ಬ್ಲೂಸ್, 2020-21ರ ಆವೃತಿಯಲ್ಲಿ ಬೆಂಗಳೂರಿನ ಸ್ಥಳೀಯ ಉದ್ಯಮಗಳನ್ನು ಉತ್ತೇಜಿಸಲು ಮತ್ತು ಸಹಾಯ ಮಾಡಲು ಉದ್ದೇಶಿಸಿದೆ.
ಬೆಂಗಳೂರು: ಬೆಂಗಳೂರು ಫುಟ್ಬಾಲ್ ಕ್ಲಬ್, ಸಾಂಕ್ರಾಮಿಕ ಕೋವಿಡ್ -19 ಹಬ್ಬಿರುವ ಈ ಸಮಯದಲ್ಲಿ , ತಮ್ಮ 2020-21ರ ಕ್ರೀಡಾ ಅಭಿಯಾನವನ್ನು ಸಣ್ಣ ಉದ್ಯಮಗಳಿಗೆ ಸಹಾಯ ಮಾಡುವ ಉದ್ದೇಶದೊಂದಿಗೆ ಮುನ್ನಡೆಯುವುದಾಗಿ ಸೋಮವಾರ ಪ್ರಕಟಿಸಿದೆ.
ಕ್ಲಬ್ ಕ್ಯಾಪ್ಟನ್ ಸುನಿಲ್ ಛೇತ್ರೀ ಅವರ ಉಪಸ್ಥಿತಿಯಿದ್ದ ವೀಡಿಯೊ ಮೂಲಕ ಆರಂಭಗೊಂಡ ಈ ಅಭಿಯಾನ, ವರ್ತಮಾನದ ಆರ್ಥಿಕ ಹಿಂಜರಿತದ ಸಂಧರ್ಭಗಳಲ್ಲಿ ಸಂಕಷ್ಟಕ್ಕೊಳಗಾದ ಸಣ್ಣ ಉದ್ದಿಮೆದಾರರನ್ನು ಉತ್ತೇಜಿಸಲು, ಬೆಂಬಲ ನೀಡಲು ಮತ್ತು ಮಾರ್ಗದರ್ಶನ ನೀಡುವ ಉದ್ದೇಶವನ್ನು ಬಿಂಬಿಸಿದೆ.
ಈ ಅಭಿಯಾನವನ್ನು ಆಯೋಜಿಸಿರುವ ಫುಟ್ಬಾಲ್ ಕ್ಲಬ್ ತನ್ನ ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರಿನಾದ್ಯಂತ ಸ್ಥಳೀಯ ಮತ್ತು ಸ್ಥಳೀಯೇತರ ಉದ್ದಿಮೆಗಳ ಮಾಹಿತಿ ನೀಡಿ ಉತ್ತೇಜಿಸುವುದರೊಂದಿಗೆ ನಗರವಾಸಿಗಳ ಪ್ರೋತ್ಸಾಹ ಪಡೆಯಲು ಯೋಜಿಸಿದೆ.
ಈ ಆವೃತ್ತಿಯಾದ್ಯಂತ, ಪ್ರಸಿದ್ಧ ಆಟಗಾರರೊಂದಿಗೆ ಈ ಉದ್ದಿಮೆಗಳ ಬಗೆಗೆ ಮಾತನಾಡಲು ಕ್ಲಬ್ ನಿರಂತರವಾಗಿ ಪ್ರಯತ್ನಿಸುವ ತಮ್ಮ ಆಲೋಚನೆಯನ್ನು ವ್ಯಕ್ತಪಡಿಸಿದೆ.
“ಈ ಅಭಿಯಾನವು ನಮ್ಮ ಹೃದಯಕ್ಕೆ ಹತ್ತಿರವಾದ್ದು, ಏಕೆಂದರೆ ಈ ನಗರ ಹಾಗೂ ನಗರದ ಜನತೆ ನಾವು ಕಂಡ ಎಲ್ಲ ಯಶಸ್ಸಿಗೆ ಕಾರಣಕರ್ತರಾಗಿದ್ದು ನಮಗೆ ಉತೇಜನ ನೀಡಿ ಸ್ಪoದಿಸಿದ್ದಾರೆ. ಇದು ನಮ್ಮೆಲ್ಲರ ಸಂಕಷ್ಟದ ಸಮಯವಾಗಿದ್ದು, ಆದರಲ್ಲೂ ಸಣ್ಣ ಉದ್ದಿಮೆದಾರರು ಹೆಚ್ಚಿನ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಅಭಿಯಾನವು ಅವರಿಗೆ ಸಹಾಯ ಮಾಡಲು ಸಮರ್ಪಿತವಾಗಿದೆ, ಮತ್ತು ನಮಗೆ ವಿಶ್ವಾಸವಿದೆ, ಅಂತಹ ಸಣ್ಣ ಉದ್ಯಮಿಗಳಿಗೆ ಅಲ್ಪ ಸ್ಥಿರತೆ ಕಂಡುಕೊಳ್ಳಲು ಇದು ಅನುಕೂಲವಾಗುತ್ತದೆ” ಎಂದು ಆಶಿಸುವುದಾಗಿ ಛೇತ್ರೀ ಉದ್ಘಾಟನೆಯ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈ ಆವೃತ್ತಿ ಹೆಚ್ಚು ಒತ್ತಡಗಳಿಂದ ಕೂಡಿರಲು ಕಾರಣ ಕಳೆದ ಇಂಡಿಯನ್ ಸೂಪರ್ ಲೀಗ್ ನ ಸೆಮಿಫೈನಲ್ ನಲ್ಲಿ, ತಂಡ ಪಂದ್ಯದಲ್ಲಿ ಎ. ಟಿ.ಕೆ ವಿರುಧ್ದ ಪರಾಜಯಗೊಂಡು, ತಮ್ಮ ಚೊಚ್ಚಲ ಸಾನ್ಸ್ ಸಿಲ್ವರ್ ವೇರ್ ಪ್ರಶಸ್ತಿಯನ್ನು ಬಿಟ್ಟುಕೊಟ್ಟಿದ್ದೇ ಆಗಿದೆ ಎಂದು ಬೆಂಗಳೂರು ಎಫ್‌ಸಿ ಸಿಇಒ ಮಂದಾರ್ ತಮ್ಹಾನೆ ಅಭಿಪ್ರಾಯ ವ್ಯಕ್ತಪಡಿಸಿದರು.
“ಕ್ಲಬ್ ಆಗಿ, ನಾವು ಕಳೆದ ಏಳು ವರ್ಷಗಳಲ್ಲಿ ಅನೇಕ ವಿಜಯಗಳನ್ನು ಸಾಧಿಸಿದ್ದೇವೆ ಮತ್ತು ಟ್ರೋಫಿ ಇಲ್ಲದ ಕಳೆದ ಆವೃತ್ತಿಯ ನಂತರ ಅನೇಕ ವಿಧಗಳಲ್ಲಿ ಯಶಸ್ವಿಯಾಗಲು ಹಲವು ಮಾರ್ಗೋಪಾಯಗಳನ್ನು ಪ್ರಯತ್ನಿಸುತ್ತಿದ್ದೇವೆ. ‘ಬ್ಯಾಕ್ ಆನ್ ಅವರ್ ಫೀಟ್’ ಅಭಿಯಾನವು ಮುಂಬರುವ ಆವೃತ್ತಿಯ ದೃಷ್ಟಿಯಲ್ಲಿ ನಮ್ಮ ಕ್ಲಬ್‌ನ ಆಶಯಗಳನ್ನು ಪ್ರತಿಧ್ವನಿಸುತ್ತದೆ. ಈ ಅಭಿಯಾನವು ಕರ್ನಾಟಕದ ಜನತೆಗೆ ವಿಶೇಷ ರೀತಿಯಲ್ಲಿ ಸಹಾಯ ಮಾಡಬೇಕೆನ್ನುವುದೇ ನಮ್ಮ ಉದ್ದೇಶ,”ಎಂದು ತಮ್ಹಾನೆ ಹೇಳಿದರು.