ಬೆಂಗಳೂರು 1-0 ಅಂತರದಲ್ಲಿ ಜೆಮ್ಶೆಡ್ಪುರ್ ವಿರುದ್ಧ ಸೋಲಿಗೆ ಶರಣು

ಬ್ಲೂಸ್ ಎಡವಟ್ಟು, ಫತೋರ್ದಾ ಅಂಗಳದಲ್ಲಿ ಎದುರಾಳಿಗೆ ಅಂಕ . ಈಜಿ ಗೋಲ್ ಗಳಿಸಿದ ಏಕಾಂಗಿ.

ಮಾರ್ಗೋವಾ: ಬೆಂಗಳೂರು ಎಫ್ಸಿ ಈ ಆವೃತ್ತಿಯಲ್ಲಿ ತಮ್ಮ ಎರಡನೇ ನೇರ ಸೋಲನ್ನು ಅನುಭವಿಸಿದೆ. ಸ್ಟೀಫನ್ ಈಜಿ(79′)ಜೆಮ್ಶೆಡ್ಪುರ್ ತಂಡಕ್ಕೆ ತಮ್ಮ ಆಕರ್ಷಕ ಗೋಲ್ ಇಂದ ಗೆಲುವು ತಂದಿತ್ತು ತಮ್ಮ ತಂಡ ಅಂಕಪಟ್ಟಿಯಲ್ಲಿ ಬೆಂಗಳೂರು ತಂಡವನ್ನು ಹಿಂದಿಕ್ಕಿ ಸೋಮವಾರದಂದು ಫತೋರ್ದಾ ಅಂಗಳದಲ್ಲಿ 3ನೆ ಸ್ಥಾನಕ್ಕೆ ಏರಿದ್ದಾರೆ. ಮೊದಲಾರ್ಧದಲ್ಲಿ ಹಿಡಿತ ಸಾಧಿಸಿದ್ದ ಬೆಂಗಳೂರು, ತಮ್ಮ ಚಾಕಚಕ್ಯತೆ ಕಳೆದುಕೊಂಡು ಗೋಲ್ ಗಳಿಸಲಾಗದೆ ಎದುರಾಳಿಗೆ ಪಂದ್ಯ ಬಿಟ್ಟುಕೊಟ್ಟರು.

ಕಾರ್ಲೆಸ್ ಕ್ವಾಡ್ರಾಟ್ ಇಂದು ಎರಡು ಬದಲಾವಣೆಗಳನ್ನು ಮಾಡಿದ್ದಾರೆ. ಕ್ರಿಸ್ಟಿಯನ್ ಒಪ್ಸೆತ್ ಮತ್ತು ಸುರೇಶ್ ವಾಂಗ್ಜಮ್ ತಂಡದಲ್ಲಿ ಇಂದು ದೇಶೋರ್ನ್ ಬ್ರೌನ್ ಮತ್ತು ಉದಂತಾ ಸಿಂಗ್ ಅವರ ಬದಲಿಗೆ ಕಣಕ್ಕಿಳಿದಿದ್ದಾರೆ. ಈ ಮಧ್ಯೆ ಹದಿನೆಂಟರ ಹರೆಯ ಇಮ್ಯಾನುಯೆಲ್ ಲಾಲ್ಚಾಂಚುಹಾ, ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಎದುರಾಳಿ ತಂಡ ತಮ್ಮ ಕಳೆದ ಪಂದ್ಯವನ್ನು ಆಡಿದ್ದ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಿತ್ತು, ಮೊಹಮ್ಮದ್ ಮೊಬಶೀರ್ ಆರಂಭಿಕ ಹನ್ನೊಂದರಲ್ಲಿ ಸ್ಥಾನ ಪಡೆದರೆ ಐಸಾಕ್ ವನ್ಮಲ್ಸಾವ್ಮಾ ಅವರನ್ನು ಕೈಬಿಡಲಾಗಿದೆ.

ಮೂರನೆಯ ನಿಮಿಷದಲ್ಲಿ ಬ್ಲೂಸ್‌ ಮೊದಲ ಗೋಲ್ ಪಡೆಯುವ ಅವಕಾಶಹೊಂದಿತ್ತು, ಮತ್ತು ಗುರಿಯತ್ತ ಮೊದಲ ಶಾಟ್ ಬಂದಿತ್ತು. ಅಲೆಕ್ಸಾಂಡ್ರೆ ಲಿಮಾ ಸುರೇಶ್ ಅವರನ್ನು ತಡೆದರು. ಒಪ್ಸೆತ್‌ ಫ್ರೀ-ಕಿಕ್ ಉಪಯೋಗಿಸಿಕೊಂಡು ಕಾರ್ನರ್ ಅತ್ತ ತಲುಪಿಸುವ ಪ್ರಯತ್ನ ಮಾಡಿದರೂ ಚಾಚಿದ ಕೈಗಳಿಂದ ಟಿ.ಪಿ. ರೆಹನೇಶ್ ಅದನ್ನು ತಡೆದರು.

ಆರು ನಿಮಿಷಗಳ ನಂತರ, ಬ್ಲೂಸ್ ಮತ್ತೆ ಜಮ್ಶೆಡ್ಪುರ್ ಡಿಫೆನ್ಸ್ ಅನ್ನು ಎದುರಿಸಿದರು. ಅಂಗಳದ ಮಧ್ಯದಲ್ಲಿ ಚೆಂಡನ್ನು ಪಡೆದ ಸುರೇಶ್ ಬಾಕ್ಸ್ ಅತ್ತ ತಳ್ಳಲು ಪ್ರಯತ್ನಿಸಿದರು. ಛೇತ್ರಿ ದಾಪುಗಾಲು ಹಾಕುತ್ತಾ ಚೆಂಡಿನ ಮೇಲೆ ಹಿಡಿತ ಸಾಧಿಸುವ ಯತ್ನದಲ್ಲಿ ಚೆಂಡಿನ ವೇಗಕ್ಕೆ ಸ್ವಲ್ಪ ಹಿಂದಿದ್ದರು, ಶಾಟ್ ತೆಗೆದುಕೊಳ್ಳುವ ಮೊದಲು ಛೇತ್ರಿ ತಮ್ಮ ಓಟವನ್ನು ಸರಿಹೊಂದಿಸಿಕೊಂಡು ಶಾಟ್ ತೆಗೆದುಕೊಂಡರೆ ನಂತರ ಹೆಡರ್ ಇಂದ ಚೆಂಡು ಗೋಲ್ ಪೋಸ್ಟ್ ಮೂಲೆಯಲ್ಲಿ ಸರಿದಿತ್ತು.

18 ನೇ ನಿಮಿಷದಲ್ಲಿ ಎದುರಾಳಿ ತಂಡದ ಮೊದಲ ಅಟ್ಯಾಕ್ ಬಂದಿತು. ನೆರಿಜಸ್ ವಾಲ್ಸ್ಕಿಸ್ ಬಾಕ್ಸ್ ಅಲ್ಲಿ ಕಂಡುಬಂದರೂ ರಾಹುಲ್ ಭೆಕೆ ಅವರ ಸ್ಲೈಡಿಂಗ್ ಟ್ಯಾಕಲ್ ಚೆಂಡನ್ನು ಲಿಥುವೇನಿಯನ್ ಬೂಟುಗಳಿಂದ ತಪ್ಪಿಸಿತು. ಗೋಲ್ನತ್ತ ಎದುರಾಳಿಯ ಮೊದಲ ಶಾಟ್ ಕಾಲುಭಾಗದ ಆಟದ ನಂತರ ಬಂದಿತ್ತು. ಲಾಂಗ್ ಥ್ರೋ ಸ್ಟೀಫನ್ ಈಜಿಯನ್ನು ಕಂಡುಕೊಂಡರೆ ಹರ್ಮನ್‌ಜೋತ್ ಖಾಬ್ರಾ ಮತ್ತು ಎರಿಕ್ ಪಾರ್ತಲು ಅವರ ಹೆಡರ್ ಅಶಕ್ತವಾಗಿದ್ದುದರಿಂದ ಚೆಂಡು ನೇರವಾಗಿ ಗುರ್‌ಪ್ರೀತ್ ಸಿಂಗ್ ಸಂಧು ಅವರನ್ನು ತಲುಪಿತು.

