ಬ್ಲೂಸ್ ಲೀಗ್‌ನ ತಮ್ಮ ಮೊದಲ ಗೆಲುವು ಸಾಧಿಸಲು ಎಚ್ಚರದಿಂದ ಆಡಲಿರುವುದಾಗಿ ಕ್ವಾಡ್ರಾಟ್ ಸ್ಪಷ್ಟನೆ.
ಮಾರ್ಗೋವಾ: ಇಂಡಿಯನ್ ಸೂಪರ್ ಲೀಗ್ನಲ್ಲಿ ಹೈದರಾಬಾದ್ ಎಫ್‌ಸಿಯ ಮ್ಯಾನ್ಯುಯೆಲ್ ಮಾರ್ಕ್ವೆಜ್ ಅವರ ತಂಡವು ಒಡಿಶಾ ಎಫ್‌ಸಿ ವಿರುದ್ಧ 1-0 ಗೋಲುಗಳ ಅಂತರದ ಜಯಗಳಿಸಿದ ನಂತರ ಬೆಂಗಳೂರು ಎಫ್‌ಸಿ ತಂಡವನ್ನು ಶನಿವಾರ ಫತೋರ್ದಾ ಅಂಗಳದಲ್ಲಿ ಎದುರಿಸಲಿದೆ. ಸ್ಪ್ಯಾನಿಷ್ ಬಾಸ್ ನೇತೃತ್ವದ ಬೆಂಗಳೂರಿನ ತಂಡ ಕಳೆದ ಆವೃತ್ತಿಗಿಂತ ಭಿನ್ನವಾದ – ಸುಧಾರಿತ ಹೈದ್ರಾಬಾದ್ ತಂಡದ ವಿರುದ್ಧ ಆಡಲಿದ್ದು, ಪಂದ್ಯ ಮತ್ತಷ್ಟು ಕುತೂಹಲಕಾರಿ ಹಾಗೂ ಕಠಿಣವಾಗಿರಲಿದೆ ಎಂದು ಕಾರ್ಲೆಸ್ ಕ್ಯುಡ್ರಾಟ್ ಭವಿಷ್ಯ ನುಡಿದಿದ್ದಾರೆ.
“ಖಚಿತವಾಗಿ, ಅವರೊಂದಿಗಿನ ನಮ್ಮ ಮೊದಲ ಪಂದ್ಯಕ್ಕಿಂತಲು ಹೈದರಾಬಾದ್ ಎಫ್‌ಸಿ ಇನ್ನಷ್ಟು ಉತ್ತಮವಾಗಿದೆ. ಯಾವುದೇ ಹೊಸ ಕ್ಲಬ್ ಉತ್ತಮವಾಗುವಲ್ಲಿ ಸಮಯ ತೆಗೆದುಕೊಳ್ಳುತ್ತದೆ. ನನ್ನ ಬಾರ್ಸಿಲೋನಾ ದಿನಗಳಿಂದ ನನಗೆ ಪರಿಚಯವಿರುವ ಒಬ್ಬ ಉತ್ತಮ ತರಬೇತುದಾರರೂ ಸೇರಿದಂತೆ ಈ ಆವೃತ್ತಿಯಲ್ಲಿ ತಂಡ ನಿಜವಾಗಿಯೂ ಉತ್ತಮ ಆಟಗಾರರನ್ನು ಆಯ್ಕೆಮಾಡಿಕೊಂಡಿದೆ ಎಂದು ನಾನು ಭಾವಿಸುತ್ತೇನೆ. ಕ್ಲಬ್ ಆಗಿ, ಅವರು ಉತ್ತಮವಾಗಿದ್ದಾರೆ ಮತ್ತು ಅವರ ಮೊದಲ ಆಟವು ಅದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಅವರು ತಮ್ಮ ಮೊದಲ ಗೆಲುವನ್ನು ಅದ್ಭುತವಾಗಿ ಪಡೆದಿದ್ದು ಮತ್ತು ಮೂರು ಅಂಕಗಳನ್ನು ಬಹಳ ಅರ್ಹ ರೀತಿಯಲ್ಲಿ ಪಡೆದುಕೊಂಡಿದ್ದಾರೆ. ನಾವು ಮೊದಲು ಅವರನ್ನು ಆಡಿದ ನಂತರದಲ್ಲಿ ಹಿಂದೆಂದಿಗಿಂತಲೂ ಅವರು ಉತ್ತಮ ಕ್ಲಬ್ ಆಗಿದ್ದಾರೆ ”ಎಂದು ಪಂದ್ಯದ ಕುರಿತು ಕ್ಯುಡ್ರಾಟ್ ಹೇಳಿದರು.
