ಬ ಆಟಗಾರ ಬಿಸ್ವಾ ದಾರ್ಜೀ ಬದಲಿಗೆ ಮಿಡ್ ಫೀಲ್ಡರ್ ಸುರೇಶ್ ವಾಂಗ್‌ಜಿಮ್ ಮತ್ತು ಕೀನ್ ಅವರನ್ನು ಬದಲಾಯಿಸಲಾಯಿತು. ಪಾರೊ ತಂಡದ ಏಕೈಕ ಆಕ್ರಮಣಕಾರಿ ಆಟಗಾರನಾಗಿದ್ದ ಬೆಂಗಳೂರು ತಂಡದ ಮಾಜಿ ವಿಂಗರ್ ಚೆಂಜೊ ಗ್ಯಾಲ್ಶೆನ್ ಅವರನ್ನು ಬಿಎಫ್ಸಿ ಆಟಗಾರರು ಕಟ್ಟಿಹಾಕುವಲ್ಲಿ ಸಫಲರಾದರು.
ಫೆಬ್ರವರಿ 12ರಂದು ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಎಎಫ್ಸಿ ಕಪ್ ಪ್ರಾಥಮಿಕ ಹಂತದ ದ್ವಿತೀಯ ಚರಣದಲ್ಲಿ ಪಾರೊ ತಂಡವನ್ನು ಎದುರಿಸಲಿರುವ ಬಿಎಫ್ ಸಿ, ಇದಕ್ಕೂ ಮುನ್ನ ಚೆನ್ನೈನ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ದ ಕಣಕ್ಕಿಳಿಯುವುದರೊಂದಿಗೆ ಐಎಸ್ ಎಲ್ ಕರ್ತವ್ಯಕ್ಕೆ ಮರಳಲಿದೆ.