ಬೆಂಗಳೂರು 2-1 ರ ಅಂತರದ ಗೆಲುವಿನಿಂದ ಅಂಕಪಟ್ಟಿಯಲ್ಲಿ 3 ನೆ ಸ್ಥಾನಕ್ಕೆ ಜಿಗಿತ

ಛೆತ್ರಿ , ಸಿಲ್ವಾ ಗೋಲ್ ಮೋಡಿ. ಪಂದ್ಯದಲ್ಲಿ ಹಿಡಿತ ಸಾಧಿಸಿದ ಬಿಎಫ್ಸಿ.

ಪಣಜಿ : ಜಿಎಂಸಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಸುನಿಲ್ ಛೆತ್ರಿ (38 ’) ಮತ್ತು ಕ್ಲೀಟನ್ ಸಿಲ್ವಾ (79’) ಗೋಲ್ ಗಳಿಸಿ ಬೆಂಗಳೂರು ಎಫ್‌ಸಿಗೆ ಒಡಿಶಾ ಎಫ್‌ಸಿ ವಿರುದ್ಧ 2-1 ಅಂತರದ ಜಯವನ್ನು ತಂದುಕೊಟ್ಟಿದ್ದಾರೆ. ಬ್ಲೂಸ್‌ ಇದರೊಂದಿಗೆ ಇಂಡಿಯನ್ ಸೂಪರ್ ಲೀಗ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ಮೊದಲಾರ್ಧದಲ್ಲಿ ನಾಯಕ ಛೆತ್ರಿ ಗೋಲ್ ಗಳಿಸಿ ಸತತ ಎರಡನೇ ಪಂದ್ಯದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಸ್ಟೀವನ್ ಟೇಲರ್ ಒಡಿಶಾಗೆ 71 ನೇ ನಿಮಿಷದಲ್ಲಿ ಒಂದು ಗೋಲ್ ಗಳಿಸುವುದರೊಂದಿಗೆ ತಮ್ಮ ತಂಡ ಪಂದ್ಯಕ್ಕೆ ಮರಳುವಂತೆ ಮಾಡಿದರು. ಆದರೆ, ಫಾರ್ಮ್‌ನಲ್ಲಿರುವ ಬೆಂಗಳೂರು ಆಟಗಾರ ಸಿಲ್ವಾ ತಮ್ಮ ಆವೃತ್ತಿಯ ಮೂರನೇ ಗೋಲ್ ಗಳಿಸಿ ಬೆಂಗಳೂರಿಗೆ ಪಂದ್ಯದ ಪೂರ್ಣ ಅಂಕ ಪಡೆಯುವಲ್ಲಿ ಸಹಕರಿಸಿದರು.

ಕಾರ್ಲೆಸ್ ಕ್ವಾಡ್ರಾಟ್ ಮತ್ತು ಸ್ಟುವರ್ಟ್ ಬ್ಯಾಕ್ಸ್ಟರ್, ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಇಂದು ಅಂಗಳಕ್ಕೆ ಇಳಿದರು. ಎಂದಿನಂತೆ ಪ್ರತೀಕ್ ಚೌಧರಿ ವಿಶ್ರಾಂತಿಯಲ್ಲಿರುವ ರಾಹುಲ್ ಭೆಕೆ ಬದಲಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪಂದ್ಯದ ಆರಂಭದಲ್ಲಿ ಒತ್ತಡ ಹೆಚ್ಚಿಸಿದ ಬ್ಲೂಸ್, ಒಡಿಶಾ ತಂಡದ ಗೋಲ್ ಪೋಸ್ಟ್ ಅಲ್ಲಿ ಚೆಂಡನ್ನು ಒಂದು ನಿಮಿಷದವರೆಗೆ ಅಪಾಯಕಾರಿಯಾಗಿ ಚಲಿಸಿದಾಗ ತಂಡದಲ್ಲಿನ ಆಟದತ್ತದ ನಿಲುವು ಉತ್ತಮವಾದಂತೆ ತೋರುತ್ತಿತ್ತು. ಆದರೆ ಗುರಿಯತ್ತದ ಹೊಡೆತಗಳ ಸ್ಥಿರತೆ ಕ್ಷೀಣವಾಗಿದ್ದರಿಂದ ಎರಡೂ ತಂಡಗಳಿಗೆ ಪಂದ್ಯ ಸುಲಭ ಇಲ್ಲವೆಂದು ತೋರಿತು.

