2 ಲೆಗ್‌ನ ಪ್ರಾಥಮಿಕ ಹಂತದ ಸ್ಪರ್ಧೆಯಲ್ಲಿ ಭೂತಾನ್ ಪ್ರೀಮಿಯರ್ ಲೀಗ್ ಚಾಂಪಿಯನ್ ವಿರುದ್ಧ ಕಾರ್ಲೊಸ್ ಕ್ವಾಡ್ರಟ್ ಬಳಗ ಕಣಕ್ಕೆ
ಥಿಂಪು, ಭೂತಾನ್: ಥಿಂಪುವಿನ ಚಾಂಗ್ಲಿಮಿಥಾಂಗ್ ಕ್ರೀಡಾಂಗಣದಲ್ಲಿ ಬುಧವಾರ ಭೂತಾನ್‌ನ ಪ್ರೀಮಿಯರ್ ಲೀಗ್ ಮೂಲದ ಪಾರೊ ಎಫ್ ಸಿ ವಿರುದ್ದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯುವುದರೊಂದಿಗೆ ಎಎಫ್ ಸಿ ಕಪ್ ಪ್ರಾಥಮಿಕ ಹಂತದ ಕಾಂಟಿನೆಂಟಲ್ ಫುಟ್ಬಾಲ್‌ಗೆ ಕೋಚ್ ಕಾರ್ಲೊಸ್ ಕ್ವಾಡ್ರಟ್ ಸಾರಥ್ಯದ ಬೆಂಗಳೂರು ಎಫ್ ಸಿ ಮರಳಲು ಸಜ್ಜಾಗಿದೆ. ತಾಪಮಾನ ಹೆಚ್ಚಾಗಿರುವ ಹೊರತಾಗಿಯೂ ಎಲ್ಲ ಅಡಚಣೆಯನ್ನು ನಿವಾರಿಸಿಕೊಂಡು ಮುಂದಿನ ಹಂತಕ್ಕೆ ತಲಪುವ ವಿಶ್ವಾಸದಲ್ಲಿ ಬೆಂಗಳೂರು ತಂಡವಿದೆ.
“ನಾವು ಉತ್ತಮವಾಗಿ ಸಿದ್ಧತೆ ನಡೆಸಿದ್ದೇವೆ. ಏಕೆಂದರೆ ಕಾಂಟಿನೆಂಟಲ್ ಹಂತದಲ್ಲಿ ಭಾರತವನ್ನು ಪ್ರತಿನಿಸವುದನ್ನು ನಾವು ಪ್ರೀತಿಸುತ್ತೇವೆ. ಏಷ್ಯಾ ಕಪ್ ಉತ್ತಮ ನೆನಪುಗಳನ್ನು ತರುತ್ತದೆ, ಸೆಮಿಫೈನಲ್ಸ್ ಮತ್ತು ಫೈನಲ್ಸ್ಗಳನ್ನು ಆಡಲು ಏಷ್ಯಾದಂತ್ಯ ಪ್ರಯಾಣಿಸಬಹುದು. ಇಂಥ ಟೂರ್ನಿಗೆ ಮರುತ್ತಿರುವುದು ಅಮೋಘ ಎನಿಸಿದೆ ಮತ್ತು ಪಾರೊ ಎಫ್ ಸಿ ವಿರುದ್ದ ಉತ್ತಮ ಫುಟ್ಬಾಲ್ ಆಡಲಿದ್ದೇವೆ ಎಂಬ ವಿಶ್ವಾಸವಿದೆ,” ಎಂದು ಕ್ವಾಡ್ರಟ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಶೇಷ ಅಂದರೆ ಬ್ಲೂಸ್ ತಂಡದ ಮಾಜಿ ವಿಂಗರ್ ಚೆಂಚೊ ಗ್ಯಾಲ್ಶೆನ್ ನಾಳೆ ಆತಿಥೇಯ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಭೂತಾನ್‌ನ ರಾಷ್ಟ್ರೀಯ ತಂಡದ ಪರ ಸಾರ್ವಕಾಲಿಕ ಗೋಲ್ ಗಳಿಸಿದ ಆಟಗಾರನಾಗಿರುವ ಚೆಂಚ್, ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕ್ವಾಡ್ರಟ್ ತಂಡದ ಪರ ಎರಡು ಗೋಲ್ ಬಾರಿಸಿದ್ದಾರೆ. ಹಾಗೂ ಡಿಫೆಂಡರ್ಸ್ ಎಫ್ ಸಿ ವಿರುದ್ದ ಪಾರೊ ಪ್ರಾಥಮಿಕ ಹಂತದ ಎರಡು ಲೆಗ್‌ಗಳಲ್ಲಿ ಮೂರು ಗೋಲು ದಾಖಲಿಸಿದ್ದಾರೆ.
