ಬೆಂಗಳೂರು ತಂಡ ಗೋವಾ ವಿರುದ್ಧ 2-2 ರ ಅಂತರದೊಂದಿಗೆ ಫಾತೋರ್ದಾ ಕ್ರೀಡಾಂಗಣದಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ

ಎರಡು ಗೋಲ್ ಅಂತರವನ್ನು ಕಾಪಾಡಿಕೊಳ್ಳಲಾಗದೆ ಅಂಕಗಳನ್ನು ಸಮವಾಗಿ ಹಂಚಿಕೊಂಡು ಆವೃತ್ತಿ ಆರಂಭಿಸಿದ ಬ್ಲೂಸ್

ಮಾರ್ಗೋವಾ, ಗೋವಾ: ಭಾನುವಾರ ಫಾತೋರ್ದಾಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್.ಸಿ ತಂಡ ಎಫ್.ಸಿ.ಗೋವಾ ವಿರುದ್ಧ ಪಡೆದಿದ್ದ 2 ಗೋಲ್ ಅಂತರ ಕಾಪಾಡಿಕೊಳ್ಳಲಾಗದೆ ಅತಿಥೇಯರೊಂದಿಗೆ 2-2 ಗೋಲ್ ಪಡೆಯುವುದರೊಂದಿಗೆ ಸಮಾನ ಅಂಕ ಹಂಚಿಕೊಂಡು ಆವೃತ್ತಿ ಆರಂಭಿಸುವಲ್ಲಿ ತೃಪ್ತಿಪಡಬೇಕಾಯಿತು. ಗೋಲ್ ಪಡೆಯುವಲ್ಲಿ ಬೆಂಗಳೂರು ಪರ ಕ್ಲಿಯೇಟನ್ ಸಿಲ್ವ (28′) ಮತ್ತು ಜುವನಾನ್ ಗೋಂಝಲೇಜ್(57′) ಯಶಸ್ವಿಯಾದರೆ, ಇಗೋರ್ ಅಂಗುಲೊ ಸತತವಾಗಿ ಎರಡು ಗೋಲ್ (66′ ಮತ್ತು 69′) ಗೋವಾ ತಂಡದ ಪರ ಗಳಿಸುವುದರೊಂದಿಗೆ ತಮ್ಮ ತಂಡ ಪಂದ್ಯದಲ್ಲಿ ಹಿಂತಿರುಗಲು ನೆರವಾದರು.

ಪಂದ್ಯದ ಆರಂಭದಲ್ಲಿಯೇ ಆಶಿಕ್ ಕುರುನಿಯಾನ್ ಚೆಂಡಿನ ಮೇಲೆ ಹಿಡಿತ ಪಡೆದು ಗೋವಾ ತಂಡದ ಮೊಹಮದ್ ನವಾಜ್ ಅವರನ್ನು ತಪ್ಪಿಸಿ ಮೊದಲ ಶಾಟ್ ಪಡೆದು ಗೋಲ್ ಗಳಿಸಲು ಪ್ರಯತ್ನಿಸಿ ಸಾಧ್ಯವಾಗದಿದ್ದರೂ ಒಳ್ಳೆಯ ಆರಂಭ ನೀಡಿದರು.

ಬೆಂಗಳೂರು ಎಫ್.ಸಿ ತಂಡದ ಲೀಗ್ ನ ಚೊಚ್ಚಲ ಪಂದ್ಯದಲ್ಲಿಯೇ ಕಾರ್ಲೆಸ್ ಕ್ವಾಡ್ರತ್, ವಿದೇಶಿ ನವ ಆಟಗಾರರಾದ ಫ್ರಾನ್ ಗೋಂಝಲೇಜ್, ಕ್ರಿಸ್ಟಿಯಾನ್ ಓಪ್ಸೆತ್ ಮತ್ತು ಕ್ಲಿಯೇಟನ್ ಸಿಲ್ವ ಅವರಿಗೆ ಆಡುವ ಅವಕಾಶ ಕಲ್ಪಿಸಿದ್ದಾರೆ.

ಛೇತ್ರಿ ಸತತ ಎಂಟನೇ ಬಾರಿಗೆ ನಾಯಕನಾಗಿ ಬೆಂಗಳೂರು ತಂಡವನ್ನು ಮುನ್ನಡೆಸಿ, ಆರಂಭದಿಂದಲೇ ಉತ್ತಮ ಪೈಪೋಟಿ ನೀಡುವ ಕುರುಹು ನೀಡಿದ್ದರು.

ಪಂದ್ಯದ ಮೊದಲಾರ್ಧದ 28ನೆ ನಿಮಿಷದಲ್ಲಿ ರಾಹುಲ್ ಬೆಕೆ ಅವರಿಂದ ತ್ರೋ ಪಡೆದ ತಂಡದ ಖಾಬ್ರ ಚೆಂಡನ್ನು ಎರಿಕ್ ಪಾರ್ತಲು ಅವರಿಗೆ ತಲುಪಿಸಿದರೆ ಅದನ್ನು ಯಶಸ್ವಿಯಾಗಿ ಹೆಡರ್ ಗೋಲ್ ಮಾಡಿದ್ದು ಬ್ರೆಜಿಲ್ ನ ಸಿಲ್ವ. ಇದರೊಂದಿಗೆ 1 ಗೋಲ್ ಪಡೆದ ಬೆಂಗಳೂರು ಎಫ್. ಸಿ ಎದುರಾಳಿ ಎಫ್.ಸಿ ಗೋವಾ ಮೇಲೆ ಹಿಡಿತ ಸಾಧಿಸಿತು.