21 ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಲು ಬ್ಲೂಸ್‌ಗೆ ಸಾಕಷ್ಟು ಅವಕಾಶಗಳು ಮುಂದಿದ್ದವು. ಆದರೆ ಅಂತಿಮ ಸ್ಪರ್ಶ ಸಿಕ್ಕಿರಲಿಲ್ಲ. ಆಶಿಕ್ ಕುರುನಿಯನ್, ತನ್ನ ಮಾರ್ಕರ್ ಅನ್ನು ಮೀರಿ, ಒಡಿಶಾ ಗೋಲ್ ಪೋಸ್ಟ್ ಅಲ್ಲಿ ಪಿನ್ ಬಾಲ್ ಆಗಿ ನಂತರ ಹಲವು ಬಿಎಫ್‌ಸಿ ಆಟಗಾರರು ಚೆಂಡಿಗೆ ತಿರುವು ನೀಡಿ ಗೋಲ್ ಗಳಿಸುವ ಅವಕಾಶಗಳನ್ನು ಸತತವಾಗಿ ಪಡೆದರು.

38 ನೇ ನಿಮಿಷದಲ್ಲಿ ನಾಯಕ ಛೆತ್ರಿ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಗೋಲಿನ ಪ್ರತಿಯಂತೆಯೇ ಮನಮೋಹಕ ಗೋಲ್ ಗಳಿಸಿದರು, ಈ ಎರಡೂ ಗೋಲ್ ಗಳಲ್ಲಿ ವ್ಯತ್ಯಾಸವೆಂದರೆ ಇಲ್ಲಿ ಹರ್ಮನ್‌ಜೋತ್ ಖಬ್ರಾ ಅವರ ಎಡಗಾಲಿನಿಂದ ಚೆಂಡನ್ನ ತಲುಪಿಸಿದ್ದು. ಚೆಂಡನ್ನು ಸ್ವೀಕರಿಸಿದ ಸುನೀಲ್ ಛೆತ್ರಿ ಶುಭಮ್ ಸಾರಂಗಿಯನ್ನು ಹಿಂದಿಕ್ಕಿ ಅರ್ಶ್‌ದೀಪ್ ಸಿಂಗ್ ಅವರನ್ನು ಮೀರಿ ತನ್ನ ಹೆಡರ್ ಮೂಲಕ ಗೋಲ್ ಗಳಿಸಿ 1-0 ಅಂತರ ಸಾಧಿಸಿದರು.

ನಂತರ , ಜೆರ್ರಿ ಮಾವಿಹ್ಮಿಂಗ್ಥಂಗಾ ಅವರ ಮೊಣಕಾಲು ಆಶಿಕ್ ಕುರುನಿಯನ್ ಅವರ ಮುಖಕ್ಕೆ ತಾಗಿದ ಕಾರಣ ಆಸ್ಪತ್ರೆಗೆ ತುರ್ತಾಗಿ ತೆರಳಿಸಬೇಕಾಯ್ತು.

ದ್ವಿತೀಯಾರ್ಧದ ಆರಂಭದಲ್ಲಿ ಕ್ವಾಡ್ರಾಟ್ ಎರಡು ಬದಲಾವಣೆಗಳನ್ನು ಮಾಡಲೇಬೇಕಾಯ್ತು. ಫ್ರಾನ್ ಗೊನ್ಜಾಲೆಜ್ ಮತ್ತು ಉದಂತಾ ಸಿಂಗ್ ಇಬ್ಬರೂ ಕ್ರಿಸ್ಟಿಯನ್ ಒಪ್ಸೆತ್ ಮತ್ತು ಆಶಿಕ್ ಅವರ ಬದಲಾಗಿ ಕಣಕ್ಕಿಳಿದರು.ಇದರಿಂದ ಖಾಬ್ರಾ ಲೆಫ್ಟ್ ಅಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕಾಯ್ತು.

ಆತಿಥೇಯ ತಂಡ 71ನೆ ನಿಮಿಷದಲ್ಲಿ ಸಮಾನ ಅಂಕ ಸಾಧಿಸಿದರು. ಜೆರ್ರಿ ಅವರ ಫ್ರೀ ಕಿಕ್ ಅನ್ನು ಸ್ಟೀವನ್ ಟೇಲರ್ ತಮ್ಮ ಚಾಚಿದ ಕಾಲಿನಿಂದ ದೂರದ ಪೋಸ್ಟ್ನಲ್ಲಿ ತಿರುಗಿಸಿ ಅಂಕಪಡೆದು 1-1 ಅಂತರ ಕಾಯ್ದುಕೊಳ್ಳುವುದರೊಂದಿಗೆ ಒಡಿಶಾ ತಂಡ ಪಂದ್ಯಕ್ಕೆ ಮರಳಿತು.

ವಿಭಿನ್ನ ಆಲೋಚನೆಗಳು ಮತ್ತು ಸೃಜನಶೀಲತೆಯ ಕೊರತೆ ಕಾಣುವಂತಾದಾಗ, ಬೆಂಗಳೂರು ತಂಡಕ್ಕೆ ಪಂದ್ಯದಲ್ಲಿ ಹಿಡಿತ ಸಾಧಿಸಿ ಗೆಲುವು ಸಾಧಿಸಲು ಸಾಕಷ್ಟು ಸಮಯವಿದ್ದಂತೆ ಕಂಡಿತು. ಕ್ವಾಡ್ರಾಟ್ ಇನ್ನೂ ಎರಡು ಬದಲಾವಣೆಗಳನ್ನು ಮಾಡಿದರು, ದೇಶರ್ನ್ ಬ್ರೌನ್ ಮತ್ತು ಅಮಯ್ ಮೊರಾಜ್ಕರ್ ಅವರನ್ನು ಸುರೇಶ್ ವಾಂಗ್ಜಮ್ ಮತ್ತು ಎರಿಕ್ ಪಾರ್ತಲು ಬದಲಿಗೆ ಅಂಗಳಕ್ಕೆ ಕರೆತಂದರು.

ಸಿಲ್ವಾ ಅವರನ್ನು ಉತ್ತೇಜಿಸಲು ಅನುವಾಗಿದ್ದು ಇದೆ ಬದಲಾವಣೆ. ಮಿಡ್‌ಫೀಲ್ಡ್‌ನಿಂದ ಎಸೆದ ಚೆಂಡನ್ನು ಕೆಳಕ್ಕೆ ತಂದ ಉದಾಂತ, ಹೆಡರ್‌ ಮೂಲಕ ಜಮೈಕಾ ಆಟಗಾರನಿಗೆ ತಲುಪಿಸಿದರು. ಚೆಂಡನ್ನು ಉತ್ತಮವಾಗಿ ರಕ್ಷಿಸಿದ ಸಿಲ್ವಾ, ಆರ್ಷಿದೀಪ್ ಅವರನ್ನು ದಾಟಿಸಿ ಅದ್ಭುತವಾಗಿ ಗೋಲ್ ಅತ್ತ ಚೆಂಡನ್ನು ತಲುಪಿಸಿದರು. ಇದರೊಂದಿಗೆ ಬೆಂಗಳೂರಿಗೆ 2-1ರ ಅಂತರ ಸೃಷ್ಟಿಸಿತು.

ಆವೃತ್ತಿಯ ಮೂರನೇ ಗೆಲುವನ್ನು ಸಾಧಿಸುವಲ್ಲಿ ಪಂದ್ಯದುದ್ದಕ್ಕೂ ಹಿಡಿತ ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಲು ಬ್ಲೂಸ್ ಒಡಿಶಾದ ಅಪರೂಪದ ಆಕ್ರಮಣವನ್ನು ಅಂತಿಮ ಹಂತದಲ್ಲಿ ತಡೆದು ನಿಲ್ಲಿಸಿ ಭರ್ಜರಿ ಗೆಲುವು ದಾಖಲಿಸಿತು.

ಬೆಂಗಳೂರು ತಮ್ಮ ಮುಂದಿನ ಮುಖಾಮುಖಿಯಲ್ಲಿ ಎಟಿಕೆ ಮೋಹನ್ ಬಗಾನ್ ತಂಡವನ್ನು ಫತೋರ್ದಾ ಅಂಗಳದಲ್ಲಿ ಡಿಸೆಂಬರ್ 21 ರಂದು ಎದುರಿಸಲಿದ್ದಾರೆ.

Malcare WordPress Security