ತಮ್ಮ ಆವೃತ್ತಿಯ ಪ್ರಥಮ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಗೋವಾ ವಿರುದ್ಧ ಎರಡು ಗೋಲುಗಳನ್ನು ಗಳಿಸಿತ್ತು, ದ್ವಿತೀಯಾರ್ಧದಲ್ಲಿ ಎರಡು ಬಾರಿ ಗೋಲ್ ಬಿಟ್ಟುಕೊಟ್ಟು ಅಂಕಗಳನ್ನು ಹಂಚಿಕೊಳ್ಳಬೇಕಾಯ್ತು. ಈ ನಡುವೆ, ಕ್ವಾಡ್ರಾಟ್ ಫಲಿತಾಂಶದ ಬಗೆಗೆ ಆಲೋಚಿಸುವ ಬದಲಿಗೆ ಪಂದ್ಯದಲ್ಲಿನ ತಂಡದ ಉತ್ತಮ ವಿಷಯಗಳತ್ತ ಗಮನಹರಿಸಲಿರುವುದಾಗಿ ತಿಳಿಸಿದರು. “ಎಫ್ಸಿ ಗೋವಾ ವಿರುದ್ಧ, ನಾವು ಮೂರನೆ ಅಂಕ ಪಡೆಯುವುದಕ್ಕೆ ಬಹಳ ಹತ್ತಿರದಲ್ಲಿದ್ದೆವೆ. 2-0 ಅಂಕಗಳ ಹಂತದಲ್ಲಿ, ನಾವು ಇನ್ನಷ್ಟು ಹಿರಿದಾದ ಸ್ಕೋರ್‌ಲೈನ್ ಮಾಡುವ ಅವಕಾಶವಿತ್ತು. ದುರದೃಷ್ಟವಶಾತ್, ಅದು ಸಂಭವಿಸಲಿಲ್ಲ. ಎದುರಾಳಿ ತಂಡದಲ್ಲಿ ಉತ್ತಮ ಆಟಗಾರರಿದ್ದರು ಮತ್ತು ಉತ್ತಮ ಯೋಜನೆಯನ್ನು ಹೊಂದಿದ್ದರು ಎಂದು ನಾವು ಒಪ್ಪಿಕೊಳ್ಳಬೇಕು. ಮತ್ತು ಇದು ಎರಡೂ ತಂಡಗಳಿಗೆ ಸಮಾನ ಅಂಕ ದೊರೆಯಲು ಕಾರಣವಾಯ್ತು.”
“ಆದರೆ ನಾವು ಶನಿವಾರ ನಡೆಯಲಿರುವ ಪಂದ್ಯದಲ್ಲಿ ಹೈದರಾಬಾದ್ ತಂಡದತ್ತ ಗಮನ ಹರಿಸಿದ್ದೇವೆ. ಈ ಆವೃತ್ತಿಯಲ್ಲಿ ನಮ್ಮ ತಂಡದಲ್ಲಿ ನಮಗೆ ಉತ್ತಮ ಆಯ್ಕೆಗಳಿವೆ. ತಂಡದಲ್ಲಿನ ಕೆಲವು ಆಟಗಾರರು ಗೋಲ್ ಪಡೆಯುವತ್ತ ಕಣ್ಣಿಟ್ಟಿರುತ್ತಾರೆ ಮತ್ತು ಅದರ ಲಾಭ ಪಡೆಯಲು ನಾನು ಬಯಸುತ್ತೇನೆ ”ಎಂದು ಅವರು ಹೇಳಿದರು.
ದ್ವಿತೀಯಾರ್ಧದಲ್ಲಿ ದೇಶಾರ್ನ್ ಬ್ರೌನ್ ಅವರನ್ನು ಕರೆತರುವ ಮೊದಲು ಬೆಂಗಳೂರು, ನಾರ್ವೇಯ ಸ್ಟ್ರೈಕರ್ ಕ್ರಿಸ್ಟಿಯನ್ ಒಪ್ಸೆತ್ ಅವರೊಂದಿಗೆ ಪಂದ್ಯ ಆರಂಭಿಸಿತ್ತು. ಈ ಮಧ್ಯೆ ಡಿಫೆಂಡರ್ ಫ್ರಾನ್ ಗೊನ್ಜಾಲೆಜ್ ಮತ್ತು ಗೋಲ್ ಸ್ಕೋರರ್ ಕ್ಲೀಟನ್ ಸಿಲ್ವಾ 70 ನಿಮಿಷಗಳ ಆಟದ ಸಮಯವನ್ನು ಪಡೆದರು. “ನಾವು ಕಠಿಣ ತರಬೇತಿ ನೀಡುವ ಮೂಲಕ ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ. ನಾವು ಈಗ ಒಂದು ವಾರ ತಯಾರಿ ನಡೆಸಿದ್ದೇವೆ. ಎರಡು ವಾರಗಳವರೆಗೆ ತರಬೇತಿ ಪಡೆಯುತ್ತಿದ್ದ ಕೆಲವು ಆಟಗಾರರು, ಈಗ ಮೂರು ವಾರಗಳ ತರಬೇತಿಯ ಅನುಭವ ಹೊಂದಿದ್ದಾರೆ. ನಾವು ಈಗ ಹೆಚ್ಚು ಸಮರ್ಥರಾಗಿದ್ದೇವೆ, ”ಎಂದು ಕ್ವಾಡ್ರಾಟ್ ಹೇಳಿದರು.
