ಬೆಂಗಳೂರು ಮತ್ತು ನಾರ್ತ್ ಈಸ್ಟ್ ಹಣಾಹಣಿ 2-2 ಡ್ರಾನಲ್ಲಿ ಅಂತ್ಯ

ಬ್ಲೂಸ್ ಮುನ್ನಡೆ ಸಾಧಿಸುವಲ್ಲಿ ಸ್ವಲ್ಪ ಎಡವಿ ಪತೊರ್ದಾ ಅಂಗಳದಲ್ಲಿ ಸಮಾನ ಅಂಕಕ್ಕೆ ತೃಪ್ತಿ.

ಮಾರ್ಗೋವಾ: ಬೆಂಗಳೂರು ಎಫ್.ಸಿ ತಂಡ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ 2-2ಅಂಕಗಳೊಂದಿಗೆ ಸಮಾನ ಅಂಕಗಳನ್ನು ಹಂಚಿಕೊಂಡಿದೆ. ಬೆಂಗಳೂರು 2 ಗೋಲ್ ಪಡೆಯುವುದರೊಂದಿಗೆ ಮುನ್ನಡೆ ಸಾಧಿಸಿ ಎದುರಾಳಿಗಳ ಆಟಕ್ಕೆ ಹೆಡೆಮುರಿಕಟ್ಟುವ ಸಾಧ್ಯತೆಗಳು ಹೇರಳವಾಗಿದ್ದ ಸಂಧರ್ಭದಲ್ಲಿಯೇ ಎದುರಾಳಿ ಮತ್ತೊಂದು ಗೋಲ್ ಪಡೆಯುವುದರೊಂದಿಗೆ ಅಂಕಗಳನ್ನು ಸಮಾನವಾಗಿ ಹಂಚಿಕೊಳ್ಳುವಂತಾಯ್ತು. ನಮ್ಮ ಬ್ಲೂಸ್ ಮೊದಲ ಆಘಾತವೆಂಬಂತೆ ಲೂಯಿಸ್ ಮಚಡೋ ಅವರ ಗೋಲ್ ಗೆ ದಾರಿಮಾಡಿಕೊಟ್ಟು ಅಲ್ಪ ಸಮಯದಲ್ಲೇ ಜುವಾನಾನ್ ಅವರ ಗೋಲ್ ಇಂದ ಅಂಕ ಸಮವಾಯ್ತು. ನಂತರ ದ್ವಿತೀಯಾರ್ಧದಲ್ಲಿ ಬದಲಿ ಆಟಗಾರನಾಗಿ ಬಂದ ಉದಾಂತ ತಂಡದ ಪರ ಎರಡನೇ ಗೋಲ್ ಪಡೆಯುವ ಮೂಲಕ ಅಂಕವನ್ನು 2-1 ಆಗಿಸದರೆ ನಂತರದಲ್ಲಿ ಮಚಡೋಮತ್ತೊಂದು ಗೋಲ್ ಸಿಡಿಸಿ ಪಂದ್ಯ ಡ್ರಾ ಆಗುವತ್ತ ಕೊಂಡೊಯ್ದರು.

ಕಾರ್ಲೆಸ್ ಕ್ವಾಡ್ರತ್, ಈ ಹಿಂದೆ ಚೆನ್ನೈಯಿನ್ ಎಫ್.ಸಿ ವಿರುದ್ಧ ಜಯಗಳಿಸಿದ್ದ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಕಣಕ್ಕಿಳಿಸಿದರೆ, ಎದುರಾಳಿ ತಂಡ ಎಸ್.ಸಿ ಈಸ್ಟ್ ಬೆಂಗಾಲ್ ತಂಡದ ವಿರುದ್ಧದ ಗೆಲುವಿನ ಹೊರತಾಗಿಯೂ ಡೈಲಾನ್ ಫಾಕ್ಸ್ , ವಿ.ಪಿ.ಸುಹೇರ್ , ರೋಷರ್ಜೆಲಾ ಮತ್ತು ಲಲರೆಂಪುಯಾ ಫನೈ ಅವರ ಬದಲಾಗಿ ಮಸೂರ್ ಶೇರೀಫ್, ನಿಂತೋಯ್ಗಂಬ ಮೀಟೆ, ಇದ್ರಿಸ್ಸಾ ಸಿಲ್ಲ ಮತ್ತು ಲಾಲೆಂಗ್ಮಾವಿಯಾ ಕಣಕ್ಕಿಳಿದರು.