ನಂತರ ಸಿಲ್ವ ಉತ್ತಮವಾಗಿ ಚೆಂಡಿಗೆ ಬ್ಯಾಕ್ ಹೀಲ್ ಸ್ಪರ್ಶ ಕೊಟ್ಟ ಛೇತ್ರಿ ಅವರತ್ತ ಗೋಲ್ ಪಡೆಯುವ ಅವಕಾಶ ಕಲ್ಪಿಸಿದರೂ, ಅಲ್ಪ ಅಂತರದಲ್ಲಿ ಹಿಡಿತ ಸಾಧಿಸಲಾಗದೆ ಗೋಲ್ ಆಗಿ ಪರಿವರ್ತಿಸಲಾಗದಿದ್ದರೂ ಮೊದಲಾರ್ಧದ ಅಂತ್ಯಕ್ಕೆ 1-0 ಅಂತರದಲ್ಲಿ ಬಿ.ಎಫ್.ಸಿ ನಿಯಂತ್ರಣ ಸಾಧಿಸಿತ್ತು.

ದ್ವಿತೀಯಾರ್ಧದ ಆರಂಭದಲ್ಲಿಯೇ ಮತ್ತೊಮ್ಮೆ ಬೆಂಗಳೂರು ತಂಡ ತ್ರೋ ಪಡೆದು ಆಶಿಕ್ಯೂ ಬಾಕ್ಸ್ ಅಲ್ಲಿ ಸಬ್ಸ್ಟಿಟ್ಯೂಟ್ ದೇಶೋರ್ನ್ ಬ್ರೌನ್ ಅವರಿಂದ ಚೆಂಡು ಪಾರ್ತಲು ಅವರನ್ನು ತಲುಪಿತು. ಮುಂದೆ ಈ ಆಸ್ಟ್ರೇಲಿಯಾದ ಆಟಗಾರ ನಿಧಾನಗತಿಯಲ್ಲಿ ಅನಿರೀಕ್ಷಿತವಾಗಿ ಜುವಾನಾನ್ ಗೋಲ್ ಗಳಿಸಲು ಅನುವುಮಾಡಿದ್ರು ಇದರೊಂದಿಗೆ ಉತ್ತಮ ಗೋಲ್ ಬಾರಿಸಿದ ಬೆಂಗಳೂರು 2-0 ಅಂತರ ಕಾಯ್ದುಕೊಂಡಿತು.

ಇನ್ನೇನು ಪಂದ್ಯ ಕಸಿದು ಗೋವಾ ತಂಡದ ಗೆಲುವಿನ ಹಾದಿಗೆ ಅಡ್ಡಗಾಲಾಗಿದ್ದ ಬೆಂಗಳೂರಿಗೆ ಕೇವಲ 3 ನಿಮಿಷಗಳಲ್ಲಿ 2 ಗೋಲ್ ಗಳಿಸಿ ಆತಿಥೇಯ ಗೋವಾ ಪಂದ್ಯಕ್ಕೆ ಮರಳಿದರು. ಗೋವಾ ತಂಡದ ಪರ 2 ಗೋಲ್ ಗಳಿಸಿದ ಇಗೋರ್ ಅಂಗುಲೊ ಮೊದಲ ಗೋಲ್ ಅಲ್ಬರ್ಟೋ ಅವರಿಂದ ಪಾಸ್ ಪಡೆದು ಗೋಲ್ ತಲುಪಿಸಿದ್ರೆ, ಎರಡನೇ ಗೋಲ್ ಅಲೆಗ್ಸಾಂಡರ್ ಅವರಿಂದ ಪಡೆದ ಚೆಂಡನ್ನು ಅಂಗುಲೊ ಎಡೆಯೊಡ್ಡಿ ಮತ್ತೊಂದು ಗೋಲ್ ಗಳಿಸಿ ಬ್ಲೂಸ್ ಗೆ ಆಘಾತ ನೀಡಿ, ಗೋವಾ ತಂಡ ಪಂದ್ಯಕ್ಕೆ 2-2 ಅಂಕಗಳೊಂದಿಗೆ ಮರಳುವಂತೆ ಮಾಡಿದ್ರು.

ಬೆಂಗಳೂರು ತಂಡ ಹಲವು ಬಾರಿ ಪಂದ್ಯದಲ್ಲಿ ಗೋಲ್ ಗಳಿಸುವ ಪ್ರಯತ್ನ ಮಾಡಿದರೂ ಸಫಲರಾಗಲಿಲ್ಲ. ಬ್ಲೂಸ್ ತಮ್ಮ ಮುಂದಿನ ಪಂದ್ಯದಲ್ಲಿ ಅತಿಥೇಯರಾಗಿರಲಿದ್ದು ಹೈದರಾಬಾದ್ ಎಫ್.ಸಿ ತಂಡವನ್ನು ಇದೇ ಅಂಗಳದಲ್ಲಿ ನವೆಂಬರ್ 28ರಂದು ಎದುರಿಸಲಿದ್ದಾರೆ.