ಒಡಿಶಾದ ವಿರುದ್ಧ ಹೈದರಾಬಾದ್‌ನ ಗೆಲುವಿಗೆ ಕಾರಣ ಅರಿಡಾನೆ ಸಂತಾನ ನೀಡಿದ ಪ್ರದರ್ಶನ ಮಾತ್ರವಲ್ಲದೆ ಇದು ತಂಡದ ಎಲ್ಲಾ ವಿಭಾಗಗಳಲ್ಲಿನ ಶಿಸ್ತಿನ ಫಲಿತಾಂಶವಾಗಿತ್ತು ಎಂಬುದು ಉಲ್ಲೇಖಾರ್ಹ. ಹೈದರಾಬಾದ್ ತಂಡ ಹೊಂದಿರುವ ಪಿಚ್‌ನ ಎರಡೂ ಬದಿಗಳಲ್ಲಿನ ಆಟಗಾರರ ಸಾಮರ್ಥ್ಯದ ಬಗ್ಗೆ ನಮ್ಮ ಆಟಗಾರರು ಹೆಚ್ಚು ಎಚ್ಚರದಿಂದಿರಬೇಕು ಎಂದು ಕ್ಯುಡ್ರಾಟ್ ಹೇಳಿದರು. “ಅರಿಡಾನೆ ಸಂತಾನ ಅವರಂತಹ ಉತ್ತಮ ಆಟಗಾರನನ್ನು ಹೊಂದಿದ್ದಾರೆ ಮತ್ತು ಫ್ರಾನ್ಸಿಸ್ಕೊ ಸಂಡಾಜಾ ಫಿಟ್ ಆಗಿದ್ದರೆ, ಅವರು ಎರಡು ದೊಡ್ಡ ಅಪಾಯಕಾರಿ ಸ್ಟ್ರೈಕರ್‌ಗಳೊಂದಿಗೆ 4-4-2 ಸೂತ್ರದೊಂದಿಗೆ ಆಡಿದರೆ ನಮ್ಮ ತಂಡಕ್ಕೆ ಹೆಚ್ಚು ಆಘಾತ ನೀಡುವ ಅವಕಾಶವಿದೆ. ಇವರೊಂದಿಗೆ ಲಾ ಮಾಸಿಯಾದ ಉತ್ತಮ ಆಟಗಾರ ಲೂಯಿಸ್ ಸಾಸ್ಟ್ರೆ ಅವರನ್ನು ತಂಡ ಒಳಗೊಂಡಿದೆ. ಅವರೊಂದಿಗೆ ಇಬ್ಬರು ವಿದೇಶಿ ಸೆಂಟರ್ ಬ್ಯಾಕ್ ಆಟಗಾರರು ನಿಜವಾಗಿಯೂ ನಮಗೆ ಪಂದ್ಯದಲ್ಲಿ ಆತಂಕ ಉಂಟುಮಾಡಬಹುದು.”
ಬೆಂಗಳೂರಿನ ತರಬೇತುದಾರರು ಶನಿವಾರದ ಪಂದ್ಯಕ್ಕೆ ತಂಡ ಸಂಪೂರ್ಣವಾಗಿ ಸಮರ್ಥವಾಗಿದೆ ಎಂದು ದೃಢಪಡಿಸಿದರು. ಶನಿವಾರ ರಾತ್ರಿ 7.30 ಕ್ಕೆ ಫತೋರ್ದಾ ಕ್ರೀಡಾಂಗಣದಲ್ಲಿ ಆಟ ಪ್ರಾರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ + ಹಾಟ್‌ಸ್ಟಾರ್ ಮತ್ತು ಜಿಯೋಟಿವಿಯಲ್ಲಿ ನೇರ ಪ್ರಸಾರವಾಗಲಿದೆ.