ಪಂದ್ಯದ 4 ನೇ ನಿಮಿಷದಲ್ಲಿ ರೋಚಾರ್ಜೆಲಾ ಅವರ ಹೊಡೆತಕ್ಕೆ ತಮ್ಮದೇ ತಂಡದ ಆಟಗಾರ ಲೂಯಿಸ್ ಮಚಾಡೋ ತಿರುವು ಕೊಟ್ಟು ಗೋಲ್ ಪಡೆಯಲು ಯತ್ನಿಸಿದಾಗ ಗುರುಪ್ರೀತ್ ಸಿಂಗ್ ಸಂಧು ಯಶಸ್ವಿಯಾಗಿ ಚೆಂಡನ್ನು ತಡೆಯಲು ಸಾಧ್ಯವಾಗದೇ ಎಡವುದರೊಂದಿಗೆ ಅಂಕ ನೀಡಿ ಬೆಂಗಳೂರು ತಂಡ ಆರಂಭಿಕ ಆಘಾತ ಅನುಭವಿಸಿತು.

ಬ್ಲೂಸ್ ಚೇತರಿಸಿಕೊಳ್ಳಲು ಹೆಚ್ಚು ಕಾಲ ತೆಗೆದುಕೊಳ್ಳಲಿಲ್ಲ. ಬದಲಾಗಿ ಜುವಾನ್ ಗೊನ್ಜಾಲೆಜ್ ಆವೃತ್ತಿಯಲ್ಲಿ ತಮ್ಮ ಎರಡನೆಯ ಗೋಲ್ ಗಳಿಸಿ ತಂಡಕ್ಕೆ ನೆರವಾದರು. 14 ನೇ ನಿಮಿಷದಲ್ಲಿ ಎದುರಾಳಿ ತಂಡದ ಡಿಫೆನ್ಸ್, ಹರ್ಮನ್‌ಜೋತ್ ಖಬ್ರಾ ಅವರ ಲಾಂಗ್ ಥ್ರೋ ಅನ್ನು ತಡೆಯಲಾಗದೆ ವಿಫಲವಾಯಿತು ಮತ್ತು ಜುವಾನಾನ್ ಮೊದಲು ಪ್ರತಿಕ್ರಿಯಿಸಿ ಚೆಂಡನ್ನು ಗೋಲ್ ಪೋಸ್ಟ್ ಮೇಲಿನ ಅಂಚಿಗೆ ತಾಗಿಸಿ ಒಳನುಗ್ಗಿಸಿದುದರೊಂದಿಗೆ ಅಂಕಗಳನ್ನು 1-1 ಅಂತರದಿಂದ ಸಮವಾಗಿಸಿದರು.

ಆರಂಭದಲ್ಲಿಯೇ ಚೇತರಿಸಿಕೊಂಡ ತಂಡ ಎದುರಾಳಿಯ ತಡೆಯ ಹೊರತಾಗಿಯೂ ಮುತ್ತಿಗೆ ಹಾಕಿತು ಮತ್ತು ಆಶಿಕ್ ಕುರುನಿಯನ್ ಎಡದಿಂದ ಅವಕಾಶಗಳನ್ನು ಪಡೆದು ಕೆಲವೇ ಕೆಲವು ಸಂದರ್ಭಗಳಲ್ಲಿ ಗೋಲ್ ಸನಿಹ ಬಂದರೆ, ಅವಕಾಶಗಳನ್ನು ಉತ್ತಮವಾಗಿ ಸದುಪಯೋಗ ಮಾಡಿಕೊಳ್ಳುವ ಸಮಯ ಮತ್ತು ಸ್ಥಳ ಹೊಂದಾಣಿಕೆಯಲ್ಲಿ ಎಡವಿದ್ದು ಹರ್ಮನ್‌ಜೋತ್ ಖಬ್ರಾ.

ಆಟ ಪುನರಾರಂಭಗೊಂಡ ಕೆಲವೇ ನಿಮಿಷಗಳಲ್ಲಿ ಬ್ಲೂಸ್ ಮತ್ತೊಂದು ಗೋಲ್ ಗಳಿಸುವ ಅವಕಾಶ ಒದಗಿಬಂದಿತ್ತು. ದೇಶಾರ್ನ್ ಬ್ರೌನ್‌ ಅವರ ಬದಲು ಆಡಲು ಬಂದಿದ್ದ ಕ್ರಿಸ್ಟಿಯನ್ ಒಪ್ಸೆತ್, ಕೀಪರ್ ಗುರ್ಮೀತ್ ಸಿಂಗ್ ಅವರನ್ನು ಗಾಬರಿಗೊಳಿಸಿ, ಡೈಲನ್ ಫಾಕ್ಸ್‌ಗೆ ದುರ್ಬಲ ಪಾಸ್ ಅನ್ನು ನೀಡುವಂತಾಗಿ ಕ್ಲೀಟನ್ ಸಿಲ್ವಾ ಅಡುವುದರೊಂದಿಗೆ ಗುರ್ಮೀತ್ ಹೊರಗುಳಿದು, ದುರ್ಬಲವಾಗಿದ್ದ ಹೊಡೆತವನ್ನು ತಡೆದು ಗೋಲ್ ತಪ್ಪಿಸಿದರು.

51 ನೇ ನಿಮಿಷದಲ್ಲಿ, ಅಪ್ಪಯ್ಯ ಚೆಂಡನ್ನು ಸುಹೈರ್ ಅವರಿಂದ ದೂರದ ಕಾರ್ನರ್ ಕಡೆಗೆ ತಲುಪಿಸದರೂ ಗುರ್‌ಪ್ರೀತ್‌ ತಮ್ಮ ಚಾಕಚಕ್ಯತೆಯಿಂದ ಗೋಲ್ ತಡೆದರು. ಮತ್ತೊಂದು ಬದಿಯಲ್ಲಿ ತಮ್ಮದೇ ಶೈಲಿಯಲ್ಲಿ ಗುರ್ಮೀತ್, ಸಿಲ್ವಾ ಅವರಿಂದ ಪಡೆದಿದ್ದ ಪಾಸ್ ಅನ್ನು ಅಂಕವಾಗಿ ಪರಿವರ್ತಿಸುವ ಓಪ್ಸೆತ್ ಅವರ ಯತ್ನವನ್ನು ತಡೆದು ಅಂಕ ಪಡೆಯದಂತೆ ತಡೆದರು.

1 ಗಂಟೆಯ ಆಟದ ನಂತರ, ಕ್ವಾಡ್ರಾಟ್ ಬೆಂಗಳೂರು ತಂಡದಲ್ಲಿ ಎರಡನೇ ಬದಲಾವಣೆಗಾಗಿ ಮತ್ತೊಂದು ಆಕರ್ಷಕ ಪ್ರದರ್ಶನ ತೋರಿದ್ದ ಸುರೇಶ್ ವಾಂಗ್ಜಮ್‌ ಬದಲಿಗೆ ಉದಂತ ಸಿಂಗ್ ಅವರನ್ನು ಕರೆತಂದರು. ಅತಿ ಸುಲಭವೆನ್ನಿಸುವಂತೆ ಸುನಿಲ್ ಛೆತ್ರಿ ಅವರಿಂದ ಪಡೆದ ಚೆಂಡನ್ನು ಸುನಾಯಾಸವಾಗಿ ಗುರ್ಮೀತ್ ಅವರನ್ನು ಭೇದಿಸಿ ಉದಾಂತ ಗೋಲ್ ಪಡೆದು ತಂಡದ ಮೊತ್ತದ ಅಂತರವನ್ನು 2-1 ಕ್ಕೆ ಏರಿಸಿದರು.

78 ನೇ ನಿಮಿಷದಲ್ಲಿ ಎದುರಾಳಿ ತಂಡ ಮತ್ತೆ ಹೋರಾಟದ ಆಟದೊಂದಿಗೆ ಪಂದ್ಯಕ್ಕೆ ಮರಳಿದರು. ಮಚಡೋ ಬಲವಾದ ಹೊಡೆತದಿಂದ ವೇಗ ಪಡೆದು ಗೋಲ್ ಪೋಸ್ಟ್ ಬಳಿ ಜುವಾನಾನ್ ಚಾಚಿದ ಕಾಲುಗಳಿಂದ ಗೋಲ್ ತಪ್ಪಿಸಲು ಯತ್ನಿಸಿದರೂ ಗುರ್‌ಪ್ರೀತ್ ಅವರನ್ನೂ ಮೀರಿ ಪೋರ್ಚುಗೀಸ್ ಆಟಗಾರನ ಹೊಡೆತಕ್ಕೆ ಚೆಂಡು ಗೋಲ್ ಸೇರಿ ಅಂಕಗಳನ್ನು 2-2ರೊಂದಿಗೆ ಸಮಾನವಾಗಿಸಿತು.

ಮೂರನೇ ಗೋಲ್ ಇಂದ ಮೂರು ಅಂಕ ಪಡೆಯುವ ಪ್ರಯತ್ನದಲ್ಲಿ ಕ್ವಾಡ್ರಾಟ್ ಮತ್ತೊಬ್ಬ ಸ್ಟ್ರೈಕರ್ ಸೆಂಬೊಯ್ ಹಾಕಿಪ್ ಅವರನ್ನು ಭೆಕೆ ಬದಲಿಗೆ ಕರೆತಂದರು. ದಾಳಿಯ ವೇಗ ಮತ್ತು ಪ್ರತಿದಾಳಿಗಳ ಹೊರತಾಗಿಯೂ, ಬ್ಲೂಸ್‌ಗೆ ಸ್ಕೋರ್‌ಲೈನ್‌ಗೆ ಮತ್ತೊಂದು ಗೋಲು ಸೇರಿಸಲು ಸಾಧ್ಯವಾಗಲಿಲ್ಲ ಮತ್ತು ಅಂಕಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕಾಯ್ತು.

ಡಿಸೆಂಬರ್ 13 ರಂದು ಬ್ಲೂಸ್ ಇದೇ ಕ್ರೀಡಾಂಗಣದಲ್ಲಿ ಕೇರಳ ಬ್ಲಾಸ್ಟರ್ಸ್ ಅನ್ನು ಎದುರಿಸಲಿದ್ದಾರೆ.

Malcare WordPress Security