33 ನೇ ನಿಮಿಷದಲ್ಲಿ ಬ್ಲೂಸ್ ಬಹುತೇಕ ಡೆಡ್ಲಾಕ್ ಅನ್ನು ಮುರಿದಂತೆ ಕಂಡಿತು. ಸುರೇಶ್ ಮತ್ತು ಕ್ಲೀಟನ್ ಸಿಲ್ವಾ ಅವರು ರೆಹನೇಶ್ ವಿರುದ್ಧ ಆಕರ್ಷಕವಾಗಿ ದಾಳಿ ನಡೆಸಿದರು. ತಂಡದ್ದ ಇಬ್ಬರೂ ಚೆಂಡಿನ ಮೇಲೆ ಹತೋಟಿ ಪಡೆಯಲು ಪ್ರಯತ್ನಿಸಿದಾಗ ಕೀಪರ್ ತನ್ನ ಸಾಲಿನಿಂದ ಬೇಗನೆ ಬಂದು ಚೆಂಡನ್ನು ತಡೆದು ಹಿಂದಿಕ್ಕಿದರು.

ತಂಡದ ಆಡುವ ಹನ್ನೊಂದರಲ್ಲಿ ಮರಳಿದ ಸುರೇಶ್, ಬ್ಲೂಸ್ನ ಪ್ರತಿಯೊಂದು ನಡೆಯಲ್ಲೂ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಉತ್ತಮ ಅವಕಾಶವನ್ನು ಪಡೆಯುತ್ತಿದ್ದರು. ಅವರು 37 ನೇ ನಿಮಿಷದಲ್ಲಿ ಗೋಲ್ನತ್ತ ಮತ್ತೊಮ್ಮೆ ತಮ್ಮ ಓಟ ಮುಂದುವರೆಸಿದರು ಮತ್ತು ಈ ಬಾರಿ ಅವರು ಆತಿಥೇಯರನ್ನು, ಮತ್ತೊಂದು ಉತ್ತಮ ಕೀಪಿಂಗ್ ಮೂಲಕ ಅಂಕ ನೀಡದೆ ತಮ್ಮ ಬಲ ತೋರಿಸಿದರು.

ಗುರ್ಪ್ರೀತ್ ಅವರಿಗೆ ಹಲ್ಫ್ ಟೈಮ್ ಮುನ್ನ ಕೊಂಚ ತಳಮಳಕ್ಕೊಳಗಾಗಿಸಿತು ಜೆಮ್ಶೆಡ್ಪುರ್ ತಂಡ. ಜಕೀಚಂದ್ ಸಿಂಗ್ ಅವರು ಲಾಲ್ಡಿನ್ಲಿಯಾ ನೀಡಿದ ಕ್ರಾಸ್ ಅನ್ನು ಗೋಲ್ ನತ್ತ ತಲುಪಿಸುವ ಯತ್ನ ಮಾಡಿದರು ಆದ್ರೆ ಕೀಪರ್ ತಮ್ಮ ಗ್ಲೋವ್ ಇಂದ ಅಡ್ಡಗಟ್ಟಿದರು ಮತ್ತು ಗೋಲ್ ಬಾರ್ ಮೇಲೆ ಹಾದು ಹೋಗುವಂತೆ ನೋಡಿಕೊಂಡರು.

ಪಂದ್ಯದ ಪುನರಾರಂಭವು ಹೆಚ್ಚು ಜಾಗರೂಕವಾಗಿ ಸಾಗಿತ್ತು. ಎರಡೂ ತಂಡಗಳು ತಮ್ಮ ದಾಳಿಯಲ್ಲಿ ಆಟಗಾರರನ್ನು ಮುನ್ನಡೆಸುವಲ್ಲಿ ಮಗ್ನರಾಗಿದ್ದರು. 56 ನೇ ನಿಮಿಷದಲ್ಲಿ, ಜಾಕಿಚಂದ್ ಲಾಲ್ಡಿನ್ಲಿಯಾನ ಅವರ ಕ್ರಾಸ್ ಅನ್ನು ಗೋಲಿನತ್ತ ತಳ್ಳಿದರು ಆದರೆ ಅದು ಯಾವುದೇ ವೇಗವನ್ನು ಹೊಂದಿಲ್ಲದ ಕಾರಣ ಗುರ್‌ಪ್ರೀತ್‌ ಕೈಸೇರಿತು.

ಸೆಕೆಂಡುಗಳ ನಂತರ, ಜುವಾನಾನ್ ಅವರ ಕ್ರಾಸ್-ಫೀಲ್ಡ್ ಪಾಸ್ ಛೇತ್ರಿ ಅವರನ್ನು ತಲುಪಿತು, ಅವರು ಬಲದಿಂದ ಗೋಲ್ನತ್ತ ಅದ್ಭುತ ಓಟದೊಂದಿಗೆ ತಲುಪಲು ಯತ್ನಿಸಿದರು. ಆದರೆ ಚೆಂಡು ಚಾಚಿದ ಕಾಲಿನ ಮುಂದೆ ಸಾಗಿ ಗೋಲ್ ಕಿಕ್ಕಾಯ್ತು.

1 ಗಂಟೆ ಎರಡು ನಿಮಿಷಗಳ ಆಟದ ನಂತರ, ಗುರ್‌ಪ್ರೀತ್, ಪೀಟರ್ ಹಾರ್ಟ್ಲಿಯ ಗೋಲ್ ಯತ್ನಕ್ಕೆ ತಡೆಯೊಡ್ಡಿದರು ಪ್ರತಿಫಲವಾಗಿ ಈಜಿಯನ್ನು ತಲುಪಿದ ಚೆಂಡು ಗುರಿಕಾಣದೆ ಅಂಗಳದ ಹೊರಹೋಯ್ತು.

ಆದಾಗ್ಯೂ, ನೈಜೀರಿಯಾದ ಡಿಫೆಂಡರ್ 78 ನೇ ನಿಮಿಷದಲ್ಲಿ ಗುರ್‌ಪ್ರೀತ್‌ ಅವರನ್ನು ದಾಟಲು ಸಾಧ್ಯವಾಯಿತು. ಅನಿಕೆಟ್ ಅವರ ಕ್ರಾಸ್ ಅನ್ನು ಈಜಿ ತಲುಪಿದರು ಮತ್ತು ಅವರ ಡೈವಿಂಗ್ ಹೆಡರ್ ಪ್ರವಾಸಿ ತಂಡಕ್ಕೆ 1-0 ಅಂತರ ನೀಡಿ ಪಂದ್ಯದಲ್ಲಿ ಹಿಡಿತ ತಂದುಕೊಟ್ಟಿತು.

ಸಮಾನ ಅಂಕದ ಹುಡುಕಾಟದಲ್ಲಿ ಕಾರ್ಲೆಸ್ ಅವರು ಎಡ್ಮಂಡ್ ಮತ್ತು ಚೊಚ್ಚಲ ಪಂದ್ಯದಲ್ಲಿ ಆಡಿಲು ಅಜಿತ್ ಕುಮಾರ್ ಅವರನ್ನು ಕರೆತಂದರು. ಹೆಚ್ಚುವರಿ ಸಮಯದ ಕೊನೆಯಲ್ಲಿ ಬ್ಲೂಸ್ ಆಟದ ಅಂತಿಮ ಅಂಕಪಡೆಯುವ ಸಾಧ್ಯತೆಯಲ್ಲಿದ್ದರು. ಕ್ಲೀಟನ್ ತನ್ನ ಫ್ರೀ ಕಿಕ್ ಮೂಲಕ ಗೋಲ್ ಪೋಸ್ಟ್‌ನ ಅಂಚು ದಾಟಿ ಚೆಂಡನ್ನು ತಳ್ಳುವಲ್ಲಿ ಮಾತ್ರ ಸಶಕ್ತರಾದರು. ಹೀಗಾಗಿ ಪ್ರವಾಸಿ ಜೆಮ್ಶೆಡ್ಪುರ್ ತಂಡ ಪೂರ್ಣ ಮೂರು ಅಂಕಗಳನ್ನು ಪಡೆದು ಹಿಡಿತ ಸಾಧಿಸಿ ಗೆಲುವು ತಮ್ಮದಾಗಿಸಿಕೊಂಡರು.

ಜನವರಿ 5, 2021 ರಂದು ಫತೋರ್ದಾ ಕ್ರೀಡಾಂಗಣದಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧದ ಪಂದ್ಯದ ಆತಿಥ್ಯವನ್ನು ಬೆಂಗಳೂರು ಎಫ್ಸಿ ವಹಿಸಲಿದೆ.