“ಚೆಂಚೊ ಶ್ರೇಷ್ಠ ಫುಟ್ಬಾಲ್ ಆಟಗಾರ ಮತ್ತು ಉತ್ತಮ ವ್ಯಕ್ತಿ. ಮತ್ತೊಮ್ಮೆ ಅವರನ್ನು ಭೇಟಿಯಾಗುತ್ತಿರುವುದಕ್ಕೆ ನನಗೆ ತುಂಬಾ ಸಂತಸವಾಗುತ್ತಿದೆ. ಆತ ಸಾಕಷ್ಟು ಗುಣಮಟ್ಟ ಹೊಂದಿರುವ ಆಟಗಾರ, ಗೋಲ್ ಗಳಿಸಲು ಆತ ಖಂಡಿತವಾಗಿಯೂ ಕಣ್ಣಾಯಿಸಿದ್ದಾರೆ. ಹೀಗಾಗಿ ಚೆಂಚ್ ಅವರನ್ನು ತಡೆಗಟ್ಟಲು ನಮ್ಮ ರಕ್ಷಣೆ ಪಡೆ ಉತ್ತಮ ಕಾರ್ಯನಿರ್ವಸುವ ವಿಶ್ವಾಸವಿದೆ,” ಎಂದು ಕ್ವಾಡ್ರಟ್ ಹೇಳಿದ್ದಾರೆ. ಈ ಟೂರ್ನಿಯ ಪ್ರಾಥಮಿಕ ಹಂತಗಳಲ್ಲಿ ನೋಂದಾಯಿಸಿಕೊಂಡಿರುವ ಬ್ಲೂಸ್ ತಂಡದ 30 ಸದಸ್ಯರಲ್ಲಿ ಕ್ಲಬ್ ನಾಯಕ ಸುನಿಲ್ ಚೆಟ್ರಿ
ಟಗಾರ ಮತ್ತು ಉತ್ತರೆ, ಆತ ಸಾಕಷ್ಟು ಉದಾರೆ. ಹೀಗಾಗಿ ಭಾಗಿಯಾಗಿದ್ದಾರೆ. ನಿಯಮಗಳು ಯುವಕರಿಗೆ ಅವಕಾಶಗಳನ್ನು ಕಲ್ಪಿಸುತ್ತವೆ ಎಂದು ಕ್ವಾಡ್ರಟ್ ವಿಶ್ವಾಸವ್ಯಕ್ತಪಡಿಸಿದ್ದಾರೆ.
“ಇಂಡಿಯನ್ ಸೂಪರ್ ಲೀಗ್ ತಂಡದಲ್ಲಿ ಕೇವಲ 25 ಆಟಗಾರರಿರಬಹುದು. ಆದರೆ ಎಎಫ್‌ಸಿ ನನಗೆ ಮತ್ತೆದು ಆಟಗಾರರ ನೋಂದಣಿಗೆ ಅನುವು ಮಾಡಿಕೊಟ್ಟಿದೆ. ಎಎಫ್ ಸಿ ಕಪ್‌ನಲ್ಲಿ ಪಾಲ್ಗೊಂಡಿದ್ದ ಬಿ ತಂಡದ ಒಂಬತ್ತು ಆಟಗಾರರು ತಂಡದ ಪರ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಕೆಲವರಿಗೆ ಇದೊಂದು ಅತ್ಯುತ್ತಮ ಕ್ಷಣವಾಗಿದೆ,” ಎಂದು ಕ್ವಾಡ್ರಟ್ ನುಡಿದಿದ್ದಾರೆ. 2019ರಲ್ಲಿ ಕಾಣಿಸಿಕೊಂಡ ಪಾರೊ, ಜಾಂಗ್‌ಚಕ್ ದೋರ್ಜಿ ತಂಡವನ್ನು ಮಣಿಸಿದಲ್ಲದೆ ಡಿಫೆಂಡರ್ಸ್ ಎಫ್‌ಸಿ ತಂಡವನ್ನು 5-5ರ ಸರಾಸರಿಯಲ್ಲಿ ಹಿಂದಿಕ್ಕಿ ಎಎಫ್‌ಸಿ ಕಪ್‌ನ ಪ್ರಾಥಮಿಕ ಹಂತಕ್ಕೆಅರ್ಹತೆ ಗಳಿಸಿದೆ. ಭೂತಾನ್ ಪ್ರೀಮಿಯರ್ ಲೀಗ್‌ನ 2019ನೇ ಆವೃತ್ತಿಯಲ್ಲಿ ಟೈಗರ್ಸ್ ಮೊದಲ ರಾಷ್ಟ್ರೀಯ ಲೀಗ್ ಕಿರೀಟ ಜಯಿಸಿದೆ.
ಇಂಡಿಯನ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಬ್ಲೂಸ್ (28 ಅಂಕ) ಪ್ರಸ್ತುತ ಮೂರನೇ ಸ್ಥಾನದಲ್ಲಿದೆ. ಎಫ್‌ಸಿ ಗೋವಾ (30) ಮತ್ತು ಎಟಿಕೆ (30) ಮೊದಲೆರಡು ಸ್ಥಾನದಲ್ಲಿವೆ. ಪಂದ್ಯ ಚಾಂಗ್ಲಿಮಿಥಾಂಗ್ ಕ್ರೀಡಾಂಗಣದಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ.